Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಜಗನ್ನಾಥ ರಥಯಾತ್ರೆಯನ್ನು ರಾಹುಲ್ ಗಾಂಧಿ ನಾಟಕ ಎಂದು ಕರೆದಿದ್ದಾರೆ, ಢಾಕಾದಲ್ಲಿ ಬರ್ಬರವಾಗಿ ಹಿಂದೂ ವ್ಯಾಪಾರಿ ಹತ್ಯೆ, ಸಿಎಂ ಸಿದ್ದರಾಮಯ್ಯ ನಿಧನ ಎಂದು ಫೇಸ್ಬುಕ್ ನಲ್ಲಿ ಮುಖ್ಯಮಂತ್ರಿ ಕಚೇರಿಯಿಂದಲೇ ಪೋಸ್ಟ್, ಪೊಲೀಸ್ ವ್ಯಕ್ತಿಯೊಬ್ಬನಿಗೆ ಹೊಡೆಯುತ್ತಿರುವ ವೈರಲ್ ವೀಡಿಯೋ, ಲಕ್ನೋ ನ್ಯಾಯಾಲಯಕ್ಕೆ ಹಾಜರಾದಾಗ ನ್ಯಾಯಾಧೀಶರು ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ, ತಾಮ್ರದ ಪಾತ್ರೆಯಲ್ಲಿ ನೀರು ಕುಡಿದರೆ ಕೊಲೆಸ್ಟ್ರಾಲ್ ಗೆ ಉತ್ತಮ ಎಂಬ ಹೇಳಿಕೆಗಳು ಈ ವಾರ ಹರಿದಾಡಿದ್ದವು. ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ವಾಸ್ತವಾಂಶವನ್ನು ತೆರೆದಿಟ್ಟಿದೆ. ಈ ಕುರಿತ ವಾರದ ನೋಟ ಇಲ್ಲಿದೆ

ರಾಹುಲ್ ಗಾಂಧಿ ಪುರಿ ಜಗನ್ನಾಥ ರಥಯಾತ್ರೆಯನ್ನು ನಾಟಕ ಎಂದು ಕರೆದಿದ್ದಾರೆ ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ತನಿಖೆ ನಡೆಸಿದಾಗ ರಾಹುಲ್ ಗಾಂಧಿಯವರ ವೀಡಿಯೋವನ್ನು ಎಡಿಟ್ ಮಾಡಿ ತಪ್ಪು ಅರ್ಥ ಬರುವಂತೆ ವೈರಲ್ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಢಾಕಾದಲ್ಲಿ ಬರ್ಬರವಾಗಿ ಹಿಂದೂ ವ್ಯಾಪಾರಿ ಹತ್ಯೆ ಎಂದು ವ್ಯಕ್ತಿಯೊಬ್ಬರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈಯುತ್ತಿರುವ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಢಾಕಾದಲ್ಲಿ ಬರ್ಬರವಾಗಿ ಹಿಂದೂ ವ್ಯಾಪಾರಿ ಹತ್ಯೆ ಎಂಬ ವರದಿ ನಿಜವಲ್ಲ, ಕೊಲೆಯಾದ ವ್ಯಕ್ತಿ ಮುಸ್ಲಿಂ ವ್ಯಾಪಾರಿಯಾಗಿದ್ದು ಘಟನೆಗೆ ಯಾವುದೇ ಕೋಮು ಕೋನವಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಅವರ ನಿಧನದ ಬಗ್ಗೆಯೇ ಬರೆಯಲಾಗಿದೆ ಎಂಬಂತೆ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ತನಿಖೆ ನಡೆಸಿದಾಗ ಫೇಸ್ಬುಕ್ ಟ್ರಾನ್ಸ್ ಲೇಷನ್ ದೋಷದಿಂದಾಗಿ ತಪ್ಪಾಗಿದ್ದು ಅದನ್ನು ವೈರಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ

ಪೊಲೀಸರು ಠಾಣೆಯಲ್ಲಿ ವ್ಯಕ್ತಿಯೊಬ್ಬನಿಗೆ ಹೊಡೆಯುತ್ತಿದ್ದಾರೆ ಎಂದು ಉತ್ತರ ಕನ್ನಡ ಪೊಲೀಸ್ ಹ್ಯಾಶ್ಟ್ಯಾಗ್ ಮಾಡಿ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ತನಿಖೆ ನಡೆಸಿದಾಗ, ಪೊಲೀಸ್ ವ್ಯಕ್ತಿಯೊಬ್ಬನಿಗೆ ಹೊಡೆಯುತ್ತಿರುವ ವೈರಲ್ ವೀಡಿಯೋ ಉತ್ತರಪ್ರದೇಶದ ಜೌನ್ಪುರದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಲಕ್ನೋ ನ್ಯಾಯಾಲಯಕ್ಕೆ ಹಾಜರಾದಾಗ ನ್ಯಾಯಾಧೀಶರು ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ನ್ಯಾಯಾಧೀಶರು ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿಲ್ಲ, ಹಾಗೆ ಸೆಲ್ಫಿ ತೆಗೆದವರು ವಕೀಲ ಸೈಯದ್ ಮಹಮೂದ್ ಹಸನ್ ಅವರಾಗಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ತಾಮ್ರದ ಪಾತ್ರೆ ನೀರು ಕುಡಿಯುವುದು ಕೊಲೆಸ್ಟ್ರಾಲ್ ನಿಯಂತ್ರಣ, ಹೃದಯದ ಆರೋಗ್ಯಕ್ಕೆ ಪೂರಕ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸತ್ಯಶೋಧನೆ ನಡೆಸಿದಾಗ, ತಾಮ್ರದ ಪಾತ್ರೆ ನೀರು ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ
Vasudha Beri
December 2, 2025
Ishwarachandra B G
November 21, 2025
Newschecker Team
August 25, 2025