Authors
Claim
ಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ 6 ಜನ ಉಗ್ರರ ಬಂಧನ
Fact
ಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ 6 ಜನ ಉಗ್ರರ ಬಂಧನ ಎನ್ನುವುದು ಕರಾವಳಿ ಪೊಲೀಸ್ ಪಡೆ ನಡೆಸಿದ ಸಾಗರ ರಕ್ಷಾ ಕವಚ ಅಣಕು ಕಾರ್‍ಯಾಚರಣೆ ಕುರಿತ ಸುದ್ದಿಯಾಗಿದೆ ಇದು ನಿಜವಲ್ಲ
ಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ 6 ಜನ ಉಗ್ರರ ಬಂಧನವಾಗಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದಂತೆ “ಮುರ್ಡೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಿ ಧ್ವಂಸಗೊಳಿಸಲು ಹೊಂಚು ಹಾಕುತ್ತಿರುವ ಆರು ಜನ ಆತಂಕವಾದಿಗಳನ್ನು ಭಟ್ಕಳದಲ್ಲಿ ಸೆರೆ ಹಿಡಿಯಲಾಗಿದೆ” ಎಂದು ಗೋಮಾಂತಕ್ ವರದಿಯ ಫೋಟೋದೊಂದಿಗೆ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ.
ಇದೇ ರೀತಿಯ ಸುದ್ದಿ ವಾಟ್ಸಾಪ್ ನಲ್ಲೂ ಹರಿದಾಡುತ್ತಿದ್ದು, ಇದರ ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್ ಲೈನ್ ಗೆ (+91-9999499044) ಬಳಕೆದಾರರು ಮನವಿ ಮಾಡಿದ್ದಾರೆ. ಅದನ್ನೂ ನಾವು ಸತ್ಯಶೋಧನೆಗೆ ಅಂಗೀಕರಿಸಿದ್ದೇವೆ.
ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ 6 ಜನ ಉಗ್ರರ ಬಂಧನ ಎನ್ನುವುದು ತಪ್ಪು ಹೇಳಿಕೆ ಮತ್ತು ಇದು ಕರ್ನಾಟಕ ಕರಾವಳಿ ಕಾವಲು ಪಡೆ ಪೊಲೀಸರು ನಡೆಸಿದ ಅಣಕು ಕಾರ್‍ಯಾಚರಣೆಯ ಒಂದು ಭಾಗ ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಸರ್ಚ್ ನಡೆಸಿದ್ದೇವೆ. ಈ ವೇಳೆ ಅಕ್ಟೋಬರ್ 18, 2024ರ ಗೋಮಾಂತಕ್ ವರದಿ ಕಂಡುಬಂದಿದೆ. ಇದರಲ್ಲಿ “ಕರಾವಳಿ ಕಾವಲು ಪಡೆ ಪೊಲೀಸರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸಾಗರ ರಕ್ಷಾ ಕವಚ ಕಾರ್ಯಾಚರಣೆ ಆಯೋಜಿಸಿದ್ದಾರೆ, ಭಟ್ಕಳದ ಮುರುಡೇಶ್ವರ ದೇವಸ್ಥಾನದ ಮೇಲೆ ಯಾವುದೇ ಭಯೋತ್ಪಾದಕರ ಭೀತಿ ಇಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ” ಎಂದಿದೆ. (ಮರಾಠಿಯಿಂದ ಅನುವಾದಿಸಲಾಗಿದೆ)
ಈ ಸುದ್ದಿಯಲ್ಲಿ ಕರಾವಳಿ ಕಾವಲು ಪಡೆ ಪೊಲೀಸರ ಸಾಗರ ರಕ್ಷಾ ಕವಚ ಕಾರ್ಯಾಚರಣೆ ಎಂದು ಬರೆದಿರುವುದನ್ನು ನಾವು ಗಮನಿಸಿದ್ದು, ಆ ಪ್ರಕಾರ ಇನ್ನಷ್ಟು ಶೋಧ ನಡೆಸಿದ್ದೇವೆ.
ಅಕ್ಟೋಬರ್ 19, 2024ರ ವಿಜಯವಾಣಿ ವರದಿಯಲ್ಲಿ, “ಸಮುದ್ರ ಮೂಲಕ ಒಳನುಸುಳಲು ಯತ್ನಿಸುತ್ತಿದ್ದ ಆರು ಭಯೋತ್ಪಾದಕರನ್ನು ಗುರುವಾರ ಬೆಳಗಿನ ಜಾವ 1.30ರ ಸುಮಾರಿಗೆ ಕರಾವಳಿ ಕಾವಲು ಪಡೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇವರಾರೂ ನೈಜ ಭಯೋತ್ಪಾದಕರಲ್ಲ. ಕರಾವಳಿ ಕವಚದಿಂದ ನಡೆದ ಕಲ್ಪಿತ ಕಾರ್‍ಯಾಚರಣೆ ಇದಾಗಿದೆ” ಎಂದಿದೆ.
ಅಕ್ಟೋಬರ್ 17, 2024ರ ಕನ್ನಡವಾಣಿ ನ್ಯೂಸ್ ವರದಿಯಲ್ಲಿ “ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯವರು (Coastal security police) ನಡೆಸಿದ ಕಾರ್ಯಾಚರಣೆಯಲ್ಲಿ ಆರು ಜನ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೇ ಮುರುಡೇಶ್ವರ ದೇವಸ್ಥಾನದಲ್ಲಿ ಸಮುದ್ರ ಮಾರ್ಗವಾಗಿ ಬಾಂಬ್ ಇಡಲು ಬಂದಿದ್ದ ನಾಲ್ಕು ಜನ ಭಯೋತ್ಪಾದಕರನ್ನು ಕರಾವಳಿ ಕಾವಲು ಪೊಲೀಸರು ಬಂಧಿಸಿದ್ದಾರೆ. ಹೌದು ಇದು ನಿಜ ಎಂದು ಹೆದರಬೇಡಿ. ಇದು ಅಣಕು ಕಾರ್ಯಾಚರಣೆ ಅಷ್ಟೇ. ರಾಜ್ಯದ ಸೂಷ್ಮ ಪ್ರದೇಶದಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಸಾಗರ ಕವಚ್ ಅಣುಕು ಕಾರ್ಯಾಚರಣೆ ನಡೆಸಲಾಗುತ್ತದೆ.” ಎಂದಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
Conclusion
ಈ ಸತ್ಯಶೋಧನೆಯ ಪ್ರಕಾರ ಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ 6 ಜನ ಉಗ್ರರ ಬಂಧನ ಎನ್ನುವುದು ನಿಜವಲ್ಲ, ಇದು ಕರಾವಳಿ ಕಾವಲು ಪಡೆ ಪೊಲೀಸರು ನಡೆಸಿದ ಅಣಕು ಕಾರ್‍ಯಾಚರಣೆ ಎಂದು ಗೊತ್ತಾಗಿದೆ.
Result: Missing Context
Our Sources
Report By dainikgomantak, Dated: October 18, 2024
Report By Vijayavani, Dated: October 19, 2024
Report By Kannadavani, Dated October 17, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.