Fact Check
ಪೊಲೀಸ್ ವ್ಯಕ್ತಿಯೊಬ್ಬನಿಗೆ ಹೊಡೆಯುತ್ತಿರುವ ವೈರಲ್ ವೀಡಿಯೋ ಎಲ್ಲಿಯದ್ದು?
Claim
ಉತ್ತರಕನ್ನಡದಲ್ಲಿ ಪೊಲೀಸ್ ವ್ಯಕ್ತಿಯೊಬ್ಬನಿಗೆ ಹೊಡೆಯುತ್ತಿರುವ ವೈರಲ್ ವೀಡಿಯೋ
Fact
ಪೊಲೀಸ್ ವ್ಯಕ್ತಿಯೊಬ್ಬನಿಗೆ ಹೊಡೆಯುತ್ತಿರುವ ವೈರಲ್ ವೀಡಿಯೋ ಉತ್ತರಪ್ರದೇಶದ ಜೌನ್ಪುರದ್ದಾಗಿದೆ
ಪೊಲೀಸರು ಠಾಣೆಯಲ್ಲಿ ವ್ಯಕ್ತಿಯೊಬ್ಬನಿಗೆ ಹೊಡೆಯುತ್ತಿದ್ದಾರೆ ಎಂದು ಉತ್ತರ ಕನ್ನಡ ಪೊಲೀಸ್ ಹ್ಯಾಶ್ಟ್ಯಾಗ್ ಮಾಡಿ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ ಬುಕ್ ಪೋಸ್ಟ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಇದು ರಾಜ್ಯ ಸರ್ಕಾರದ ಆದೇಶವೇ ? ರಾಜ್ಯದ ಗೃಹ ಸಚಿವರು ತಾವೇ ಉತ್ತರಿಸಬೇಕು ರಾಜ್ಯದ ಜನತೆ ತಿಳಿಯಬೇಕು ಇದಕ್ಕೆಲ್ಲ ಅವಕಾಶ ಇದೆಯಾ ನಮ್ಮ ಪೊಲೀಸ್ ಠಾಣೆಗಳಲ್ಲಿ ಅನ್ನುವುದು” ಎಂದಿದೆ.

ಈ ಕುರಿತು ನಾವು ಸತ್ಯಶೋಧನೆ ನಡೆಸಿದ್ದು, ಇದು ಉತ್ತರಪ್ರದೇಶದಲ್ಲಿ ನಡೆದ ಘಟನೆಯಾಗಿದ್ದು ಉತ್ತರ ಕನ್ನಡ, ಕರ್ನಾಟಕ ರಾಜ್ಯ ಪೋಲೀಸರನ್ನು ಹ್ಯಾಶ್ ಟ್ಯಾಗ್ ಹಾಕಿ ತಪ್ಪುದಾರಿಗೆಳೆಯಲಾಗುತ್ತಿದೆ ಎಂದು ತಿಳಿದುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ಮೊದಲು ಉತ್ತರಕನ್ನಡ ಜಿಲ್ಲಾ ಪೊಲೀಸ್ ಕಚೇರಿಯನ್ನು ಸಂಪರ್ಕಿಸಿದ್ದೇವೆ. ಈ ವೇಳೆ ಅವರು ಇಂತಹ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಮತ್ತು ಈ ಪೋಸ್ಟ್ ಬಗ್ಗೆ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಆ ಬಳಿಕ ಹೆಚ್ಚಿನ ಮಾಹಿತಿಗಾಗಿ, ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ.
ಈ ವೇಳೆ ಏಪ್ರಿಲ್ 29, 2025ರಂದು ಡೆಕ್ಕನ್ ಟೈಮ್ಸ್ ಹೆಸರಿನ ಫೇಸ್ಬುಕ್ ಖಾತೆಯಿಂದ ಪೋಸ್ಟ್ ಮಾಡಲಾದ ವೀಡಿಯೋ ಒಂದು ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವುದು ಕಂಡುಬಂದಿದೆ. ಈ ಪೋಸ್ಟ್ ನಲ್ಲಿ ‘ಉತ್ತರ ಪ್ರದೇಶದ ಜೌನ್ಪುರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವಿನೋದ್ ಮಿಶ್ರಾ ಎಂಬವರು ಬಾಲಕನಿಗೆ ಕೋಲಿನಿಂದ ಹೊಡೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದಿದೆ.

ಹೆಚ್ಚಿನ ತನಿಖೆ ವೇಳೆ ಏಪ್ರಿಲ್ 24, 2025ರ ಲೋಕಮತ್ ಟೈಮ್ಸ್ ಎಕ್ಸ್ ಪೋಸ್ಟ್ ನಲ್ಲಿ, “ಉತ್ತರ ಪ್ರದೇಶದ ಜೌನ್ ಪುರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ವಿನೋದ್ ಮಿಶ್ರಾ ಅವರು ಹುಡುಗನೊಬ್ಬನಿಗೆ ಕೋಲಿನಿಂದ ಹೊಡೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಮೂರನೇ ದರ್ಜೆಯ ಚಿತ್ರಹಿಂಸೆಯ ಕೃತ್ಯವೆಂದು ಪರಿಗಣಿಸಲಾಗಿದೆ. ಎಸ್ಪಿ ತಕ್ಷಣವೇ ಎಸ್ಎಚ್ಒ ಅವರನ್ನು ಕರ್ತವ್ಯದಿಂದ ತೆಗೆದುಹಾಕಿದ್ದಾರೆ ಮತ್ತು ಘಟನೆಯ ತನಿಖೆ ಆರಂಭವಾಗಿದೆ.” ಎಂದಿದೆ.
ಏಪ್ರಿಲ್ 24, 2025ರ ಫ್ರೀ ಪ್ರೆಸ್ ಜರ್ನಲ್ ವರದಿಯ ಪ್ರಕಾರ, “ಉತ್ತರ ಪ್ರದೇಶದ ಜೌನ್ಪುರದಲ್ಲಿ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಘಟನೆ ವರದಿಯಾಗಿದೆ. ಮುಂಗ್ರಾಬಾದ್ಸಾಹ್ಪುರ ಪೊಲೀಸ್ ಠಾಣೆಯೊಳಗೆ ಯುವಕನೊಬ್ಬನನ್ನು ಇಬ್ಬರು ಪೊಲೀಸರು ಕಂಬದ ಸುತ್ತ ಹಿಡಿದುಕೊಂಡು ಮೂರನೇ ಅಧಿಕಾರಿಯೊಬ್ಬರು ಆತನನ್ನು ಕ್ರೂರವಾಗಿ ಥಳಿಸಿದ್ದಾರೆ. ವರದಿಗಳ ಪ್ರಕಾರ, ಪೊಲೀಸ್ ದೌರ್ಜನ್ಯದ ಪರಿಣಾಮವಾಗಿ ಬಲಿಪಶು ಗಾಯಗೊಂಡಿದ್ದಾರೆ.
ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡುತ್ತಿರುವ ವೀಡಿಯೋ ಆನ್ಲೈನ್ನಲ್ಲಿ ಕಾಣಿಸಿಕೊಂಡಿದ್ದು, ಪೊಲೀಸರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ವಿಡಿಯೋ ವೈರಲ್ ಆದ ನಂತರ, ಆರೋಪಿ ಪೊಲೀಸ್ ಅಧಿಕಾರಿ (ಎಸ್ಎಚ್ಒ ವಿನೋದ್ ಮಿಶ್ರಾ) ಅವರನ್ನು ವರ್ಗಾಯಿಸಿ ಆ ಸ್ಥಾನಕ್ಕೆ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ಸಿಂಗ್ ಅವರನ್ನು ನೇಮಿಸಲಾಗಿದೆ.” ಎಂದಿದೆ.

ಏಪ್ರಿಲ್ 24, 2025ರ ಅಮರ್ ಉಜಾಲಾ ವರದಿಯಲ್ಲಿ. “ಜೌನ್ಪುರ ಜಿಲ್ಲೆಯ ಮುಂಗಾರಾಬಾದ್ಶಹಪುರ ಪೊಲೀಸ್ ಠಾಣೆಯ ಉಸ್ತುವಾರಿ ಯುವಕನೊಬ್ಬನನ್ನು ಕ್ರೂರವಾಗಿ ಥಳಿಸಿದ ಆರೋಪ ಕೇಳಿಬಂದಿದೆ. ಯುವಕನನ್ನು ಕ್ರೂರವಾಗಿ ಥಳಿಸುತ್ತಿರುವ ವೀಡಿಯೋ ಕೂಡ ವೈರಲ್ ಆಗಿದೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, ಪೊಲೀಸ್ ವರಿಷ್ಠಾಧಿಕಾರಿ ಡಾ. ಕೌಸ್ತುಭ್ ಅವರು ಪೊಲೀಸ್ ಠಾಣೆಯ ಉಸ್ತುವಾರಿ ವಿನೋದ್ ಕುಮಾರ್ ಮಿಶ್ರಾ ಅವರನ್ನು ಅಮಾನತುಗೊಳಿಸಿದ್ದಾರೆ ಮತ್ತು ದಿಲೀಪ್ ಕುಮಾರ್ ಸಿಂಗ್ ಅವರನ್ನು ಮುಂಗಾರಾಬಾದ್ಶಹಪುರ ಪೊಲೀಸ್ ಠಾಣೆಯ ಉಸ್ತುವಾರಿಯನ್ನಾಗಿ ನೇಮಿಸಿದ್ದಾರೆ.” ಎಂದಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
Conclusion
ಆದ್ದರಿಂದ ಈ ತನಿಖೆಯ ಪ್ರಕಾರ, ಪೊಲೀಸರು ಠಾಣೆಯಲ್ಲಿ ವ್ಯಕ್ತಿಯೊಬ್ಬನಿಗೆ ಹೊಡೆಯುತ್ತಿದ್ದಾರೆ ಎಂದು ಉತ್ತರ ಕನ್ನಡ ಪೊಲೀಸ್ ಹ್ಯಾಶ್ಟ್ಯಾಗ್ ಮಾಡಿ ಹಾಕಿರುವ ಪೋಸ್ಟ್ ಉತ್ತರಪ್ರದೇಶದ ಜೌನ್ಪುರಕ್ಕೆ ಸಂಬಂಧಿಸಿದ್ದಾಗಿದ್ದು, ಇಲ್ಲಿನದ್ದಲ್ಲ ಎಂದು ತಿಳಿದುಬಂದಿದೆ.
Also Read: ಢಾಕಾದಲ್ಲಿ ಬರ್ಬರವಾಗಿ ಹಿಂದೂ ವ್ಯಾಪಾರಿ ಹತ್ಯೆ ಎಂದ ಪ್ರಕರಣದ ನಿಜಾಂಶವೇನು?
Our Sources
Facebook Post By Deccan Times, April 29, 2025
X Post By Lokmat Times, Dated: April 24, 2025
Report By Freepress Journal, Dated: April 24, 2025
Report By Amar Ujala, Dated: April 24, 2025
Conversation with Uttarakannada District Police