Authors
Claim
ರಾಹುಲ್ ಗಾಂಧಿಯವರನ್ನು ಗಲ್ಫ್ ನ್ಯೂಸ್ ‘ಪಪ್ಪು’ ಎಂದು ಕರೆದಿದೆ
Fact
ಗಲ್ಫ್ ನ್ಯೂಸ್ ನಲ್ಲಿ ರಾಹುಲ್ ಗಾಂಧಿಯವರನ್ನು ಪಪ್ಪು ಎಂದು ಕರೆದಿಲ್ಲ, ಈ ಬಗ್ಗೆ ಸಂದರ್ಶನದಲ್ಲಿ ಅವರ ಪ್ರತಿಕ್ರಿಯೆಯನ್ನು ಕೇಳಲಾಗಿದೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ‘ಪಪ್ಪು’ ಹೆಸರಿನಿಂದಲೇ ಕರೆಯುತ್ತಾರೆ. ಗಲ್ಫ್ ದೇಶಕ್ಕೂ ಅವರ ಹೆಸರು ಹಬ್ಬಿದೆ, ಎಂಬರ್ಥದಲ್ಲಿ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡಿದೆ.
ಗಲ್ಫ್ ನ್ಯೂಸ್ ಪತ್ರಿಕೆಯಲ್ಲಿ ರಾಹುಲ್ ಅವರಿಗೆ ಪಪ್ಪು ಹೆಸರಿನಿಂದ ಕರೆಯಲಾಗಿದೆ ಎಂದು ಫೇಸ್‌ಬುಕ್ ನಲ್ಲಿ ಈ ಹೇಳಿಕೆ ಕಂಡುಬಂದಿದೆ.
Also Read: ಸೀತಾದೇವಿಯ ಜನಕಪುರಿಯಿಂದ ಅಯೋಧ್ಯೆಗೆ ಯಾತ್ರೆ ನಡೆದಿದೆಯೇ, ಸತ್ಯ ಏನು?
ಇದರ ಬಗ್ಗೆ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಸಂದರ್ಭ ಎಂದು ಕಂಡುಕೊಂಡಿದೆ.
Fact Check/ Verification
ಸತ್ಯಶೋಧನೆಗಾಗಿ ನಾವು ಹೇಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಇದರಲ್ಲಿ ಹಾಕಲಾಗಿರುವ ಫೋಟೋ ಗಲ್ಫ್ ನ್ಯೂಸ್ ಪತ್ರಿಕೆಯ ಫೊಟೋವಾಗಿದ್ದು ಮಡಚಿಟ್ಟ ರೀತಿಯಲ್ಲಿದೆ. ಅದರಲ್ಲಿ ರಾಹುಲ್ ಗಾಂಧಿ ಅವರ ಫೋಟೋದೊಂದಿಗೆ “How Pappu label” ಎಂದು ಬರೆದಿರುವುದು ಕಾಣುತ್ತದೆ.
ಇದನ್ನು ಗಮನಿಸಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಜನವರಿ 16, 2019ರಂದು ಗಲ್ಫ್ ನ್ಯೂಸ್ ವರದಿಯನ್ನು ಗಮನಿಸಿದ್ದೇವೆ. “ಭಾರತದ ಸುಳ್ಳು ಸುದ್ದಿ ತನಿಖಾ ಸಂಸ್ಥೆ, ಗಲ್ಫ್ ನ್ಯೂಸ್ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹರಡಿದ ಸುಳ್ಳು ಸುದ್ದಿಯನ್ನು ಬಹಿರಂಗಪಡಿಸಿದೆ” ಎಂದಿದೆ.
ಇದೇ ವರದಿಯಲ್ಲಿ ನಾವು ಗಲ್ಫ್ ನ್ಯೂಸ್ ಜನವರಿ 8, 2019ರಂದು ಮಾಡಿದ ರಾಹುಲ್ ಗಾಂಧಿಯವರ ಸಂದರ್ಶನವನ್ನು ಗಮನಿಸಿದ್ದೇವೆ. ಇದೇ ಸಂದರ್ಶನವನ್ನು ಗಲ್ಫ್ ನ್ಯೂಸ್ ಪತ್ರಿಕೆಯ ಮುಖ ಪುಟದಲ್ಲಿ ರಾಹುಲ್ ಗಾಂಧಿಯವರ ಕಾರ್ಟೂನ್ ಜೊತೆಗೆ ಕೊಡಲಾಗಿತ್ತು ಎಂದಿದೆ.
ಇದೇ ಸಂದರ್ಶನದಲ್ಲಿ ರಾಹುಲ್ ಅವರಿಗೆ “ಪಪ್ಪು” ಎಂದು ಕರೆಯುವ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರವಾಗಿ ಅವರು “ಇದು 2014ರಲ್ಲಿ ನಾನು ಸ್ವೀಕರಿಸಿದ ಅತ್ಯುತ್ತಮ ಉಡುಗೊರೆ. ನಾನು ಬೇರೆ ಯಾವುದರಿಂದಲೂ ಕಲಿಯಲು ಸಾಧ್ಯವಾಗದಷ್ಟು ಅದರಿಂದ ಕಲಿತಿದ್ದೇನೆ. ನನ್ನ ವಿರೋಧಿಗಳು ನನ್ನ ಜೀವನವನ್ನು ಹೆಚ್ಚು ಕಷ್ಟಕರವಾಗಿಸಿದಷ್ಟೂ ನನಗೆ ಅದು ಉತ್ತಮವಾಗುತ್ತದೆ. ಪಪ್ಪು ಎಂದರೆ ನಾನು ವಿಚಲಿತನಾಗುವುದಿಲ್ಲ. ನನ್ನ ವಿರೋಧಿಗಳ ದಾಳಿಯನ್ನು ನಾನು ಪ್ರಶಂಸಿಸುತ್ತೇನೆ ಮತ್ತು ಅವರಿಂದ ನಾನು ಕಲಿಯುತ್ತೇನೆ.” ಎಂದು ರಾಹುಲ್ ಗಾಂಧಿ ಹೇಳಿದ್ದಾಗಿ ಇದೆ.
ಇದರೊಂದಿಗೆ ನಮ್ಮ ಶೋಧದ ವೇಳೆ ನಾವು ಗಲ್ಭ್ ನ್ಯೂಸ್ ಟ್ವೀಟ್ ಅನ್ನೂ ಗಮನಿಸಿದ್ದೇವೆ. ಇದರಲ್ಲಿ ಇಡೀ ಪತ್ರಿಕೆಯ ಫೋಟೋವನ್ನು ಹಾಕಲಾಗಿದ್ದು, “How pappu lable has changed Rahul” ಎಂದು ಬರೆದಿರುವುದನ್ನು ನೋಡಿದ್ದೇವೆ.
Conclusion
ಆದ್ದರಿಂದ ಸತ್ಯಶೋಧನೆ ಪ್ರಕಾರ ಗಲ್ಫ್ ನ್ಯೂಸ್ ಪಪ್ಪು ಎಂದು ರಾಹುಲ್ ಅವರನ್ನು ಕರೆದಿಲ್ಲ, ಅವರ ವ್ಯಕ್ತಿತ್ವ ಪಪ್ಪೂ ನಿಂದ ರಾಹುಲ್ ಗಾಂಧಿಯಾಗುವತ್ತ ಎಂಬ ಸಂದರ್ಶನದ ತಲೆ ಬರಹವನ್ನು ಮುಖಪುಟದಲ್ಲಿ ಕಾರ್ಟೂನ್ ಜೊತೆಗೆ ಪ್ರಕಟಿಸಿದೆ.
Also Read: ಕರಡಿಗಳ ಹಿಂಡು ಅಯೋಧ್ಯೆ ತಲುಪಿದೆ ಎಂದ ವೈರಲ್ ವೀಡಿಯೋ ಮಧ್ಯಪ್ರದೇಶದ್ದು!
Result: Missing Context
Our Sources:
Report By Gulf News, Dated: January 16, 2019
Tweet By Gulf News, Dated, January 9, 2019
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.