Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಮಹಾಕುಂಭ ಮೇಳದಲ್ಲಿ ಸಿಕ್ಕಿಬಿದ್ದವರು ಅಳುತ್ತಿರುವುದು ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದ ಸಮಯದಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿರುವ ಜನರು ಅಳುತ್ತಿದ್ದಾರೆ ಎಂಬಂತೆ ವೀಡಿಯೋ ಜೊತೆಗಿನ ಹೇಳಿಕೆಯಲ್ಲಿದೆ.
ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ, ಇದು ನಿಜವಲ್ಲ, ಕನ್ನಡ ಬಿಗ್ ಬಾಸ್ ನಟ ತುಕಾಲಿ ಸಂತೋಷ್ ಮತ್ತು ಅವರ ಪತ್ನಿಯ ವೀಡಿಯೋವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.
Also Read: ರಾಷ್ಟ್ರಪತಿ ಭವನದಲ್ಲಿ ಇದೇ ಮೊದಲ ಬಾರಿಗೆ ಮದುವೆ ನಡೆಯಲಿದೆ ಎನ್ನುವುದು ನಿಜವೇ?
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋವನ್ನು ಕೂಲಂಕಷವಾಗಿ ನೋಡಿದ್ದೇವೆ. ಈ ವೇಳೆ ವೀಡಿಯೋದಲ್ಲಿ ಸುಮನ್ ಟಿವಿ ಎಂಬ ಲೋಗೋ, ವಾಟರ್ ಮಾರ್ಕ್ ಗಳನ್ನು ನೋಡಿದ್ದೇವೆ.
ನಂತರದ ಫ್ರೇಂನಲ್ಲಿ ವೀಡಿಯೋದಲ್ಲಿರುವ ವ್ಯಕ್ತಿಯ ಗುರುತನ್ನು ನಾವು ಹಿಡಿದಿದ್ದು, ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್ ಎಂದುರು ಗುರುತಿಸಿದ್ದೇವೆ.
ಹೆಚ್ಚಿನ ಶೋಧ ನಡೆಸಿದಾಗ, ಜನವರಿ 27, 2025ರ ಟಿವಿ 19 ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ವೈರಲ್ ವೀಡಿಯೋ ಹೋಲುವ ವೀಡಿಯೋ ಪತ್ತೆಯಾಗಿದೆ. ಇದರಲ್ಲಿ “ತುಕಾಲಿ ಮಾನಸ ಅವರಿಗೆ ಅಭಿಮಾನಿಗಳ ಕಾಟ ನೋಡಿ” ಎಂಬ ಶೀರ್ಷಿಕೆ ನೋಡಿದ್ದೇವೆ.
ಆ ಬಳಿಕ ನಾವು ಹೆಚ್ಚಿನ ಶೋಧ ನಡೆಸಿದ್ದು, ಜನವರಿ 27, 2025ರ ಸುಮನ್ ಟಿವಿ ಕನ್ನಡ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ವೈರಲ್ ವೀಡಿಯೋ ಹೋಲುವ ವೀಡಿಯೋ ಪತ್ತೆಯಾಗಿದೆ. ಇದರಲ್ಲೂ ತುಕಾಲಿ ಸಂತೋಷ್ ಹೆಸರಿಗೆ ವೀಡಿಯೋ ಟ್ಯಾಗ್ ಮಾಡಲಾಗಿದೆ ಎಂಬುದನ್ನು ನಾವು ನೋಡಿದ್ದೇವೆ.
ಆದರೂ ಈ ವೀಡಿಯೋ ಯಾವ ಸಂದರ್ಭದ್ದು ಎಂದು ಕಂಡುಹಿಡಿಯಲು ಸಾಧ್ಯವಾಗಿಲ್ಲ.
ಈ ಸತ್ಯಶೋಧನೆಯ ಪ್ರಕಾರ, ಕುಂಭಮೇಳದಲ್ಲಿ ಸಿಕ್ಕಿಬಿದ್ದವರು ಅಳುತ್ತಿರುವುದು ಎನ್ನುವುದು ತಪ್ಪಾಗಿದೆ. ವೀಡಿಯೋದಲ್ಲಿ ಕಂಡುಬಂದಿರುವ ವ್ಯಕ್ತಿಗಳು ಕನ್ನಡ ರಿಯಾಲಿಟಿ ಶೋ ನಟರಾಗಿದ್ದು ಅಭಿಮಾನಿಗಳು ಸುತ್ತುವರಿದ ಸಂದರ್ಭದ್ದಾಗಿದೆ.
Also Read: ಮಹಾಕುಂಭ ಮೇಳ ಪ್ರಯಾಣಿಕರಿಂದ ರೈಲ್ವೇ ಟಿಟಿಇ ಹಣ ವಸೂಲಿ ಎನ್ನುವುದು ನಿಜವಲ್ಲ!
Our Sources
YouTube Video By TV19 Kannada, Dated: January 27, 2025
Instagram Post By Sumantv Kannada, Dated: January 27, 2025