Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಮಹಾಕುಂಭ ಮೇಳ ಹಿನ್ನೆಲೆಯಲ್ಲಿ ಈ ವಾರವೂ ಅದರ ಕುರಿತ ವಿವಿಧ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ಮಹಾಕುಂಭ ಮೇಳದ ಪ್ರಯಾಣಿಕರಿಂದ ರೈಲ್ವೇ ಟಿಟಿಇ ಹಣ ವಸೂಲಿ, ಮಹಾಕುಂಭದ ಜನಜಂಗುಳಿಯಲ್ಲಿ ಸಿಕ್ಕಿಬಿದ್ದವರು ಹೆಸರಲ್ಲಿ ತುಕಾಲಿ ಸಂತೋಷ್ ವೀಡಿಯೋ ವೈರಲ್ ಆಗಿದೆ. ಯೋಗಿ ಸರ್ಕಾರ ಮಸೀದಿ ತೆರವುಗೊಳಿಸಿ ಅಲ್ಲಿ ಶಾಲೆ ನಿರ್ಮಾಣಕ್ಕೆ ಉದ್ದೇಶಿಸಿದೆ, ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿಗಳ ಮೇಲೆ ಲಾಠಿ ಚಾರ್ಜ್ ವೀಡಿಯೋ, ರಾಷ್ಟ್ರಪತಿ ಭವನದಲ್ಲಿ ಇದೇ ಮೊದಲ ಬಾರಿಗೆ ಮದುವೆ ನಡೆಯಲಿದೆ, ತುಪ್ಪ ಮತ್ತು ಕರಿಮೆಣಸು 10 ದಿನಗಳಲ್ಲಿ ಪೈಲ್ಸ್ ಅನ್ನು ಗುಣಪಡಿಸಬಹುದು ಎಂಬ ಹೇಳಿಕೆಗಳು ಹರಿದಾಡಿವೆ. ಇವುಗಳ ಬಗ್ಗೆ ಸತ್ಯಶೋಧನೆ ನಡೆಸಿದಾಗ ಇವು ತಪ್ಪು ಹೇಳಿಕೆಗಳು ಎಂದು ಕಂಡುಬಂದಿವೆ. ಈ ಕುರಿತ ವಾರದ ನೋಟ ಇಲ್ಲಿದೆ
ಅಕ್ರಮ ಮಸೀದಿಯನ್ನು ತೆರವು ಮಾಡಿ ಆ ಜಾಗದಲ್ಲಿ ಶಾಲೆಯೊಂದನ್ನು ನಿರ್ಮಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ಉತ್ತರ ಪ್ರದೇಶದ ಕುಶಿನಗರದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಕ್ರಮ ಮಸೀದಿಯನ್ನು ತೆರವು ಮಾಡಿ ಆ ಜಾಗದಲ್ಲಿ ಶಾಲೆಯೊಂದನ್ನು ನಿರ್ಮಿಸಲು ಮುಂದಾಗಿಲ್ಲ. ಸರ್ಕಾರಿ ಜಾಗ ಅತಿಕ್ರಮಣ ಹಿನ್ನೆಲೆಯಲ್ಲಿ ಮಸೀದಿಯ ಭಾಗಶಃ ಅತಿಕ್ರಮಣ ತೆರವು ಮಾಡಲಾಗಿದೆ. ಈ ಕುರಿತ ವರದಿ ಇಲ್ಲಿದೆ
ಜಗದ್ಗುರು ಶಂಕರಾಚಾರ್ಯ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಶ್ರೀಗಳ ಮೇಲೆ ಲಾಠಿ ಚಾರ್ಜ್ ಮಾಡಿದ ವೀಡಿಯೋ ಒಂದನ್ನು ಇತ್ತೀಚಿನದು ಎಂಬಂತೆ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ, ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿಗಳ ಮೇಲೆ ಲಾಠಿ ಚಾರ್ಜ್ ವೀಡಿಯೋ ಈಗಿನದ್ದಲ್ಲ, ಲಾಠಿ ಪ್ರಹಾರ ಆದ ಘಟನೆ 2015ರದ್ದಾಗಿದ್ದು, ಈಗ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಮಹಾಕುಂಭಕ್ಕೆ ಹೋಗುವ ರೈಲ್ವೇ ಪ್ರಯಾಣಿಕರೊಬ್ಬರಿಂದ ಟಿಟಿಯಿ (ಟಿಕೆಟ್ ಪರೀಕ್ಷಕ) ರೊಬ್ಬರು ಹಣ ವಸೂಲಿ ಮಾಡುತ್ತಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಶೋಧ ನಡೆಸಿದಾಗ, ವೈರಲ್ ವೀಡಿಯೋ 2019ರದ್ದಾಗಿದೆ. ಸುಳ್ಳು ಹೇಳಿಕೆಗಳೊಂದಿಗೆ ಕುಂಭಮೇಳಕ್ಕೆ ಲಿಂಕ್ ಕಲ್ಪಿಸಿ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ರಾಷ್ಟ್ರಪತಿ ಭವನದಲ್ಲಿ ಇದೇ ಮೊದಲ ಬಾರಿಗೆ ಮದುವೆ ನಡೆಯಲಿದೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯೊಂದನ್ನು ಹಂಚಿಕೊಳ್ಳಲಾಗಿದೆ. ಸತ್ಯಶೋಧನೆ ನಡೆಸಿದಾಗ, ರಾಷ್ಟ್ರಪತಿ ಭವನದಲ್ಲಿ ಮದುವೆಗಳು ಅಪರೂಪವಾದರೂ, ನಡೆದಿವೆ. ಅವುಗಳು ಸಾಮಾನ್ಯವಾಗಿ ಉನ್ನತ ಶ್ರೇಣಿಯ ಅಧಿಕಾರಿಗಳ ಕುಟುಂಬಗಳನ್ನು ಒಳಗೊಂಡಿರುತ್ತವೆ ಎಂದು ಸಾಬೀತಾಗಿದೆ. ಈ ಕುರಿತ ವರದಿ ಇಲ್ಲಿದೆ
ಮಹಾಕುಂಭ ಮೇಳದಲ್ಲಿ ಸಿಕ್ಕಿಬಿದ್ದವರು ಅಳುತ್ತಿರುವುದು ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಸತ್ಯಶೋಧನೆಯ ಪ್ರಕಾರ
ಕುಂಭಮೇಳದಲ್ಲಿ ಸಿಕ್ಕಿಬಿದ್ದವರು ಅಳುತ್ತಿರುವುದು ಎನ್ನುವುದು ತಪ್ಪಾಗಿದೆ. ವೀಡಿಯೋದಲ್ಲಿ ಕಂಡುಬಂದಿರುವ ವ್ಯಕ್ತಿಗಳು ಕನ್ನಡ ರಿಯಾಲಿಟಿ ಶೋ ನಟರಾಗಿದ್ದು ಅಭಿಮಾನಿಗಳು ಸುತ್ತುವರಿದ ಸಂದರ್ಭದ್ದಾಗಿದೆ. ಈ ಕುರಿತ ವರದಿ ಇಲ್ಲಿದೆ
ಒಂದು ಚಮಚ ತುಪ್ಪದಲ್ಲಿ ಕರಿಮೆಣಸು ಬೆರೆಸಿನ ನೀರಿನೊಂದಿಗೆ ಸೇರಿಸಿ ಕುಡಿಯುವುದರಿಂದ 10 ದಿನಗಳಲ್ಲಿ ಪೈಲ್ಸ್ ನೋವನ್ನು ಗುಣಪಡಿಸಬಹುದು ಎಂದು ಹೇಳಲಾಗಿದೆ. ಈ ಕುರಿತು ಪರಿಶೀಲಿಸಿದಾಗ ತುಪ್ಪ ಮತ್ತು ಕರಿಮೆಣಸು 10 ದಿನಗಳಲ್ಲಿ ಪೈಲ್ಸ್ ಅನ್ನು ಗುಣಪಡಿಸುವುದಿಲ್ಲ. ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
Ishwarachandra B G
May 30, 2025
Vasudha Beri
February 18, 2025
Ishwarachandra B G
February 14, 2025