Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಕಥುವಾದಲ್ಲಿ ಮುಸ್ಲಿಮರು ಸಿಹಿತಿಂಡಿಗೆ ಉಚ್ಚೆ ಸಿಂಪಡಿಸಿ ಗ್ರಾಹಕರಿಗೆ ಕೊಡುತ್ತಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ
ಕಥುವಾದಲ್ಲಿ ಮುಸ್ಲಿಮರು ಸಿಹಿತಿಂಡಿಗೆ ಉಚ್ಚೆ ಸಿಂಪಡಿಸಿ ಗ್ರಾಹಕರಿಗೆ ಕೊಡುತ್ತಿದ್ದರು ಎನ್ನುವುದು ದಾರಿ ತಪ್ಪಿಸುವ ಹೇಳಿಕೆಯಾಗಿದೆ. ಪ್ರಿಟಿಂಗ್ ಪ್ರೆಸ್ ಒಂದರಲ್ಲಿ ಅಶ್ಲೀಲ ಕೃತ್ಯ ರೆಕಾರ್ಡ್ ಮಾಡಲಾಗಿದೆ ಎಂಬ ಆರೋಪದಡಿ ಸ್ಥಳೀಯರ ಪ್ರತಿಭಟನೆ, ಪೊಲೀಸರು ಆರೋಪಿಗಳನ್ನು ಬಂಧಿಸಿದ ಪ್ರಕರಣ ಇದಾಗಿದೆ
ಜಮ್ಮುವಿನ ಕಥುವಾದಲ್ಲಿ ಮುಸ್ಲಿಮರು ಸಿಹಿತಿಂಡಿಗೆ ಉಚ್ಚೆ ಸಿಂಪಡಿಸಿ ಗ್ರಾಹಕರಿಗೆ ಕೊಡುತ್ತಿದ್ದರು, ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಈ ಹೇಳಿಕೆ ಕಂಡುಬಂದಿದ್ದು, ಇದರೊಂದಿಗೆ 0.23 ಸೆಕೆಂಡ್ ಗಳ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಯುವಕರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿರುವುದು ಮತ್ತು ಕಟ್ಟಡವೊಂದರ ಎದುರು ಬೆಂಕಿ ಹಚ್ಚಿರುವುದು ಕಂಡುಬರುತ್ತದೆ.



ಇದೇ ರೀತಿಯ ಹೇಳಿಕೆಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಈ ವೈರಲ್ ವೀಡಿಯೋ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ವೈರಲ್ ವೀಡಿಯೋ ಜೊತೆಗಿನ ಹೇಳಿಕೆ ದಾರಿ ತಪ್ಪಿಸುವಂಥಾದ್ದಾಗಿದೆ. ಈ ಘಟನೆ ಅಶ್ಲೀಲ ವೀಡಿಯೋ ರೆಕಾರ್ಡ್ ಮಾಡುತ್ತಿದ್ದ ಪ್ರಿಂಟಿಂಗ್ ಪ್ರೆಸ್ ವಿರುದ್ಧ ಜನರ ಪ್ರತಿಭಟನೆ ಮತ್ತು ಕೆಲವು ಆರೋಪಿಗಳ ಬಂಧನಕ್ಕೆ ಸಂಬಂಧಿಸಿದ್ದು ಎಂದು ಕಂಡುಬಂದಿದೆ.
Also Read: ಗಣೇಶ ಮೆರವಣಿಗೆ ವೇಳೆ ಮುಸ್ಲಿಮರು ಕಲ್ಲುತೂರಿದ್ದಾರೆಯೇ? ಈ ವೈರಲ್ ವೀಡಿಯೋ ಹಿಂದಿನ ಸತ್ಯ ಇಲ್ಲಿದೆ
ಸತ್ಯಶೋಧನೆಗಾಗಿ ನ್ಯೂಸ್ಚೆಕರ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದೆ.
ಈ ವೇಳೆ ಆಗಸ್ಟ್ 16, 2025ರಂದು ಕಥುವಾಸ್ಟಾರ್ ನ್ಯೂಸ್ ಎನ್ನುವ ಇನ್ಸ್ಟಾಗ್ರಾಂನಲ್ಲಿ ವೈರಲ್ ವೀಡಿಯೋ ಹೋಲುವ ವೀಡಿಯೋ ಪೋಸ್ಟ್ ಮಾಡಿರುವುದನ್ನು ಕಂಡಿದ್ದೇವೆ. ಇದು ವೈರಲ್ ವೀಡಿಯೋಕ್ಕೆ ಹೋಲಿಕೆಯಾಗುವುದನ್ನು ಗಮನಿಸಿದ್ದೇವೆ. ಈ ಪೋಸ್ಟ್ ವಿವರಣೆಯಲ್ಲಿ “ಬಿಲಾವರ್ನ ಫಿಂತರ್ ಚೌಕ್ನಲ್ಲಿ ಅಶ್ಲೀಲ ಕೃತ್ಯ ಎಸಗಿದ ಆರೋಪದ ಮೇಲೆ ಜನರು ಮುದ್ರಣ ಸಾಮಗ್ರಿಗಳನ್ನು ಹೊರಗೆಸೆದು ಬೆಂಕಿ ಹಚ್ಚಿದ್ದಾರೆ.” ಎಂದಿದೆ.

ಅರ್ಲಿ ಟೈಮ್ಸ್ ಎನ್ನುವ ಬಳಕೆದಾರರು ಫೇಸ್ಬುಕ್ ನಲ್ಲಿ ಆಗಸ್ಟ್ 16, 2025ರಂದು ಪೋಸ್ಟ್ ಮಾಡಿದ್ದು ಅದರಲ್ಲಿ ಅಶ್ಲೀಲ ಕೃತ್ಯದ ಆರೋಪದಡಿ ಬಿಲಾವರ್ ನ ಫಿಂಟರ್ ಚೌಕ್ ದಲ್ಲಿರುವ ಪ್ರಿಂಟಿಂಗ್ ಪ್ರೆಸ್ ಒಂದಕ್ಕೆ ಜನರು ತೆರಳಿ ಪ್ರತಿಭಟಿಸಿ ಅಂಗಡಿಯ ಸರಕುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದಿದೆ. ಈ ವೀಡಿಯೋ ದೃಶ್ಯಾವಳಿಗಳು ವೈರಲ್ ವೀಡಿಯೋಕ್ಕೆ ಹೋಲಿಕೆಯಾಗುವುದನ್ನು ನೋಡಿದ್ದೇವೆ.
ಇದೇ ರೀತಿಯ ಪೋಸ್ಟ್ ಗಳನ್ನು ಇಲ್ಲಿ ಇಲ್ಲಿ ನೋಡಿದ್ದೇವೆ.
ಹೆಚ್ಚಿನ ಮಾಹಿತಿಗಾಗಿ ನಾವು ಸರ್ಚ್ ಮಾಡಿದ್ದು ಈ ವೇಳೆ dailyexcelsior ಎಂಬ ವೆಬ್ಸೈಟ್ ನಲ್ಲಿ ಆಗಸ್ಟ್ 17, 2025ರಂದು ಪ್ರಕಟಿಸಿದ ವರದಿಯಲ್ಲಿ, ಅಶ್ಲೀಲ ವೀಡಿಯೋ ಶೂಟಿಂಗ್ ಮಾಡಲಾಗಿದೆ ಎಂಬ ಆರೋಪದಡಿಯಲ್ಲಿ ಬಿಲಾವರ್ನಲ್ಲಿ ಜನರು ಬೃಹತ್ ಪ್ರತಿಭಟನೆ ನಡೆಸಿ, ಖಾಸಗಿ ಮುದ್ರಣಾಲಯವನ್ನು ಧ್ವಂಸ ಮಾಡಿ, ಅಂಗಡಿಯ ಹೊರಗೆ ಅದರ ಸಾಮಗ್ರಿಗಳನ್ನು ಸುಟ್ಟುಹಾಕಿದರು ಎಂಬ ವಿಚಾರವಿದೆ.

ಆದ್ದರಿಂದ ಈ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಮುಸ್ಲಿಮರು ಸಿಹಿತಿಂಡಿಗೆ ಉಚ್ಚೆ ಸಿಂಪಡಿಸಿ ಗ್ರಾಹಕರಿಗೆ ಕೊಡುತ್ತಿದ್ದರು ಎನ್ನುವ ವಿಚಾರಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ಅಶ್ಲೀಲ ವೀಡಿಯೋ ರೆಕಾರ್ಡ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ್ದಾಗಿದೆ ಎಂದು ಕಂಡುಬಂದಿದೆ.
Our Sources
Instagram Post by kathuastarnews, Dated: August 16, 2025
Facebook Post by Early Times, Dated: August 16, 2025
Report by dailyexcelsior, Dated: August 17, 2025
Ishwarachandra B G
November 27, 2025
Tanujit Das
November 17, 2025
Ishwarachandra B G
October 29, 2025