Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಕಿವಿ ಹಣ್ಣು ತಿನ್ನುವುದು ರಕ್ತದೊತ್ತಡ ನಿಯಂತ್ರಣ, ಹೃದಯದ ಆರೋಗ್ಯಕ್ಕೆ ಪರಿಣಾಮಕಾರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಒಂದು ಹರಿದಾಡುತ್ತಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮಿನಲ್ಲಿ “ಕಿವಿ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯವನ್ನು ಆರೋಗ್ಯಕರವಾಗಿಡಲು ತುಂಬಾ ಪರಿಣಾಮಕಾರಿಯಾಗಿದೆ. ಖಾಲಿ ಹೊಟ್ಟೆಯಲ್ಲಿ ಕಿವುಚಿ ತಿನ್ನುವುದರಿಂದ ಹೃದಯಾಘಾತ ಮತ್ತು ಎದೆಯುರಿ ಮುಂತಾದ ಸಮಸ್ಯೆಗಳನ್ನು ಬಹಳಷ್ಟು ಮಟ್ಟಿಗೆ ಕಡಿಮೆ ಮಾಡಬಹುದು.” ಎಂದಿದೆ.
Also Read: ಹುರಿಗಡಲೆ-ಖರ್ಜೂರ ಒಟ್ಟಿಗೆ ತಿಂದರೆ ತೂಕ ಹೆಚ್ಚಿಸಬಹುದು ಅನ್ನೋದು ಸತ್ಯವೇ?
ಕಿವಿ ಹಣ್ಣು ನಿಜಕ್ಕೂ ಪೌಷ್ಟಿಕ ಹಣ್ಣು. ಇದು ಉತ್ತಮ ನಾರಿನಂಶ, ವಿಟಮಿನ್‌ಗಳು (ವಿಟಮಿನ್ ಸಿ ಮತ್ತು ವಿಟಮಿನ್ ಕೆ ನಂತಹ), ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳನ್ನು ಒಳಗೊಂಡಂತೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕಿವಿ ಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನು ತಿನ್ನುವುದರಿಂದ ಒಟ್ಟಾರೆ ಹೃದಯದ ಆರೋಗ್ಯಕ್ಕೆ ಕೊಡುಗೆಯನ್ನು ನೀಡುತ್ತವೆ.
ಕೆಲವು ಅಧ್ಯಯನಗಳು ಕಿವಿ ಹಣ್ಣಿನ ನಿಯಮಿತ ಸೇವನೆ ಕುರಿತು ರಕ್ತದೊತ್ತಡದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳುತ್ತವೆ. ಕಿವಿಯಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಆಹಾರದಲ್ಲಿರುವ ನಾರಿನಂಶವು ಹೃದಯ ರಕ್ತನಾಳದ ಆರೋಗ್ಯಕ್ಕೆ ಸಹ ಕೊಡುಗೆಯನ್ನು ನೀಡುತ್ತದೆ.
Also Read: ಈರುಳ್ಳಿ ರಸ ಹಾಕುವುದರಿಂದ ಕಿವಿ ನೋವು ಗುಣವಾಗುತ್ತಾ?
ಕಿವಿ ಹಣ್ಣು ಹೃದಯ-ಆರೋಗ್ಯಕರ ಆಹಾರದ ಭಾಗವಾಗಿದ್ದರೂ, ರಕ್ತದೊತ್ತಡವನ್ನು ನಿಯಂತ್ರಿಸಲು ಅಥವಾ ಹೃದಯಾಘಾತ ಅಥವಾ ಎದೆಯುರಿ ಮುಂತಾದ ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟಲು ಇದು ಸ್ವತಂತ್ರ ಮತ್ತು ಏಕೈಕ ಪರಿಹಾರವಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಹೃದಯದ ಆರೋಗ್ಯವು ಹಲವಾರು ಅಂಶಗಳಿಂದ ಪ್ರಭಾವಿತವಾಗಿರುತ್ತದೆ, ಒಟ್ಟಾರೆಯಾಗಿ ಹೇಳುವುದಾದರೆ, ಜೀವನಶೈಲಿಯ ಆಯ್ಕೆಗಳು, ವ್ಯಾಯಾಮ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ಒತ್ತಡವನ್ನು ನಿರ್ವಹಿಸುವುದು ಮತ್ತು ಧೂಮಪಾನ ಅಥವಾ ಅತಿಯಾದ ಮದ್ಯಪಾನವನ್ನು ತಪ್ಪಿಸುವುದು ಇದರಲ್ಲಿ ಸೇರಿದೆ.
ಕೆಲವು ಸಾಕ್ಷ್ಯ ಗಳ ಪ್ರಕಾರ ಕಿವಿಯಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇದೆ ಎಂದು ತೋರಿಸುತ್ತದೆ. ಆದ್ದರಿಂದ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಜನರು ಇದನ್ನು ಎಚ್ಚರಿಕೆಯಿಂದ ಸೇವಿಸಬೇಕು.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ ಕಿವಿ ಹಣ್ಣು ಒಂದರಿಂದಲೇ ರಕ್ತದೊತ್ತಡ ನಿಯಂತ್ರಣ, ಹೃದಯದ ಆರೋಗ್ಯಕ್ಕೆ ಪೂರಕ ಎಂದು ಹೇಳಲಾಗದು. ಆದ್ದರಿಂದ ಕ್ಲೇಮಿನಲ್ಲಿ ಹೇಳಿರುವುದು ತಪ್ಪಾದ ಸಂದರ್ಭವಾಗಿದೆ.
Our Sources
The nutritional and health attributes of kiwifruit: a review – PMC (nih.gov)
The effect of kiwifruit consumption on blood pressure in subjects with moderately elevated blood pressure: a randomized, controlled study – PubMed (nih.gov)
Maintaining Heart Health | Johns Hopkins Medicine
Kiwifruit, carbohydrate availability, and the glycemic response – PubMed (nih.gov)
(This article has been published in collaboration with THIP Media)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Newschecker and THIP Media
February 9, 2024
Ishwarachandra B G
June 24, 2023
Newschecker and THIP Media
March 24, 2023