Authors
Claim
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಸಂತ್ರಸ್ತೆ ಮೃತರಾಗುವ ಮೊದಲಿನ ವೀಡಿಯೋ
Fact
ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಕೋಲ್ಕತ್ತಾದ ಅತ್ಯಾಚಾರ ಸಂತ್ರಸ್ತೆಯಲ್ಲ, ಬದಲಾಗಿ ಮಹಿಳಾ ಮೇಕಪ್ ಆರ್ಟಿಸ್ಟ್
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯ ಕೊನೆಯುಸಿರು ಎಳೆಯುವ ಮುನ್ನ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ವೈದ್ಯೆ ಮೌಮಿತಾ ಅವರ ಮರಣದ ಮೊದಲು ಕೊನೆಯ ಉಸಿರು” ಎಂದಿದೆ. ಈ ವೀಡಿಯೋದಲ್ಲಿ ಮಹಿಳೆ ತನ್ನ ಮುಖದ ಮೇಲೆ ಗಾಯವನ್ನು ತೋರಿಸುತ್ತಿರುವುದನ್ನು ಕಾಣಬಹುದು.
ಈ ಪ್ರಕರಣದ ಹಿನ್ನೆಲೆ ಏನೆಂದರೆ, ಆಗಸ್ಟ್ 9 ರಂದು ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದ ಮಹಿಳೆಯ ಮೃತದೇಹ ಸೆಮಿನಾರ್ ಹಾಲ್‌ನಲ್ಲಿ ಪತ್ತೆಯಾಗಿತ್ತು. ಮಹಿಳೆಯು ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದು, ಅತ್ಯಾಚಾರದ ನಂತರ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಕೋಲ್ಕತ್ತಾದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಸಾಮಾನ್ಯ ಜನರು ಮತ್ತು ವೈದ್ಯರು ಶೀಘ್ರ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ವೈರಲ್ ವೀಡಿಯೋ ಸುಮಾರು 30 ಸೆಕೆಂಡುಗಳದ್ದಾಗಿದ್ದು , ಇದರಲ್ಲಿ ಗಾಯಗೊಂಡ ಮಹಿಳೆಯೊಬ್ಬರು ತನ್ನ ಮುಖ ಮತ್ತು ಕುತ್ತಿಗೆಯ ಮೇಲಿನ ಗಾಯಗಳನ್ನು ಕ್ಯಾಮೆರಾಕ್ಕೆ ತೋರಿಸುವುದನ್ನು ಕಾಣಬಹುದು. ಕೋಲ್ಕತ್ತಾದ ಅತ್ಯಾಚಾರ ಸಂತ್ರಸ್ತೆ ಕೊನೆಯುಸಿರೆಳೆಯುವ ಮುನ್ನ ಈ ವಿಡಿಯೋ ಮಾಡಿದ್ದಾಳೆ ಎಂಬ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
Fact Check/Verification
ನ್ಯೂಸ್‌ಚೆಕರ್ ವೈರಲ್ ವೀಡಿಯೊದ ಕೀಫ್ರೇಮ್ ಅನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದೆ. ಮತ್ತು X ಖಾತೆಯಿಂದ ಹಂಚಿಕೊಳ್ಳಲಾದ ಈ ವೀಡಿಯೋವನ್ನು ಕಂಡುಕೊಂಡರು . ವೀಡಿಯೋದ ಶೀರ್ಷಿಕೆಯಲ್ಲಿ, ಈ ವೀಡಿಯೋವನ್ನು ಜೀನತ್ ರೆಹಮಾನ್ ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇದಲ್ಲದೆ, ಈ ವೀಡಿಯೋವನ್ನು ಮತ್ತೊಂದು ಫೇಸ್‌ಬುಕ್ ಖಾತೆಯಿಂದ ಹಂಚಿಕೊಂಡಿರುವುದನ್ನೂ ನಾವು ನೋಡಿದ್ದೇವೆ. ವೈರಲ್ ವಿಡಿಯೋವನ್ನು ಜೀನತ್ ರೆಹಮಾನ್ ಎಂಬ ಮಹಿಳೆ ಸಿದ್ಧಪಡಿಸಿದ್ದಾರೆ ಎಂದು ಈ ವೀಡಿಯೋದ ಶೀರ್ಷಿಕೆಯಲ್ಲೂ ಬರೆಯಲಾಗಿದೆ.
ಈಗ ನಾವು ಜೀನತ್ ರೆಹಮಾನ್ ಅವರ ಸಾಮಾಜಿಕ ಮಾಧ್ಯಮ ಖಾತೆಯ ಬಗ್ಗೆ ಶೋಧಿಸಿದ್ದೇವೆ. ಇದೇ ಹೆಸರಿನ ಫೇಸ್‌ಬುಕ್ ಖಾತೆಯನ್ನು ನಾವು ಕಂಡುಕೊಂಡಿದ್ದೇವೆ , ಅವರ ಬಯೋದಲ್ಲಿ ಕಲಾವಿದರು ಎಂದು ಬರೆಯಲಾಗಿದೆ. ಆದರೆ ಈ ಖಾತೆ ಲಾಕ್ ಆಗಿದ್ದು, ಅದೇ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆಯನ್ನೂ ನೋಡಿದ್ದೇವೆ. ಇದು ಕೂಡ ಲಾಕ್ ಆಗಿರುವುದನ್ನು ಗಮನಿಸಿದ್ದೇವೆ.
ನಾವು ಫೇಸ್‌ಬುಕ್‌ನಲ್ಲಿ ಜೀನತ್ ರೆಹಮಾನ್ ಆರ್ಟಿಸ್ಟ್ ಎಂಬ ಕೀವರ್ಡ್ ಅನ್ನು ಹುಡುಕಿದಾಗ , ಮೇಕಪ್ ಆರ್ಟಿಸ್ಟ್ ಎಂಬ ಹೆಸರಿನ ಫೇಸ್‌ಬುಕ್ ಗುಂಪಿನಲ್ಲಿ ಮೇಲಿನ ಜೀನತ್ ರೆಹಮಾನ್ ಫೇಸ್‌ಬುಕ್ ಖಾತೆಯಿಂದ ಮಾಡಿದ ಕೆಲವು ಫೇಸ್‌ಬುಕ್ ಪೋಸ್ಟ್‌ಗಳು ಕಂಡುಬಂದಿವೆ.
ಇದಲ್ಲದೇ, ಗ್ರೂಪ್‌ನಲ್ಲಿರುವ ಫೇಸ್‌ಬುಕ್ ಪ್ರೊಫೈಲ್ ಅನ್ನು ನಾವು ಹುಡುಕಿದಾಗ, ಈ ಖಾತೆಯಿಂದ ಗುಂಪಿನಲ್ಲಿ ಅನೇಕ ಮೇಕಪ್ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
ಈ ಸಮಯದಲ್ಲಿ, ವೈರಲ್ ವೀಡಿಯೋದೊಂದಿಗೆ ಗ್ರೂಪ್ ನಲ್ಲಿ ಹಂಚಿಕೊಂಡಿರುವ ಕೆಲವು ಚಿತ್ರಗಳನ್ನು ನಾವು ತುಲನೆ ಮಾಡಿದ್ದೇವೆ. ಎರಡೂ ಚಿತ್ರಗಳಲ್ಲಿ ಕಂಡುಬರುವ ಮಹಿಳೆ ಒಬ್ಬರೇ ಆಗಿರುವುದನ್ನುನಾವು ಗುರುತಿಸಿದ್ದೇವೆ. ಗ್ರೂಪ್ ನಲ್ಲಿರುವ ಕೆಲವು ಚಿತ್ರಗಳ ಶೀರ್ಷಿಕೆಯಲ್ಲಿ, ಜೀನತ್ ರೆಹಮಾನ್ ಎಂಬ ಈ ಫೇಸ್‌ಬುಕ್ ಖಾತೆಯು ಈ ಫೋಟೋಗಳು ಅವರದ್ದೇ ಎಂದು ಸ್ಪಷ್ಟವಾಗಿ ಬರೆದಿದೆ.
ನಮ್ಮ ತನಿಖೆಯನ್ನು ಇನ್ನಷ್ಟು ಖಚಿತಪಡಿಸಲು ನಾವು ಜೀನತ್ ರೆಹಮಾನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಅವರ ಉತ್ತರ ಬಂದಾಗ ಕಥೆಯನ್ನು ನವೀಕರಿಸಲಾಗುತ್ತದೆ.
Conclusion
ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಕೋಲ್ಕತ್ತಾದ ಅತ್ಯಾಚಾರ ಸಂತ್ರಸ್ತೆಯಲ್ಲ, ಬದಲಾಗಿ ಮಹಿಳಾ ಮೇಕಪ್ ಆರ್ಟಿಸ್ಟ್ ಎಂಬುದು ನಮ್ಮ ತನಿಖೆಯಲ್ಲಿ ಕಂಡುಬಂದ ಪುರಾವೆಗಳಿಂದ ಸ್ಪಷ್ಟವಾಗಿದೆ.
Also Read: ವಿಶಾಖಪಟ್ಟಣದ ಹಳೇ ವೀಡಿಯೋ ಕೋಲ್ಕತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಲಿಂಕ್!
Result: False
Our Sources
Images uploaded by Zeenat Rahman Facebook account makeup artist group
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.