Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಕೋಲ್ಕತಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ಮೃತದೇಹವನ್ನು ತೋರಿಸುವ ವೀಡಿಯೋ
Fact
ಈ ವೀಡಿಯೋ ಕೋಲ್ಕತಾ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ, ವಿಶಾಖಪಟ್ಟಣದಲ್ಲಿ ಅಂಗಾಗ ದಾನಿಯೊಬ್ಬರನ್ನು ಅಂತಿಮವಾಗಿ ಕಳುಹಿಸಿಕೊಡುತ್ತಿರುವ ವೇಳೆ ಆಸ್ಪತ್ರೆ ಸಿಬ್ಬಂದಿಗಳು ಗೌರವ ಸೂಚಕವಾಗಿ ನಡೆದುಕೊಂಡ ಸಂದರ್ಭದ್ದಾಗಿದೆ
ಶವವೊಂದನ್ನು ಸ್ಟ್ರೆಚರ್ ನಲ್ಲಿ ಸಾಗಿಸುವ ವೇಳೆ ಆಸ್ಪತ್ರೆಯ ಸಿಬ್ಬಂದಿಗಳು ನಮಸ್ಕರಿಸುತ್ತಿರುವ 21 ಸೆಕೆಂಡ್ ಉದ್ದದ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಹೆಚ್ಚಿನ ಬಳಕೆದಾರರು ಇದನ್ನು “#kolkata,” “#kolkatarapemurdercase” ಮತ್ತು #doctor ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಇತ್ತೀಚಿನ ಕೋಲ್ಕತಾ ಘಟನೆಗೆ ಸಂಬಂಧಿಸಿದ್ದು ಎಂಬಂತೆ ಹಂಚಿಕೊಂಡಿದ್ದಾರೆ, ಇದನ್ನು ಕೋಲ್ಕತ್ತಾದ RG ಕರ್ ಆಸ್ಪತ್ರೆಯಲ್ಲಿ ತರಬೇತಿ ಪಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಲಿಂಕ್ ಮಾಡಲಾಗಿದೆ. ಇನ್ನು ಕೆಲವರು ಇದು ಸಂತ್ರಸ್ತೆಯ “ಮೃತ ದೇಹ” ತೋರಿಸುವ “ಕೊನೆಯ ವಿಡಿಯೋ” ಎಂದು ಹೇಳಿಕೊಂಡಿದ್ದಾರೆ. ಆದಾಗ್ಯೂ, ನ್ಯೂಸ್‌ಚೆಕರ್ ಈ ಹೇಳಿಕೆಗಳು ಸುಳ್ಳು ಎಂದು ಕಂಡುಕೊಂಡಿದೆ.
ಇದೇ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಜೂನ್ 1, 2024 ರ ದೈನಿಕ್ ಭಾಸ್ಕರ್ ವರದಿ ಲಭ್ಯವಾಗಿದೆ. ಇದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ಆತನ ತಂದೆ ಅಂಗಾಗವನ್ನು ದಾನ ಮಾಡಿದ್ದಾರೆ ಎಂದು ಹೇಳಿದೆ.
ಜಲೋರ್‌ನಿಂದ ಬಂದಿರುವ ಪ್ರವೀಣ್ ಮೆಹ್ತಾ ಅವರು ವಿಶಾಖಪಟ್ಟಣಂನಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ, ಅಲ್ಲಿ ಅವರು ಸೌಂದರ್ಯವರ್ಧಕಗಳ ವ್ಯಾಪಾರವನ್ನು ನಡೆಸುತ್ತಿದ್ದಾರೆ ಎಂದು ಅದು ವಿವರಿಸಿದೆ. ಅವರ ಪುತ್ರ ವಿಪಿನ್ ಮೇ 29 ರಂದು ಅಪಘಾತಕ್ಕೀಡಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು., ನಂತರ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವಿಪಿನ್ ಅವರ ನಿಧನದ ನಂತರ, ಅವರ ತಂದೆ ತಾಯಿ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವಿಪಿನ್ ಅವರ ಕುಟುಂಬದ ನಿರ್ಧಾರವನ್ನು ಶ್ಲಾಘಿಸಲು ಅವರ ಶವಕ್ಕೆ ‘ಗಾರ್ಡ್ ಆಫ್ ಆನರ್’ ನೀಡಿದರು. ವೀಡಿಯೋದಲ್ಲಿ ಕಂಡುಬರುವ ಆಸ್ಪತ್ರೆಯು “ಪಿನಾಕಲ್ ಆಸ್ಪತ್ರೆ” ಎಂದು ನಾವು ಕಂಡುಕೊಂಡಿದ್ದೇವೆ.
ವೈರಲ್ ದೃಶ್ಯಾವಳಿಗಳನ್ನು ಹೊತ್ತ ನ್ಯೂಸ್ 18 ವರದಿಯು ವಿಶಾಖಪಟ್ಟಣಂನಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದ ತಮ್ಮ ಮಗ ವಿಪಿನ್ ಮೆಹ್ತಾ ಅವರ ಅಂಗಾಂಗವನ್ನು ದಾನ ಮಾಡಲು ಕುಟುಂಬವು ನಿರ್ಧರಿಸಿದೆ ಎಂದು ಮತ್ತಷ್ಟು ದೃಢಪಡಿಸಿದೆ. ಆನಂತರ, ಆಸ್ಪತ್ರೆಯು ಅವರ ದೇಹಕ್ಕೆ ‘ಗಾರ್ಡ್ ಆಫ್ ಆನರ್’ ನೀಡಿತು.
ಈ ಕುರಿತಂತೆ ಪ್ರತಿಕ್ರಿಯೆಗಾಗಿ ನ್ಯೂಸ್‌ಚೆಕರ್ ಪಿನಾಕಲ್ ಆಸ್ಪತ್ರೆಯನ್ನು ಸಂಪರ್ಕಿಸಿದೆ. ಅವರು ಪ್ರತಿಕ್ರಿಯಿಸಿದ ಬಳಿಕ ಈ ಲೇಖನವನ್ನು ಪರಿಷ್ಕರಿಸಲಾಗುವುದು.
ಈ ಸಾಕ್ಷ್ಯಗಳ ಪ್ರಕಾರ, ವಿಶಾಖಪಟ್ಟಣಂನ ಆಸ್ಪತ್ರೆಯಲ್ಲಿ ಅಂಗಾಗ ದಾನಿಯೊಬ್ಬರನ್ನು ಗೌರವ ಸೂಚಕವಾಗಿ ಕಳುಹಿಸುತ್ತಿರುವ ವೀಡಿಯೋವನ್ನು ಇತ್ತೀಚಿನ ಕೋಲ್ಕತಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
Also Read: ರಾಹುಲ್ ಗಾಂಧಿಗೆ ಉದ್ಧವ್ ಠಾಕ್ರೆ ಬಾಗಿ ನಮಸ್ಕರಿಸಿದ ಎಡಿಟ್ ಮಾಡಿದ ಫೋಟೋ ವೈರಲ್
Our Sources
Report By Dainik Bhaskar, Dated June 1, 2024
Report By News18, Dated June 2, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Tanujit Das
March 28, 2025
Ishwarachandra B G
August 31, 2024
Runjay Kumar
August 29, 2024