Authors
Claim
ಕರ್ನಾಟಕದ ಮದರಸಾ ವಿದ್ಯಾರ್ಥಿಗಳು ಭಾರತದ ಪ್ರಧಾನಿ ಹೆಸರು ಮೊಹಮ್ಮದ್ ಅಸ್ಲಾಂ ಹುಸೇನ್ ಎಂದು ಹೇಳಿದರು
Fact
ಇದು ಕರ್ನಾಟಕದ ಮದರಸಾಕ್ಕೆ ಸಂಬಂಧಿಸಿದ್ದಲ್ಲ. ಜಮ್ಮುವಿನ ರಜೌರಿಯ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ಪ್ರಧಾನಿ ಹೆಸರು ಕೇಳಿದಾಗ ತಪ್ಪಾಗಿ ಹೇಳಿದ್ದಾರೆ. ಈ ವೀಡಿಯೋ 2022 ಆಗಸ್ಟ್ ನದ್ದು
ಮದರಸಾಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ದೇಶದ ಪ್ರಧಾನಿ ಹೆಸರು ತಿಳಿದಿಲ್ಲ ಎಂಬರ್ಥದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ಹರಿದಾಡಿದೆ.
ಫೇಸ್ಪುಕ್ ನಲ್ಲಿ ಕಂಡುಬಂದ ಈ ಪೋಸ್ಟ್‌ನಲ್ಲಿ “ಸಿದ್ದರಾಮಯ್ಯ ಪ್ರಾಯೋಜಿತ ಮುಸ್ಲಿಂ ಶಾಲೆಗಳ ಶಿಕ್ಷಣ, ಮುಸ್ಲಿಂ ಶಾಲೆಗಳ ಪ್ರಕಾರ ಭಾರತದ ಪ್ರಧಾನಿ ಮೊಹಮ್ಮದ್ ಅಸ್ಲಾಂ ಹುಸೇನ್, ಸಿದ್ರಾಮುಲ್ಲಾನ ಹೊಸ ಶಿಕ್ಷಣ ನೀತಿ” ಎಂದಿದೆ. ಈ ವೀಡಿಯೋದಲ್ಲಿ ಸಂದರ್ಶಕ ಭಾರತದ ಪ್ರಧಾನಿ ಯಾರು ಎಂದು ವಿದ್ಯಾರ್ಥಿಗಳ ಬಳಿ ಕೇಳುತ್ತ ಹೋದಾಗ ಮೊಹಮ್ಮದ್ ಅಸ್ಲಾಂ ಹುಸೇನ್ ಎಂದು ಹೇಳುವುದು ಕಾಣಿಸುತ್ತದೆ.
Also Read: ಬೆಂಗಳೂರಿನ ಜೋಡಿ ಕೊಲೆ ಪ್ರಕರಣ, ಕೋಮು ಬಣ್ಣದೊಂದಿಗೆ ಮೃತರ ಫೋಟೋ ವೈರಲ್
ಈ ಕುರಿತು ಸತ್ಯಶೋಧನೆಗೆ ನ್ಯೂಸ್‌ಚೆಕರ್ ಮುಂದಾಗಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ನಮಗೆ ಯೂಟ್ಯೂಬ್ ವೀಡಿಯೋ ಒಂದು ಲಭ್ಯವಾಗಿದೆ.
ಅಮಿತ್ ಶರ್ಮಾ ಯೂಟ್ಯೂಬ್ ಚಾನೆಲ್ ಈ ವೀಡಿಯೋವನ್ನು ಆಗಸ್ಟ್ 15, 2022ರಂದು ಪೋಸ್ಟ್ ಮಾಡಿದೆ. ಇದರ ಶೀರ್ಷಿಕೆಯಲ್ಲಿ “ರಜೌರಿ|| ಭಾರತ ದೇಶದ ಪ್ರಧಾನ ಮಂತ್ರಿ ಹೆಸರನ್ನು ಶಾಲಾ ಮಕ್ಕಳು ಮೊಹಮ್ಮದ್ ಅಸ್ಲಾಂ ಎಂದು ಹೇಳಿದರು” ಎಂದಿದೆ. ವೀಡಿಯೋದ ವಿವರಣೆಯಲ್ಲಿ ಜಮ್ಮುವಿನ ರಜೌರಿಯ ಸರ್ಕಾರಿ ಶಾಲೆಯೊಂದರ ಮಕ್ಕಳ ಬಳಿ ಪ್ರಧಾನಿ ಹೆಸರನ್ನು ಕೇಳಿದಾಗ ಮೊಹಮ್ಮದ್ ಅಸ್ಲಾಂ ಎಂದು ಹೇಳಿದ್ದಾರೆ ಎಂದಿದೆ (ಹಿಂದಿಯಿಂದ ಅನುವಾದಿಸಲಾಗಿದೆ) ಈ ವೀಡಿಯೋ ವೈರಲ್ ವೀಡಿಯೋದ ಹೋಲಿಕೆಯನ್ನು ಹೊಂದಿದ್ದು, ವೈರಲ್ ವೀಡಿಯೋಕ್ಕಿಂತ ಹೆಚ್ಚಿನ ಅವಧಿಯನ್ನು ಹೊಂದಿದೆ.
ಈ ವೀಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಿ ನಾವು ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಅಮಿತ್ ಶರ್ಮಾ ಅವರ ಫೇಸ್‌ಬುಕ್ ಖಾತೆ ಲಭ್ಯವಾಗಿದೆ.
Also Read: ಹಿಂದೂಗಳ ಬಹಿಷ್ಕಾರಕ್ಕೆ ಬೆಂಗಳೂರಿನಲ್ಲಿ ಮುಸ್ಲಿಂ ಮೌಲ್ವಿ ಕರೆಕೊಟ್ಟಿದ್ದಾರೆಯೇ, ವೈರಲ್ ವೀಡಿಯೋ ನಿಜವೇ?
ಇದರಲ್ಲಿ ಅವರು ತಾನು ಪತ್ರಕರ್ತ ಎಂದು ಹೇಳಿಕೊಂಡಿದ್ದು, ಹಲವು ವೀಡಿಯೋಗಳನ್ನು ಶೇರ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಅಪ್ ಲೋಡ್ ಮಾಡಿರುವ ವಿಡಿಯೋಗಳನ್ನು ಸರ್ಚ್ ಮಾಡಿದ್ದು, ಈ ವೇಳೆ ಆಗಸ್ಟ್ 12, 2022ರಂದು ಪೋಸ್ಟ್ ಮಾಡಿದ ವೀಡಿಯೋ ಲಭ್ಯವಾಗಿದೆ. ಈ ವೀಡಿಯೋದ ವಿವರಣೆಯಲ್ಲೂ ಜಮ್ಮುವಿನ ರಜೌರಿಯ ಶಾಲೆಯಲ್ಲಿ ಮಕ್ಕಳನ್ನು ಪ್ರಧಾನಿ ಹೆಸರು ಹೇಳಲು ಹೇಳಿದಾಗ ಮೊಹಮ್ಮದ್ ಅಸ್ಲಾಮ್ ಎಂದು ಹೇಳಿದ್ದಾರೆ ಎಂದಿದ್ದಾರೆ.
Conclusion
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಇದು ಕರ್ನಾಟಕದ ಯಾವುದೋ ಶಾಲೆ ಅಥವಾ ಮದರಸಾದ ವೀಡಿಯೋವಲ್ಲ. ಇದನ್ನು ಅಮಿತ್ ಶರ್ಮಾ ಎಂಬವರು 2012ರಲ್ಲಿ ಜಮ್ಮುವಿನ ರಜೌರಿಯ ಶಾಲೆಯಲ್ಲಿ ತೆಗೆದ ವೀಡಿಯೋ ಆಗಿದೆ ಎಂದು ತಿಳಿದುಬಂದಿದ್ದು, ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್ ತಪ್ಪಾಗಿದೆ.
Also Read: ಪ.ಬಂಗಾಳದಲ್ಲಿ ಸೇನಾ ವಾಹನ ತಡೆದ ಮುಸ್ಲಿಂ ಗುಂಪು, ವೈರಲ್ ವೀಡಿಯೋ ಹಿಂದಿನ ಸತ್ಯವೇನು?
Result: False
Our Sources
YouTube Video By, Amit Sharma: Dated: August 15, 2022
Facebook Post By, Amit Sharma: Dated: August 12, 2022
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.