ವೈರಲ್‌ ವೀಡಿಯೋದಲ್ಲಿ ದೇವಿ ಸರಸ್ವತಿ ಫೋಟೋ ಒದ್ದವನು ಮುಸ್ಲಿಂ ವ್ಯಕ್ತಿ ಅಲ್ಲ!

ವೈರಲ್‌ ವೀಡಿಯೋ, ಸರಸ್ವತಿ, ಮುಸ್ಲಿಂ, ತುಳಿತ

ವೈರಲ್‌ ವೀಡಿಯೋವೊಂದರಲ್ಲಿ ದೇವಿ ಸರಸ್ವತಿ ಫೊಟೋಕ್ಕೆ ವ್ಯಕ್ತಿಯೊಬ್ಬ ಒದೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಹೀಗೆ ಫೊಟೋವನ್ನು ತುಳಿದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬಂತೆ ಪ್ರಚಾರವಾಗಿದೆ.

ಈ ಕುರಿತ ಕ್ಲೇಮ್‌ ಹೀಗಿದೆ “ನಮ್ಮ ದೇವರು ಸರಸ್ವತಿಯನ್ನು ಕಾಲಿನಿಂದ ಒದ್ದ ಈ ಜಿಹಾದಿಯನ್ನು ಸುಮ್ಮನೆ ಬಿಡಬಾರದು. ತಮ್ಮ ಧರ್ಮದ ಬಗ್ಗೆ ಮಾತನಾಡಿದರೆ, “ಸರ್‌ ತನ್‌ ಸೇ ಜುದಾ” ಮಾಡುವ ಭಯೋತ್ಪಾದಕರು. ಆ ದೇವರೇ ಇವನ ಕಾಲನ್ನು ತನ್‌ ಸೇ ಜುದಾ ಮಾಡುತ್ತಾರೆ” ಎಂದು ಪೋಸ್ಟ್‌ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕ್ಲೇಮ್‌

Fact check/ Verification

ಈ ವೈರಲ್‌ ವೀಡಿಯೋದ ಸತ್ಯಾಸತ್ಯತೆ ಪರಿಶೀಲನೆಗೆ ಕೀಫ್ರೇಮ್‌ ಸರ್ಚ್‌ ನಡೆಸಲಾಗಿದೆ.

ಕೀಫ್ರೇಮ್‌ ಸರ್ಚ್ ನಡೆಸಿದಾಗ ಲಭ್ಯವಾದ ಮಾಹಿತಿ

ಈ ವೇಳೆ ಎಬಿಪಿ ಅಸ್ಮಿತಾ ಡಿಸೆಂಬರ್‌ 31, 2022ರಂದು ಪ್ರಕಟಮಾಡಿದ ವರದಿಯೊಂದು ಪತ್ತೆಯಾಗಿದೆ. ಆ ವರದಿಯ ಪ್ರಕಾರ, ಗುಜರಾತ್‌ನ ಛೋಟಾ ಉದಯ್‌ ಪುರ ಜಿಲ್ಲೆಯಲ್ಲಿ ಪಾನಮತ್ತನಾದ ಶಿಕ್ಷಕನೊಬ್ಬ ದೇವಿ ಸರಸ್ವತಿ ಫೋಟೋವನ್ನು ಒದೆದಿದ್ದಾನೆ ಎಂದಿದೆ.

ಇದರೊಂದಿಗೆ ಹೆಚ್ಚಿನ ಮಾಹಿತಿಗೆ ಕೀವರ್ಡ್‌ ಸರ್ಚ್‌ ನಡೆಸಲಾಗಿದ್ದು, ಇದೇ ವೇಳೆ ಗುಜರಾತ್‌ ಸಂದೇಶ್‌ ವೆಬ್‌ಸೈಟ್‌ ಡಿಸೆಂಬರ್‌ 31 2022ರಂದು ಪ್ರಕಟಗೊಳಿಸಿದ ವರದಿ ಕೂಡ ಲಭ್ಯವಾಗಿದೆ. ಈ ವರದಿಯ ಪ್ರಕಾರ, ಅಮಲೇರಿಸಿಕೊಂಡ ಶಿಕ್ಷಕ ಗುಜರಾತ್ ನ ಛೋಟಾ ಉದಯ್‌ಪುರದ ಕವಂತಾ ತಾಲೂಕಿನ ಪ್ರಾಥಮಿಕ ಶಾಲೆಯೊಂದರಲ್ಲಿ ಗಲಾಟೆ ಎಬ್ಬಿಸಿ ಧ್ವಂಸ ಮಾಡಿದ್ದಾನೆ. ಜೊತೆಗೆ ಸರಸ್ವತಿ ಫೊಟೋ ಮೇಲೆ ತುಳಿದಿದ್ದಾನೆ. ಈತನ ಹೆಸರನ್ನು ಯೋಗೇಶ್‌ ರತ್ವಾ ಎಂದು ವರದಿಯಲ್ಲಿ ಬರೆಯಲಾಗಿದೆ.

ಈ ಘಟನೆ ಕುರಿತಂತೆ ಶಾಲೆಯ ಪ್ರಿನ್ಸಿಪಾಲ್‌ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಇದೇ ಪ್ರಕರಣದ ಬಗ್ಗೆ ನ್ಯೂಸ್‌ 18 ಗುಜರಾತಿ ಕೂಡ ವರದಿಯನ್ನು ಪ್ರಸಾರ ಮಾಡಿದೆ.

Also Read: ಪ್ರಧಾನಿ ನರೇಂದ್ರ ಮೋದಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆಯೇ? ವೈರಲ್‌ ಕ್ಲೇಮ್‌ ಸುಳ್ಳು

ಪ್ರಕರಣದ ಸತ್ಯ ಪರಿಶೀಲನೆಗೆ ನ್ಯೂಸ್‌ಚೆಕರ್‌ ಛೋಟಾ ಉದಯ್‌ಪುರದ ಎಸ್‌.ಪಿ. ಎಮ್‌.ಎಸ್‌.ಭಾಭೋರ್ ಅವರನ್ನು ಸಂಪರ್ಕಿಸಿದ್ದು, ಇದಕ್ಕೆ ಕೋಮುವಾದದ ಕಾರಣ ಇರುವುದನ್ನು ತಳ್ಳಿ ಹಾಕಿದ್ದಾರೆ. “ಈ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು, ಇದಲ್ಲಾವುದೇ ಕೋಮುವಾದದ ಕಾರಣ ಇಲ್ಲ. ವೀಡಿಯೋದಲ್ಲಿ ಕಾಣುತ್ತಿರುವಂತೆ, ಧ್ವಂಸ ಕೃತ್ಯ ನಡೆಸಿದ ವ್ಯಕ್ತಿಯ ಹೆಸರು ಯೋಗೋಶ್‌ ರತ್ವಾ, ಈತ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದು, ಕಾರ್ಯಕ್ರಮವೊಂದಕ್ಕೆ ಮದ್ಯ ಸೇವಿಸ ಬಂದಿದ್ದ. ಬಳಿಕ ತರಗತಿಯೊಂದರಲ್ಲಿ ಸರಸ್ವತಿ ಫೋಟೊ ತುಳಿದಿದ್ದ. ಈತನ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ”. ಎಂದವರು ತಿಳಿಸಿದ್ದಾರೆ.

Conclusion

ನ್ಯೂಸ್‌ಚೆಕರ್‌ ಸತ್ಯ ಪರಿಶೀಲನೆಯಂತೆ ವೈರಲ್‌ ವೀಡಿಯೋ ಕುರಿತ ಕ್ಲೇಮ್‌ ತಪ್ಪಾಗಿದೆ. ವೀಡಿಯೋದಲ್ಲಿ ಕಾಣುತ್ತಿರುವಂತೆ ಶಾಲೆಯಲ್ಲಿ ಧ್ವಂಸ ಕೃತ್ಯ ನಡೆಸಿದ ವ್ಯಕ್ತಿ ಮುಸ್ಲಿ ಸಮುದಾಯಕ್ಕೆ ಸೇರಿದಾತ ಅಲ್ಲಎಂದು ತಿಳಿದುಬಂದಿದೆ.

Result: Partly False

Our Sources
Report Published by Gujarat Sandesh, Dated: December 30, 2022
Report Published by ABP Asmita, Dated: December 31, 2022
Report Published by News 18, Dated: December 31, 2022
Conversation with Chota Udaipur SP M.S Bhabhor

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.