Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದ್ದು, ಅದನ್ನು ಅಲ್ಲಿನ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ಉದ್ಘಾಟಿಸಿದ್ದಾರೆ. ಹಿಂದೂಗಳ ಮೂರ್ಖರಾದ ಪರಿಣಾಮ ಇದು ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ನಲ್ಲಿ “ತೆಲಂಗಾಣ ವಿಧಾನಸೌಧದಲ್ಲಿ ನಿರ್ಮಿಸಲಾಗಿರುವ ನೂತನ ಬೃಹತ್ ಮಸೀದಿಯನ್ನು ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಇತ್ತೀಚೆಗೆ ಉದ್ಘಾಟಿಸಿದರು. ನೋಡಿ ಹಿಂದುಗಳೇ ಮೂರ್ಖರಾಗಿ ಮತ ಚಲಾಯಿಸಿದ ಪರಿಣಾಮವಿದು. ವಿವೇಚನೆ ಇಲ್ಲದೆ ಮತ ನೀಡಿದರೆ ಮುಂದೊಂದು ದಿನ ನಿಲ್ಲಲು ನೆಲೆ ಇಲ್ಲದಂತಾದೀತು.” ಎಂದು ಹೇಳಲಾಗಿದೆ.
Also Read: ಭಾರತಕ್ಕೆ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವಂತೆ ಕೆನಡಾ ಹೇಳಿದೆ ಎಂಬ ಎಎನ್‌ಐ ವರದಿ ನಿಜವೇ?
ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್‌ನಲ್ಲಿ ‘kcr inaugurates masjid secretariate’ ಕೀವರ್ಡ್ ಗಳ ಮೂಲಕ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.
ಆಗಸ್ಟ್ 26, 2023ರ ಟೈಮ್ಸ್ ಇಂಡಿಯಾ ವರದಿ ಪ್ರಕಾರ, “ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ (ಕೆಸಿಆರ್) ಮತ್ತು ಗವರ್ನರ್ ತಮಿಳಿಸೈ ಸುಂದರ್ ರಾಜನ್ ಅವರು ಜಂಟಿಯಾಗಿ ನೂತನ ಕಾರ್ಯಾಲಯ ಕಟ್ಟಡದೊಳಗೆ ದೇವಸ್ಥಾನ, ಮಸೀದಿ, ಚರ್ಚ್ ಗಳನ್ನು ಉದ್ಘಾಟಿಸಿದ್ದಾರೆ” ಎಂದಿದೆ.
ಆಗಸ್ಟ್ 25, 2023ರ ಎನ್‌ಡಿಟಿವಿ ವರದಿಯಲ್ಲಿ, “ತೆಲಂಗಾಣ ಸರ್ಕಾರದ ನೂತನ ಕಾರ್ಯಾಲಯ ಕಟ್ಟಡದಲ್ಲಿ ದೇಗುಲ, ಮಸಸೀದಿ, ಚರ್ಚ್ ನಿರ್ಮಿಸಲಾಗಿದ್ದುಅದನ್ನು ಶುಕ್ರವಾರ ರಾಜ್ಯಪಾಲರಾದ ತಮಿಳಿಸೈ ಸುಂದರ್ ರಾಜನ್ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಮೂರೂ ಕಡೆಗಳಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಭಾಗಿಯಾಗುವುದರೊಂದಿಗೆ ಉದ್ಘಾಟಿಸಿದರು” ಎಂದಿದೆ. ಇದೇ ವರದಿಯಲ್ಲಿ “ಮಸೀದಿ ಉದ್ಘಾಟನೆ ವೇಳೆ ಮಾತನಾಡಿದ ಸಿಎಂ ಅವರು ತೆಲಂಗಾಣದಲ್ಲಿ ಭಾತೃತ್ವವನ್ನು ಮುಂದುವರಿಸುವ ಭಾಗವಾಗಿ ಸರ್ಕಾರ ಈ ಯತ್ನ ಮಾಡಿದೆ” ಎಂದು ಹೇಳಿದ್ದಾಗಿ ಇದೆ.
ಆಗಸ್ಟ್ 25, 2023ರಂದು ಸಾಕ್ಷಿ ಟಿವಿ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸಲಾದ ವೀಡಿಯೋಕ್ಕೆ “CM KCR Special Worship in Temple, Masjid, Church in Telangana Secretariat” ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೋದಲ್ಲಿ ಸಿಎಂ ಕೆಸಿಆರ್ ಮತ್ತು ರಾಜ್ಯಪಾಲರು ಜಂಟಿಯಾಗಿ ಧಾರ್ಮಿಕ ಕೇಂದ್ರಗಳನ್ನು ಉದ್ಘಾಟಿಸುತ್ತಿರುವ ದೃಶ್ಯಾವಳಿಗಳಿವೆ.
ಇನ್ನು ವಿವಿಧ ಮಾಧ್ಯಮಗಳಲ್ಲಿ ಇದೇ ರೀತಿಯ ವರದಿಗಳನ್ನು ನಾವು ಗಮನಿಸಿದ್ದೇವೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಈ ಮಾಧ್ಯಮ ವರದಿಗಳೊಂದಿಗೆ ನಾವು ಎಕ್ಸ್ ನಲ್ಲೂ ಪರಿಶೀಲನೆ ನಡೆಸಿದ್ದು ಈ ವೇಳೆ ತೆಲಂಗಾಣ ಸರ್ಕಾರದ ಮಿಷನ್ ತೆಲಂಗಾಣ ಎಕ್ಸ್ ನಲ್ಲಿ ಆಗಸ್ಟ್ 25, 2023ರಂದು ಮಾಡಿದ ಪೋಸ್ಟ್ ಗಳು ಲಭ್ಯವಾಗಿವೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಈ ಸತ್ಯಶೋಧನೆಯ ಪ್ರಕಾರ, ತೆಲಂಗಾಣ ಸರ್ಕಾರದ ಕಾರ್ಯಾಲಯ ಕಟ್ಟದಲ್ಲಿ ಮಸೀದಿಯನ್ನು ಮಾತ್ರ ಉದ್ಘಾಟಿಸಲಾಗಿಲ್ಲ. ಅಲ್ಲಿ ಒಂದು ದೇಗುಲ, ಮಸೀದಿ, ಚರ್ಚ್ ಅನ್ನು ನಿರ್ಮಿಸಲಾಗಿದ್ದು ಅದನ್ನು ಸಿಎಂ ಮತ್ತು ರಾಜ್ಯಪಾಲರು ಜಂಟಿಯಾಗಿ ಉದ್ಘಾಟಿಸಿರುವುದು ಗೊತ್ತಾಗಿದೆ.
Also Read: ಉಪ್ಪಿನ ರಾಶಿಯಲ್ಲಿ ಮೃತದೇಹವನ್ನಿಟ್ಟರೆ ವ್ಯಕ್ತಿ ಮತ್ತೆ ಜೀವಂತವಾಗುತ್ತಾನೆ ಎನ್ನುವುದು ಸತ್ಯವೇ?
Our Sources
Report By Times of India, Dated: August 26, 2023
Report By NDTV, Dated: August 25, 2023
You Tube Video By SakshiTV, Dated: August 25, 2023
Tweet By Mission Telangana (1), Dated: August 25, 2023
Tweet By Mission Telangana (2), Dated: August 25, 2023
Tweet By Mission Telangana (3), Dated: August 25, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
June 14, 2025
Ishwarachandra B G
June 11, 2025
Ishwarachandra B G
June 10, 2025