Fact Check: ಸಚಿವ ರಾಜಣ್ಣ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆಯೇ?

ಸಚಿವ ರಾಜಣ್ಣ, ದೇವೇಗೌಡರ ಬಗ್ಗೆ ಕೀಳು ಹೇಳಿಕೆ

Claim

ಸಚಿವ ರಾಜಣ್ಣ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.

ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ದೇಶವೇ ಹೆಮ್ಮೆ ಪಡುವ ಹಿರಿಯ ರಾಜಕೀಯ ಮುತ್ಸದ್ಧಿಗೆ ಇಂತ ಕೀಳು ಮಟ್ಟದ ಹೇಳಿಕೆ ನೀಡಿರುವ ಸಚಿವ ರಾಜಣ್ಣ” ಎಂದಿದೆ. ಇದರ ವೀಡಿಯೋದಲ್ಲಿ “ದೇವೇಗೌಡರು ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಾರೆ, ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ, ಎಂದು ರಾಜಣ್ಣ ಅವರು ಹೇಳುವುದು ಕಾಣಿಸುತ್ತದೆ.

Also Read: ಲೋಕಸಭೆ ಚುನಾವಣೆಯಲ್ಲಿ 10 ರಾಜ್ಯಗಳಲ್ಲಿ ಐ.ಎನ್.ಡಿ.ಐ. ಬಣ ಮುನ್ನಡೆ? ಇಲ್ಲ, ವೈರಲ್ ಸುದ್ದಿ ನಕಲಿ

Fact Check: ಸಚಿವ ರಾಜಣ್ಣ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆಯೇ?

ಇದರ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಸಂದರ್ಭ, ಈ ವೀಡಿಯೋ ಈಗಿನದ್ದಲ್ಲ, 2022ರದ್ದು ಎಂದು ತಿಳಿದುಬಂದಿದೆ.

Fact

ಸತ್ಯಶೋಧನೆಗಾಗಿ ನಾವು ರಾಜಣ್ಣ ಅವರ ಹೇಳಿಕೆ ಬಗ್ಗೆ ಶೋಧ ನಡೆಸಿದ್ದೇವೆ. ಈ ವೇಳೆ 2022ರ ಮಾಧ್ಯಮ ವರದಿಗಳು ಲಭ್ಯವಾಗಿವೆ.

ಜುಲೈ 1, 2022ರ ಪ್ರಜಾವಾಣಿ ವರದಿಯಲ್ಲಿ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರು ಈ ಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ. ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಹೇಳಿಕೆ ವಿವಾದಕ್ಕೆ ಸಿಲುಕಿಸಿದೆ. ಮಧುಗಿರಿ ತಾಲ್ಲೂಕಿನ ಕಾವಣದಾಲ ಕಾರ್ಯಕ್ರಮದಲ್ಲಿ ಗುರುವಾರ ಸಾರ್ವಜನಿಕರೊಂದಿಗೆ ಮಾತನಾಡುವಾಗ ಮೇಲಿನಂತೆ ಹೇಳಿದ್ದಾರೆ ಎಂದಿದೆ.

Also Read: ವಯನಾಡ್ ಅಭ್ಯರ್ಥಿ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ ರಾಲಿಯಲ್ಲಿ ಮುಸ್ಲಿಂ ಬಾವುಟಗಳನ್ನು ಹಾರಿಸಲಾಗಿದೆಯೇ?

Fact Check: ಸಚಿವ ರಾಜಣ್ಣ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆಯೇ?

ಜುಲೈ 1, 2022ರ ಕನ್ನಡ ಒನ್‌ ಇಂಡಿಯಾ ವರದಿ ಪ್ರಕಾರ, ದೇವೇಗೌಡರು 4 ಜನರ ಹೆಗಲ ಮೇಲೆ ಹೋಗುವ ಕಾಲ ಹತ್ತಿರದಲ್ಲೇ ಇದೆ ಎಂದು ಮಾಜಿ ಶಾಸಕ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದಿದೆ. ತಮಕೂರು ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೆಡಿಎಸ್‌ ವರಿಷ್ಠ ದೇವೇಗೌಡರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಈ ಹೇಳಿಕೆ ವೀಡಿಯೋಗಳು ವೈರಲ್‌ ಆಗಿವೆ ಎಂದಿದೆ.

ಈ ಬಗ್ಗೆ ನಾವು ಹೆಚ್ಚಿನ ಶೋಧ ನಡೆಸಿದ್ದು, ಹೇಳಿಕೆ ನೀಡಿದ ಬಳಿಕ ರಾಜಣ್ಣ ಅವರು ಕ್ಷಮಾಪಣೆ ಕೇಳಿರುವುದನ್ನೂ ಗಮನಿಸಿದ್ದೇವೆ.

ಜುಲೈ 1 2022ರಂದು ಟಿವಿ 9 ಕನ್ನಡ ಯೂಟ್ಯೂಬ್ ಚಾನೆಲ್‌ K N Rajanna: ಹೆಚ್‌.ಡಿ.ದೇವೇಗೌಡರ ಬಗ್ಗೆ ಹೇಳಿಕೆಗೆ ಕೆ.ಎನ್.ರಾಜಣ್ಣ ವಿಷಾದ ಶೀರ್ಷಿಕೆಯಲ್ಲಿ ವೀಡಿಯೋ ಪ್ರಕಟಿಸಿದ್ದು, ತಮ್ಮ ಹೇಳಿಕೆ ಬಗ್ಗೆ ರಾಜಣ್ಣ ವಿಷಾದ ವ್ಯಕ್ತಪಡಿಸಿರುವುದನ್ನು ಗಮನಿಸಬಹುದು

ಈ ಕುರಿತಂತೆ ಇನ್ನಷ್ಟು ಮಾಧ್ಯಮ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ಪುರಾವೆಗಳ ಪ್ರಕಾರ, ರಾಜಣ್ಣ ಅವರು ಈಗ ಎಚ್‌ಡಿ ದೇವೇಗೌಡರ ವಿರುದ್ಧ ನೀಡಿದ ಹೇಳಿಕೆ ಇದಲ್ಲ. 2022ರಲ್ಲಿ ತುಮಕೂರಿನ ಮಧುಗಿರಿಯಲ್ಲಿ ನೀಡಿದ ಹೇಳಿಕೆ ಎಂದು ಗೊತ್ತಾಗಿದೆ.

Also Read: ‘ಜನಾರ್ದನ ಪೂಜಾರಿ ಎನ್‌ಕೌಂಟರ್ ಮಾಡಿ’ ಎಂಬ ಹಳೆಯ ವಿವಾದಿತ ಹೇಳಿಕೆ ಹಂಚಿಕೆ

Result: Missing Context

Our Sources
Report By Prajavani, Dated: July 1, 2022

Report By Kannada One India, Dated: July 1, 2022

Report By Tv9 Kannada, Dated: July 1, 2022


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.