Fact Check: ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್‌

ಏಕರೂಪ ನಾಗರಿಕ ಸಂಹಿತೆ

Claim
ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ 9090902024 ಮಿಸ್ಡ್ ಕಾಲ್ ನೀಡಿ ಎಂದು ಅಭಿಯಾನ

Fact
ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 9 ವರ್ಷ ತುಂಬಿದ ಅಂಗವಾಗಿ ಮತ್ತು 2024ರ ಚುನಾವಣೆಗೆ ಮುನ್ನ ಜನರನ್ನು ತಲುಪುವ ಭಾಗವಾಗಿ ಬಿಜೆಪಿ 9090902024 ಮಿಸ್ಡ್ ಕಾಲ್ ಅಭಿಯಾನ ನಡೆಸಿದೆ

ಏಕರೂಪ ನಾಗರಿಕ ಸಂಹಿತೆ ಕುರಿತ ಚರ್ಚೆಗಳು ಜೋರಾಗುತ್ತಿದ್ದಂತೆಯೇ, ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ, ಫೋನ್‌ ಕರೆ ಮಾಡಿ, ಬೆಂಬಲ ವ್ಯಕ್ತಪಡಿಸಿ ಎನ್ನುವ ಸಂದೇಶಗಳೂ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿವೆ.

ಈ ಕುರಿತ ಫೇಸ್‌ಬುಕ್‌ ಕ್ಲೇಮ್‌ ಒಂದರಲ್ಲಿ “UCC ಒಂದೇ ದೇಶ ಒಂದೇ ಕಾನೂನು ಒಂದು ಮಿಸ್ ಕಾಲ್ ಮಾಡಿ, ಏಕರೂಪ ನಾಗರೀಕ ನೀತಿಸಂಹಿತೆ ಬೆಂಬಲಿಸೋಣ. 9090902024” ಎಂದಿದೆ.

Also Read: ಗುಜರಾತ್ ಹೈಕೋರ್ಟ್‌ ಮೀಸಲಾತಿ ರದ್ದುಗೊಳಿಸಿದೆಯೇ, ವೈರಲ್‌ ಪೋಸ್ಟ್‌ ನಿಜವೇ?

ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್‌
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್‌

ಇದೇ ರೀತಿಯ ಹಲವು ಕ್ಲೇಮ್ಗಳು ಫೇಸ್‌ಬುಕ್‌ನಲ್ಲಿ ಕಂಡುಬಂದಿವೆ. ಇಂತಹವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನ್ಯೂಸ್ ಚೆಕರ್ 9090902024 ಸಂಖ್ಯೆಗೆ ಕರೆ ಮಾಡಿದ್ದು, ಈ ವೇಳೆ ಮಿಸ್ಡ್ ಕಾಲ್‌ ಆಗಿ ಕರೆ ಕಡಿತಗೊಂಡಿದೆ. ಬಳಿಕ ಮೆಸೇಜ್‌ ಬಂದಿದೆ. ಈ ಮೆಸೇಜ್‌ನಲ್ಲಿ ಹೀಗೆ ಹೇಳಲಾಗಿದೆ. “ಸೇವಾ, ಸುಶಾಸನ್‌ ಮತ್ತು ಗರೀಬ್‌ ಕಲ್ಯಾಣಕ್ಕೆ ಬದ್ಧವಾಗಿರುವ ಮೋದಿ ಸರ್ಕಾರಕ್ಕೆ ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು. 9yearsofseva.bjp.org ಗೆ ಕ್ಲಿಕ್‌ ಮಾಡಿ 9 ವರ್ಷದ ಮೋದಿ ಸರ್ಕಾದ ಸಾಧನೆಗಳ ಬಗ್ಗೆ ತಿಳಿಯಿರಿ. ಬಿಜೆಪಿ” ಎಂದಿದೆ. ಈ ಮೆಸೇಜ್‌ ಇಲ್ಲಿದೆ.

ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್‌
ಮಿಸ್ಡ್ ಕಾಲ್‌ ಅಭಿಯಾನದ ಮೆಸೇಜ್

ಮೆಸೇಜ್‌ನಲ್ಲಿರುವ ಲಿಂಕ್‌ ಅನ್ನು ನಾವು ಕ್ಲಿಕ್‌ ಮಾಡಿದಾಗ ಅದು  ನರೇಂದ್ರ ಮೋದಿ ಸರ್ಕಾರ ಒಂಬತ್ತು ವರ್ಷಗಳನ್ನು ಪೂರೈಸಿದ ಕುರಿತ ವೆಬ್ಸೈಟ್ಗೆ ನಮ್ಮನ್ನು ಕರೆದೊಯ್ದಿದೆ.

ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್‌
ಬಿಜೆಪಿ ಅಭಿಯಾನದ ವೆಬ್‌ಸೈಟ್

ಬಿಜೆಪಿಯ ಈ ಅಧಿಕೃತ ವೆಬ್ಸೈಟ್ ನಲ್ಲೂ ಮಿಸ್ಡ್ ಕಾಲ್ ಅಭಿಯಾನದ ಬಗ್ಗೆ ಹೇಳಲಾಗಿದೆ. ಇದರಲ್ಲೂ ಯುಸಿಸಿ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್‌
ಬಿಜೆಪಿ ಅಭಿಯಾನದ ವೆಬ್‌ಸೈಟ್

ಈ ಮೆಸೇಜ್‌ ಅನ್ನು ಸಾಕ್ಷ್ಯವಾಗಿ ಪರಿಗಣಿಸಿ ಗೂಗಲ್ ಕೀವರ್ಡ್ ಸರ್ಚ್ ನಡೆಸಲಾಗಿದ್ದು, ಈ ವೇಳೆ ಮೇ 31, 2023 ರ ಇಂಡಿಯಾ ಟುಡೇ ವರದಿ ಲಭ್ಯವಾಗಿದೆ. ಇದರಲ್ಲಿ “2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ವಿಶಿಷ್ಟ ಮಿಸ್ಡ್ ಕಾಲ್ ಅಭಿಯಾನವನ್ನು ಪ್ರಾರಂಭಿಸಿದ ಬಿಜೆಪಿ” ಶೀರ್ಷಿಕೆಯಲ್ಲಿ, 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಭಾರತೀಯ ಜನತಾ ಪಕ್ಷ (ಬಿಜೆಪಿ) 9090902024 ವಿಶೇಷ ಸಂಖ್ಯೆಯೊಂದಿಗೆ ವಿಶಿಷ್ಟ ‘ಮಿಸ್ಡ್ ಕಾಲ್’ ಅಭಿಯಾನವನ್ನು ಪ್ರಾರಂಭಿಸಿದೆ, ಇದು ಪಕ್ಷದ ಬೆಂಬಲದ ನೆಲೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ ಮತ್ತು 2019 ರಲ್ಲಿ ಪಕ್ಷವು ನಡೆಸಿದ ಸದಸ್ಯತ್ವ ಅಭಿಯಾನವನ್ನು ನೆನಪಿಸುತ್ತದೆ” ಎಂದು ವರದಿಯಲ್ಲಿ ಹೇಳಲಾಗಿದೆ. ಈ ಸಂಖ್ಯೆಯು ಮೋದಿ ಸರ್ಕಾರದ ಒಂಬತ್ತು ವರ್ಷಗಳು ಮತ್ತು 2024 ರ ನಿರ್ಣಾಯಕ ಚುನಾವಣಾ ವರ್ಷವನ್ನು ಪ್ರತಿನಿಧಿಸುವ ಗಮನಾರ್ಹ ಸಾಂಕೇತಿಕತೆಯನ್ನು ಹೊಂದಿದೆ. “ಕಾರ್ಯತಂತ್ರದ ವಿಧಾನಕ್ಕೆ ಹೆಸರುವಾಸಿಯಾದ ಬಿಜೆಪಿ, ಮುಂಬರುವ ಚುನಾವಣೆಯಲ್ಲಿ ಜನರಿಂದ ಹೊಸ ಜನಾದೇಶವನ್ನು ಬಯಸುತ್ತಿರುವಾಗ ತನ್ನ ಕಳೆದ ಒಂಬತ್ತು ವರ್ಷಗಳ ಅಧಿಕಾರದ ಅನುಮೋದನೆಯಾಗಿ ಈ ಸಂಖ್ಯೆಯನ್ನು ಆಯ್ಕೆ ಮಾಡಿದೆ” ಎಂದು ವರದಿ ಹೇಳಿದೆ. ಇದೇ ರೀತಿಯ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

Also Read: ಸಚಿವ ಪ್ರಿಯಾಂಕ್‌ ಖರ್ಗೆ ಅಕ್ರಮ ಗೋಹತ್ಯೆ ಬೆಂಬಲಿಸಿ ಮಾತನಾಡಿದ್ದಾರೆಯೇ?

“2024 ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಂಬಲ ವೃದ್ಧಿಗೆ ಆಡಳಿತ ಪಕ್ಷದ ದೊಡ್ಡ ಯತ್ನವಾಗಿ ಮತ್ತು 9ನೇ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸಚಿವರು ಮತ್ತು ಬಿಜೆಪಿಯ ಹಿರಿಯ ಸದಸ್ಯರು ಒಂದು ತಿಂಗಳ ಕಾಲ ಸಾಮೂಹಿಕ ಸಂಪರ್ಕದ ಭಾಗವಾಗಿ ದೇಶಾದ್ಯಂತ ಸಂಚರಿಸಲಿದ್ದಾರೆ” ಎಂದು ಎನ್ ಡಿಟಿವಿ ವರದಿ ಮಾಡಿದೆ. ಮೇ 31 ರಿಂದ ಪ್ರಾರಂಭವಾದ ಒಂದು ತಿಂಗಳ ಈ ಅಭಿಯಾನ ಜೂನ್ 30 ರಂದು ಕೊನೆಗೊಳ್ಳುತ್ತದೆ. “ಮಿಸ್ಡ್ ಕಾಲ್ ನೀಡುವ ಮೂಲಕ ಪಕ್ಷಕ್ಕೆ ತಮ್ಮ ಬೆಂಬಲವನ್ನು ತೋರಿಸಲು ಬಿಜೆಪಿ ಮೊಬೈಲ್ ಸಂಖ್ಯೆಯನ್ನು (9090902024) ಪ್ರಾರಂಭಿಸಿದೆ” ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಅಭಿಯಾನದ ಬಗ್ಗೆ ಬಿಜೆಪಿ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿದ್ದು, ಅದು ಇಲ್ಲಿದೆ.

ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್‌

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು ಬಿಜೆಪಿಯ ಅಧಿಕೃತ ಮೂಲಗಳನ್ನು ಸಂಪರ್ಕಿಸಲು ಯತ್ನಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆಯನ್ನು ಪಡೆದ ಬಳಿಕ ಈ ಲೇಖನವನ್ನು ಪರಿಷ್ಕರಿಸಲಾಗುವುದು.

ಇನ್ನು ಏಕರೂಪ ನಾಗರಿಕ ಸಂಹಿತೆ ಕುರಿತಂತೆ ಕೇಂದ್ರ ಸರ್ಕಾರದ ಕಾನೂನು ಆಯೋಗ ಸಾರ್ವಜನಿಕರ ಅಭಿಪ್ರಾಯವನ್ನೂ ಆಹ್ವಾನಿಸಿದ್ದು, ಆ ಕುರಿತ ವೆಬ್‌ಸೈಟ್ ಇಲ್ಲಿದೆ. ಇಲ್ಲೆಲ್ಲೂ ಮಿಸ್ಡ್ ಕಾಲ್‌ ನೀಡುವ ಮೂಲಕ ಬೆಂಬಲಿಸಲು/ ಅಭಿಪ್ರಾಯ ಹಂಚಿಕೊಳ್ಳಲು ಕರೆ ನೀಡಲಾಗಿಲ್ಲ ಎಂದು ತಿಳಿದುಬಂದಿದೆ.

ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್‌
ಕಾನೂನು ಆಯೋಗ ವೆಬ್‌ಸೈಟ್

ಈ ವೆಬ್‌ಸೈಟ್ ಮಾಹಿತಿ ಪ್ರಕಾರ, ಇದರಲ್ಲಿರುವ ಫೈಲ್ ತೆರೆದು ಜನರು ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಬಹುದಾಗಿದೆ.

Also Read: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪುರಿ ಜಗನ್ನಾಥ ದೇಗುಲದ ಗರ್ಭಗೃಹಕ್ಕೆ ಪ್ರವೇಶಿಸಿದಂತೆ ತಡೆಯಲಾಯಿತೇ?

ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್‌
ಸಾರ್ವಜನಿಕ ಪ್ರಕಟಣೆ

ಯುಸಿಸಿ ಬಗ್ಗೆ ಚರ್ಚೆ ಏಕೆ?

ಏಕರೂಪನಾಗರಿಕ ಸಂಹಿತೆ ಅಗತ್ಯದ ಬಗ್ಗೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ ಬಳಿಕ ಬಿಜೆಪಿ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತ ಚರ್ಚೆಯನ್ನು ಆರಂಭಿಸಿದೆ ಎಂದು ವರದಿಯಾಗಿದೆ. ಎಲ್ಲ ಧರ್ಮಗಳ ನಾಗರಿಕರಿಗೆ ಮದುವೆ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ, ಜೀವನಾಂಶ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿಂತೆ ಸಾಮಾನ್ಯವಾದ ಕಾನೂನನ್ನು (ಏಕರೂಪದ ಕಾನೂನು) ತರುವುದು ಆರಂಭದಿಂದಲೂ ಬಿಜೆಪಿ ಪಕ್ಷದ ಪ್ರಣಾಳಿಕೆಯ ಭಾಗವಾಗಿದೆ.  

Conclusion

ನರೇಂದ್ರ ಮೋದಿ ಸರ್ಕಾರದ ಒಂಬತ್ತನೇ ವಾರ್ಷಿಕೋತ್ಸವದ ಅಂಗವಾಗಿ ಒಂದು ತಿಂಗಳ ಕಾಲ ನಡೆದ ಸಾಮೂಹಿಕ ಸಂಪರ್ಕ ಅಭಿಯಾನದ ಭಾಗವಾಗಿದ್ದ ಮಿಸ್ಡ್ ಕಾಲ್ ಅಭಿಯಾನವನ್ನು ಯುಸಿಸಿ ಪರ ಆಂದೋಲನವೆಂದು ವೈರಲ್ ಆಗಿರುವುದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ.

Result: False

Our Sources
Report By India Today, Dated: May 31, 2023

Report By NDTV, Dated: May 31, 2023

Press Release By BJP, Dated: May 30, 2023

BJP official website

BJP webpage dedicated to the mass connect drive


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.