Authors
Claim
ಪ್ರಧಾನಿ ನರೇಂದ್ರ ಮೋದಿಯವರು 26 ವರ್ಷ ದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆ
Fact
ಸಂತೋಷ್ ತ್ರಿವೇದಿ ಎನ್ನುವ ಅರ್ಚಕರು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ತಲೆಕೆಳಗಾಗಿ ಕೇದಾರನಾಥ ದೇಗುಲಕ್ಕೆ ಪ್ರದಕ್ಷಿಣೆ ಬಂದ ವೀಡಿಯೋ ಆಗಿದೆ
ಪ್ರಧಾನಿ ನರೇಂದ್ರ ಮೋದಿಯವರು 26 ವರ್ಷ ದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆ ಎಂದು ಕ್ಲೇಮ್ ಒಂದು ಹರಿದಾಡಿದೆ.
ಈ ಕುರಿತು ವಾಟ್ಸಾಪ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಇಂದು ನಾನು ನಿಮ್ಮೆಲ್ಲರ ನಡುವೆ ಬಹಳ ಸುಂದರವಾದ ವೀಡಿಯೋವನ್ನು ಪ್ರಸ್ತುತಪಡಿಸುತ್ತಿದ್ದೇನೆ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ, ಅವರು 26 ವರ್ಷ ವಯಸ್ಸಿನವರಾಗಿದ್ದಾಗ, ಅವರು ಕೇದಾರನಾಥವನ್ನು ಹೇಗೆ ಪ್ರದಕ್ಷಿಣೆ ಮಾಡಿದರು, ನೀವೆಲ್ಲರೂ ಒಮ್ಮೆ ನೋಡಿ.”
ಈ ಕ್ಲೇಮಿನ ಸತ್ಯಾಸತ್ಯತೆ ಪರಿಶೀಲಿಸುವಂತೆ ಬಳಕೆದಾರರೊಬ್ಬರು ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ ಲೈನ್ (+91- 9999499044 ಗೆ ದೂರು ಸಲ್ಲಿಸಿದ್ದು, ಅದನ್ನು ಸ್ವೀಕರಿಸಲಾಗಿದೆ.
Also Read: ರಾಜ್ಯ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ದರಗಳನ್ನು ಏರಿಸುತ್ತಿದೆಯೇ?
Fact Check/ Verification
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಜುಲೈ 14, 2022ರ ಒನ್ ಇಂಡಿಯಾ ಇಂಗ್ಲಿಷ್ ಯೂಟ್ಯೂಬ್ ಚಾನೆಲ್ನಲ್ಲಿ “26 ವರ್ಷದ ಮೋದಿ ಎಂದು ಕೈಗಳಲ್ಲಿ ನಡೆಯುತ್ತಿರುವ ಅರ್ಚಕನ ವೀಡಿಯೋ” ಶೀರ್ಷಿಕೆಯಲ್ಲಿ ವೀಡಿಯೋ ನೀಡಲಾಗಿದೆ. ಇದರ ವಿವರಣೆಯಲ್ಲಿ ಕೇದಾರನಾಥದ ಅರ್ಚಕರು ಯೋಗ ದಿನದ ಸಂದರ್ಭ ತಲೆಕೆಳಗಾಗಿ ಕೈಯಲ್ಲಿ ನಡೆದ ವೀಡಿಯೋವನ್ನು 26 ವರ್ಷದವರಿದ್ದಾಗ ನಡೆದ ಮೋದಿ ಎಂದು ಹೇಳಲಾಗುತ್ತಿದೆ” ಎಂದಿದೆ.
ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ ಇನ್ನಷ್ಟು ಶೋಧ ನಡೆಸಿದ್ದೇವೆ. ಜೂನ್ 21, 2022ರ ಇಟಿವಿ ಭಾರತ್ನಲ್ಲಿ “ಕೇದಾರನಾಥಕ್ಕೆ ತಲೆಕೆಳಗಾಗಿ ಕೈಯಲ್ಲಿ ನಡೆದುಕೊಂಡು ಪ್ರದಕ್ಷಿಣೆ ಹಾಕಿದ ಅರ್ಚಕ” ಎಂಬ ವರದಿಯಲ್ಲಿ, ಪುರೋಹಿತ ಸಂತೋಷ್ ತ್ರಿವೇದಿ ಅವರು ಕಳೆದ ಏಳು ದಿನಗಳಿಂದ ಸರ್ಕಾರದ ದೇವಸ್ಥಾನಮ್ ಮ್ಯಾನೇಜ್ ಮೆಂಟ್ ಬೋರ್ಡ್ ಆಕ್ಟ್ ಜಾರಿ ವಿರುದ್ಧ ತಲೆಕೆಳಗಾಗಿ ಕೈಯಲ್ಲಿ ದೇಗುಲಕ್ಕೆ ಪ್ರದಕ್ಷಿಣೆ ಬಂದಿದ್ದಾರೆ. ಎಂದಿದೆ. ಅದೇ ರೀತಿ ಅಂತಾರಾಷ್ಟ್ರೀಯ ಯೋಗ ದಿನವೂ ಸೇರಿದಂತೆ 7 ದಿನಗಳಿಂದ ತಲೆಕೆಳಗಾಗಿ ಕೇದಾರನಾಥ ದೇಗುಲಕ್ಕೆ ಪ್ರದಕ್ಷಿಣೆ ಬಂದಿದ್ದಾರೆ ಎಂದಿದೆ. ಜೊತೆಗೆ ವರದಿಯಲ್ಲಿ ವೀಡಿಯೋವನ್ನೂ ಕೊಡಲಾಗಿದೆ.
ಜೂನ್ 21, 2021ರ ಮೋಜೋ ನ್ಯೂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಾಬಾ ಕೇದಾರನಾಥ ದೇಗುಲದಲ್ಲಿ ತಲೆಕೆಳಗಾಗಿ ಕೈಯಲ್ಲಿ ನಡೆದು ಯೋಗ ಮಾಡಲಾಯಿತು ಎಂದಿದೆ.
Also Read: ರಕ್ತದ ಸಹಾಯವಾಣಿ 104 ಪರಿಚಯಿಸಲಾಗಿದೆಯೇ, ಇಲ್ಲ ಇದು ಸುಳ್ಳು!
ಪುರೋಹಿತ ಸಂತೋಷ್ ತ್ರಿವೇದಿ ಅವರು ಶೀರ್ಷಾಸನ ಮತ್ತು ತಲೆಕೆಳಗಾಗಿ ಕೈಯಲ್ಲಿ ನಡೆಯುವ ಯತ್ನಗಳಿಗೆ ಹೆಸರಾಗಿದ್ದು, ದೇವಸ್ಥಾನಮ್ ಮ್ಯಾನೇಜ್ ಮೆಂಟ್ ಬೋರ್ಡ್ ಆಕ್ಟ್ ಜಾರಿ ವಿರುದ್ಧ ಕೇದಾರನಾಥ ದೇಗುಲದ ಎದುರು ನಡೆಸಿದ ಶೀರ್ಷಾಸನವೂ ಸುದ್ದಿ ಮಾಡಿತ್ತು. ಈ ಕುರಿತ ಜೂನ್ 16, 2021ರ ಎಎನ್ಐ ವರದಿ ಇಲ್ಲಿದೆ. ಈ ಕುರಿತು ಇಂಡಿಯಾ ಟುಡೇ ವರದಿಯನ್ನೂ ಇಲ್ಲಿ ನೋಡಬಹುದು.
Conclusion
ಈ ಸತ್ಯಶೋಧನೆ ಪ್ರಕಾರ, ತಲೆಕೆಳಗಾಗಿ ಕೈಯಲ್ಲಿ ಕೇದಾರನಾಥಕ್ಕೆ ಪ್ರದಕ್ಷಿಣೆ ಹಾಕಿದವರು ಸಂತೋಷ್ ತ್ರಿವೇದಿ ಎಂಬ ಅರ್ಚಕರಾಗಿದ್ದು, 26 ವರ್ಷದವರಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರಲ್ಲ ಎಂದು ತಿಳಿದುಬಂದಿದೆ.
Also Read : ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡಗಳು ಸಿದ್ಧವಾಗಿವೆಯೇ?
Result: False
Our Source
YouTube Video By OneIndia English, Dated: July 14, 2021
Report By ETV Bharat, Dated: June 21, 2021
YouTube Video By MojoNews, Dated: June 21, 2021
Report By ANI, Dated: June 16, 2021
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.