Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಉತ್ತರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಮಸೀದಿಯನ್ನು ಕೆಡವಲಾಗಿದೆ
ಹಯಾತ್ ನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮಸೀದಿಯನ್ನು ಸ್ವತಃ ಮುಸ್ಲಿಂ ಸಮುದಾಯದವರೇ ತೆಗೆದಿದ್ದಾರೆ
ಉತ್ತರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಮಸೀದಿಯನ್ನು ಕೆಡವಲಾಗಿದೆ ಎಂಬಂತೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಈ ವೀಡಿಯೋ ಜೊತೆಗೆ “UP ಹಾಯಾತ್ ನಗರದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ದ ಮಸೀದಿಯ. ಮೇಲೆ ಬುಲ್ಡೋಜರ್ ಕ್ರಮ” ಎಂಬ ಹೇಳಿಕೆಯೂ ಇದೆ.

ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಲ್ಲ, ರಸ್ತೆ ಅಗಲೀಕರಣದ ಕೆಲಸಕ್ಕೆ ಸ್ವತಃ ಮುಸ್ಲಿಂ ಸಮುದಾಯದವರೇ ಮಸೀದಿಯನ್ನು ತೆರವು ಮಾಡುತ್ತಿರುವ ದೃಶ್ಯ ಇದಾಗಿದೆ ಎಂದು ತಿಳಿದುಬಂದಿದೆ.
Also Read: ಆರ್ ಸಿಬಿ ಗೆಲುವಿಗೆ ಬೆಂಗಳೂರಲ್ಲಿ ಸಂಭ್ರಮಾಚರಣೆ ಎಂದು ವೈರಲ್ ಆಗುತ್ತಿರುವ ವೀಡಿಯೋ ಕೊಲ್ಹಾಪುರದ್ದು
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಮಾಧ್ಯಮ ವರದಿಯೊಂದು ಲಭ್ಯವಾಗಿದೆ.
ಜೂನ್ 9, 2025ರ ಪತ್ರಿಕಾ ವರದಿಯಲ್ಲಿ ಹೇಳಿದಂತೆ “ಸಂಭಾಲ್ನ ಹಯಾತ್ನಗರದ ಬಹಜೋಯ್ ರಸ್ತೆಯಲ್ಲಿ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದ್ದ ದರ್ಗಾವನ್ನು ಮುಸ್ಲಿಂ ಸಮುದಾಯವೇ ಬುಲ್ಡೋಜರ್ ಬಳಸಿ ಕೆಡವಿ ತೆಗೆದುಹಾಕಿತು. ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗುವ ಎಲ್ಲ ಅಕ್ರಮ ನಿರ್ಮಾಣಗಳನ್ನು ಅದು ಮಸೀದಿಯಾಗಲಿ, ದೇವಸ್ಥಾನವೇ ಆಗಲಿ ತೆಗೆದುಹಾಕಲಾಗುವುದು ಎಂದು ಮಸೀದಿ ಸಮಿತಿಯ ಸದಸ್ಯರು ಸ್ಪಷ್ಟವಾಗಿ ಹೇಳುತ್ತಾರೆ” ಎಂದಿದೆ.
ಇದೇ ವರದಿಯಲ್ಲಿ, ಬಹಜೋಯ್ ರಸ್ತೆಯಲ್ಲಿರುವ ಈ ದರ್ಗಾ ರಸ್ತೆ ಅಗಲೀಕರಣ ಯೋಜನೆಗೆ ಅಡ್ಡಿಯಾಗುತ್ತಿತ್ತು. ಆಡಳಿತವು ಸುಮಾರು ಒಂದು ತಿಂಗಳ ಹಿಂದೆ ದರ್ಗಾವನ್ನು ತೆಗೆಯಲು ನೋಟಿಸ್ ನೀಡಿತ್ತು. ಮಸೀದಿ ಸಮಿತಿಯ ಸದಸ್ಯರು ಬಕ್ರೀದ್ ಮಗಿದ ಬಳಿಕ ಕೆಲಸಕ್ಕೆ ನಿರ್ಧರಿಸಿದ್ದು, ಭಾನುವಾರ, ಮೊದಲಾಗಿ ದರ್ಗಾದ ಒಂದು ಭಾಗವನ್ನು ಕಾರ್ಮಿಕರ ಸಹಾಯದಿಂದ ಕೆಡವಲಾಯಿತು, ಮತ್ತು ಅನಂತರ ಸೋಮವಾರ ಬೆಳಗ್ಗೆ ಸಂಪೂರ್ಣ ತೆಗೆದುಹಾಕಲು ಬುಲ್ಡೋಜರ್ ಕರೆಯಲಾಯಿತು” ಎಂದಿದೆ.

ಜೂನ್ 9, 2025ರ ಹಿಂದೂಸ್ತಾನ್ ವರದಿಯ ಪ್ರಕಾರ, ಉತ್ತರ ಪ್ರದೇಶದ ಸಂಭಾಲ್ ನಲ್ಲಿ ರಸ್ತೆ ಅತಿಕ್ರಮಣ ತೆರವಿಗೆ ಸ್ಥಳೀಯಾಡಳಿತದ ನೋಟಿಸ್ ಹಿನ್ನೆಲೆಯಲ್ಲಿ ದರ್ಗಾ ಸಮಿತಿಯೇ ಮಸೀದಿಯನ್ನು ತೆರವು ಮಾಡಿದೆ.

ಇದೇ ರೀತಿ ಜೂನ್ 9, 2025ರ ದೈನಿಕ್ ಭಾಸ್ಕರ್ ವರದಿಯಲ್ಲೂ ರಸ್ತೆ ಅಗಲೀಕರಣದ ಕೆಲಸಕ್ಕಾಗಿ ಮಸೀದಿಯ ಸಮಿತಿಯೇ ಸ್ವತಃ ಮಸೀದಿಯನ್ನು ಕೆಡವಿದ್ದನ್ನು ಹೇಳಲಾಗಿದೆ. ಒಂದು ತಿಂಗಳ ಹಿಂದೆ ಈ ಬಗ್ಗೆ ನೋಟಿಸ್ ಬಂದಿದ್ದು ಬಕ್ರೀದ್ ಬಳಿಕ ಕೆಡವಲು ಉದ್ದೇಶಿಸಲಾಗಿತ್ತು. ಅದಕ್ಕೂ ಮೊದಲೇ ಅದೇ ರಸ್ತೆಯಲ್ಲಿದ್ದ ದೇಗುಲವನ್ನು ಜನರೇ ತೆಗೆದಿದ್ದಾಗಿ ಹೇಳಲಾಗಿದೆ.

ಜೂನ್ 9, 2025ರಂದು ಒಬ್ಸರ್ವರ್ ಪೋಸ್ಟ್ ಹಿಂದಿಯ ಎಕ್ಸ್ ಪೋಸ್ಟ್ ಅನ್ನೂ ನಾವು ನೋಡಿದ್ದೇವೆ. ಇದರಲ್ಲಿ ಮಸೀದಿಯ ಮೌಲಾನ ಅವರ ನಿರ್ಧಾರದ ಮೇರೆಗೆ ಅತಿಕ್ರಮಿತ ಭಾಗವನ್ನು ತೆರೆವು ಮಾಡಿ ರಸ್ತೆ ಅಗಲೀಕರಣಕ್ಕೆ ಅನುವುಮಾಡಿಕೊಡಲಾಗಿದೆ ಎಂದಿದೆ. ಈ ಪೋಸ್ಟ್ ಇಲ್ಲಿ ನೋಡಿ.
ಈ ಸಾಕ್ಷ್ಯಾಧಾರಗಳ ಪ್ರಕಾರ, ಉತ್ತರ ಪ್ರದೇಶದ ಹಯಾತ್ ನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮಸೀದಿಯನ್ನು ಸ್ವತಃ ಮುಸ್ಲಿಂ ಸಮುದಾಯದವರೇ ತೆಗೆಸಿದ್ದಾರೆ ಎಂದು ತಿಳಿದುಬಂದಿದೆ.
Also Read: ಉಕ್ರೇನ್ನ ಡ್ರೋನ್ ದಾಳಿಯ ನಂತರ ರಷ್ಯಾದ ವಾಯುನೆಲೆ ನಾಶ ಎಂದ ವೈರಲ್ ಫೋಟೋ, ಎಐ ಸೃಷ್ಟಿ
Our Sources
Report By Patrika, Dated: June 9, 2025
Report By Hindustan, Dated: June 9, 2025
Report By Dainik Bhaskar, Dated: June 9, 2025
X post By Observer Post, Dated: June 9, 2025
Ishwarachandra B G
November 29, 2025
Ishwarachandra B G
November 24, 2025
Runjay Kumar
October 13, 2025