Authors
Claim
ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರಾಲಿಯಲ್ಲಿ ಮುಸ್ಲಿಂ ಬಾವುಟಗಳನ್ನು ಹಾರಿಸಲಾಗಿದೆ
Fact
ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರಾಲಿಯಲ್ಲಿ ಮುಸ್ಲಿಂ ಬಾವುಟಗಳನ್ನು ಹಾರಿಸಿಲ್ಲ. ವೈರಲ್ ವೀಡಿಯೋ 2019ನೇ ಇಸವಿಯದ್ದು ಮತ್ತು ಕಾಸರಗೋಡಿನದ್ದಾಗಿದೆ
ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರಾಲಿಯಲ್ಲಿ ಮುಸ್ಲಿಂ ಬಾವುಟಗಳನ್ನು ಹಾರಿಸಲಾಗಿದೆ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಕೇರಳದ ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆಯ ರ‍್ಯಾಲಿಯಲ್ಲಿ ಮುಸಲ್ಮಾನರ ಬಾವುಟ ಹಾರಾಟ!…. ಕಾಂಗ್ರೆಸ್ ಪಕ್ಷ ದೇಶ ಮತ್ತು ಸನಾತನ ಧರ್ಮದ ವಿರುದ್ಧ ಇದೆ ಎನ್ನುವುದಕ್ಕೆ ಇಷ್ಟು ಪುರಾವೆ ಸಾಕಲ್ಲವೇ…… ಈ ಖಾನ್ ಗ್ರೀಸ್ ಅವರು ಹಿಂದೂ ವಿರೋಧಿಗಳು ಅನ್ನೋದು ಇದಕ್ಕೆ” ಎಂದಿದೆ.
Also Read: ಹಿಮಾಚಲ ಪ್ರದೇಶದಲ್ಲಿ ಚಿಚಾಮ್ ಸೇತುವೆಯನ್ನು ಹೊಸದಾಗಿ ನಿರ್ಮಿಸಲಾಗಿದೆಯೇ?
ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು ಇದು ತಪ್ಪು ಎಂದು ಕಂಡುಕೊಂಡಿದ್ದೇವೆ.
Fact Check/Verification
ಸತ್ಯಶೋಧನೆಗಾಗಿ ನಾವು ಗುಂಪಿನಲ್ಲಿ ಕೂಗುತ್ತಿರುವುದನ್ನು ಎಚ್ಚರಿಕೆಯಿಂದ ಗಮನಿಸಿದ್ದೇವೆ. ಈ ವೇಳೆ ಸತೀಶ್ಚಂದ್ರನ್ ಮತ್ತು ಉಣ್ಣಿತ್ತಾನ್ ಎಂದು ಹೇಳುವುದನ್ನು ಕೇಳಿಸಿಕೊಂಡಿದ್ದೇವೆ. ಇದನ್ನು ಪರಿಗಣಿಸಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಏಷ್ಯಾನೆಟ್ ನ್ಯೂಸೇಬಲ್ ನ ಮಾರ್ಚ್ 18, 2024 ರ ವರದಿ ಲಭ್ಯವಾಗಿದೆ. ಇದರಂತೆ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ರಾಜಮೋಹನ್ ಉಣ್ಣಿತ್ತಾನ್ ಕಾಸರಗೋಡಿನಿಂದ ಗೆದ್ದಿದ್ದರು. ಯುಡಿಎಫ್ ಅಭ್ಯರ್ಥಿ ಸಿಪಿಎಂನ ಕೆಪಿ ಸತೀಶ್ ಚಂದ್ರನ್ ವಿರುದ್ಧ ಅವರು ಸ್ಪರ್ಧಿಸಿದ್ದರು.
ವಿಶೇಷವೆಂದರೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಅನ್ನು ಸಹ ಒಳಗೊಂಡಿದೆ. ವೈರಲ್ ವೀಡಿಯೊದಲ್ಲಿ ಕಂಡುಬರುವ ಹಸಿರು ಧ್ವಜಗಳು ಐಯುಎಂಎಲ್ ನವು.
ಇದರ ನಂತರ, ನಾವು ಗೂಗಲ್ ಲೆನ್ಸ್ನಲ್ಲಿ ಕ್ಲಿಪ್ನ ಕೀಫ್ರೇಮ್ಗಳನ್ನು ಹುಡುಕಿದೆವು ಮತ್ತು ವೈರಲ್ ತುಣುಕಿನ ಸ್ಪಷ್ಟ ಆವೃತ್ತಿಯನ್ನು ಹೊಂದಿರುವ ಮೇ 25, 2019 ರ @RajivMessage ಅವರ ಎಕ್ಸ್ ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ.
2019ರ ವೀಡಿಯೋದಲ್ಲಿ ನಾವು “ಅರಮನ ಸಿಲ್ಕ್ಸ್” ಎಂಬ ಅಂಗಡಿಯೊಂದರ ಬೋರ್ಡ್ ನೋಡಿದ್ದೇವೆ. ಅದು ವೈರಲ್ ವೀಡಿಯೋದಲ್ಲೂ ಇರುವುದನ್ನು ಖಚಿತಪಡಿಸಿಕೊಂಡಿದ್ದೇವೆ.
Also Read: ಬಪ್ಪನಾಡು ದೇಗುಲದ ರಥದ ದಾರಿಯಲ್ಲಿ ಮುಸ್ಲಿಮರು ಅಡ್ಡಲಾಗಿ ವಾಹನ ಇಟ್ಟಿದ್ದರೇ, ಸತ್ಯ ಏನು?
“ಅರಮನ ಸಿಲ್ಕ್ಸ್” “ಕಾಸರಗೋಡು” ಎಂಬುದನ್ನು ನಾವು ಗೂಗಲ್ ಮೂಲಕ ಸರ್ಚ್ ಮಾಡಿದ್ದು ಅದನ್ನು ಗೂಗಲ್ ಮ್ಯಾಪ್ ಮೂಲಕ ಗುರುತಿಸಲು ಸಾಧ್ಯವಾಗಿದೆ. ಅದನ್ನು ಇಲ್ಲಿ ನೋಡಬಹುದು.
ಇನ್ನು ಜನರು ಬೀಸುತ್ತಿರುವ ಧ್ವಜ ಮುಸ್ಲಿಂ ಲೀಗ್ ನದ್ದೇ ಎಂದು ಖಚಿತಪಡಿಸಿಕೊಳ್ಳಲು ನಾವು ಮುಸ್ಲಿಂ ಲೀಗ್ ಕೇರಳದ ವೆಬ್‌ಸೈಟ್ ನೋಡಿದ್ದೇವೆ.
ಇದರ ಪೋಸ್ಟರ್ ವಿಭಾಗದಲ್ಲಿ ಧ್ವಜದೊಂದಿಗಿರುವ ಪೋಸ್ಟರ್ ಗಳನ್ನೂ ಗಮನಿಸಿದ್ದೇವೆ. ಈ ಧ್ವಜ ವೈರಲ್ ವೀಡಿಯೋದಲ್ಲಿರುವ ಧ್ವಜಕ್ಕೆ ಸಾಮ್ಯತೆಯನ್ನು ಹೊಂದಿರುವುದನ್ನು ನಾವು ನೋಡಿದ್ದೇವೆ.
ಈ ಸಾಕ್ಷ್ಯಗಳ ಮೂಲಕ ಧ್ವಜ ಮುಸ್ಲಿಂ ಲೀಗ್‌ನದ್ದು ಎಂದು ಖಚಿತಗೊಂಡಿದೆ.
Conclusion
ಪುರಾವೆಗಳ ಪ್ರಕಾರ, ವಯನಾಡಿನಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಮುಸ್ಲಿಂ ಬಾವುಟಗಳನ್ನು ಹಾರಿಸಲಾಗಿದೆ ಎಂದು ಹೇಳಿರುವುದು ತಪ್ಪಾಗಿದೆ. ವಾಸ್ತವವಾಗಿ ಇದು 2019ರ ವೀಡಿಯೋ ಆಗಿದ್ದು ಕಾಸರಗೋಡಿನದ್ದಾಗಿದೆ.
Also Read: ಕಾಡುಗಳ್ಳ ವೀರಪ್ಪನ್ ಮಗಳು ವಿದ್ಯಾರಾಣಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆಯೇ?
Result: False
Our Sources
X Post By @RajivMessage, Dated May 25, 2019
Google Images
Website of Muslim league Kerala
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.