ಬ್ರಿಟನ್‌ನಲ್ಲಿ ಮುಸ್ಲಿಂ ಜನಸಂಖ್ಯೆ ಏರಿಕೆ ಅಪಾಯಕಾರಿ: ವೈರಲ್‌ ಮೆಸೇಜ್‌ ನಿಜವೇ?

ಬ್ರಿಟನ್‌, ಮುಸ್ಲಿಂ, ಜನಸಂಖ್ಯೆ

ಬ್ರಿಟನ್‌ನಲ್ಲಿ ಮುಸ್ಲಿಂ ಜನಸಂಖ್ಯೆ ಏರಿಕೆ ಎನ್ನುವ ಇತ್ತೀಚಿನ ಸುದ್ದಿಗಳ ಬೆನ್ನಲ್ಲೇ ವಾಟ್ಸಾಪ್‌ನಲ್ಲಿ ಮೆಸೇಜ್‌ ಒಂದು ವೈರಲ್‌ ಆಗಿದೆ. 

“ಭಾರತದ ನಾಶಕ್ಕೆ ನೀವೇ ಕಾರಣರಾಗುತ್ತಿದ್ದೀರಿ ಬ್ರಿಟನ್‌ನ ಇತ್ತೀಚಿನ ಸ್ಥಿತಿಯು ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ ವಿಶ್ವದ ಹೆಚ್ಚಿನ ಮುಸ್ಲಿಮೇತರ ಜನಸಂಖ್ಯೆಗೆ ಅಪಾಯಕಾರಿಯಾಗಿದೆ. ನೀವು ಸಹ ನಿಮ್ಮ ಮಾತೃಭೂಮಿ ಮತ್ತು ನಿಮ್ಮ ಸ್ಥಳೀಯ ಸಂಸ್ಕೃತಿಯನ್ನು ಉಳಿಸಲು ಬಯಸಿದರೆ ನೀವು ಇದನ್ನು ಓದಬೇಕು. ಇಡೀ ಬ್ರಿಟಿನ್‌ ಅನ್ನು ಯಾವುದೇ ರಕ್ತಪಾತವಿಲ್ಲದೆ ವಶಪಡಿಸಿಕೊಳ್ಳಲಾಗುತ್ತಿದೆ” ಎಂದು ಈ ಮೇಸೇಜ್‌ ಆರಂಭವಾಗುತ್ತದೆ. 

ಬ್ರಿಟನ್‌, ಮುಸ್ಲಿಂ, ಜನಸಂಖ್ಯೆ, ವೈರಲ್‌ ಮೆಸೇಜ್‌, ವಾಟ್ಸಾಪ್‌
ಕ್ಲೇಮಿನ ಸ್ಕ್ರೀನ್‌ಶಾಟ್

ಈ ಮೆಸೇಜ್‌ ಅನ್ನು ಸತ್ಯಶೋಧನೆಗಾಗಿ ವಾಟ್ಸಪ್‌ ಬಳಕೆದಾರರು ನ್ಯೂಸ್‌ಚೆಕರ್‌ಗೆ ಕಳಿಸಿದ್ದು, ಇದರ ಸತ್ಯಾಸತ್ಯತೆ ಏನು? ಇದು ನಿಜವೇ ಎಂಬುದನ್ನು ನೋಡೋಣ. 

Fact Check/ Verification

ಈ ವೈರಲ್‌ ಮೆಸೇಜ್‌ನ ಆರಂಭದಲ್ಲಿ ವಿವಿಧ ನಗರಗಳ ಮೇಯರ್ ಗಳು ಮುಸ್ಲಿಮರಾಗಿದ್ದಾರೆ ಎಂದಿದೆ. ಯು.ಕೆ.ಯಲ್ಲಿ ಎಲೆಕ್ಟೆಡ್‌ ಮೇಯರ್ಸ್ ಮತ್ತು ಸಿವಿಕ್‌ ಮೇಯರ್ಸ್ ಎಂದು ಎರಡು ರೀತಿಯ ಮೇಯರ್‌ಗಳಿದ್ದಾರೆ. ಎಲೆಕ್ಟೆಡ್‌ ಮೇಯರ್ಸ್ಗೆ ಹೆಚ್ಚಿನ ಅಧಿಕಾರವಿದ್ದರೆ, ಸಿವಿಕ್‌ ಮೇಯರ್ಸ್‌ಗಳು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿರುವುದಿಲ್ಲ. 

ಲಭ್ಯವಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕೆಲವೊಂದು ನಗರಗಳಲ್ಲಿ ಮುಸ್ಲಿಂ ಮೇಯರ್‌ ಇದ್ದಾರೆ ಹಾಗೆಂದು ಎಲ್ಲ ನಗರಗಳಲ್ಲೂ ಇಲ್ಲ. ಈ ಹಿಂದಿನ ಕೆಲವು ಅವಧಿಯಲ್ಲಿ ಮುಸ್ಲಿಂ ಮೇಯರ್‌ಗಳು ಆಗಿರಬಹುದು. ಈ ಕುರಿತ ಮಾಹಿತಿಗೆ ಯು.ಕೆ ಪಾರ್ಲಿಮೆಂಟ್‌ ಬಿಡುಗಡೆ ಮಾಡಿದ ಈ ಪಟ್ಟಿಯನ್ನು ನೋಡಬಹುದು.

ಕ್ಲೇಮಿನಲ್ಲಿ ಹೇಳಿರುವಂತೆ ಯು.ಕೆ.ಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಸೀದಿಗಳಿವೆ ಎಂದು ಹೇಳಲಾಗಿದೆ. ನ್ಯೂಸ್‌ಚೆಕರ್‌ ಇದರ ಬಗ್ಗೆ ಸ್ವತಂತ್ರವಾಗಿ ಸತ್ಯಶೋಧನೆ ನಡೆಸುವುದು ಅಸಾಧ್ಯವಾದರೂ, ಕ್ರೆಸ್ಟ್‌ (CENTRE FOR RESEARCH AND EVIDENCE ON SECURITY THREAT) ವರದಿಯ ಪ್ರಕಾ 2017ರ ಹೊತ್ತಿಗೆ ಅಲ್ಲಿ 1875 ಮಸೀದಿಗಳು ಇದ್ದವು.
Also Read: ಎಕ್ಸ್ ಬಿಬಿ ರೂಪಾಂತರಿ: ವೈರಲ್‌ ವಾಟ್ಸಾಪ್‌ ಫಾರ್ವರ್ಡ್ ಮೆಸೇಜ್‌ಗೆ ಯಾವುದೇ ಆಧಾರವಿಲ್ಲ

ಕ್ರೆಸ್ಟ್ ವರದಿ

ಬಿಬಿಸಿಯ ಇನ್ನೊಂದು ವರದಿಯಲ್ಲಿ 1750ರಷ್ಟು ಮಸೀದಿಗಳು ಇವೆ ಎಂದು ಹೇಳಲಾಗಿದೆ. 

ಇನ್ನು ಕ್ಲೇಮಿನಲ್ಲಿ, 150ಕ್ಕೂ ಹೆಚ್ಚು ಷರಿಯಾ ನ್ಯಾಯಾಲಯಗಳು, 50 ಕ್ಕೂ ಹೆಚ್ಚು ಮುಸ್ಲಿಂ ಕೌನ್ಸಿಲ್‌ಗಳು ಇವೆ ಎಂದು ಹೇಳಲಾಗಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿದಾಗ ಷರಿಯಾ ನ್ಯಾಯಾಲಯ ಮತ್ತು ಕೌನ್ಸಿಲ್‌ ಎಂದರೆ ಎರಡೂ ಒಂದೇ ಎಂದು ತಿಳಿದುಬಂದಿದೆ. ಇದರ ಜೊತೆಗೆ 2009ರಲ್ಲಿ ಸಿವಿಟಾಸ್‌ ಎಂಬ ಚಿಂತಕರ ಚಾವಡಿ ಪತ್ತೆ ಮಾಡಿದ ಪ್ರಕಾರ ಯು.ಕೆ.ಯಲ್ಲಿ 85 ಷರಿಯಾ ಕೌನ್ಸಿಲ್‌ಗಳು ಇವೆ ಎಂದು ಹೇಳಲಾಗಿದೆ. ಇದನ್ನು ಯು.ಕೆ. ಪಾರ್ಲಿಮೆಂಟಿನ ಸಂಶೋಧನಾ ವಿಭಾಗದ ವರದಿ ಪ್ರಕಟಿಸಿದೆ. ಇದರ ಲಿಂಕ್‌ ಇಲ್ಲಿದೆ.

ಷರಿಯಾ ಕೌನ್ಸಿಲ್‌ ಬಗ್ಗೆ ವರದಿ

ಯು.ಕೆ. ಗೃಹ ಇಲಾಖೆಯ ಇನ್ನೊಂದು ಶೋಧನೆಯ ಪ್ರಕಾರ, ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ 30ರಿಂದ 85 ಷರಿಯಾ ಕೌನ್ಸಿಲ್‌ಗಳು ಇವೆ. ಆದರೂ. ಇದರ ಬಗ್ಗೆ ಸರಿಯಾದ ಸಂಖ್ಯಾ ಮಾಹಿತಿಗಳನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಈ ಸ್ವಯಂ ಸಂಶೋಧನೆಯ ಮಾಹಿತಿಯನ್ನೂ ಪಾರ್ಲಿಮೆಂಟ್‌ ತನ್ನ ವೆಬ್‌ ಆವೃತ್ತಿಯಲ್ಲಿ ಹಂಚಿಕೊಂಡಿದೆ. ಅದರ ಲಿಂಕ್‌ ಇಲ್ಲಿದೆ.
ಚಿಂತರಕ ಚಾವಡಿ Civitasನ ವರದಿಯನ್ನು ಉಲ್ಲೇಖಿಸಿ ಎನ್‌ಡಿಟಿವಿ 2009ರಲ್ಲಿ ವರದಿಯೊಂದನ್ನು ಮಾಡಿದ್ದು ಅದರಲ್ಲಿ ಯು.ಕೆ.ಯಲ್ಲಿ 85 ಷರಿಯಾ ನ್ಯಾಯಾಲಯಗಳು ಇವೆ ಎಂದು ಹೇಳಿದೆ.

ಇನ್ನು ಮುಸ್ಲಿಂ ಮಹಿಳೆಯರು ಶೇ.78ರಷ್ಟು ಮತ್ತು ಮುಸ್ಲಿಂ ಪುರುಷರು ಶೇ.63ರಷ್ಟು ನಿರುದ್ಯೋಗ ಹೊಂದಿದ್ದಾರೆ ಎಂಬ ಕುರಿತು ಸತ್ಯಶೋಧನೆಯನ್ನು ನಡೆಸಿದಾಗ, ಇಡೀ ಯು.ಕೆ.ಯಲ್ಲಿ ನಿರುದ್ಯೋಗ ಪ್ರಮಾಣ 2022 ಆಗಸ್ಟ್ ಹೊತ್ತಿಗೆ ಶೇ.3.7ರಷ್ಟಿದೆ ಎಂದು ಆಫೀಸ್‌ ಫಾರ್‌ ನ್ಯಾಷನಲ್‌ ಸ್ಟಾಟಿಸ್ಟಿಕ್ಸ್‌ ಇದರ 2022ರ ಆಗಸ್ಟ್-ಅಕ್ಟೋಬರ್ ಅವಧಿಯ ವರದಿ ಹೇಳಿದೆ. 

ಸ್ಟಾಟಿಸ್ಟಾ ಎಂಬ ಅಂಕಿ ಅಂಶ ಸಂಗ್ರಹಣೆಯ ವರದಿಯ ಪ್ರಕಾರ 2012-18 ರ ಅವಧಿಯಲ್ಲಿ ಮುಸ್ಲಿಂ ನಿರುದ್ಯೋಗದ ಪ್ರಮಾಣ ಶೇ.5.7ರಷ್ಟಿತ್ತು. 2012ರ ನಿರುದ್ಯೋಗ ಪ್ರಮಾಣಕ್ಕಿಂತ ಇದು ಕಡಿಮೆ ಎಂದು ಆ ವರದಿ ಹೇಳಿತ್ತು.

ಮುಸ್ಲಿಂ ನಿರುದ್ಯೋಗದ ಬಗ್ಗೆ ನಿರ್ದಿಷ್ಟವಾಗಿ ತಿಳಿಸುವ ವರದಿಗಳು ಲಭ್ಯವಿಲ್ಲ. ಅಲ್ಲಿನ ಸರ್ಕಾರ ಜನಾಂಗೀಯತೆ ಆಧಾರದಲ್ಲಿ ನಿರುದ್ಯೋಗ ಪ್ರಮಾಣವನ್ನು ಲೆಕ್ಕಾಚಾರ ಹಾಕುತ್ತದೆ. ಅದನ್ನು ಧರ್ಮದ ಆಧಾರದಲ್ಲಿ ಮಾಡಲಾಗಿಲ್ಲ. ಆದ್ದರಿಂದ ನಿರ್ದಿಷ್ಟವಾಗಿ ಮುಸ್ಲಿಂ ನಿರುದ್ಯೋಗದ ಪ್ರಮಾಣವನ್ನು ಹೇಳಲು ಸಾಧ್ಯವಿಲ್ಲದಾಗಿದೆ.  

Conclusion

ಆದ್ದರಿಂದ ಕ್ಲೇಮಿನ ಪ್ರಕಾರ “ಭಾರತದ ನಾಶಕ್ಕೆ ನೀವೇ ಕಾರಣರಾಗುತ್ತಿದ್ದೀರಿ ಬ್ರಿಟನ್‌ನ ಇತ್ತೀಚಿನ ಸ್ಥಿತಿಯು ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ ವಿಶ್ವದ ಹೆಚ್ಚಿನ ಮುಸ್ಲಿಮೇತರ ಜನಸಂಖ್ಯೆಗೆ ಅಪಾಯವಾಗಿದೆ!” ಎನ್ನುವುದು ಆಧಾರ ರಹಿತವಾಗಿದೆ. ಮತ್ತು ಇದರಲ್ಲಿನ ಮಾಹಿತಿಗಳು ಭಾಗಶಃ ತಪ್ಪಾಗಿದೆ. ಆದ್ದರಿಂದ ನ್ಯೂಸ್‌ಚೆಕರ್ ಸತ್ಯಶೋಧನೆಯು ಇದನ್ನು ಭಾಗಶಃ ತಪ್ಪು ಎಂದು ಹೇಳುತ್ತದೆ.

Result: Partly False

Our Sources
House of Commons Library: Research Briefing on Directly Elected Mayors By Mark Sanford, Dated: November 11, 2022
CENTRE FOR RESEARCH AND EVIDENCE ON SECURITY THREAT (CREST) Report on British Muslim Mosques
House of Commons Library: Debate pack, Sharia law courts in the UK, Dated: May 1, 2019
Office for National Statistics, Census 2021 on Unemployment: Dated December 13, 2022
Statista, Estimated unemployment rate for Muslims in England and Wales from 2012 to 2018 Published by D. Clark, Sep 5, 2022

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.