Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ರೈತ ಹೋರಾಟದಲ್ಲಿ ಮುಸ್ಲಿಮರೂ ಸಿಖ್ ಪೇಟ ಕಟ್ಟಿ ಪಾಲ್ಗೊಂಡಿದ್ದಾರೆ
Fact
ವೈರಲ್ ವೀಡಿಯೋ ರೈತ ಪ್ರತಿಭಟನೆಯದ್ದಲ್ಲ, 2022ರಲ್ಲಿ ಗಾಯಕ ಸಿಧು ಮೂಸೆವಾಲ ಅಂತಿಮ ಯಾತ್ರೆಯ ವೇಳೆ ಅವರ ಗೌರವಾರ್ಥ ಯುವಕರಿಗೆ ಪೇಟ ಕಟ್ಟಿದ ವಿದ್ಯಮಾನ ಇದಾಗಿದೆ.
ಸಿಖ್ಖರೇ ಹೆಚ್ಚು ಕಾಣುತ್ತಿರುವ ರೈತರ ಹೋರಾಟಕ್ಕೆ ಮಾರು ವೇಷದಲ್ಲಿ ಮುಸ್ಲಿಮರೂ ಪಾಲ್ಗೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋವೊಂದು ವೈರಲ್ ಆಗಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದಿರುವ ಹೇಳಿಕೆಯಲ್ಲಿ “ಶೂಟಿಂಗ್ ಸಮಯದಲ್ಲಿ ಎಲ್ಲಾ ನಟರು ಸೆಟ್ ಗೆ ಹೋಗುವ ಮೊದಲು ರೆಡಿಯಾಗುತ್ತಿದ್ದಾರೆ. ಆದರೆ ಹಿಂದೂ ಕಲಾವಿದರನ್ನು ಹುಡುಕಲು ಸಾಧ್ಯವಾಗದ ಕಾರಣ ಮುಸ್ಲಿಂ ಕಲಾವಿದರು ಪಗಡಿ ಧರಿಸುತ್ತಿದ್ದಾರೆ.. ದೇಶ ವಿರೋಧಿಗಳ ಇದೊಂದು ನಕಲಿ ರೈತ ಚಳವಳಿಯಲ್ಲಿ..” ಎಂದಿದೆ.
Also Read: ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳೆಯ ದುಪ್ಪಟ್ಟಾ ಎಳೆದಿದ್ದಾರೆಯೇ?
ವೈರಲ್ ವೀಡಿಯೋ ಕುರಿತು ತನಿಖೆ ನಡೆಸುವಂತೆ ವಾಟ್ಸಾಪ್ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ಟಿಪ್ ಲೈನ್ (+91-9999499044) ಗೆ ವಿನಂತಿಸಿಕೊಂಡಿದ್ದು ಅದನ್ನು ತನಿಖೆಗಾಗಿ ಅಂಗೀಕರಿಸಲಾಗಿದೆ.
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಜೊತೆಗೆ ವೀಡಿಯೋದಲ್ಲಿ ಕಂಡುಬಂದ ವಾಕ್ಯದ ಬಗ್ಗೆ ಶೋಧ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿದೆ.
ಜೂನ್ 10, 2022ರಂದು ಸರ್ದಾರಿಯನ್ ಟ್ರಸ್ಟ್ ಪಂಜಾಬ್ ಫೇಸ್ ಬುಕ್ ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೋದ ಶೀರ್ಷಿಕೆಯಲ್ಲಿ “ಮೂಸೆವಾಲಾ ಅವರ ಕೊನೆಯ ಪ್ರಾರ್ಥನೆಗೆ ‘ಸರ್ದರಿಯನ್ ಟ್ರಸ್ಟ್ ಪೇಟ ತೊಡಿಸಿದ್ದು, ಮುಸ್ಲಿಂ ಮತ್ತು ಹಿಂದೂ ಸಹೋದರರು ಪೇಟ ತೊಟ್ಟು ಅಲಂಕರಿಸಿದರು.” (ಭಾಷಾಂತರಿಸಲಾಗಿದೆ) ಎಂದಿದೆ.
ಇದೇ ವಿಚಾರದ ಬಗ್ಗೆ ಸರ್ದಾರಿಯನ್ ಟ್ರಸ್ಟ್ ನ ಜೂನ್ 10, 2022ರ ಇನ್‌ಸ್ಟಾಗ್ರಾಂ ಪೋಸ್ಟ್ ಅನ್ನೂ ನಾವು ಗಮನಿಸಿದ್ದೇವೆ. ಇದರ ಬಗ್ಗೆ ಹೆಚ್ಚಿನ ಶೋಧನೆಗೆ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ವರದಿಗಳೂ ಲಭ್ಯವಾಗಿವೆ.
Also Read: ಪ್ರತಿಭಟನೆಗಾಗಿ ದೆಹಲಿಯತ್ತ ಮುನ್ನುಗ್ಗುತ್ತಿರುವ ರೈತರು ಎಂದ ವೀಡಿಯೋ ನಿಜವೇ?
ಜೂನ್ 9, 2022ರ ಇಟಿವಿ ಭಾರತ್ ಪಂಜಾಬ್ ನಲ್ಲಿ “ಮೂಸೆವಾಲ ಅವರ ಅಂತಿಮ ಯಾತ್ರೆ ವೇಳೆ ಸರ್ದಾರಿಯಾ ಟ್ರಸ್ಟ್ ಯುವಕರಿಗೆ ಪೇಟ ತೊಡಿಸಿ ಅಲಂಕರಿಸಿತು” ಎಂದಿದೆ. ಈ ವರದಿಯಲ್ಲಿ ಪಂಜಾಬಿ ಗಾಯಕ, ಮನ್ಸಾ ಜವಾರ್ಕೆಯಲ್ಲಿ ಕೊಲೆಗೆ ಈಡಾದ ಸಿಧು ಮೂಸೆವಾಲ ಅವರ ಅಂತಿಮ ಯಾತ್ರೆಗೆ ಬಂದ ಎಲ್ಲ ಯುವಕರಿಗೂ ಟ್ರಸ್ಟ್ ಪೇಟ ತೊಡಿಸಿದೆ ಎಂದಿದೆ. ಮೂಸೆವಾಲ ಅವರು ದೇಶದಲ್ಲಿ ಮತ್ತು ವಿದೇಶದಲ್ಲಿ ಪೇಟ ತೊಟ್ಟು ಸಂಚರಿಸಿದ್ದು, ಹೆಗ್ಗುರುತಾಗಿದೆ (ಭಾಷಾಂತರಿಸಲಾಗಿದೆ) ಎಂದಿದೆ.
ಅಕಾಲ್ ಚಾನೆಲ್ 8, 2022ರಂದು ಪ್ರಕಟಿಸಿದ ಯೂಟ್ಯೂಬ್ ವೀಡಿಯೋದಲ್ಲಿ ಮೂಸೆವಾಲಾ ಅವರ ಅಂತಿಮ ಯಾತ್ರೆಯಂದು ಸಿಖ್ಖರು ಪೇಟ ಕಟ್ಟಿದರು, ಯುವಕರು ತಾವು ಪೇಟವನ್ನು ಇಡುವುದಾಗಿ ತೀರ್ಮಾನ ಕೈಗೊಂಡರು (ಭಾಷಾಂತರಿಸಲಾಗಿದೆ) ಎಂದಿದೆ.
ಈ ವಿಚಾರದ ಬಗ್ಗೆ ಹೆಚ್ಚಿನ ಸ್ಪಷ್ಟತೆಗಾಗಿ ಸರ್ದಾರಿಯನ್ ಟ್ರಸ್ಟ್ ನ ಲೂಧಿಯಾನ ಜಿಲ್ಲಾ ಅಧ್ಯಕ್ಷ ಹರ್ಪ್ರೀತ್ ಸಿಂಗ್ ಅವರನ್ನು ನ್ಯೂಸ್ ಚೆಕರ್ ಸಂಪರ್ಕಿಸಿದೆ. ಈ ವೇಳೆ ಅವರು ಮಾತನಾಡಿ, ಮೂಸೆವಾಲಾ ಅವರ ತಂದೆಯ ಕೋರಿಕೆಯ ಮೇರೆಗೆ ಆಯೋಜಿಸಲಾಗಿದ್ದ ದಸ್ತರ್ ಲಂಗರ್ ಅನ್ನು ವೀಡಿಯೋ ತೋರಿಸುತ್ತದೆ ಎಂದು ದೃಢಪಡಿಸಿದರು. ಎಲ್ಲಾ ಧರ್ಮಗಳ ಜನರು ಈ ಕಾರ್ಯಕ್ರಮದಲ್ಲಿ ಸೇರಿದ್ದಾರೆ ಎಂದು ಸಿಂಗ್ ಹೇಳಿದರು. ಮೂಸೆವಾಲಾ ಅವರ ಬೆಂಬಲಿಗರು ಮತ್ತು ಯುವಕರನ್ನು ಪೇಟಾ ತೊಡುವುದಕ್ಕೆ ಆಹ್ವಾನಿಸುವ ವೀಡಿಯೋವನ್ನೂ ಸಹ ಅವರು ಹಂಚಿಕೊಂಡಿದ್ದಾರೆ. ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಕೂಡ ಇದೇ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸತ್ಯಶೋಧನೆಯ ಪ್ರಕಾರ, ರೈತ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾರು ವೇಷದಲ್ಲಿ ಭಾಗಿಯಾಗಲು ಮುಸ್ಲಿಮರು ಪೇಟ ಧರಿಸಿದ ವಿದ್ಯಮಾನವಲ್ಲ ಬದಲಾಗಿ ಗಾಯಕ ಸಿಧು ಮೂಸೆವಾಲಾ ಅಂತಿಮ ಯಾತ್ರೆಯಲ್ಲಿ ಪೇಟ ಧರಿಸಿದ್ದಾಗಿದ್ದು ಹೇಳಿಕೆ ತಪ್ಪಾಗಿದೆ.
Also Read: ಬಾಂಗ್ಲಾ ವಲಸಿಗ ಮುಸ್ಲಿಮರಿಗೆ ತಲಾ 5 ಎಕರೆ ಭೂಮಿ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನುವುದು ನಿಜವೇ?
Our Sources
Facebook Post By Sardarian trust Panjab, Dated: June 10, 2022
Instagram Post By Sardarian trust Panjab, Dated: June 10, 2022
Report By ETV Bharath Panjab, Dated: June 10, 2022
YouTube Video By Akaal Channel, Dated: June 8, 2022
Telephonic Conversation With Harpreet Singh, Ludhiana District President, Sardarian Trust
(With inputs from Vasudha Beri, Newschecker)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
July 8, 2025
Shaminder Singh
May 15, 2025
Ishwarachandra B G
April 16, 2025