Tuesday, March 11, 2025

Fact Check

Fact Check: ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎನ್ನುವುದು ನಿಜವೇ?

Written By Ishwarachandra B G, Edited By Pankaj Menon
Nov 5, 2024
banner_image

Claim
ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ

Fact
ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎನ್ನುವುದು ತಪ್ಪು ಹೇಳಿಕೆ. ಇದು ಹೊರತಾಗಿ ರೈಲ್ವೇ ಯಾತ್ರಿ ಸೇವೆ, ಲೋವರ್ ಬರ್ತ್ ಸೌಕರ್‍ಯಗಳನ್ನು ನೀಡುವುದನ್ನು ಮುಂದುವರಿಸಲಾಗಿದೆ

ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯಗಳನ್ನು ಘೋಷಿಸಿದೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಾಪ್‌ ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ, “ಕೇಂದ್ರಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ರಿಯಾಯಿತಿ ಸೌಲಭ್ಯಗಳನ್ನು ಘೋಷಿಸಿದೆ 1. ಪುರುಷ ಹಿರಿಯ ನಾಗರಿಕ ವಿನಾಯಿತಿ ವಯಸ್ಸು 60 ವರ್ಷ ಅಥವಾ ಮೇಲ್ಪಟ್ಟವರು 2. ಮಹಿಳಾ ಹಿರಿಯ ನಾಗರಿಕರ ರಿಯಾಯಿತಿ ವಯಸ್ಸು 58 ವರ್ಷಗಳು ಅಥವಾ ಮೇಲ್ಪಟ್ಟವರು 3. ಪುರುಷರಿಗೆ ರೈಲ್ವೇ ಪ್ರಯಾಣ ದರದಲ್ಲಿ 40% ರಿಯಾಯಿತಿ 4 ಮಹಿಳೆಯರಿಗೆ ರೈಲ್ವೆ ಪ್ರಯಾಣ ದರದಲ್ಲಿ 50% ರಿಯಾಯಿತಿ..” ಎಂದಿದೆ.

Fact Check: ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎನ್ನುವುದು ನಿಜವೇ?

ಈ ಹೇಳಿಕೆ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ವಾಟ್ಸಾಪ್‌ ಟಿಪ್ ಲೈನ್ ಗೆ ಬಳಕೆದಾರರೊಬ್ಬರು ಮನವಿ ಮಾಡಿದ್ದು, ಅದನ್ನು ಅಂಗೀಕರಿಸಲಾಗಿದೆ.

Also Read: ಬ್ರಿಕ್ಸ್ ಶೃಂಗಸಭೆಯಲ್ಲಿ ಗ್ರೂಪ್ ಫೋಟೋದಿಂದ ಪ್ರಧಾನಿ ಮೋದಿ ಔಟ್? ವೀಡಿಯೋ ಹಿಂದಿನ ಸತ್ಯ ಇಲ್ಲಿದೆ

ನಾವು ವಿಚಾರದಲ್ಲಿ ಸತ್ಯಶೋಧನೆ ನಡೆಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಹೇಳಿಕೆ ಭಾಗಶಃ ತಪ್ಪಾಗಿದೆ. ಹಿರಿಯ ನಾಗರಿಕರಿಗೆ ರೈಲ್ವೇ ಟಿಕೆಟ್ ದರದಲ್ಲಿ ಯಾವುದೇ ರಿಯಾಯಿತಿ ಇಲ್ಲ, ಉಳಿದಂತೆ ಅಂಗವಿಕಲರು, ಹಿರಿಯ ನಾಗರಿಕರಿಗೆ ಸ್ಟೇಷನ್‌ ಗಳಲ್ಲಿ ಸೌಕರ್‍ಯ ಮತ್ತು ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ನೀಡುವ ಸೌಕರ್‍ಯ ಇದೆ ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ವರದಿಗಳು ಲಭ್ಯವಾಗಿದ್ದು, 2020ರಿಂದ ರೈಲ್ವೇ ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ಯಾವುದೇ ರಿಯಾಯಿತಿಗಳನ್ನು ನೀಡುತ್ತಿಲ್ಲ ಎಂಬುದನ್ನು ಕಂಡುಕೊಂಡಿದ್ದೇವೆ.

ಏಪ್ರಿಲ್ 1, 2024ರ ಡೆಕ್ಕನ್‌ ಹೆರಾಲ್ಡ್ ನಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, “ಮಾರ್ಚ್ 20, 2020 ರಂದು, ಕೋವಿಡ್-19 ಕಾರಣದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ನಂತರ ರೈಲ್ವೆ ಸಚಿವಾಲಯವು ಹಿರಿಯ ನಾಗರಿಕರಿಗೆ ನೀಡಲಾದ ರೈಲು ದರಗಳಲ್ಲಿನ ರಿಯಾಯಿತಿಗಳನ್ನು ಹಿಂತೆಗೆದುಕೊಂಡಿತು.” ಜೊತೆಗೆ, “ನಾಲ್ಕು ವರ್ಷಗಳ ಹಿಂದೆ ರೈಲು ಪ್ರಯಾಣ ದರದಲ್ಲಿ ರಿಯಾಯಿತಿಯನ್ನು ಹಿಂಪಡೆದ ನಂತರ ಭಾರತೀಯ ರೈಲ್ವೇಯು ಹಿರಿಯ ನಾಗರಿಕರಿಂದ 5,800 ಕೋಟಿ ರೂಪಾಯಿ ಹೆಚ್ಚುವರಿ ಆದಾಯವನ್ನು ಗಳಿಸಿದೆ ಎಂದು ಮಾಹಿತಿ ಹಕ್ಕು ಕಾಯಿದೆಯಡಿ ಪ್ರತಿಕ್ರಿಯೆಗಳು ಬಹಿರಂಗಪಡಿಸಿವೆ.” ಎಂದಿದೆ.

Fact Check: ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎನ್ನುವುದು ನಿಜವೇ?

ಇದಕ್ಕೆ ಪೂರಕವಾಗಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಈ ವೇಳೆ, ರೈಲ್ವೇ ವೆಚ್ಚಗಳು ಈಗಾಗಲೇ ಹೆಚ್ಚಾಗಿದ್ದು, ಹಿರಿಯ ನಾಗರಿಕರಿಗೆ ಯಾವುದೇ ರಿಯಾಯಿತಿ ಟಿಕೆಟ್ ನಲ್ಲಿ ಕೊಡಲಾಗುವುದಿಲ್ಲ ಎಂಬುದನ್ನು ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಸೂಚ್ಯವಾಗಿ ಹೇಳಿದ್ದಾರೆ ಎಂಬುದನ್ನು ಜನವರಿ 3, 2023ರ ಫೈನಾನ್ಸಿಯಲ್‌ ಎಕ್ಸ್ ಪ್ರೆಸ್‌ ವರದಿಯಲ್ಲಿ ನೋಡಿದ್ದೇವೆ.

Fact Check: ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎನ್ನುವುದು ನಿಜವೇ?

ಈ ವರದಿಯಲ್ಲಿ “ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೇ ರಿಯಾಯಿತಿಗಳ ಕುರಿತ ದೊಡ್ಡ ಪ್ರಶ್ನೆಗೆ ಉತ್ತರಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಈ ಯೋಜನೆಯು ಕಾರ್ಯನಿರ್ವಹಿಸುತ್ತಿಲ್ಲ. ರಿಯಾಯಿತಿಯನ್ನು ಯಾವಾಗ ಮರುಸ್ಥಾಪಿಸಲಾಗುತ್ತದೆ ಎಂಬ ಮಹಾರಾಷ್ಟ್ರದ ಸ್ವತಂತ್ರ ಸಂಸದ ನವನೀತ್ ರಾನಾವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ವರ್ಷ ಪ್ರಯಾಣಿಕರ ಸೇವೆಗಳಿಗೆ 59,000 ಕೋಟಿ ರೂ.ಗಳ ಸಬ್ಸಿಡಿಯನ್ನು ನೀಡಲಾಗಿರುವುದರಿಂದ ಅದನ್ನು ಸದ್ಯಕ್ಕೆ ಮರುಸ್ಥಾಪಿಸಲಾಗುವುದಿಲ್ಲ, ಭಾರತೀಯ ರೈಲ್ವೆಯ ಪಿಂಚಣಿ ಮತ್ತು ಸಂಬಳದ ಬಿಲ್‌ಗಳು ತುಂಬ ಇವೆ ಎಂದು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ” ಎಂದಿದೆ.

ಇದೇ ವಿಚಾರದಲ್ಲಿ ನಾವು ಸಂಸದರಾದ ಪ್ರಿಯಾಂಕಾ ಚತುರ್ವೇದಿಯವರ ಎಕ್ಸ್ ಪೋಸ್ಟ್ ಕಂಡುಕೊಂಡಿದ್ದೇವೆ. ಆಗಸ್ಟ್ 3, 2024ರಂದು ಅವರು ಹಿರಿಯ ನಾಗರಿಕರಿಗೆ ರೈಲ್ವೇ ಟಿಕೆಟ್ ನಲ್ಲಿ ರಿಯಾಯಿತಿ ಬಗ್ಗೆ ಪೋಸ್ಟ್ ಮಾಡಿದ್ದು, “ಆದ್ದರಿಂದ ಕೋವಿಡ್ ಸಮಯದಲ್ಲಿ ನಿಲ್ಲಿಸಲಾಗಿದ್ದ ಹಿರಿಯ ನಾಗರಿಕರು ಮತ್ತು ಕ್ರೀಡಾ ನಾಗರಿಕರ ರಿಯಾಯಿತಿಯನ್ನು ಮರುಪ್ರಾರಂಭಿಸದಿರಲು ರೈಲ್ವೆ ನಿರ್ದಿಷ್ಟವಾಗಿ ನಿರ್ಧರಿಸಿದೆ.” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೊಂದಿಗೆ ರಾಜ್ಯಸಭೆಯಲ್ಲಿ ಅವರ ಪ್ರಶ್ನೆಗೆ ರೈಲ್ವೇ ಸಚಿವರು ನೀಡಿದ ಉತ್ತರವನ್ನು ಲಗತ್ತಿಸಿದ್ದಾರೆ.

ಇದರೊಂದಿಗೆ ಜೂನ್‌ 11, 2022ರ ರೈಲ್ವೇ ಸೇವಾ ಎಕ್ಸ್ ಪೋಸ್ಟ್ ಪ್ರತಿಕ್ರಿಯೆಯನ್ನೂ ನಾವು ಗಮನಿಸಿದ್ದೇವೆ. ಇದರಲ್ಲಿ 4 ವರ್ಗಗಳಿಗೆ ಮಾತ್ರ ರೈಲ್ವೇ ರಿಯಾಯಿತಿ ಇದ್ದು, 11 ರೀತಿಯ ರೋಗಿಗಳು, ವಿದ್ಯಾರ್ಥಿಗಳು, ಅಂಗವಿಕಲರಿಗೆ ಇರುವುದಾಗಿ ಇದೆ. ಈ ಪೋಸ್ಟ್ ಇಲ್ಲಿ ನೋಡಬಹುದು.

ಇದರೊಂದಿಗೆ ಕ್ಲೇಮಿನಲ್ಲಿ ಹೇಳಲಾದ ಇತರ ವಿಚಾರಗಳ ಬಗ್ಗೆ ನಾವು ಗಮನಿಸಿದ್ದೇವೆ. ಇದರಲ್ಲಿ ಐಆರ್‍‌ಸಿಟಿಸಿ ಯಾತ್ರಿ ಮಿತ್ರ ಸೇವಾ ಬಗ್ಗೆ ಹೇಳಲಾಗಿದ್ದು, ಇದು ರೈಲ್ವೇ ನಿಲ್ದಾಣಗಳಲ್ಲಿ ವೀಲ್‌ಚೇರ್ ಸೇವೆ ಮತ್ತು ಪೋರ್ಟರ್ ಸೇವೆಗಳನ್ನು ಬುಕ್ ಮಾಡಲು ಯಾತ್ರಿ ಮಿತ್ರ ಸೇವೆಯನ್ನು ಒದಗಿಸುವುದಕ್ಕೆ ಇದೆ. ಇದರ ಬಗ್ಗೆ ಸೆಪ್ಟೆಂಬರ್ 19, 2016ರಂದು ಪಿಐಬಿಗೆ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ರೈಲ್ವೇ ಸಚಿವಾಲಯ ಹೇಳಿದೆ ಎಂಬುದನ್ನು ಕಂಡುಕೊಂಡಿದ್ದೇವೆ.

ಇನ್ನು ಹಿರಿಯ ನಾಗರಿಕರಿಗೆ ನೀಡಲಾಗುವ ಲೋವರ್ ಬರ್ತ್ ಅವಕಾಶದ ಬಗ್ಗೆಯೂ ನಾವು ಸೆಪ್ಟೆಂಬರ್ 23, 2022ರ ಮಿಂಟ್ ವರದಿಯಲ್ಲಿ ಕಂಡುಕೊಂಡಿದ್ದೇವೆ. ಆ ಪ್ರಕಾರ, “ಅವಕಾಶವಿದ್ದಲ್ಲಿ ಈ ಸೌಲಭ್ಯವನ್ನು ನೀಡವುದಾಗಿ ಐಆರ್ ಸಿಟಿಸಿ ಹೇಳಿದ್ದಾಗಿ” ವರದಿಯಲ್ಲಿದೆ.

Conclusion

ಈ ಸತ್ಯಶೋಧನೆಯ ಪ್ರಕಾರ, ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ರೈಲ್ವೇ ಟಿಕೆಟ್ ಗಳನ್ನು ನೀಡಲಾಗುತ್ತಿದೆ, ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎನ್ನುವುದು ತಪ್ಪಾದ ಹೇಳಿಕೆಯಾಗಿದೆ. ಉಳಿದಂತೆ ಯಾತ್ರಿ ಮಿತ್ರ ಸೇವಾ ಮತ್ತು ಅವಕಾಶವಿದ್ದಲ್ಲಿ ಲೋವರ್ ಬರ್ತ್ ಗಳನ್ನು ಹಿರಿಯ ನಾಗರಿಕರಿಗೆ, ಗರ್ಭಿಣಿಯರು ಮತ್ತು ಅಂಗವಿಕಲರಿಗೆ ನೀಡುವ ವಿಚಾರ ಸರಿಯಾಗಿದೆ. ಆದ್ದರಿಂದ ವಾಟ್ಸಾಪ್‌ ನಲ್ಲಿ ಹರಿದಾಡುತ್ತಿರುವ  ಹೇಳಿಕೆ ಭಾಗಶಃ ತಪ್ಪು ಎಂದು ಕಂಡುಕೊಂಡಿದ್ದೇವೆ.

Also Read: ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ ಯುವಕರನ್ನು ಥಳಿಸಿದ ಪ್ರಕರಣಕ್ಕೆ ಕೋಮು ಬಣ್ಣ!

Result: Partly False

Our Sources
Report By Deccan Herald, Dated: April 1, 2024

Report By Financial Express, Dated: January 3, 2023

X post By Priyanka Chaturvedi, Dated: August 3, 2024

‍‍X post By Railway seva, Dated: June 11, 2022

Report By Mint, Dated: September 23, 2022


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,396

Fact checks done

FOLLOW US
imageimageimageimageimageimageimage