Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಉತ್ತರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಮಸೀದಿ ಕೆಡವಲಾಗಿದೆ, ಮುಸ್ಲಿಂ ಮಹಿಳೆ ಬಾಲಕನಿಂದ ಉಚ್ಚೆಹೊಯ್ಯಿಸಿ, ಆಹಾರ ಗ್ರಾಹಕರಿಗೆ ಬಡಿಸಿದ್ದಾಳೆಂದು ಕೋಮು ಹೇಳಿಕೆಯೊಂದಿಗೆ ವೀಡಿಯೋಗಳು ಈ ವಾರ ವೈರಲ್ ಆಗಿವೆ. ಇದರೊಂದಿಗೆ ಜೂನ್ 15ರಿಂದ ಎಲ್ಲ ಹಿರಿಯ ನಾಗರಿಕರಿಗೆ ಸಾರ್ವಜನಿಕ ಸಾರಿಗೆಗಳಲ್ಲಿ ಉಚಿತ ಪ್ರಯಾಣ, ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನದ ದೃಶ್ಯದ ವೀಡಿಯೋ, ಇರಾನ್ನ ನಗರಗಳ ಮೇಲೆ ಇಸ್ರೇಲ್ನ ಬೃಹತ್ ದಾಳಿ, ಕೇಸರಿ ಹಾಲಿನಿಂದ ಖಿನ್ನತೆ ಕಡಿಮೆಯಾಗುತ್ತದೆ ಎಂಬ ಹೇಳಿಕೆಗಳೂ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇವುಗಳು ನಿಜವಲ್ಲ ಎಂದು ಸಾಕ್ಷ್ಯಾಧಾರಗಳೊಂದಿಗೆ ಸಾಬೀತು ಪಡಿಸಿದೆ.

ಉತ್ತರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಮಸೀದಿಯನ್ನು ಕೆಡವಲಾಗಿದೆ ಎಂಬಂತೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ, ಹಯಾತ್ ನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮಸೀದಿಯನ್ನು ಸ್ವತಃ ಮುಸ್ಲಿಂ ಸಮುದಾಯದವರೇ ತೆಗೆದಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ

ಆಹಾರ ತಯಾರಿಸುವ ಅಂಗಡಿಯೊಂದರಲ್ಲಿ ಮುಸ್ಲಿಂ ಮಹಿಳೆ ಬಾಲಕನಿಂದ ಉಚ್ಚೆಹೊಯ್ಯಿಸಿ, ಆ ಆಹಾರವನ್ನು ಗ್ರಾಹಕರಿಗೆ ಬಡಿಸುತ್ತಿದ್ದಾಳೆ ಎಂಬಂತೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸದಾಗ, ಈ ವೈರಲ್ ವೀಡಿಯೋ ಮಲೇಷ್ಯಾದಲ್ಲಿ 2022ರಲ್ಲಿ ನಡೆದ ಘಟನೆಯಾಗಿದ್ದು, ಮಗು ಅಡುಗೆ ಕೋಣೆಯಲ್ಲಿ ಮೂತ್ರ ಮಾಡಿದ ಪ್ರಕರಣದ ನಂತರ ಅದನ್ನು ಮುಚ್ಚಲಾಗಿತ್ತು. ಈ ಕುರಿತ ವರದಿ ಇಲ್ಲಿ ಓದಿ

ಇತ್ತೀಚೆಗೆ ಕೇಂದ್ರ ಸರ್ಕಾರವು ರೈಲುಗಳು, ಬಸ್ಸುಗಳು, ಮೆಟ್ರೋ ಸೇವೆಗಳು ಮತ್ತು ದೇಶೀಯ ವಿಮಾನಗಳಲ್ಲಿ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣವನ್ನು ಘೋಷಿಸಿದೆ ಎಂದು ಹೇಳಿಕೊಳ್ಳುವ ಸಂದೇಶವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಜೂನ್ 15ರಿಂದ ಎಲ್ಲ ಹಿರಿಯ ನಾಗರಿಕರಿಗೆ ಸಾರ್ವಜನಿಕ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಎನ್ನುವುದು ಸುಳ್ಳು ಕೇಂದ್ರ ಸರ್ಕಾರ ಅಂತಹ ಯಾವುದೇ ಘೋಷಣೆ ಮಾಡಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿರುವ ದೃಶ್ಯ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ, ಇದು 2023ರಲ್ಲಿ ನೇಪಾಳದಲ್ಲಿ ಸಂಭವಿಸಿದ ವಿಮಾನ ಅವಘಡದ ಮುನ್ನ ಪ್ರಯಾಣಿಕರೊಬ್ಬರು ಮಾಡಿದ ವೀಡಿಯೋ ದೃಶ್ಯಾವಳಿ ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ

ಇರಾನ್ನ ನಗರಗಳ ಮೇಲೆ ಇಸ್ರೇಲ್ನ ಬೃಹತ್ ದಾಳಿ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ವೀಡಿಯೋ, ಈ ವೀಡಿಯೋ ಮೆಕ್ಸಿಕೋದ ಡೀಸೆಲ್ ಪ್ಲಾಂಟ್ ಒಂದರಲ್ಲಿ ಸಂಭವಿಸಿದ ಅವಘಡದ ದೃಶ್ಯವಾಗಿದೆ ಎಂದು ಸತ್ಯಶೋಧನೆಯಲ್ಲಿ ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ

ಬಿಸಿ ಹಾಲಿಗೆ ಒಂದು ಚಿಟಿಕೆ ಒಣಗಿದ ಕೇಸರಿ ಕಲಸಿ ಪ್ರತಿದಿನ ಸೇವಿಸಿದರೆ, ಮಾನಸಿಕ ಖಿನ್ನತೆ ದೂರವಾಗುತ್ತದೆ ಎಂದು ಹೇಳಿಕೆಯೊಂದನ್ನು ಫೇಸ್ಬುಕ್ ಪೋಸ್ಟ್ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿದಾಗ, ಬಿಸಿ ಹಾಲಿನಲ್ಲಿ ಕೇಸರಿ ಹಾಕಿ ಕುಡಿದರೆ, ಮಾನಸಿಕ ಖಿನ್ನತೆ ದೂರವಾಗುತ್ತದೆ ಎನ್ನುವುದು ಸುಳ್ಳು. ಖಿನ್ನತೆಯಂತಹ ಸಮಸ್ಯೆಗೆ ವೈದ್ಯಕೀಯ ಆರೈಕೆ ಅಗತ್ಯವಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ
Ishwarachandra B G
November 29, 2025
Runjay Kumar
October 13, 2025
Salman
October 6, 2025