Authors
Claim
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಹತ್ತಿರವಾಗುತ್ತಿರುವಂತೆಯೇ, ಅಯೋಧ್ಯೆಯತ್ತ ಕರಡಿಗಳ ಹಿಂಡು ತಲುಪಿದೆ ಎಂದು ಹೇಳಿಕೆಯೊಂದು ಹರಿದಾಡಿದೆ.
ಈ ಕುರಿತು ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ” ಗರುಡನ ನಂತರ ಈಗ ಋಕ್ಷ (ಕರಡಿ) ಹಿಂಡು ಅಯೋಧ್ಯೆಗೆ ತಲುಪಿದೆ ಎಂದು ಹೇಳಲಾಗುತ್ತಿದೆ. ಈಗ ಇದೇನು ಪವಾಡವೋ ಅಥವಾ ದೇವರ ದರ್ಶನದ ದಾಹವೋ? ದೇವರ ಆಟ ದೇವರಿಗೇ ಗೊತ್ತು.” ಎಂದಿದೆ.
Also Read: ಅಯೋಧ್ಯೆಯಲ್ಲಿ ಜಟಾಯು ಪಕ್ಷಿ ರೀತಿ ದೊಡ್ಡ ಗಾತ್ರದ ಹದ್ದುಗಳು ಕಂಡುಬಂದಿವೆಯೇ?
ನ್ಯೂಸ್‌ಚೆಕರ್ ಇದರ ಸತ್ಯಾಸತ್ಯತೆಯನ್ನು ತಿಳಿಯುವ ಯತ್ನ ಮಾಡಿದ್ದು ಇದು, ಮಧ್ಯಪ್ರದೇಶದ ವೀಡಿಯೋ ಆಗಿದ್ದು ಸುಳ್ಳು ಎಂದು ಕಂಡುಬಂದಿದೆ.
Fact
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಜನವರಿ 4, 2024ರ ಇಟಿವಿ ಮಧ್ಯಪ್ರದೇಶ ವರದಿಯಲ್ಲಿ “ಮಧ್ಯಪ್ರದೇಶದ ಶಾಧೋಲ್ ಅರಣ್ಯದಿಂದ ಆವೃತವಾಗಿರುವ ಜಿಲ್ಲೆಯಾಗಿದ್ದು ಇಲ್ಲಿನ ಅಮ್ಝೋರ್ ಅರಣ್ಯ ವಲಯದ ಬಾನ್ಸುಕ್ಲಿ ಗ್ರಾಮಕ್ಕೆ ಕರಡಿಗಳ ಹಿಂಡು ಲಗ್ಗೆಹಾಕಿದೆ. ಇಲ್ಲಿನ ಗ್ರಾಮಸ್ಥರು ಅರಣ್ಯದ ಬದಿಯಲ್ಲಿ ಮಾತ್ರ ಕರಡಿಗಳನ್ನು ಕಾಣುತ್ತಿದ್ದು, ಏಕಾಏಕಿ ಗ್ರಾಮಕ್ಕೆ ಹಿಂಡು ಬಂದಿದ್ದರಿಂದ ಗಾಬರಿಗೊಂಡಿದ್ದಾರೆ. ಹಲವು ಕರಡಿಗಳು ಬಂದಿದ್ದರಿಂದ ಗ್ರಾಮಸ್ಥರು ಬೊಬ್ಬೆ ಹಾಕಿ ಅವುಗಳನ್ನು ಓಡಿಸಲು ಯತ್ನಿಸಿದ್ದು, ಕೆಲವು ಓಡಿ ಹೋಗಿವೆ” ಎಂದಿದೆ.
ಜನವರಿ 4, 2024ರ ಪಂಚಾಯತಿ ಸಂವಾದ್ ವರದಿಯಲ್ಲಿ “ಶಾಧೋಲ್ ನಲ್ಲಿ ಗ್ರಾಮಕ್ಕೆ ಲಗ್ಗೆಯಿಟ್ಟ ಕರಡಿಗಳ ಹಿಂಡು ಗ್ರಾಮಸ್ಥರಲ್ಲಿ ಆತಂಕ” ಎಂದಿದೆ ಘಟನೆ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ವರದಿ ಮಾಡಿದ್ದು ಈವರೆಗೂ ಅರಣ್ಯ ಇಲಾಖೆ ಗ್ರಾಮಕ್ಕೆ ಬಂದಿಲ್ಲ ಎಂದಿದೆ. ಈ ವರದಿಯಲ್ಲೂ ಗ್ರಾಮಕ್ಕೆ ಬಂದ ಕರಡಿಗಳ ಗುಂಪನ್ನು ಗ್ರಾಮಸ್ಥರು ಬೊಬ್ಬೆ ಹೊಡೆದು ಹೆಚ್ಚಿನವುಗಳನ್ನು ಓಡಿಸಿದ್ದಾಗಿ ಹೇಳಲಾಗಿದೆ.
ಈ ವರದಿಗಳಲ್ಲಿ ವೈರಲ್ ವೀಡಿಯೋದ ಕೀಫ್ರೇಂಗಳನ್ನು ಹೋಲುವ ಫೋಟೋಗಳು ಮತ್ತು ವೈರಲ್ ವೀಡಿಯೋದ ರೀತಿಯೇ ಇರುವ ವೀಡಿಯೋಗಳನ್ನು ನಾವು ಗುರುತಿಸಿದ್ದೇವೆ.
ಜನವರಿ 4, 2024ರ ಝೀ ಮಧ್ಯಪ್ರದೇಶ-ಛತ್ತೀಸ್ ಗಢ ವರದಿಯಲ್ಲೂ ಶಾಧೋಲ್ ಜಿಲ್ಲೆಯ ಗ್ರಾಮವೊಂದಕ್ಕೆ ಕರಡಿಗಳು ಲಗ್ಗೆ ಇಟ್ಟ ಸುದ್ದಿಯನ್ನು ಪ್ರಕಟಿಸಿದೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ ಅಯೋಧ್ಯೆಗೆ ಕರಡಿಗಳ ಹಿಂಡು ಬಂದಿದೆ ಎಂದು ಹೇಳಿರುವುದು ಸುಳ್ಳಾಗಿದೆ. ನಿಜವಾಗಿ ಇದು ಮಧ್ಯಪ್ರದೇಶದ ಶಾಧೋಲ್ ನ ಗ್ರಾಮವೊಂದರ ವೀಡಿಯೋ ಎಂದು ತಿಳಿದುಬಂದಿದೆ.
Also Read: ಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದ ವೀಡಿಯೋ ನಿಜವೇ?
Result: False
Our Sources
Report By Etv Madhyapradesh, Dated: January 4, 2024
Report By panchayatisamvad, Dated: January 4, 2024
Report By Zee Madhyapradesh-Chhattisgarh, Dated: January 4, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.