Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಡ್ರಗ್ ಹಂಚುವವರು ಭಾರತದಲ್ಲಿನ ಶಾಲೆಗಳಲ್ಲಿ ಮಕ್ಕಳಿಗೆ “ಸ್ಟ್ರಾಬೆರಿ ಕ್ವಿಕ್” ಎಂದು ಕರೆಯಲ್ಪಡುವ ಗುಲಾಬಿ ಟೆಡ್ಡಿ ಬೇರ್-ಆಕಾರದ ಕ್ರೈಸ್ಟಲ್ ಮೆಥಾಂಫೆಟಮೈನ್ ಅನ್ನು ಮಾರಾಟ ಮಾಡುತ್ತಿದ್ದಾರೆ
Fact
2007 ರಲ್ಲಿ ಅಮೆರಿಕದಲ್ಲಿ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ವೈರಲ್ ಸಂದೇಶಗಳು ಒಂದು ವಂಚನೆಯಾಗಿದೆ; ವೈರಲ್ ಚಿತ್ರವು ಸಂಗ್ರಹ ಚಿತ್ರ ಎಂದು ಕಂಡುಬಂದಿದೆ
“ಸ್ಟ್ರಾಬೆರಿ ಕ್ವಿಕ್” ಎಂದು ಕರೆಯಲ್ಪಡುವ ಮಾದಕ ವಸ್ತು, ಭಾರತೀಯ ಶಾಲಾ ಮಕ್ಕಳಲ್ಲಿ ಜನಪ್ರಿಯವಾಗಿದೆ ಎಂಬ ಹೇಳಿಕೆಯೊಂದಿಗೆ ಸಣ್ಣ ಟೆಡ್ಡಿ ಬೇರ್ ಆಕಾರದ ಗುಲಾಬಿ ಕ್ಯಾಂಡಿಯಂತಿರುವ ಪ್ಯಾಕೆಟ್ನ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. “ಇದು ‘ಸ್ಟ್ರಾಬೆರಿ ಕ್ವಿಕ್’ ಎಂದು ಕರೆಯಲ್ಪಡುವ ಹೊಸ ಡ್ರಗ್ ಆಗಿದೆ.. ಶಾಲೆಯಲ್ಲಿ ವಿಷಯ ಭಯಾನಕವಾಗಿದೆ. ಸ್ಟ್ರಾಬೆರಿ ಪಾಪ್ ರಾಕ್ಸ್ ನಂತೆ ಕಾಣುವ ಒಂದು ರೀತಿಯ ಕ್ರೈಸ್ಟಲ್ ಮೆತ್ ಆಗಿದೆ. ಇದಕ್ಕೆ ಸ್ಟ್ರಾಬೆರಿಯಂತೆ ವಾಸನೆ ಇದೆ,” ಎಂದು ಚಿತ್ರವನ್ನು ಹಂಚಿಕೊಳ್ಳುವ ಎಕ್ಸ್ ಪೋಸ್ಟ್ ನೋಡಿದ್ದೇವೆ.
ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಆಧರಿಸಿ ಶಾಲೆಗಳು ಜಾಗೃತಿ ಅಭಿಯಾನಗಳನ್ನು ನಡೆಸಿವೆ ಎಂದು ವರದಿಯಾಗಿದೆ. “ಮಕ್ಕಳು ಸ್ಟ್ರಾಬೆರಿ ಮೆತ್ ಅನ್ನು ಸಿಹಿತಿಂಡಿಗಳೆಂದು ತಪ್ಪಾಗಿ ಗ್ರಹಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಸಂದೇಶಗಳು ಎಚ್ಚರಿಸುತ್ತಿರುವುದರಿಂದ, ಶಾಲೆಯು ಪೋಷಕರಿಗೆ ಸಲಹೆಯನ್ನು ಕಳುಹಿಸಿವೆ. ಇದನ್ನು ಸೇವಿಸಿದರೆ, ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಈ ವಸ್ತುವು ಚಾಕೊಲೇಟ್, ಕಡಲೆಕಾಯಿ ಬೆಣ್ಣೆ, ಕೋಲಾ, ಚೆರ್ರಿ, ದ್ರಾಕ್ಷಿ ಮತ್ತು ಕಿತ್ತಳೆ ಸೇರಿದಂತೆ ಬಹು ರುಚಿಗಳಲ್ಲಿ ಲಭ್ಯವಿದೆ ಎಂದು ಹೇಳಲಾಗುತ್ತದೆ,” ಎಂದು ಫೆಬ್ರವರಿ 2, 2025ರ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿದೆ.
Also Read: ಕುಂಭಮೇಳ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಪೊಲೀಸರು ಎಳೆದು ತಂದಿರುವುದು ನಿಜವೇ?
ನ್ಯೂಸ್ ಚೆಕರ್ ಮೊದಲಿಗೆ ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದೆ. ಇದು ಮಾರ್ಚ್ 7, 2017 ದಿ ಸನ್ ವರದಿಯನ್ನು ನಮಗೆ ತೋರಿಸಿತು , “13 ವರ್ಷ ವಯಸ್ಸಿನ ನಾಲ್ಕು ಶಾಲಾ ಬಾಲಕಿಯರು ‘ಟೆಡ್ಡಿ ಬೇರ್ ಎಕ್ಸ್ಟಸಿ ಮಾತ್ರೆಗಳನ್ನು ತೆಗೆದುಕೊಂಡ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ'” ಎಂಬ ಶೀರ್ಷಿಕೆಯೊಂದಿಗೆ ಅದೇ ಚಿತ್ರವನ್ನು ಒಳಗೊಂಡಿತ್ತು.
“ಮ್ಯಾಂಚೆಸ್ಟರ್ [ಇಂಗ್ಲೆಂಡ್] ನಲ್ಲಿ ‘ಟೆಡ್ಡಿ ಬೇರ್ ಎಕ್ಸ್ಟಸಿ ಮಾತ್ರೆಗಳನ್ನು ಸೇವಿಸಿದ ನಂತರ 13 ವರ್ಷದ ನಾಲ್ವರು ಶಾಲಾ ಬಾಲಕಿಯರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈಥೆನ್ಶಾವೆಯ ಸಿವಿಕ್ ಸೆಂಟರ್ ಬಳಿ ಯುವಕರು ಗುಲಾಬಿ ಬಣ್ಣದ ‘ಟೆಡ್ಡಿ ಬೇರ್’ ಮಾತ್ರೆಗಳನ್ನು ನುಂಗಿ, ಭಾನುವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಪ್ರಸ್ತುತ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ,” ಎಂದು ವರದಿಯಲ್ಲಿದೆ, ಜೊತೆಗೆ ಬಳಸಲಾದ ಚಿತ್ರವು ಸಂಗ್ರಹ ಚಿತ್ರವಾಗಿದೆ ಎಂದು ಸೇರಿಸಲಾಗಿದೆ.
ಅನಂತರ ನಾವು ಸ್ನೋಪ್ಸ್ ವರದಿಯನ್ನು ನೋಡಿದ್ದೇವೆ. ಮೇ 2017 ರಲ್ಲಿ, MDMA ಮಾತ್ರೆಗಳ ಚಿತ್ರಗಳನ್ನು ಅವುಗಳ ಮೂಲ ರೂಪದಿಂದ ತೆಗೆದು, ಮಕ್ಕಳನ್ನು ಆಕರ್ಷಿಸಲು ಔಷಧ ವ್ಯಾಪಾರಿಗಳು ಬಳಸುವ ರೀತಿ ಪ್ರಸ್ತುತಪಡಿಸಲಾಗುತ್ತಿದೆ ಎಂದು ಹೇಳುತ್ತದೆ. “ಬ್ಯಾಗ್ನಲ್ಲಿರುವ ಮಾತ್ರೆಗಳ ಚಿತ್ರವು ಮೊದಲು 2016 ರಲ್ಲಿ MDMA-ಸಂಬಂಧಿತ ವೆಬ್ ಸೈಟ್ಗಳಲ್ಲಿ ಕಾಣಿಸಿಕೊಂಡಿತು (“Purple Bears w/ 180mg MDMA” ಶೀರ್ಷಿಕೆಯೊಂದಿಗೆ) ಅದು ಮಕ್ಕಳನ್ನು ಗುರಿಯಾಗಿರಿಸಿಕೊಂಡಿರಲಿಲ್ಲ, ಆದರೆ ವಸ್ತುವಿನ ಬಳಕೆದಾರರನ್ನು ಗುರಿಯಾಗಿರಿಸಿಕೊಂಡಿತ್ತು” ಎಂದು ವರಯಲ್ಲಿದೆ. ಜೊತೆಗೆ ವೈರಲ್ ಚಿತ್ರವನ್ನು ಪೋಸ್ಟ್ ಮಾಡಲಾದ ಮೊದಲ ನಿದರ್ಶನಕ್ಕೆ ನಮ್ಮನ್ನು ಕೊಂಡೊಯ್ದಿದೆ.
ಇನ್ನು ನಾವು “Strawberry Quick Meth India” ಎಂಬ ಕೀವರ್ಡ್ ಗಳ ಮೂಲಕ ಹುಡುಕಾಟ ನಡೆಸಿದ್ದೇವೆ. ಈ ವೇಳೆ ಜನವರಿ 31, 2025 ರ ದಿನಾಂಕದ ಪ್ರಿಂಟ್ ವರದಿ ಕಂಡುಬಂದಿದೆ. ಅರುಣಾಚಲ ಪ್ರದೇಶ ಪೊಲೀಸರು ಶಾಲಾ ಮಕ್ಕಳಲ್ಲಿ ಸ್ಟ್ರಾಬೆರಿ ರುಚಿಯ “ಕ್ಯಾಂಡಿ” ಹರಡುವ ಬಗ್ಗೆ ವದಂತಿಗಳನ್ನು ತಳ್ಳಿಹಾಕಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಿಗೆ ಗಮನ ಕೊಡದಂತೆ ಪೋಷಕರಿಗೆ ಹೇಳಿದ್ದಾರೆ ಎಂದಿದೆ.
“ರಾಜಧಾನಿಯ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ರಾಜ್ಬೀರ್ ಸಿಂಗ್ ಅವರು, “ಸ್ಟ್ರಾಬೆರಿ ಮೆಥ್” ಅಥವಾ “ಸ್ಟ್ರಾಬೆರಿ ಕ್ವಿಕ್” ಎಂಬ ಮಾದಕ ದ್ರವ್ಯವನ್ನು ಶಾಲಾ ಮಕ್ಕಳಿಗೆ ಕ್ಯಾಂಡಿಗಳ ರೂಪದಲ್ಲಿ ವಿತರಿಸಲಾಗುತ್ತಿದೆ ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಸರಿಯಾದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು 2007 ರಲ್ಲಿ ಅಮೆರಿಕದಲ್ಲಿ ಮೊದಲು ಕಾಣಿಸಿಕೊಂಡ ಹಳೆಯ ಇಂಟರ್ನೆಟ್ ವಂಚನೆಯಾಗಿದೆ” ಎಂದು ವರದಿಯಲ್ಲಿ ತಿಳಿಸಲಾಗಿದೆ. ಯುಎಸ್ ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ) ಸೇರಿದಂತೆ ಕಾನೂನು ಜಾರಿ ಸಂಸ್ಥೆಗಳು ಮಕ್ಕಳನ್ನು ಗುರಿಯಾಗಿಸಿದ ಇಂತಹ ಸುವಾಸನೆ ಭರಿತ ಮೆಥಾಂಫೆಟಮೈನ್ ಕೊಡುವ ಅಥವಾ ವ್ಯಾಪಕ ವಿತರಣೆಯನ್ನು ಬೆಂಬಲಿಸುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಅರುಣಾಚಲ ಪ್ರದೇಶ ಪೊಲೀಸರ ಸ್ಪಷ್ಟೀಕರಣದ ಕುರಿತು ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಏಪ್ರಿಲ್ 29, 2007 ರಂದು ಸ್ನೋಪ್ಸ್ ಫ್ಯಾಕ್ಟ್-ಚೆಕ್ ನಲ್ಲೂ ಡ್ರಗ್ ಡೀಲರ್ಗಳು “ಸ್ಟ್ರಾಬೆರಿ ಕ್ವಿಕ್” ಎಂದು ಕರೆಯಲ್ಪಡುವ ಬಣ್ಣ ಮತ್ತು ಸುವಾಸನೆಯ ಸ್ಫಟಿಕ ಮೆಥಾಂಫೆಟಮೈನ್ ಅನ್ನು ಅಮೆರಿಕದಲ್ಲಿ ಮಕ್ಕಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಹೇಳಿಕೆಯನ್ನು ನಿರಾಕರಿಸಿದೆ. ಇದು ಮತ್ತೆ ಶುರುವಾದ ಹಳೆಯ ವಂಚನೆ ಎಂಬುದನ್ನು ಮತ್ತಷ್ಟು ದೃಢಪಡಿಸಿದೆ.
“ಆದಾಗ್ಯೂ, ಸ್ಟ್ರಾಬೆರಿ ಕ್ವಿಕ್ ಬಗ್ಗೆ ಹಿಂದಿನ ಎಚ್ಚರಿಕೆಗಳು ಪೊಲೀಸರು, ಶಾಲೆಗಳು ಮತ್ತು ಸುದ್ದಿ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಲುಪಿದ ನಂತರ, ಫೆಡರಲ್ ಡ್ರಗ್ ಜಾರಿ ಅಧಿಕಾರಿಗಳು ಅಂತಹ ವದಂತಿಗಳನ್ನು ಆಧಾರ ರಹಿತವೆಂದು ವಿವರಿಸಲು ಪ್ರಾರಂಭಿಸಿದರು. ಕ್ಯಾಂಡಿಯನ್ನು ಹೋಲುವ ಮೆಥಾಂಫೆಟಮೈನ್ನ ಬಣ್ಣದ ಆವೃತ್ತಿಗಳು ಕಂಡುಬಂದಿರಬಹುದು, ಡ್ರಗ್ ಡೀಲರ್ಗಳು ಕ್ಯಾಂಡಿಯ ನೋಟ ಮತ್ತು ರುಚಿಯನ್ನು ಅನುಕರಿಸುವ ಉದ್ದೇಶದಿಂದ ಸುವಾಸನೆಯ ಆವೃತ್ತಿಗಳನ್ನು ಉತ್ಪಾದಿಸುವ ಮೂಲಕ ಉದ್ದೇಶಪೂರ್ವಕವಾಗಿ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಕಲ್ಪನೆಯು ತಪ್ಪು ಊಹೆಗಳನ್ನು ಆಧರಿಸಿದೆ ಎಂದು ತೋರುತ್ತದೆ” ಎಂದು ವೈರಲ್ ಹಕ್ಕುಗಳ ಬಗ್ಗೆ ಹೇಳಿದ ಯುಎಸ್ ಡಿಇಎ ವಕ್ತಾರರನ್ನು ಉಲ್ಲೇಖಿಸಿದ ವರದಿಯನ್ನು ನೋಡಿದ್ದೇವೆ, “ನಾವು ನಮ್ಮ ಎಲ್ಲ ಪ್ರಯೋಗಾಲಯಗಳಲ್ಲಿ ಪರಿಶೀಲಿಸಿದ್ದು, ಅದರಲ್ಲಿ ಏನೂ ಇಲ್ಲ. ಇದು ಪ್ರವೃತ್ತಿ ಅಥವಾ ನಿಜವಾದ ಸಮಸ್ಯೆಯಲ್ಲ; ಇದು ಬಹುಶಃ ಒಳ್ಳೆಯ ಉದ್ದೇಶವನ್ನು ಹೊಂದಿರುವ ಯಾರಾದರೂ ಆಗಿರಬಹುದು ಆದರೆ ನೈಜ ವಿಚಾರದಿಂದ ಹೊರಹೋಗಿದೆ ಎಂದು ನಾನು ಭಾವಿಸುತ್ತೇನೆ. ಡಿಇಎಗೆ ಯಾರೂ ಮೆಥ್ಗೆ ಸ್ಟ್ರಾಬೆರಿ ಸುವಾಸನೆಯನ್ನು ಸೇರಿಸುವುದನ್ನು ಕೇಳಿಲ್ಲ ಮತ್ತು ಅದರ ಕಾರಣದಿಂದಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗಿರುವ ಯಾವುದೇ ಮಕ್ಕಳ ಬಗ್ಗೆ ಅವರಿಗೆ ತಿಳಿದಿಲ್ಲ.” ಎಂದಿದೆ.
ಶಾಲಾ ಮಕ್ಕಳಿಗೆ “ಸ್ಟ್ರಾಬೆರಿ ಕ್ವಿಕ್” ಔಷಧವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಎಚ್ಚರಿಕೆ ನೀಡುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು 2007ರಿಂದಲೇ ವೈರಲ್ ಆಗಿದ್ದು,ಮೊದಲ ಬಾರಿಗೆ ಅಮೆರಿಕದಲ್ಲಿ ಕಂಡುಬಂದಿತ್ತು ಎಂದು ಗೊತ್ತಾಗಿದೆ.
Also Read: ಅಮೃತಸರದಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ವ್ಯಕ್ತಿಯನ್ನು ಥಳಿಸಿದ ವೀಡಿಯೋ ಇದಲ್ಲ!
Our Sources
Report By The Sun, Dated: March 7, 2017
Report By The Print, Dated: January 31, 2025
Report By Snopes, Dated: September 28, 2015
Report By Snopes, Dated: April 29, 2007
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Newschecker and THIP Media
March 21, 2025
Ishwarachandra B G
March 21, 2025
Ishwarachandra B G
March 18, 2025