Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಈ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಟಿಪ್ಪು ಟ್ಯಾಬ್ಲೋ ಪ್ರದರ್ಶಸಿದೆ
Fact
ಈ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಟಿಪ್ಪು ಟ್ಯಾಬ್ಲೋ ಪ್ರದರ್ಶಸಿಲ್ಲ, ಈ ಬಾರಿ ಲಕ್ಕುಂಡಿಯ ದೇಗುಲಗಳ ಬಗ್ಗೆ ಟ್ಯಾಬ್ಲೋ ಮಾಡಿದ್ದು 2014ರಲ್ಲಿ ಟಿಪ್ಪು ಟ್ಯಾಬ್ಲೋ ಪ್ರದರ್ಶಿಸಿತ್ತು
ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕರ್ನಾಟಕವು ಟಿಪ್ಪು ಸುಲ್ತಾನ್ ಅವರ ಜೀವನವನ್ನು ಚಿತ್ರಿಸುವ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಿತು ಎಂದು ಹೇಳಿಕೆಯೊಂದು ಹರಿದಾಡಿದೆ. ವಿವಿಧ ಭಾಷೆಗಳಲ್ಲಿ ಈ ಹೇಳಿಕೆಯನ್ನು ನಾವು ಕಂಡುಕೊಂಡಿದ್ದೇವೆ. ಇದನ್ನು ಇಲ್ಲಿ, ಇಲ್ಲಿ ನೋಡಬಹುದು
Also Read ಮಹಾ ಕುಂಭಮೇಳದಲ್ಲಿ ಸನ್ಯಾಸಿಯಂತೆ ವೇಷ ಧರಿಸಿದ ಉಗ್ರನ ಬಂಧನ? ವೈರಲ್ ಫೋಟೋ ಹಿಂದಿನ ಸತ್ಯ ಇಲ್ಲಿದೆ
ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್ ಅವರನ್ನು ಚಿತ್ರಿಸುವ ಕರ್ನಾಟಕದ ಟ್ಯಾಬ್ಲೋ ಪ್ರದರ್ಶಿಸಲಾಗಿದೆ ಎಂಬ ಪೋಸ್ಟ್ ಗಳ ಬಳಿಕ ವಾಕ್ಸಮರ ಶುರುವಾಗಿದೆ.
ಸತ್ಯಶೋಧನೆಗಾಗಿ ನಾವು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಜನವರಿ 27, 2014 ರ ಎನ್ಡಿಟಿವಿ ವರದಿ ಲಭ್ಯವಾಗಿದೆ. ಅದರಲ್ಲಿ ವೈರಲ್ ಆಗಿರುವ ಟಿಪ್ಪು ಟ್ಯಾಬ್ಲೋದ ಚಿತ್ರವಿದೆ. ಟಿಪ್ಪು ಸುಲ್ತಾನ್ ಅವರ ಸ್ತಬ್ಧಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ ಎಂಬ ಸುದ್ದಿ ಇದೆ. ಅನೇಕ ಮುಸ್ಲಿಮೇತರ ಮನುಷ್ಯರನ್ನು ಕೊಂದ ಸರ್ವಾಧಿಕಾರಿ ಮತ್ತು ಆಡಳಿತಗಾರ ಟಿಪ್ಪುವನ್ನು ಗಣರಾಜ್ಯೋತ್ಸವದಂದು ಗೌರವಿಸುವುದನ್ನು ಒಂದು ವರ್ಗ ಆಕ್ಷೇಪಿಸಿದರೆ, ಇತರರು ರಾಜಕೀಯ ಕಾರಣಗಳಿಗಾಗಿ ಮರೆತುಹೋದ ಮಹಾನ್ ವ್ಯಕ್ತಿಯ ನೆನಪಿನ ಬಗ್ಗೆ ಕೆಲವರು ಸಂತೋಷವನ್ನು ಹಂಚಿಕೊಂಡರು ಎಂದಿದೆ.
ಈ ಚಿತ್ರವು ಜನವರಿ 26, 2014 ರ ಇಂಡಿಯಾ ಟುಡೇ ವರದಿಯಲ್ಲಿಯೂ ಇದೆ. “ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮೈಸೂರು ಹುಲಿ ಎಂದು ಕರೆಯಲ್ಪಡುವ ಮೈಸೂರು ಸಾಮ್ರಾಜ್ಯದ ಆಡಳಿತಗಾರ ಟಿಪ್ಪು ಸುಲ್ತಾನ್ ಅವರನ್ನು ಚಿತ್ರಿಸುವ ಕರ್ನಾಟಕ ಟ್ಯಾಬ್ಲೋ ಪ್ರದರ್ಶಿಸಲಾಗಿದ್ದ, ಅನಂತರ ಟ್ವಿಟರ್ ನಲ್ಲಿ ವಾಕ್ಸಮರ ಪ್ರಾರಂಭವಾಯಿತು. ಬ್ರಿಟಿಷರ ವಿರುದ್ಧ ಹೋರಾಡಿದ ಕೆಲವೇ ಭಾರತೀಯ ಆಡಳಿತಗಾರರಲ್ಲಿ ಮೈಸೂರು ರಾಜ ಒಬ್ಬರು ಎಂದು ಅವರ ಅನುಯಾಯಿಗಳು ಹೇಳಿದರೆ, “ಸಾವಿರಾರು ಜನರನ್ನು ಕೊಂದ ಟಿಪ್ಪು ಮಾತ್ರ ಕರ್ನಾಟಕದಲ್ಲಿ ಇದ್ದಾನೆಯೇ ಎಂದು ಟ್ವಿಟರ್ ಬಳಕೆದಾರರ ಮತ್ತೊಂದು ವಿಭಾಗವು ತಮ್ಮ ಭಾವನೆಗಳನ್ನು ತೆರೆದಿಟ್ಟಿದೆ” ಎಂದು ವರದಿ ತಿಳಿಸಿದೆ.
ಆ ನಂತರ ಈ ವರ್ಷ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೋ ಏನಿತ್ತು ಎಂಬುದನ್ನು ನಾವು ನೋಡಿದ್ದೇವೆ. ಸ್ತಬ್ಧಚಿತ್ರದ ಮುಂಭಾಗದಲ್ಲಿ ಮಹಾವೀರನಿಗೆ ಸಮರ್ಪಿತವಾದ ಲಕ್ಕುಂಡಿಯ ಅತ್ಯಂತ ಹಳೆಯ ಜೈನ ದೇವಾಲಯವಾದ ಬ್ರಹ್ಮ ಜಿನಾಲಯ ದೇವಾಲಯದ ಬ್ರಹ್ಮ ಪ್ರತಿಮೆ ಇದ್ದರೆ, ಮುಖ್ಯ ಭಾಗದಲ್ಲಿ ಶಿವನಿಗೆ ಸಮರ್ಪಿತವಾದ ಅಲಂಕೃತ ಕಾಶಿ ವಿಶ್ವೇಶ್ವರ ದೇವಾಲಯ ಮತ್ತು ನನ್ನೇಶ್ವರ ದೇವಾಲಯವನ್ನು ಪ್ರದರ್ಶಿಸಲಾಗಿದೆ ಎಂದು ಜನವರಿ 26, 2025 ರ ದಿ ಹಿಂದೂ ವರದಿ ಮಾಡಿದೆ.
ಜನವರಿ 26, 2025 ರ ಒನ್ಇಂಡಿಯಾ ವರದಿಯ ಪ್ರಕಾರ, “ಕರ್ನಾಟಕದ ಗಣರಾಜ್ಯೋತ್ಸವದ ಟ್ಯಾಬ್ಲೋ ರಚನೆ ಈ ಕೆಳಗಿನಂತಿದೆ: ಬ್ರಹ್ಮ ಜಿನಾಲಯ ದೇವಾಲಯ: ಸ್ತಬ್ಧಚಿತ್ರದ ಮುಂಭಾಗದಲ್ಲಿ ಮಹಾವೀರನಿಗೆ ಸಮರ್ಪಿತವಾದ ಲಕ್ಕುಂಡಿಯ ಅತ್ಯಂತ ಹಳೆಯ ಜೈನ ದೇವಾಲಯವಾದ ಬ್ರಹ್ಮ ಜಿನಾಲಯ ದೇವಾಲಯದ ಬ್ರಹ್ಮ ದೇವರ ಪ್ರತಿಮೆ ಇದೆ. ತೆರೆದ ಕಂಬಗಳೊಂದಿಗೆ ಮಂಟಪ: ಪ್ರತಿಮೆಯ ಕೆಳಗೆ ಬ್ರಹ್ಮ ಜಿನಾಲಯ ದೇವಾಲಯದ ತೆರೆದ ಕಂಬಗಳನ್ನು ಹೊಂದಿರುವ ಮಂಟಪದ ಚಿತ್ರಣವು ಆ ಕಾಲದ ಸಂಕೀರ್ಣ ಕರಕುಶಲತೆಯನ್ನು ಪ್ರದರ್ಶಿಸುತ್ತದೆ. ಮಹಾನ್ ಶಿವ ದೇವಾಲಯಗಳು: ಸ್ತಬ್ಧಚಿತ್ರದ ಮುಖ್ಯ ಭಾಗವನ್ನು ಕಾಶಿ ವಿಶ್ವೇಶ್ವರ ಮತ್ತು ನನ್ನೇಶ್ವರ ದೇವಾಲಯದ್ದಾಗಿದೆ ಎಂದಿದೆ.
ಟಿಪ್ಪು ಸುಲ್ತಾನ್ ಚಿತ್ರಿಸುವ ಕರ್ನಾಟಕದ 2014 ರ ಟ್ಯಾಬ್ಲೋವನ್ನು 2025ರ ಗಣರಾಜ್ಯೋತ್ಸವದ್ದು ಎಂದು ಪ್ರಸಾರ ಮಾಡಲಾಗುತ್ತಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ.
Our Sources
Report By NDTV Dated: January 27,2014
Report By India Today Dated: January 26,2014
Report By Hindu on Dated: 26,2025
Report By One India on Dated: 26,2025
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Sabloo Thomas
October 10, 2024
Ishwarachandra B G
August 24, 2024
Ishwarachandra B G
June 26, 2024