Authors
Claim
ಸೋಲುವ ಹತಾಶೆಯಿಂದ ಐಎನ್‌ಡಿ ಒಕ್ಕೂಟದವರು ಇವಿಎಂ ಒಡೆದು ಹಾಕಲೂ ತಯಾರು
Fact
ಇವಿಎಂ ಕಂಟ್ರೋಲ್ ಯುನಿಟ್ ಅನ್ನು ವ್ಯಕ್ತಿ ಒಡೆದು ಹಾಕಿದ ವೈರಲ್ ವೀಡಿಯೋ ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯದ್ದಾಗಿದೆ. ಮೈಸೂರಿನಲ್ಲಿ ಈ ಘಟನೆ ನಡೆದಿತ್ತು
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಮತದಾನದ ಇದೇ ಸಂದರ್ಭದಲ್ಲಿ ಇವಿಎಂ ಅನ್ನು ಒಡೆದು ಹಾಕಲೂ ವಿಪಕ್ಷಗಳು ತಯಾರಾಗಿವೆ ಮತ್ತು ಒಡೆದು ಹಾಕಲಾಗಿದೆ ಎಂಬಂತೆಯೂ ಕ್ಲೇಮುಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಮತಗಟ್ಟೆ ಅಧಿಕಾರಿ ಎಚ್ಚರಿಕೆಯಿಂದಿರಬೇಕು. ಸೋಲುವ ಭೀತಿಯಲ್ಲಿ ಈ ಐಎನ್‌ಡಿಐ ಒಕ್ಕೂಟದ ಜನರು ಏನು ಮಾಡುವುದಕ್ಕೂ ತಯಾರು ಎಂದು ಇವಿಎಂ ಯಂತ್ರವನ್ನು ಒಡೆದು ಹಾಕುತ್ತಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅದೇ ರೀತಿ ಕಾಂಗ್ರೆಸ್ ಗೆ ಹಾಕಿದ ಓಟು ಬಿಜೆಪಿಗೆ ಬಿದ್ದಿದೆ ಎಂದು ವ್ಯಕ್ತಿಯೊಬ್ಬ ಮತಯಂತ್ರವನ್ನು ಒಗೆದಿದ್ದಾನೆ. ಇದೇ ಕಾರಣಕ್ಕೆ ಇವಿಎಂ ಬದಲು ಮತಪತ್ರ ವ್ಯವಸ್ಥೆ ಬರಬೇಕು ಮತಪತ್ರದ ಬಾಕ್ಸ್ ನೆಲಕ್ಕೆ ಒಗೆದರೂ ಅದಕ್ಕೆ ಏನೂ ಆಗುವುದಿಲ್ಲ ಎಂಬ ಹೇಳಿಕೆಯೊಂದಿಗೂ ಒಂದು ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಈ ಕುರಿತ ಕ್ಲೇಮುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು
ಈ ವೈರಲ್ ವೀಡಿಯೋ ಬಗ್ಗೆ ನಾವು ಸತ್ಯಶೋಧನೆ ನಡೆಸಲು ಮುಂದಾಗಿದ್ದು, ಇದೊಂದು ಹಳೆಯ ವೀಡಿಯೋವಾಗಿದ್ದು, ಎರಡನೇ ಮತದಾನ ಹಂತದಲ್ಲೇ ಇದನ್ನು ದಿಕ್ಕುತಪ್ಪಿಸಲು ಮತ್ತೆ ಬಳಸಲಾಗುತ್ತಿದೆ ಎಂಬುದನ್ನು ಕಂಡುಕೊಂಡಿದ್ದೇವೆ.
Also Read: ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆಯೇ?
Fact Check/Verification
ಸತ್ಯಶೋಧನೆಗಾಗಿ ನಾವು “Men throw evm” ಎಂದು ಕೀವರ್ಡ್ ಸರ್ಚ್ ಕೊಟ್ಟಿದ್ದು, ಫಲಿತಾಂಶಗಳು ಲಭ್ಯವಾಗಿವೆ.
ಮೇ 13, 2023ರಂದು ಸಾಕ್ಷಿ ಟಿವಿ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ವೀಡಿಯೋದಲ್ಲಿ ಕರ್ನಾಟಕದ ಚುನಾವಣೆ ವೇಳೆ ವ್ಯಕ್ತಿಯೊಬ್ಬ ಇವಿಎಂ ಒಡೆದು ಹಾಕಿದ್ದಾನೆ ಎಂದಿದೆ.
12 ಮೇ 2023ರ ವಾರ್ತಾ ಭಾರತಿ ವರದಿ ಪ್ರಕಾರ, ಮತದಾನಕ್ಕೆ ಬಂದ ವ್ಯಕ್ತಿಯೊಬ್ಬ ಇವಿಎಂ ಕಂಟ್ರೋಲ್ ಯೂನಿಟ್ ಅನ್ನು ಒಡೆದು ಹಾಕಿದ ಪರಿಣಾಮ ಚಾಮುಂಡೇಶ್ವರಿ ಕ್ಷೇತ್ರದ ಮತಗಟ್ಟೆಯಲ್ಲಿ ಅರ್ಧಗಂಟೆ ಕಲಾ ಮತದಾನ ಪ್ರಕ್ರಿಯೆ ಸ್ಥಗಿತಗೊಂಡ ಘಟನೆ ವರದಿಯಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೈಸೂರು ನಗರಕ್ಕೆ ಹೊಂದಿಕೊಂಡ ಮತಗಟ್ಟೆ 40 ರಲ್ಲಿ ಶಿವಮೂರ್ತಿ ಎಂಬಾತ ಬುಧವಾರ ಮತದಾನ ಮಾಡಲು ಬಂದು ಮತದಾನದ ಯೂನಿಟ್ ಅನ್ನು ಕಿತ್ತು ನೆಲಕ್ಕೆ ಬಿಸಾಕಿ ಹಾನಿಗೊಳಿಸಿದ್ದಾನೆ. ಕೂಡಲೇ ಮತಗಟ್ಟೆ ಅಧಿಕಾರಿಗಳು ಕಂಟ್ರೋಲ್ ಯೂನಿಟ್ ಅನ್ನು ಬದಲಾಯಿಸಿದ್ದಾರೆ. ಇದರಿಂದ ಅರ್ಧಗಂಟೆ ಮತದಾನದಲ್ಲಿ ವಿಳಂಬವಾಗಿತ್ತು ಎನ್ನಲಾಗಿದೆ ಎಂದಿದೆ.
Also Read: ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಫೋಟೋ ಹಾಕಿ ಮತದಾರರಿಗೆ ಹಂಚಲಾಗುತ್ತಿದೆಯೇ?
ಮೇ 12, 2023ರ ನ್ಯೂಸ್ 18 ವರದಿಯ ಪ್ರಕಾರ, ಮೈಸೂರು: ಮತ ಹಾಕಲು ಬಂದು ಮತಯಂತ್ರ ಒಡೆದು ಹಾಕಿ ದಾಂಧಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಮೈಸೂರಿನ ಹೂಟಗನಹಳ್ಳಿಯ ಮತಗಟ್ಟೆಯಲ್ಲಿ ನಡೆದಿದೆ. ಸರತಿ ಸಾಲಿನಲ್ಲಿ ಬಂದು ಮತ ಹಾಕಲು ಬಂದಿದ್ದ ವ್ಯಕ್ತಿ, ಬೆರಳಿಗೆ ಶಾಯಿ ಹಾಕಿಸಿಕೊಂಡು ಮತಗಟ್ಟೆಗೆ ತೆರಳುವಾಗ ಮತಯಂತ್ರ ಒಡೆದು ಹಾಕಿದ್ದಾನೆ. ಘಟನೆ ನಡೆಸಿದ ಆತ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ವಿಜಯನಗರ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದಿದೆ.
ಮೇ 12, 2023ರ ವಿಜಯವಾಣಿ ಯೂಟ್ಯೂಬ್ ಚಾನೆಲ್ ನಲ್ಲಿ “ಮತ ಹಾಕಲು ಹೋಗಿ EVM ಮಷಿನ್ ಒಡೆದು ಹಾಕಿದ ವ್ಯಕ್ತಿ; ಹೆಂಡತಿಗೆ ಶಾಕ್” ಎಂದಿದ್ದು ವ್ಯಕ್ತಿ ಇವಿಎಂ ಕಂಟ್ರೋಲ್ ಯುನಿಟ್ ಒಡೆದು ಹಾಕುವ ದೃಶ್ಯವಿದೆ.
ಮೇಲಿನ ಎಲ್ಲ ವರದಿಗಳಲ್ಲಿ, ಮೈಸೂರಿನಲ್ಲಿ ಘಟನೆ ನಡೆದಿರುವುದು ಮತ್ತು ಅದರಲ್ಲಿನ ದೃಶ್ಯ/ಫೋಟೋಗಳು ವೈರಲ್ ಕ್ಲೇಮಿಗೆ ತಾಳೆಯಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ.
Conclusion
ಈ ಪುರಾವೆಗಳ ಪ್ರಕಾರ, ಇವಿಎಂ ಕಂಟ್ರೋಲ್ ಯುನಿಟ್ ಅನ್ನು ವ್ಯಕ್ತಿ ಒಡೆದು ಹಾಕಿದ ವೈರಲ್ ವೀಡಿಯೋ ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯದ್ದಾಗಿದೆ. ಇದು ಈಗಿನ ಲೋಕಸಭೆ ಚುನಾವಣೆ ಸಮಯದ್ದಲ್ಲ ಎಂದು ತಿಳಿದುಬಂದಿದೆ.
Result: Missing Context
Our Sources
YouTube Video By Sakshi TV, Dated: May 13, 2023
Report By Varthabharati, Dated: May 12, 2023
Report By News 18 Kannada, Dated: May 12, 2023
YouTube Video By Vijayavani, Dated: May 12, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.