Fact Check: ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ಹಳೆಯ ವೀಡಿಯೋ ವೈರಲ್

ಗರ್ಬಾ, ಗುಜರಾತ್, ಕಲ್ಲುತೂರಾಟ, ಮುಸ್ಲಿಂ, ಜಿಹಾದಿ,ಪೊಲೀಸ್‌, ಲಾಠಿ ಏಟು

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಗುಜರಾತ್ ನಲ್ಲಿ ನಡೆಯುತ್ತಿದ್ದ ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಜಿಹಾದಿಗಳಿಗೆ ಪಾಠ ಕಲಿಸಿದ ಪೊಲೀಸರು

Fact
ರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ವೀಡಿಯೋ ಹಳೆಯದಾಗಿದೆ. ಇದು 2022ರಲ್ಲಿ ನಡೆದ ಘಟನೆಯಾಗಿದ್ದು, ಇತ್ತೀಚಿನದ್ದು ಎಂಬಂತೆ ಹಂಚಿಕೊಳ್ಳಲಾಗುತ್ತಿದೆ

ಗುಜರಾತ್ ನಲ್ಲಿ ಗರ್ಬಾ ನೃತ್ಯ ಮಾಡುತ್ತಿರುದ್ದವರ ಮೇಲೆ ಕಲ್ಲು ತೂರಿದ ಜಿಹಾದಿಗಳಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ದೇಶಾದ್ಯಂತ ನವರಾತ್ರಿ ಹಬ್ಬ ನಡೆದಿದ್ದು ಇದರ ಬೆನ್ನಲ್ಲೇ ಮುಸ್ಲಿಮರು ಗುಜರಾತ್ ನಲ್ಲಿ ಗರ್ಬಾ ನೃತ್ಯ ನಡೆಸುತ್ತಿದ್ದವರ ಮೇಲೆ ಕಲ್ಲು ತೂರಿದ್ದಾರೆ ಎಂಬಂತೆ ಪೋಸ್ಟ್ ಗಳನ್ನು ಮಾಡಲಾಗುತ್ತಿದೆ. ಈ ಘಟನೆಯ ನಂತರ ಪೊಲೀಸರು ಆರೋಪಿಗಳನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎನ್ನಲಾಗಿದೆ. 1 ನಿಮಿಷ 16 ಸೆಕೆಂಡುಗಳ ವೀಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ.

Also Read: ಕರ್ನಾಟಕದ ಶಾಪಿಂಗ್ ಮಾಲ್ ‘ಡಿಸ್ಕೌಂಟ್ ಜಿಹಾದ್’ ಘೋಷಿಸಿದೆಯೇ? ವೈರಲ್ ಹೇಳಿಕೆ ಹಿಂದಿನ ಸತ್ಯ ಇಲ್ಲಿದೆ

Fact Check: ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ಹಳೆಯ ವೀಡಿಯೋ ವೈರಲ್

ವೀಡಿಯೋದಲ್ಲಿ ಕಂಡುಬರುವಂತೆ ಕೆಲ ಯುವಕರನ್ನು ಪೊಲೀಸರು ಜನರ ಸಮ್ಮುಖದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಇದರಲ್ಲಿರುವ ಹೇಳಿಕೆಯಲ್ಲಿ “ಗುಜರಾತ್ ನಲ್ಲಿ ಗರ್ಭ ನೃತ್ಯ ಯಾತ್ರೆ ನಡೆಯುವಾಗ ಕಲ್ಲು ಎಸೆದ ಜಿಹಾದಿಗಳಿಗೆ ಅರಬ್ ಮಾದರಿಯಲ್ಲಿ ಸಾರ್ವಜನಿಕರ ಮದ್ಯೆ ಲಾಠಿ ರುಚಿ ತೋರಿಸಿದ ಗುಜರಾತಿ ಪೊಲೀಸ್ ರು” ಎಂದಿದೆ.

ಇದೇ ವೈರಲ್ ವೀಡಿಯೋ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ವಾಟ್ಸಾಪ್‌ ಟಿಪ್ ಲೈನ್ (+91-9999499044) ಗೆ ಬಳಕೆದಾರರೊಬ್ಬರು ಮನವಿ ಮಾಡಿದ್ದು, ಅದನ್ನು ಸತ್ಯಶೋಧನೆಗ ಅಂಗೀಕರಿಸಲಾಗಿದೆ.

Fact Check: ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ಹಳೆಯ ವೀಡಿಯೋ ವೈರಲ್

ನ್ಯೂಸ್‌ಚೆಕರ್ ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ಇದು 2022ರ ವೀಡಿಯೋ ಆಗಿದ್ದು ಇತ್ತೀಚೆಗೆ ಎಂಬಂತೆ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಡಿಸೆಂಬರ್ 5 2022 ರಂದು ಎನ್‌ಡಿಟಿವಿ ಪ್ರಕಟಿಸಿದ ವರದಿಯಲ್ಲಿ ವೈರಲ್‌ ವೀಡಿಯೋ ಹೋಲುವ ದೃಶ್ಯಗಳನ್ನು ಗಮನಿಸಿದ್ದೇವೆ. ಅದರ ವರದಿಯಲ್ಲಿ, ಗುಜರಾತ್‌ನ ಹಳ್ಳಿಯೊಂದರಲ್ಲಿ ಮುಸ್ಲಿಮರು ಮತದಾನವನ್ನು ಬಹಿಷ್ಕರಿಸಿದ್ದಾರೆ, ಅಲ್ಲಿ ಗಾರ್ಬಾ ಸಮಯದಲ್ಲಿ ಕಲ್ಲು ತೂರಾಟದ ಆರೋಪದ ಮೇಲೆ ಪೊಲೀಸರು ಕೆಲವರನ್ನು ಸಾರ್ವಜನಿಕವಾಗಿ ಥಳಿಸಿದ್ದರು ಎಂದಿದೆ. ಈ ಬಗ್ಗೆ ಹೆಚ್ಚಿನ ಹುಡುಕಾಟ ನಡೆಸಿದಾಗ ಘಟನೆಯು 2022ರಲ್ಲಿ ನಡೆದಿದ್ದಾಗಿ ಹಲವು ವರದಿಗಳು ಕಂಡುಬಂದಿವೆ. ಈ ಪ್ರಕರಣವು ಗುಜರಾತ್‌ನ ಉಂಧೇಲಾ ಗ್ರಾಮದಲ್ಲಿ ನಡೆದಿದ್ದು ಗರ್ಬಾ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಕೆಲವು ಮುಸ್ಲಿಂ ಯುವಕರನ್ನು ಕಂಬಕ್ಕೆ ಕಟ್ಟಿ ಪೊಲೀಸರು ಥಳಿಸಿದ್ದಾರೆ ಎಂದು ಗೊತ್ತಾಗಿದೆ.

Fact Check: ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ಹಳೆಯ ವೀಡಿಯೋ ವೈರಲ್

ಅಕ್ಟೋಬರ್ 4, 2022 ರಂದು ಯೂಟ್ಯೂಬ್‌ ನಲ್ಲಿ ಇಂಡಿಯಾ ಟುಡೇ ಪ್ರಕಟಿಸಿದ ವರದಿಯಲ್ಲಿ ಗುಜರಾತ್‌ನ ಖೇಡಾದಲ್ಲಿ ಗರ್ಬಾ ಕಾರ್ಯಕ್ರಮದ ಸಂದರ್ಭದಲ್ಲಿ ಕೋಮು ಘರ್ಷಣೆ ಸಂಭವಿಸಿದೆ ಎಂದು ಹೇಳಿದೆ. ಅನಂತರ ಗುಜರಾತ್ ಪೊಲೀಸರು ಆರೋಪಿಗಳನ್ನು ಥಳಿಸಿದ್ದಾರೆ. ಖೇಡಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗರ್ಹಿಯಾ ಅವರು ಹೇಳುವಂತೆ “ಆರಿಫ್ ಮತ್ತು ಜಹೀರ್ ಎಂಬ ಇಬ್ಬರು ವ್ಯಕ್ತಿಗಳ ನೇತೃತ್ವದ ಜನರ ಗುಂಪು ನವರಾತ್ರಿ ಗರ್ಬಾ ಸ್ಥಳಕ್ಕೆ ಪ್ರವೇಶಿಸಿ ಗಲಾಟೆ ಮಾಡಲು ಪ್ರಾರಂಭಿಸಿತು. ಅವರು ಕಲ್ಲು ತೂರಾಟವನ್ನೂ ಮಾಡಿದರು. ಎಂದಿದೆ.

ವರದಿಯ ಪ್ರಕಾರ, ಅಕ್ಟೋಬರ್ 3, 2022 ರ ರಾತ್ರಿ, ಖೇಡಾದ ಉಂಧೇಲಾ ಗ್ರಾಮದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಗರ್ಬಾ ಸಮಾರಂಭದಲ್ಲಿ ಕಲ್ಲು ತೂರಾಟದ ಘಟನೆ ಬೆಳಕಿಗೆ ಬಂದಿದೆ. ಅದರ ನಂತರ ಪೊಲೀಸರು ಕಾರ್ಯಕ್ರಮದ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಒಂಬತ್ತು ಜನರನ್ನು ಬಂಧಿಸಿದರು ಮತ್ತು ಮಂಗಳವಾರ, ಅಕ್ಟೋಬರ್ 4, 2024 ರಂದು ಗ್ರಾಮಸ್ಥರ ಮುಂದೆ ಹಾಜರುಪಡಿಸಿದರು. ಅಷ್ಟರಲ್ಲಿ ಪೊಲೀಸರು ಒಂಬತ್ತು ಮಂದಿಯನ್ನು ಒಬ್ಬೊಬ್ಬರಾಗಿ ಕರೆದು ಕಂಬಕ್ಕೆ ಕಟ್ಟಿ ಎಲ್ಲರ ಮುಂದೆ ಥಳಿಸಿದ್ದಾರೆ. ಬಳಿಕ ಅಲ್ಲಿದ್ದ ಗ್ರಾಮಸ್ಥರು ‘ಗುಜರಾತ್ ಪೊಲೀಸ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದರು ಎಂದಿದೆ.

Fact Check: ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ಹಳೆಯ ವೀಡಿಯೋ ವೈರಲ್
Fact Check: ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ಹಳೆಯ ವೀಡಿಯೋ ವೈರಲ್

ಅಕ್ಟೋಬರ್ 2022 ರಲ್ಲಿ ಎನ್‌ಡಿಟಿವಿ,  ದಿ ಹಿಂದೂ  ಮತ್ತು  ವೈರ್ ಪ್ರಕಟಿಸಿದ ಘಟನೆಯ ಕುರಿತ ವರದಿಗಳು  ವೈರಲ್ ಕ್ಲಿಪ್ ಎರಡು ವರ್ಷಗಳಷ್ಟು ಹಳೆಯದು ಎಂಬುದನ್ನು ದೃಢಪಡಿಸಿವೆ. ಅಕ್ಟೋಬರ್ 10, 2022 ರಂದು ದಿ ವೈರ್ ಪ್ರಕಟಿಸಿದ ವರದಿಯ ಪ್ರಕಾರ, ಗುಜರಾತ್ ಪೊಲೀಸ್ ಉನ್ನತ ಅಧಿಕಾರಿಗಳು ಸಾರ್ವಜನಿಕವಾಗಿ ಆರೋಪಿಗಳನ್ನು ಥಳಿಸಿದ ಪೊಲೀಸರ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.

Fact Check: ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ಹಳೆಯ ವೀಡಿಯೋ ವೈರಲ್

Conclusion

ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ಗುಜರಾತ್‌ನಲ್ಲಿ ನಡೆದ ಗರ್ಬಾ ಕಾರ್ಯಕ್ರಮದಲ್ಲಿ ಕಲ್ಲು ತೂರಾಟದ ಘಟನೆಯ ನಂತರ ಪೊಲೀಸರು ಆರೋಪಿಗಳನ್ನು ಥಳಿಸುವ ವೈರಲ್ ವೀಡಿಯೋ ಎರಡು ವರ್ಷಗಳಷ್ಟು ಹಿಂದಿನದ್ದು. ಇದು ಇತ್ತೀಚಿನ ಘಟನೆ ಎಂಬಂತೆ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ.

Also Read: ಮಗುವಿನ ಕೈಯಿಂದ ಮೊಬೈಲ್‌ ತೆಗೆದಿದ್ದಕ್ಕಾಗಿ ಕ್ರಿಕೆಟ್ ಬ್ಯಾಟ್‌ನಿಂದ ತಾಯಿಗೆ ಹೊಡೆದ ದೃಶ್ಯವಿರುವ ವೀಡಿಯೋ ನಿಜವೇ?

Result: Missing Context

Our Sources

YouTube Video By India Today, Dated: October 4, 2022

Report By NDTV, Dated: October 4, 2022

Report By The Wire Dated: October 10, 2022

(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಗುಜರಾತಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.