Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಫ್ರಾನ್ಸ್ ನಿಂದ ಭಾರತಕ್ಕೆ ಕೇವಲ 6 ರಫೇಲ್ ಜೆಟ್ ಗಳು ಮಾತ್ರ ಬಂದಿವೆ ಎನ್ನುವ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ.
ಟ್ವಿಟರ್‌ನಲ್ಲಿ ಪ್ರತಿಕ್ರಿಯೆಯೊಂದಕ್ಕೆ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರರಾಗಿರುವ ಲಾವಣ್ಯ ಬಲ್ಲಾಳ್ ಜೈನ್ ಅವರು ಈ ಟ್ವೀಟ್ ಮಾಡಿದ್ದಾರೆ. “ ಅಮಿತ್ ಅವರ ಎಲ್ಲ ಅಳು ಮತ್ತು ಕೂಗುಗಳ ನಡುವೆ, ನಾವು ಇದುವರೆಗೆ 6 ರಫೇಲ್ ಜೆಟ್ ಗಳನ್ನು ಮಾತ್ರ ಪಡೆದಿದ್ದೇವೆ. ಉಳಿದ ಯುದ್ಧ ವಿಮಾನಗಳು ಏನಾದವು?” ಎಂದು ಪೋಸ್ಟ್ ಮಾಡಲಾಗಿದೆ. ಆ ಟ್ವೀಟ್ ಇಲ್ಲಿದೆ.

ಈ ಟ್ವೀಟ್ ನ್ನು ಸತ್ಯ ಶೋಧನೆಗೆ ಒಳಪಡಿಸಿದ್ದು, ಭಾರತಕ್ಕೆ ಫ್ರಾನ್ಸ್‌ನಿಂದ ಈವರೆಗೆ ಒಪ್ಪಂದ ಪ್ರಕಾರ 36 ರಫೇಲ್ ಜೆಟ್ ಗಳು ಬಂದಿರುವುದಾಗಿ ತಿಳಿದುಬಂದಿದೆ.
ಫ್ರಾನ್ಸ್ ಭಾರತಕ್ಕೆ ಕೇವಲ 6 ರಫೇಲ್ ಜೆಟ್‌ಗಳನ್ನು ಪೂರೈಸಿದೆಯೇ ಎಂಬ ಬಗ್ಗೆ ಸತ್ಯಶೋಧನೆಗೆ ಮುಂದಾಗಿದ್ದು, ಈ ವೇಳೆ ಬೇರೆಯದೇ ಆದ ಫಲಿತಾಂಶಗಳು ಕಂಡುಬಂದಿವೆ.
ಇದಕ್ಕಾಗಿ ಗೂಗಲ್ ಕೀವರ್ಡ್ ಸರ್ಚ್ ನಡೆಸಲಾಗಿದ್ದು, ಈ ವೇಳೆ ಹಲವು ಮಾಹಿತಿಗಳು ಲಭ್ಯವಾಗಿವೆ. ಡಿಸೆಂಬರ್ 15. 2022ರಂದು ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಫ್ರಾನ್ಸ್‌ನ ಡಸ್ಸಾಲ್ಟ್ ಏವಿಯೇಷನ್ ಅಂದರೆ, ರಫೇಲ್ ವಿಮಾನ ತಯಾರಿಸುವ ಕಂಪೆನಿ ಭಾರತಕ್ಕೆ 36 ಯುದ್ಧವಿಮಾನಗಳನ್ನು ಪೂರೈಸಿದೆ. ಈ ವರದಿಯಲ್ಲಿ ಒಪ್ಪಂದ ಪ್ರಕಾರ ಭಾರತ 36 ವಿಮಾನಗಳನ್ನು ಪಡೆದುಕೊಂಡಿದೆ ಎಂಬ ಬಗ್ಗೆ ಭಾರತೀಯ ವಾಯುಪಡೆ ಮಾಡಿದ ಟ್ವೀಟ್ ಅನ್ನು ಉಲ್ಲೇಖಿಸಲಾಗಿದೆ. ಜೊತೆಗೆ 2020 ಜುಲೈ ವೇಳೆಗೆ ಮೊದಲ ಐದು ವಿಮಾನಗಳು ಅಂಬಾಲಾ ವಾಯುನೆಲೆಗೆ ಆಗಮಿಸಿದ್ದು, ಆ ನಂತರ ಹಂತ ಹಂತವಾಗಿ ವಿಮಾನಗಳನ್ನು ಪೂರೈಸಲಾಗಿದೆ. 9 ಬಿಲಿಯನ್ ಡಾಲರ್ ವೆಚ್ಚದ ಈ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಸಹಿ ಹಾಕಿದ್ದವು.


ಭಾರತಕ್ಕೆ ಒಪ್ಪಂದ ಪ್ರಕಾರ 36ನೇ ರಫೇಲ್ ಯುದ್ಧ ವಿಮಾನ ಬಂದ ಬಗ್ಗೆ ಇಂಡಿಯಾ ಟುಡೇ ಕೂಡ ವರದಿ ಮಾಡಿದೆ. ಇಲ್ಲೂ ಭಾರತೀಯ ವಾಯುಪಡೆ ಮಾಡಿದ ಟ್ವೀಟ್ ಅನ್ನು ಉಲ್ಲೇಖಿಸಲಾಗಿದೆ. ಜುಲೈ 29, 2020ರಂದು ಮೊದಲ ರಫೇಲ್ ಜೆಟ್ ಬ್ಯಾಚ್ ಬಂದಿದ್ದು, ಆ ನಂತರ ಹಂತ ಹಂತವಾಗಿ ಜೆಟ್‌ಗಳನ್ನು ಪೂರೈಸಲಾಗಿದೆ. ಫ್ರಾನ್ಸ್‌ನಿಂದ ಪೂರೈಸಲಾದ ಜೆಟ್‌ಗಳನ್ನು ಹರಿಯಾಣಾ, ಪಶ್ಚಿಮ ಬಂಗಾಳದ ಹಸಿಮರಾಗಳಲ್ಲಿ ನಿಯೋಜಿಸಲಾಗಿದೆ ಎಂದು ವರದಿ ಹೇಳಿದೆ.
Also Read: ಟರ್ಕಿ ಭೂಕಂಪಕ್ಕೂ ಮುನ್ನ ಪಕ್ಷಿಗಳು ಹಾರಿ ಹೋದ್ದನ್ನು ತೋರಿಸಿದ ಈ ವೈರಲ್ ವೀಡಿಯೋ ಸತ್ಯವೇ?
ಡಿಸೆಂಬರ್ 15, 2022ರಂದು ಈ ಬಗ್ಗೆ ಭಾರತೀಯ ವಾಯುಪಡೆ ಟ್ವೀಟ್ ಮಾಡಿದ್ದು, “ಕೊನೆಯ, 36ನೇ ರಫೇಲ್ ಯುಎಇ ವಾಯುಪಡೆ ಟ್ಯಾಂಕರ್ ನೆರವಿನ ಮೂಲಕ ಭಾರತಕ್ಕೆ ಬಂದಿಳಿದಿದೆ” ಎಂದು ಹೇಳಿದೆ. ಈ ಕುರಿತ ಟ್ವೀಟ್ ಇಲ್ಲಿದೆ.
ಭಾರತೀಯ ವಾಯುಪಡೆ ಟ್ವೀಟ್ ಆಧರಿಸಿ, ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಇಮ್ಯಾನುವಲ್ ಲೆನೈನ್ ಅವರೂ ಟ್ವೀಟ್ ಮಾಡಿದ್ದು, “ಎಲ್ಲ 36 ರಫೇಲ್‌ಗಳು ಭಾರತದ ನೆಲದಲ್ಲಿರುವುದು, ಮತ್ತು ಭಾರತದ ನಿರ್ದಿಷ್ಟ ಸಾಮರ್ಥ್ಯದ ಸಲಕರಣೆಗಳೊಂದಿಗೆ ಸರ್ವಸಜ್ಜಿತವಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ” ಎಂದು ಹೇಳಿದ್ದರು. ಈ ಕುರಿತ ಟ್ವೀಟ್ ಇಲ್ಲಿದೆ.
ರಫೇಲ್ ಒಪ್ಪಂದ
ಹಳೆಯ ಯುದ್ಧವಿಮಾನಗಳನ್ನು ಬದಲಾಯಿಸಬೇಕಾಗಿರುವ ತೀವ್ರ ಅಗತ್ಯದಲ್ಲಿರುವ ಭಾರತೀಯ ವಾಯುಪಡೆಗೆ ಹೊಸ ಯುದ್ಧ ವಿಮಾನಗಳನ್ನು ಕೊಡುವ ಒಪ್ಪಂದ ರಫೇಲ್ ಒಪ್ಪಂದ. ಇದರ ಬಗ್ಗೆ ಔಟ್ ಲುಕ್ ಹೀಗೆ ವರದಿ ಮಾಡಿದೆ.
“ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಅಂದರೆ 2012ರಲ್ಲಿ ಮಧ್ಯಮ ಗಾತ್ರದ ಯುದ್ಧ ವಿಮಾನಗಳ ಖರೀದಿ ವಿಚಾರದಲ್ಲಿ ಡಸ್ಸಾಲ್ಟ್ ಪ್ರಮುಖ ಬಿಡ್ಡಿಂಗ್‌ದಾರನಾಗಿ ಆಯ್ಕೆಯಾಗಿದ್ದು 126 ವಿಮಾನಗಳನ್ನು ಪೂರೈಸುವುದರಲ್ಲಿತ್ತು. ಬಳಿಕ ಕೆಲವೊಂದು ವಿಚಾರಗಳಲ್ಲಿ ಒಮ್ಮತ ಮೂಡಿರಲಿಲ್ಲ. ಡಸ್ಸಾಲ್ಟ್ ರಫೇಲ್ ತಂತ್ರಜ್ಞಾನ ಭಾರತಕ್ಕೆ ಅಂದರೆ ಎಚ್ಎಎಲ್‌ಗೆ ನೀಡುವ ಸನ್ನಾಹದಲ್ಲಿ ಇರಲಿಲ್ಲ. ಆ ನಂತರ 2015ರಲ್ಲಿ ಈ ಒಪ್ಪಂದನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಇದು 9 ಬಿಲಿಯನ್ ಡಾಲರ್ ವೆಚ್ಚದ ಒಪ್ಪಂದವಾಗಿತ್ತು. ಜೊತೆಗೆ ರಫೇಲ್ ಖರೀದಿ ವಿಚಾರಕ್ಕೆ ಸಂಬಂಧಪಟ್ಟಂತೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.”
ಈ ಸತ್ಯಶೋಧನೆ ಪ್ರಕಾರ, ಭಾರತಕ್ಕೆ 36 ಯುದ್ಧ ವಿಮಾನಗಳನ್ನು ಡಸ್ಸಾಲ್ಟ್ ಕಂಪೆನಿ ಪೂರೈಸಿದ್ದು, ಕ್ಲೇಮ್ ತಪ್ಪಾಗಿದೆ.
Our Source
Report by Hindustan Times, Dated: December 15, 2022
Report by India Today, Dated: December, 15, 2022
Tweet by Indian Airforce, Dated: December 15, 2022
Tweet by Emmanuel Lenain, Dated, December 15, 2022
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Vasudha Beri
November 20, 2025
Ishwarachandra B G
October 13, 2025
Vasudha Beri
October 9, 2025