Authors
Claim
ಪಾಕಿಸ್ಥಾನದ ಬಾವುಟ ಬೆಂಗಳೂರಿನ ಶಿವಾಜಿನಗರದಲ್ಲಿ ಹಾರಾಡಿದೆ
Fact
ಬೆಂಗಳೂರಿನ ಶಿವಾಜಿನಗರದಲ್ಲಿ ಹಾರಾಡಿದ್ದು ದರ್ಗಾವೊಂದರ ಇಸ್ಲಾಮಿಕ್ ಧ್ವಜ, ಪಾಕಿಸ್ಥಾನದ ಧ್ವಜವಲ್ಲ ಅದನ್ನು ಪೊಲೀಸರು ತೆರವುಗೊಳಿಸಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ
ಪಾಕಿಸ್ಥಾನದ ಬಾವುಟ ಬೆಂಗಳೂರಿನ ಶಿವಾಜಿನಗರದಲ್ಲಿ ಹಾರಾಡುತ್ತಿದೆ ಎಂಬ ಹೇಳಿಕೆಯುಳ್ಳ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಫೇಸ್‌ಬುಕ್ ನಲ್ಲಿರುವ ಪೋಸ್ಟ್ ನಲ್ಲಿ “ಇದಕ್ಕೆ ಏನು ಹೇಳುತ್ತೀರಾ ಸಿಎಂ ಸಿದ್ದರಾಮಯ್ಯನವ್ರೇ?? ಪಾಕಿಸ್ಥಾನದ ಬಾವುಟ ಬೆಂಗಳೂರಿನ ಶಿವಾಜಿನಗರದಲ್ಲಿ” ಎಂದು ಹೇಳಲಾಗಿದೆ. ಈ ಹೇಳಿಕೆಯನ್ನು ವೀಡಿಯೋ ಜೊತೆಗೆ ಹಂಚಿಕೊಳ್ಳಲಾಗಿದೆ.
Also Read: ಡಿವೈಎಫ್‌ಐ ಸಮಾವೇಶದ ಪೋಸ್ಟರ್ ನಲ್ಲಿ ಕೋಟಿ ಚೆನ್ನಯರ ಫೋಟೋ ರಾಮ ಲಕ್ಷ್ಮಣರು ಎಂದು ವೈರಲ್!
ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
Fact Check/ Verification
ಸತ್ಯಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಮಾಧ್ಯಮ ವರದಿಗಳು ಲಭ್ಯವಾಗಿವೆ.
ಜನವರಿ 30, 2024ರ ಟಿವಿ9 ಕನ್ನಡ ಸುದ್ದಿಯ ಪ್ರಕಾರ “ಬೆಂಗಳೂರಿನ ಶಿವಾಜಿನಗರದಲ್ಲಿ ಹಸಿರು ಬಾವುಟ ತೆಗೆದು ರಾಷ್ಟ್ರಧ್ವಜ ಹಾರಿಸಿದ ಪೊಲೀಸರು” ಎಂಬ ಸುದ್ದಿಯಲ್ಲಿ, ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿನ ಹನುಮ ಧ್ವಜ ಹಾಗೂ ರಾಷ್ಟ್ರ ಧ್ವಜ ವಿವಾದ ಬೆನ್ನಲ್ಲೇ ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್ನಲ್ಲಿ ಹಾರಿಸಲಾದ ಹಸಿರು ಬಾವುಟ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು, ಚಾಂದಿನಿ ಚೌಕ್ನ ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟ ತೆರವು ಮಾಡಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ ಎಂದಿದೆ.
Also Read: ತುಮಕೂರು ಗುಬ್ಬಿ ತಾಲೂಕಿನಲ್ಲಿ ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ ಎನ್ನುವುದು ನಿಜವೇ?
ಜನವರಿ 31, 2024ರ ದಿ ನ್ಯೂಸ್ ಮಿನಿಟ್ ವರದಿಯ ಪ್ರಕಾರ, “ಮಂಡ್ಯ ಹನುಮಾನ್ ಧ್ವಜ ವಿವಾದ ಬೆನ್ನಲ್ಲೇ ಶಿವಾಜಿನಗರದಲ್ಲಿ ಬೀದಿ ದೀಪದ ಕಂಬಕ್ಕೆ ಹಸಿರು ಧ್ವಜವನ್ನು ಕಟ್ಟಿರುವುದನ್ನು ಕೆಲವು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಶಿವಾಜಿನಗರ ಪೊಲೀಸರು ದರ್ಗಾ ಸಮಿತಿ ಮಾತುಕತೆ ನಡೆಸಿ, ಧ್ವಜ ತೆರವುಗೊಳಿಸಿ ರಾಷ್ಟ್ರಧ್ವಜ ಹಾರಿಸಿದ್ದಾರೆ” ಎಂದಿದೆ.
ಜನವರಿ 30, 2024ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ವೀಡಿಯೋದಲ್ಲಿ “ಶಿವಾಜಿನಗರದಲ್ಲಿ ಇಸ್ಲಾಮಿಕ್ ಧ್ವಜ ತೆರವುಗೊಳಿಸಿದ ಪೊಲೀಸರು” ಎಂದಿದೆ. ಇದರ ವರದಿಯಲ್ಲಿ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ದರ್ಗಾದ ಹಸಿರು ಧ್ವಜವನ್ನು ತೆರವುಗೊಳಿಸಿ ತ್ರಿವರ್ಣಧ್ವಜ ಹಾರಿಸಲಾಗಿದೆ ಎಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇನ್ನು ಈ ವಿಚಾರಕ್ಕೆ ಸಬಂಧಿಸಿದಂತೆ, ನ್ಯೂಸ್‌ಚೆಕರ್ ಶಿವಾಜಿನಗರ ಪೊಲೀಸ್ ಠಾಣಾಧಿಕಾರಿ ಅವರನ್ನು ಸಂಪರ್ಕಿಸಿದೆ. ಅವರು ಮಾತನಾಡಿ “ಶಿವಾಜಿನಗರದಲ್ಲಿದ್ದಿದ್ದು ಒಂದು ಹಳೆಯ ಹಸಿರು ಧ್ವಜವಾಗಿದ್ದು ಸ್ಥಳೀಯ ದರ್ಗಾಕ್ಕೆ ಸಂಬಂಧಿಸಿದ್ದಾಗಿತ್ತು. ಕೆರೆಗೋಡು ವಿವಾದದ ಬಳಿಕ ಧ್ವಜವನ್ನ ಮಾತುಕತೆ ಮೂಲಕ ತೆರವುಗೊಳಿಸಲಾಗಿದೆ. ಬಳಿಕ ಅಲ್ಲಿ ತ್ರಿವರ್ಣ ಧ್ವಜ ಹಾಕಲಾಗಿದೆ. ಅಲ್ಲಿ ಹಾರಾಡಿದ್ದು ಪಾಕಿಸ್ಥಾನ ಧ್ವಜ ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
Conclusion
ತನಿಖೆಯಲ್ಲಿ ಕಂಡುಬಂದ ಪ್ರಕಾರ, ಬೆಂಗಳೂರಿನ ಶಿವಾಜಿನಗರದಲ್ಲಿ ಹಾರಾಡಿರುವ ಧ್ವಜ ಪಾಕಿಸ್ಥಾನದ ಧ್ವಜದ ರೀತಿ ಇರದೇ ಅದು ಇಸ್ಲಾಮಿಕ್ ಧ್ವಜವಾಗಿದೆ ಎಂಬುದನ್ನು ನಾವು ಗುರುತಿಸಿದ್ದೇವೆ. ಆದ್ದರಿಂದ ವೈರಲ್ ವೀಡಿಯೋದೊಂದಿಗೆ ಹಂಚಿಕೊಂಡ ಪ್ರತಿಪಾದನೆ ತಪ್ಪಾಗಿದೆ.
Also Read: ಬಾಂಗ್ಲಾ ವಲಸಿಗ ಮುಸ್ಲಿಮರಿಗೆ ತಲಾ 5 ಎಕರೆ ಭೂಮಿ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನುವುದು ನಿಜವೇ?
Result: False
Our Sources:
Report By TV9 Kannada, Dated: January 30, 2024
Report By Asianet Suvarna News, Dated: January 30, 2024
Report By The News Minute, Dated: January 31, 2024
Conversation with Police sub-Inspector, Shivajinagar Police station, Bangalore
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.