Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಭಾರತೀಯ ಸೇನೆ ಪಾಕಿಸ್ತಾನಿ ಪೈಲಟ್ ಅವರನ್ನು ಜೀವಂತವಾಗಿ ಸೆರೆ ಹಿಡಿದಿದೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋ ಫೇಸ್ಬುಕ್ ನಲ್ಲಿ ಹೇಳಿಕೆಯೊಂದಿಗೆ ವೈರಲ್ ಆಗಿದೆ.
ಎರಡೂ ದೇಶಗಳಿಂದ ನಿರಂತರ ಗುಂಡಿನ ದಾಳಿ ನಡೆಯುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ, ಭಾರತೀಯ ಸೇನೆಯು ಪಾಕಿಸ್ತಾನದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂಬ ಸುದ್ದಿಯನ್ನು ಭಾರತೀಯ ಮಾಧ್ಯಮಗಳು ಮೂಲಗಳನ್ನು ಉಲ್ಲೇಖಿಸಿ ಪ್ರಸಾರ ಮಾಡುತ್ತಿವೆ . ಈ ಸುದ್ದಿಗಳ ಮಧ್ಯೆ, ಸೆರೆಹಿಡಿಯಲಾದ ಪಾಕಿಸ್ತಾನಿ ಪೈಲಟ್ನ ಮೊದಲ ಫೋಟೋ ಇದು ಎಂದು ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಸತ್ಯಶೋಧನೆಯ ಭಾಗವಾಗಿ ನ್ಯೂಸ್ ಚೆಕರ್ ಈ ಫೋಟೋವನ್ನು ಗೂಗಲ್ ಲೆನ್ಸ್ ಬಳಸಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ಫೋಟೋ 2016 ರಲ್ಲಿ ಟರ್ಕಿಯ F16 ಫೈಟರ್ ಜೆಟ್ ಟರ್ಕಿಯೆ (ಟರ್ಕಿ) ನಲ್ಲಿ ಅಪಘಾತಕ್ಕೀಡಾದಾಗ ತೆಗೆದ ಸಮಯದ್ದು ಎಂದು ಗೊತ್ತಾಗಿದೆ.
ಈ ಅಪಘಾತದಲ್ಲಿ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ. ಈ ಫೋಟೋ ಗೆಟ್ಟಿ ಇಮೇಜಸ್ನಲ್ಲಿ ನಾವು ಕಂಡುಕೊಂಡಿದ್ದೇವೆ. ಇಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ಚಿತ್ರವನ್ನು ಇಲ್ಯಾಸ್ ಅಕೆನ್ಜಿನ್ ಅವರು AFP ಗಾಗಿ ತೆಗೆದಿದ್ದಾರೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಭಾರತೀಯ ಸೇನೆ ಪಾಕಿಸ್ತಾನಿ ಪೈಲಟ್ ಅವರನ್ನು ಜೀವಂತವಾಗಿ ಸೆರೆ ಹಿಡಿದಿದೆ ಎಂದು ಹಂಚಿಕೊಳ್ಳುತ್ತಿರುವ ಫೋಟೋ ಟರ್ಕಿ ಮೂಲದ್ದಾಗಿದೆ ಎಂದು ಗೊತ್ತಾಗಿದೆ.
Also Read: ಆಪರೇಷನ್ ಸಿಂದೂರ: ಇಸ್ರೇಲಿ ದಾಳಿಯ ಹಳೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್
Our Sources
Image Uploaded on Getty Images, Dated: 12 December 2016
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Sabloo Thomas
May 1, 2025
Ishwarachandra B G
April 26, 2025
Ishwarachandra B G
April 24, 2025