ಪಹಲ್ಗಾಮ್ ಭಯೋತ್ಪಾದಕ ದಾಳಿಯ 15 ದಿನಗಳ ನಂತರ, ಭಾರತವು 9 ಭಯೋತ್ಪಾದಕ ಶಿಬಿರಗಳ ಮೇಲೆ ‘ಆಪರೇಷನ್ ಸಿಂದೂರ‘ ಕಾರ್ಯಾಚರಣೆ ನಡೆಸಿದ್ದು ಜೈಶ್ ಮತ್ತು ಲಷ್ಕರ್ ಎ ತೋಯ್ಬಾದ ಅನೇಕ ಉಗ್ರರು ಸಾವನ್ನಪ್ಪಿದ್ದಾರೆ.
ಈ ಪರಿಸ್ಥಿತಿ ಮಧ್ಯೆ ಭಾರತದ ಈ ಕಾರ್‍ಯಾಚರಣೆಯ ದೃಶ್ಯ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. 32 ಸೆಕೆಂಡುಗಳ ವೀಡಿಯೋದಲ್ಲಿ, ಸ್ಫೋಟದ ನಂತರ ಜನರು ಓಡಿಹೋಗುವುದನ್ನು ಕಾಣಬಹುದು. ಇದು ‘ಆಪರೇಷನ್ ಸಿಂದೂರ’ ದೃಶ್ಯ ಎಂದು ಹೇಳಿಕೊಂಡು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
Also Read: ಪಾಕಿಸ್ತಾನ ಮೇಲೆ ಭಾರತದ ಕ್ಷಿಪಣಿ ದಾಳಿ ಎಂದ ಈ ವೀಡಿಯೋ ಇಸ್ರೇಲ್ ವಿರುದ್ಧ ಇರಾನ್ ದಾಳಿಯದ್ದು!

Fact Check/Verification
ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಅದೇ ರೀತಿಯ ವೀಡಿಯೋವನ್ನು ನವೆಂಬರ್ 10, 2023 ರಂದು ಶೆಹಾಬ್ ನ್ಯೂಸ್ ಏಜೆನ್ಸಿ ಬಿಡುಗಡೆ ಮಾಡಿದೆ ಎಂದು ಕಂಡುಬಂದಿದೆ. ಗಾಝಾ ಪಟ್ಟಿಯ ಉತ್ತರ ಭಾಗದಲ್ಲಿರುವ ಇಂಡೋನೇಷ್ಯಾದ ಆಸ್ಪತ್ರೆಯ ಮೇಲೆ ಇಸ್ರೇಲ್ ಶೆಲ್ ದಾಳಿ ನಡೆಸುತ್ತಿರುವುದನ್ನು ತೋರಿಸುವ ಕುರಿತ ವಿವರಣೆಯೂ ಅದರಲ್ಲಿತ್ತು.

ಅದೇ ರೀತಿಯ ವೀಡಿಯೋವನ್ನು ನವೆಂಬರ್ 9, 2023 ರಂದು ಅಲ್ ಜಜೀರಾ ಅರೇಬಿಕ್ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಕಟಿಸಲಾಗಿದೆ. ಗಾಜಾ ಪಟ್ಟಿಯಲ್ಲಿರುವ ಇಂಡೋನೇಷ್ಯಾದ ಆಸ್ಪತ್ರೆಯ ಸುತ್ತ ಶೆಲ್ ದಾಳಿಯ ದೃಶ್ಯ ಎಂದು ವಿವರಣೆಯಲ್ಲಿದೆ.

ನವೆಂಬರ್ 10, 2023 ರಂದು ಅಲ್ ಜಜೀರಾ ಇಂಗ್ಲಿಷ್ ಅಧಿಕೃತ ಎಕ್ಸ್ ಖಾತೆಯಿಂದ ಇದೇ ರೀತಿಯ ವೀಡಿಯೋ ಪೋಸ್ಟ್ ಮಾಡಲಾಗಿದೆ. ಇಸ್ರೇಲ್ ಈ ದಾಳಿಯನ್ನು ನಡೆಸಿದೆ ಎಂದು ಪ್ಯಾಲೆಸ್ತೀನ್ ಸರ್ಕಾರ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
Conclusion
ಆದ್ದರಿಂದ, ವೈರಲ್ ವೀಡಿಯೋ ಭಾರತದ ‘ಆಪರೇಷನ್ ಸಿಂದೂರ’ ನೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದು 2023 ರಲ್ಲಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯ ದೃಶ್ಯವಾಗಿದೆ.
Our Sources
X Post By @ShehabAgency, Dated: November 10, 2023
YouTube Video By Al Jazeera Arabic, Dated: November 9, 2023
X Post By @AJEnglish, Dated: November 10, 2023
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಬಾಂಗ್ಲಾದಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)