Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಬಳಿಕ ಸುಳ್ಳು ಹೇಳಿಕೆಗಳು ವೈರಲ್ ಆಗಿವೆ. ಎಲ್ಒಸಿಯಲ್ಲಿ ಭಾರತ-ಪಾಕ್ ಗುಂಡಿನ ದಾಳಿ, ಪಹಲ್ಗಾಮ್ ದಾಳಿ ಬಳಿಕ ಓರ್ವ ಉಗ್ರವಾದಿಯನ್ನು ಭಾರತೀಯ ಸೇನೆ ಜೀವಂತವಾಗಿ ಸೆರೆಹಿಡಿದಿದೆ, ಪಹಲ್ಗಾಮ್ ದಾಳಿ ವೇಳೆ ಅಜ್ಜನ ದೇಹದ ಮೇಲೆ ಕೂತು ಅಳುತ್ತಿರುವ ಮಗು, ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಜೋಡಿಯ ವೀಡಿಯೋ ಎಂಬ ಹೇಳಿಕೆಗಳು ಪ್ರಮುಖವಾಗಿದ್ದವು. ಇದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಸಿದವರನ್ನು ಭಾರತೀಯ ಯೋಧರು ಬಂಧಿಸಿದ್ದಾರೆ, ಹೊಟ್ಟೆಯ ಕೊಬ್ಬು ಕರಗಿಸಲು ಜೀರಿಗೆ, ಸೋಂಪು, ಓಂಕಾಳು ಹಾಕಿದ ಕಷಾಯ ಪ್ರಯೋಜನ ಎಂಬ ಹೇಳಿಕೆಗಳೂ ಈ ವಾರ ವೈರಲ್ ಆಗಿವೆ. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇವುಗಳು ಸುಳ್ಳು ಹೇಳಿಕೆಗಳು ಎಂದು ಕಂಡುಕೊಂಡಿದೆ.
ವಕ್ಪ್ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಹಿಂಸಾಚಾರ ನಡೆದ ಬಳಿಕ ಅಲ್ಲಿ ಹಿಂಸಾಚಾರ ನಡೆಸಿದವರನ್ನು ಭಾರತೀಯ ಯೋಧರು ಬಂಧಿಸಿದ್ದಾರೆ ಎಂದು ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ, ಢಾಕಾದ ಮೊಹಮ್ಮದ್ಪುರದಲ್ಲಿರುವ ಜಿನೀವಾ ಶಿಬಿರದಲ್ಲಿ ಮಾದಕವಸ್ತು ದೊರೆ ಬುನಿಯಾ ಸೊಹೆಲ್ ಬಂಧನಕ್ಕೆ ಬಾಂಗ್ಲಾದೇಶದ ಸೇನೆ ನಡೆಸಿದ ಕಾರ್ಯಾಚರಣೆ ಇದು ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿ ಕನಿಷ್ಟ 26 ಮಂದಿಯನ್ನು ಹತ್ಯೆಗೈದಿದ್ದಾರೆ. ಈ ರಕ್ತದೋಕುಳಿ ಘಟನೆ ನಡೆಯುತ್ತಿದ್ದಂತೆ ಎಲ್ ಒಸಿ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಗುಂಡಿನ ದಾಳಿ ನಡೆದಿದೆ ಎಂದು ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿದಾಗ, ಉಗ್ರರ ದಾಳಿ ಬಳಿಕ ಎಲ್ಒಸಿಯಲ್ಲಿ ಭಾರತ-ಪಾಕ್ ಗುಂಡಿನ ದಾಳಿ ಎಂದ ವೀಡಿಯೋ ಹಳೆಯದಾಗಿದೆ. 2020ರಲ್ಲಿ ನಡೆದ ಘಟನೆಯಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದ ಬೆನ್ನಲ್ಲೇ ಓರ್ವ ಉಗ್ರವಾದಿಯನ್ನು ಭಾರತೀಯ ಸೇನೆ ಜೀವಂತವಾಗಿ ಸೆರೆಹಿಡಿದಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಪಹಲ್ಗಾಮ್ ದಾಳಿ ಬಳಿಕ ಓರ್ವ ಉಗ್ರವಾದಿಯನ್ನು ಭಾರತೀಯ ಸೇನೆ ಜೀವಂತವಾಗಿ ಸೆರೆಹಿಡಿದಿದೆ ಎಂದು ಹೇಳಲಾದ ವೀಡಿಯೋ 2022ರದ್ದಾಗಿದೆ. ಅದು ಈಗಿನದ್ದಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ, ಮೃತ ದೇಹದ ಮೇಲೆ ಕುಳಿತು ಅಳುತ್ತಿರುವ ಮಗುವೊಂದರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸತ್ಯಶೋಧನೆ ನಡೆಸಿದಾಗ, ಪಹಲ್ಗಾಮ್ ದಾಳಿ ವೇಳೆ ತಾತನ ದೇಹದ ಮೇಲೆ ಕೂತು ಅಳುತ್ತಿರುವ ಮಗು ಎಂದು ಹೇಳಿಕೊಳ್ಳಲಾದ ಈ ವೀಡಿಯೋ ಐದು ವರ್ಷ ಹಳೆಯದು ಮತ್ತು ಸೋಪೋರನದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಜೋಡಿಯ ವೀಡಿಯೋ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಶೋಧ ನಡೆಸಿದಾಗ, ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಜೋಡಿಗಳ ವೀಡಿಯೋ ಎಂದು ಹಂಚಿಕೊಳ್ಳಲಾಗುತ್ತಿರುವ ವೀಡಿಯೋವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡ ದಂಪತಿ ಮೃಪಟ್ಟಿಲ್ಲ. ಅವರು ದಾಳಿಗೆ ಮುನ್ನವೇ ಪಹಲ್ಗಾಮ್ ನಿಂದ ಬಂದಿದ್ದರು ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಹೊಟ್ಟೆಯ ಕೊಬ್ಬು ಕರಗಿಸಲು ಜೀರಿಗೆ, ಸೋಂಪು, ಓಂಕಾಳು ಹಾಕಿದ ಕಷಾಯ ಪ್ರಯೋಜನಕಾರಿ ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸಂಶೋಧನೆ ನಡೆಸಿದಾಗ, ಹೊಟ್ಟೆಯ ಕೊಬ್ಬು ಕರಗಿಸಲು ಜೀರಿಗೆ, ಸೋಂಪು, ಓಂಕಾಳು ಹಾಕಿದ ಕಷಾಯ ಪ್ರಯೋಜನಕಾರಿಯಲ್ಲ, ಇದರಿದ ಹೊಟ್ಟೆಯಲ್ಲಿರುವ ವಾಯು ಕಡಿಮೆಯಾಗಬಹುದು, ಜೀರ್ಣಕ್ರಿಯೆ ಉತ್ತಮವಾಗಬಹುದು. ಕೊಬ್ಬು ಕರಗಿಸಲು ಸಹಾಯ ಮಾಡುವುದಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿದೆ
Preeti Chauhan
May 10, 2025
Sabloo Thomas
May 1, 2025
Ishwarachandra B G
April 24, 2025