Authors
Claim
ಇತ್ತೀಚಿನ ಬ್ರಿಕ್ಸ್ ಶೃಂಗಸಭೆಯಲ್ಲಿ ವಿಶ್ವ ನಾಯಕರ ಗ್ರೂಪ್ ಫೋಟೋದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರಗಿಡಲಾಗಿದೆ ಎಂದ ವೈರಲ್ ವೀಡಿಯೋ
Fact
ಪ್ರಧಾನಿಯವರು ಅದಾಗಲೇ ಭಾರತಕ್ಕೆ ತೆರಳಿದ್ದರು ಮತ್ತು ಅಕ್ಟೋಬರ್ 24, 2024 ರಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಪ್ರಧಾನಿಯವರನ್ನು ಪ್ರತಿನಿಧಿಸಿದ್ದು, ಆ ಹೊತ್ತಿನಲ್ಲಿ ತೆಗೆದ ವೀಡಿಯೋ ಆಗಿದೆ
ರಷ್ಯಾದ ಕಜಾನ್‌ನಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ ಸಮ್ಮೇಳನವನ್ನು 2012ರ ಸಮ್ಮೇಳನಕ್ಕೆ ಹೋಲಿಸುವ 46 ಸೆಕೆಂಡುಗಳ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 2024 ರ ಶೃಂಗಸಭೆಯಲ್ಲಿ ಗ್ರೂಪ್ ಫೋಟೋದಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೈಬಿಡಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಗೇಲಿ ಮಾಡಿದ್ದಾರೆ. 2012 ರಲ್ಲಿ ವಿಶ್ವದ ಇತರ ನಾಯಕರೊಂದಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ತೆಗೆಸಿಕೊಂಡ ಫೋಟೋವನ್ನು ಇದರೊಂದಿಗೆ ಹೋಲಿಸಲಾಗಿದೆ.
ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
Also Read: ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ ಯುವಕರನ್ನು ಥಳಿಸಿದ ಪ್ರಕರಣಕ್ಕೆ ಕೋಮು ಬಣ್ಣ!
Fact Check/Verification
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈ ಶಂಕರ್ ಅವರು ಎರಡನೇ ಸಾಲಿನಲ್ಲಿ ಮಧ್ಯದಲ್ಲಿ ನಿಂತಿರುವುದನ್ನು ವೀಡಿಯೋದಲ್ಲಿ ನ್ಯೂಸ್‌ಚೆಕರ್ ಗಮನಿಸಿದೆ. ಈ ವೀಡಿಯೋದಲ್ಲಿ ಎಎನ್‌ಐ ವಾಟರ್ ಮಾರ್ಕ್ ಕೂಡ ಇದೆ.
ಬಳಿಕ ನಾವು ಕೀವರ್ಡ್ ಸರ್ಚ್ ಮಾಡಿದ್ದೇವೆ. ಅದು ಅಕ್ಟೋಬರ್ 24, 2024 ರ ಎಎನ್ಐ ಎಕ್ಸ್ ಪೋಸ್ಟ್ ಗೆ ನಮ್ಮನ್ನು ಕರೆದೊಯ್ಯಿತು, ಇದು 16 ನೇ ಬ್ರಿಕ್ಸ್ ಶೃಂಗಸಭೆಯ ಸಮಯದಲ್ಲಿ ಕಜಾನ್ ಎಕ್ಸ್ಪೋ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಎಸ್ ಜೈಶಂಕರ್ ಮತ್ತು ಇತರ ನಿಯೋಗಗಳ ಮುಖ್ಯಸ್ಥರು ಇದ್ದ ಫೋಟೋ ಎಂದು ದೃಢಪಡಿಸಿತು.
ಈ ಫೋಟೋವನ್ನು ಸಚಿವರು ಅಕ್ಟೋಬರ್ 24, 2024 ರಂದು ಎಕ್ಸ್ನಲ್ಲಿ ಹಂಚಿಕೊಂಡಿದ್ದರು, ಅಲ್ಲಿ ಅವರು ಕಜಾನ್ ನಲ್ಲಿ ನಡೆದ ಬ್ರಿಕ್ಸ್ ಔಟ್ರೀಚ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರತಿನಿಧಿಸಿದ್ದಾಗಿ ಹೇಳಿದ್ದಾರೆ.
ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರೇ?
ಅನಂತರ ನಾವು ” PM Narendra Modi BRICS” ಎಂದು ಕೀವರ್ಡ್ ಸರ್ಚ್ ಮಾಡಿದ್ದೇವೆ. ಈ ವೇಳೆ ಅಕ್ಟೋಬರ್ 22 ರಿಂದ ಅಕ್ಟೋಬರ್ 24 ರವರೆಗೆ ನಡೆದ ಶೃಂಗಸಭೆಯಲ್ಲಿ ಅವರ ಉಪಸ್ಥಿತಿಯನ್ನು ದೃಢೀಕರಿಸುವ ಹಲವಾರು ಲೇಖನಗಳು ಮತ್ತು ಪೋಸ್ಟ್ ಗಳು ಲಭ್ಯವಾಗಿವೆ.
ಬ್ರಿಕ್ಸ್ ಶೃಂಗಸಭೆ ಪ್ರಾರಂಭವಾಗುವ ಮೊದಲು ಕಜಾನ್ ಎಕ್ಸ್ಪೋ ಕೇಂದ್ರದಲ್ಲಿ ಕುಟುಂಬ ಫೋಟೋದಲ್ಲಿ ಆತಿಥೇಯ ಅಧ್ಯಕ್ಷ ಪುಟಿನ್ ಮತ್ತು ಚೀನಾದ ಕ್ಸಿ ಜಿನ್ಪಿಂಗ್ ಸೇರಿದಂತೆ ಇತರ ವಿಶ್ವ ನಾಯಕರೊಂದಿಗೆ ಪ್ರಧಾನಿ ಮೋದಿ ಅವರಿದ್ದ ವೀಡಿಯೋವನ್ನು ಎಎನ್ಐ ಹಂಚಿಕೊಂಡಿರುವುದನ್ನು ಅನ್ನು ನ್ಯೂಸ್ಚೆಕರ್ ಗಮನಿಸಿದೆ.
ಪ್ರಧಾನಿ ಮೋದಿ ಕೂಡ ಅಕ್ಟೋಬರ್ 23, 2024 ರಂದು ಎಕ್ಸ್ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದು ಶೃಂಗಸಭೆಯ ಮುಖ್ಯಾಂಶಗಳನ್ನು ತೋರಿಸುತ್ತದೆ, ಅಧ್ಯಕ್ಷ ಪುಟಿನ್, ರಷ್ಯಾದ ಜನರು ಮತ್ತು ಸರ್ಕಾರಕ್ಕೆ ಅವರ ಆತಿಥ್ಯಕ್ಕಾಗಿ ಧನ್ಯವಾದಗಳನ್ನು ಅರ್ಪಿಸುವುದಾಗಿ ಇದರಲ್ಲಿದೆ.
16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು 2024ರ ಅಕ್ಟೋಬರ್ 22ರಿಂದ 23ರವರೆಗೆ ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಕ್ಟೋಬರ್ 18, 2024ರಂದು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 16 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ ನಂತರ ರಷ್ಯಾಕ್ಕೆ ಎರಡು ದಿನಗಳ “ಪರಿಣಾಮಕಾರಿ” ಭೇಟಿಯನ್ನು ಮುಗಿಸಿದ ನಂತರ ಸ್ವದೇಶಕ್ಕೆ ಮರಳಿದರು” ಎಂದು ಅಕ್ಟೋಬರ್ 24, 2024 ರ ಇಂಡಿಯಾ ಟುಡೇ ವರದಿಯಲ್ಲಿ ತಿಳಿಸಲಾಗಿದೆ. ಇದೇ ರೀತಿಯ ವರದಿಗಳು ಮತ್ತು ಎಎನ್ಐ ಪೋಸ್ಟ್ ಅನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಬ್ರಿಕ್ಸ್ ಶೃಂಗಸಭೆಯ ಕೊನೆಯ ದಿನ ಅಂದರೆ ಅಕ್ಟೋಬರ್ 24, 2024ರಂದು ಎಎನ್ಐ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.
Conclusion
ಇತ್ತೀಚೆಗೆ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆಯಲ್ಲಿ ಗ್ರೂಪ್ ಫೋಟೋ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸಲಾಗಿದೆ ಎಂಬ ವೈರಲ್ ವೀಡಿಯೋಗಳು ತಪ್ಪಾಗಿದೆ. ಪ್ರಧಾನಿ ಮೋದಿ ಅದಾಗಲೇ ಭಾರತಕ್ಕೆ ತೆರಳಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಮಣ್ಯಂ ಜೈಶಂಕರ್ ಅವರನ್ನು ಪ್ರತಿನಿಧಿಸಿದ್ದರು.
Result: Missing Context
Our Sources
X post By ANI, Dated: October 24, 2024
X post By S Jaishankar, Dated: October 24, 2024
X post By PM Narendra Modi, Dated: October 23, 2024
MEA press release, Dated: October 18, 2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.