Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ರಾಹುಲ್ ಗಾಂಧಿ ತಮ್ಮ ಕಾರ್ಯಕ್ರಮಕ್ಕೆ ಚೀನಾದ ಸಂವಿಧಾನವನ್ನು ತೆಗೆದುಕೊಂಡು ಹೋಗುತ್ತಾರೆ
Fact
ರಾಹುಲ್ ಗಾಂಧಿ ತಮ್ಮ ಕಾರ್ಯಕ್ರಮದಲ್ಲಿ ಚೀನಾದ ಸಂವಿಧಾನವನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನುವುದು ಸತ್ಯವಲ್ಲ, ಇದು ಭಾರತೀಯ ಸಂವಿಧಾನದ ಪಾಕೆಟ್ ಬುಕ್ ಆಗಿದೆ
ರಾಹುಲ್ ಗಾಂಧಿ ಅವರು ಸಂವಿಧಾನದ ಕೆಂಪು ಬಣ್ಣದ ಪಾಕೆಟ್ ಪುಸ್ತಕವನ್ನು ವೇದಿಕೆಯ ಮೇಲೆ ಹಿಡಿದಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಚಿತ್ರದ ಬಗ್ಗೆ ಪ್ರಶ್ನೆಯೂ ಎದ್ದಿದ್ದು, “ರಾಹುಲ್ ಗಾಂಧಿ ಚೀನಾದ ಸಂವಿಧಾನವನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆಯೇ? ಏಕೆಂದರೆ ಚೀನಾದ ಸಂವಿಧಾನದ ಬಣ್ಣ ಕೆಂಪು.” ಎಂದು ಹೇಳಲಾಗಿದೆ.
ಈ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಲು ನಾವು ಪ್ರಯತ್ನಿಸಿದಾಗ, ರಾಹುಲ್ ಗಾಂಧಿ ತಮ್ಮ ಕಾರ್ಯಕ್ರಮ ಇಬಿಸಿ ಪಬ್ಲಿಕೇಷನ್ಸ್ ಪ್ರಕಟಿಸಿದ ಭಾರತೀಯ ಸಂವಿಧಾನದ ಪಾಕೆಟ್ ಆವೃತ್ತಿಯ ಪುಸ್ತಕವನ್ನು ಒಯ್ದಿದ್ದರು ಎಂದು ನಾವು ಕಂಡುಕೊಂಡಿದ್ದೇವೆ.
ಇಬ್ಬರು ಉನ್ನತ ಬಿಜೆಪಿ ನಾಯಕರಾದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮತ್ತು ಕೇಂದ್ರ ಸಚಿವ ಪಂಕಜ್ ಚೌಧರಿ ಅವರ ಹೇಳಿಕೆಯ ನಂತರ ಸಂವಿಧಾನದ ಕುರಿತ ವಿವಾದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ವಾಸ್ತವವಾಗಿ ಜನವರಿ 17 ರಂದು, ಹಿಮಂತ ಬಿಸ್ವಾ ಶರ್ಮಾ ತಮ್ಮ ಎಕ್ಸ್ ಖಾತೆಯಿಂದ ಕೊಲಾಜ್ ಒಂದನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ರಾಹುಲ್ ಗಾಂಧಿ, ಭಾರತೀಯ ಸಂವಿಧಾನ ಮತ್ತು ಚೀನಾದ ಸಂವಿಧಾನದ ಚಿತ್ರವಿದೆ. ಈ ಕೊಲಾಜ್ ಅನ್ನು ಟ್ವೀಟ್ ಮಾಡಿರುವ ಹಿಮಂತ ಬಿಸ್ವಾ ಶರ್ಮಾ, “ಭಾರತದ ಸಂವಿಧಾನದ ಮೂಲ ಪ್ರತಿಯ ಮುಖಪುಟ ನೀಲಿಯಾಗಿದೆ. ಮೂಲ ಚೀನೀ ಸಂವಿಧಾನದ ಮುಖಪುಟ ಕೆಂಪು. ರಾಹುಲ್ ಬಳಿ ಚೀನಾದ ಸಂವಿಧಾನವಿದೆಯೇ? ನಾವು ಅದನ್ನು ಪರಿಶೀಲಿಸಬೇಕು.” ಎಂದಿದ್ದಾರೆ.
Also Read: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ರಸ್ತೆಯಲ್ಲೇ ಗೋಹತ್ಯೆ ಎನ್ನುವುದು ನಿಜವೇ?
ಇನ್ನು ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪಂಕಜ್ ಚೌಧರಿ, “ರಾಹುಲ್ ಗಾಂಧಿ ಸಂವಿಧಾನದ ಪುಸ್ತಕವನ್ನು ತೋರಿಸುತ್ತಿದ್ದಾರೆ, ಭಾರತೀಯ ಸಂವಿಧಾನದ ಬಣ್ಣ ನೀಲಿ ಮತ್ತು ರಾಹುಲ್ ಗಾಂಧಿ ತೋರಿಸುತ್ತಿರುವ ಕೆಂಪು ಸಂವಿಧಾನವು ಚೀನಾದ ಕೆಂಪು ಸಂವಿಧಾನವಾಗಿದೆ” ಎಂದು ಹೇಳಿದ್ದಾರೆ.
ಈ ಇಬ್ಬರು ನಾಯಕರ ಹೇಳಿಕೆಗಳ ನಂತರ, “ರಾಹುಲ್ ಗಾಂಧಿ ತಮ್ಮ ಕಾರ್ಯಕ್ರಮದಲ್ಲಿ ಚೀನಾದ ಸಂವಿಧಾನವನ್ನು ತೋರಿಸಿದ್ದಾರೆಯೇ” ಎಂಬ ಪ್ರಶ್ನೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಲು ಪ್ರಾರಂಭಿಸಿತು.
ವೈರಲ್ ಹೇಳಿಕೆಯನ್ನು ಪರಿಶೀಲಿಸಲು ನ್ಯೂಸ್ ಚೆಕರ್ ಆ ಕಾರ್ಯಕ್ರಮವನ್ನು ಹುಡುಕಿದೆ., ಅದರ ಚಿತ್ರವನ್ನು ವೈರಲ್ ಕೊಲಾಜ್ ನಲ್ಲಿ ಸೇರಿಸಲಾಗಿದೆ. ಮೇ 5 ರಂದು ತೆಲಂಗಾಣದ ನಾಗರ್ ಕರ್ನೂಲ್ ನಲ್ಲಿ ನಡೆದ ರಾಹುಲ್ ಗಾಂಧಿ ಅವರ ರಾಲಿಯಲ್ಲಿ ಈ ದೃಶ್ಯ ನಮಗೆ ಲಭ್ಯವಾಗಿದೆ. ಈ ಕಾರ್ಯಕ್ರಮವನ್ನು ರಾಹುಲ್ ಗಾಂಧಿ ಅವರ ಯೂಟ್ಯೂಬ್ ಖಾತೆಯಿಂದ ಲೈವ್ ಮಾಡಲಾಗಿದೆ.
51 ನಿಮಿಷಗಳ ಯೂಟ್ಯೂಬ್ ವೀಡಿಯೋದಲ್ಲಿ, ರಾಹುಲ್ ಗಾಂಧಿ ಕೈಯಲ್ಲಿ ಪುಸ್ತಕವನ್ನು ಹಿಡಿದು ವೇದಿಕೆಯ ಮೇಲೆ ಭಾಷಣ ಮಾಡುವ ದೃಶ್ಯವನ್ನು ನಾವು ನೋಡಿದ್ದೇವೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಬಡವರು ಮತ್ತು ಸಾರ್ವಜನಿಕರಿಗೆ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿದ್ದರೂ, ಅವರು ಅದನ್ನು ಈ ಪುಸ್ತಕದಿಂದಾಗಿ ಪಡೆದಿದ್ದಾರೆ. ಈ ಪುಸ್ತಕದ ಮೊದಲು, ಭಾರತದಲ್ಲಿ ಜನರಿಗೆ ಯಾವುದೇ ಹಕ್ಕುಗಳು ಇರಲಿಲ್ಲ. ಆದರೆ ಇಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ಈ ಪುಸ್ತಕವನ್ನು ಹರಿದು ಎಸೆಯಲು ಬಯಸಿದ್ದಾರೆ. ಈ ಪುಸ್ತಕವನ್ನು ಅಂಬೇಡ್ಕರ್ ಮತ್ತು ಗಾಂಧಿ ನೀಡಿದರು. ಈ ಚುನಾವಣೆ ಈ ಪುಸ್ತಕವನ್ನು ಉಳಿಸುವುದಕ್ಕಾಗಿ ಇದೆ” ಎಂದು ಹೇಳಿದ್ದಾರೆ.
Also Read: ದಾವಣಗೆರೆಯಲ್ಲಿ ಬಾಲಕ ತಿನಿಸೊಂದನ್ನು ತಿಂದು ಮೃಪಟ್ಟಿದ್ದಾನೆಯೇ, ನಿಜಾಂಶವೇನು?
ನಾವು ಆ ಪುಸ್ತಕವನ್ನು ಝೂಮ್ ಮಾಡಿ ನೋಡಿದಾಗ, ಅದರ ಮೇಲೆ “ಭಾರತದ ಸಂವಿಧಾನ” ಎಂದು ಬರೆಯಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ತನಿಖೆಯ ಸಮಯದಲ್ಲಿ, ಕಾಂಗ್ರೆಸ್ ಪಕ್ಷದ ಫೇಸ್ ಬುಕ್ ಖಾತೆಯಿಂದ ಅಪ್ಲೋಡ್ ಮಾಡಿದ ಹಲವಾರು ಛಾಯಾಚಿತ್ರಗಳಲ್ಲಿ ಅಂತಹ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ಈ ಚಿತ್ರಗಳಲ್ಲಿರುವ ಪುಸ್ತಕವನ್ನು ನೋಡಿದಾಗ, ಈ ಪುಸ್ತಕದ ಕೆಳಭಾಗದಲ್ಲಿ ಇಬಿಸಿ ಎಂದು ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ಇಂಗ್ಲಿಷ್ ನಲ್ಲಿ ಬರೆಯಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
ಆ ಬಳಿಕ ಸಂಬಂಧಿತ ಕೀವರ್ಡ್ಗಳ ಸಹಾಯದಿಂದ ನಾವು ಇದು ಇಬಿಸಿ ಪಬ್ಲಿಕೇಷನ್ಸ್ ಹೊರಡಿಸಿದ ಭಾರತೀಯ ಸಂವಿಧಾನದ ಉಲ್ಲೇಖ ಪಾಕೆಟ್ ಆವೃತ್ತಿ ಎಂದು ಕಂಡುಕೊಂಡಿದ್ದೇವೆ. ಕೋಟ್ ಪಾಕೆಟ್ ಎಡಿಷನ್ ಎಂದರೆ ನಿಮ್ಮ ಕೋಟ್ ಜೇಬಿನಲ್ಲಿ ನೀವು ಇಟ್ಟುಕೊಳ್ಳಬಹುದಾದ ಪುಸ್ತಕ. ಅಲ್ಲದೆ, ಈ ಪಾಕೆಟ್ ಪುಸ್ತಕವನ್ನು ಮುಖ್ಯವಾಗಿ ಗೋಪಾಲ್ ಶಂಕರನಾರಾಯಣ್ ಸಿದ್ಧಪಡಿಸಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ.
ಇದಲ್ಲದೆ, ನಾವು ಮೂಲ ಸಂವಿಧಾನದ ಚಿತ್ರವನ್ನು ಸಹ ನೋಡಿದ್ದೇವೆ ಮತ್ತು ಮುಖಪುಟದಲ್ಲಿ ಚಿನ್ನದ ಹೂವುಗಳು ಮತ್ತು ಮಧ್ಯದಲ್ಲಿ ಇಂಗ್ಲಿಷ್ ನಲ್ಲಿ ಭಾರತದ ಸಂವಿಧಾನ ಮತ್ತು ಕೆಳಗೆ ಅಶೋಕ ಸ್ತಂಭವಿದೆ ಎಂದು ಕಂಡುಕೊಂಡಿದ್ದೇವೆ.
ಇದರ ನಂತರ, ನಾವು ಚೀನಾದ ಸಂವಿಧಾನವನ್ನು ಸಹ ಹುಡುಕಿದ್ದೇವೆ ಮತ್ತು ನಿಜವಾದ ಸಂವಿಧಾನ ಸಂಪೂರ್ಣವಾಗಿ ಕೆಂಪು ಬಣ್ಣದಲ್ಲಿದೆ ಮತ್ತು ಚೀನೀ ಭಾಷಣದಲ್ಲಿ ಬರೆದ ಪದಗಳು ಅದರ ಮೇಲೆ ಇವೆ ಎಂದು ಕಂಡುಕೊಂಡಿದ್ದೇವೆ.
Also Read: ತಮಿಳುನಾಡಿನ ತೆಂಕಾಸಿಯಲ್ಲಿ ಹಿಂದೂ ದೇಗುಲವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆಯೇ?
ರಾಹುಲ್ ಗಾಂಧಿ ವೇದಿಕೆಯಲ್ಲಿ ತೋರಿಸುತ್ತಿರುವ ಪುಸ್ತಕ ಭಾರತೀಯ ಸಂವಿಧಾನದ ಪಾಕೆಟ್ ಬುಕ್ ಆವೃತ್ತಿಯಾಗಿದೆ. ಅವರು ಚೀನ ಸಂವಿಧಾನವನ್ನು ತೋರಿಸಿದ್ದಲ್ಲ ಎಂಬುದು ನಮ್ಮ ತನಿಖೆಯಲ್ಲಿ ದೊರೆತ ಪುರಾವೆಗಳಿಂದ ಸ್ಪಷ್ಟವಾಗಿದೆ.
Our Sources:
YouTube Video By Rahul Ghandhi, Dated: 5th May 2024
Images uploaded By INC FB account
Images uploaded By EBC Website
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 16, 2024
Vasudha Beri
November 12, 2024
Ishwarachandra B G
August 24, 2024