Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ವಿಠಲನ ವಿಗ್ರಹವನ್ನು ಸ್ವೀಕರಿಸಲು ರಾಹುಲ್ ಗಾಂಧಿ ನಿರಾಕರಿಸಿದರು
Fact
ರಾಹುಲ್ ಗಾಂಧಿಯವರು ವಿಠಲ ವಿಗ್ರಹ ಸ್ವೀಕರಿಸಲು ನಿರಾಕರಿಸಿದರು ಎನ್ನುವುದು ಸುಳ್ಳು, ಅವರು ಪೇಟ ಕಟ್ಟಿ, ಹೂಮಾಲೆ ಗೌರವ ಸ್ವೀಕರಿಸಿದ ಬಳಿಕ ವಿಗ್ರಹವನ್ನು ಸ್ವೀಕರಿಸಿದ್ದಾರೆ. ಈ ವೀಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ
ಮಹಾರಾಷ್ಟ್ರದ ನಾಸಿಕ್ನಲ್ಲಿ ಕಾಂಗ್ರೆಸ್ ಸಮಾವೇಶದ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ನೀಡಿದ ವಿಠಲನ ವಿಗ್ರಹವನ್ನು ಸ್ವೀಕರಿಸಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
“ಹಿಂದೂ ದೇವರಿಗೆ ರಾಹುಲ್ ಅವಮಾನ” ಹೇಳಿಕೆಯೊಂದಿಗೆ ವೀಡಿಯೋ ಹರಿದಾಡುತ್ತಿದ್ದು, ಇದನ್ನು ನಾವು ಇನ್‌ಸ್ಟಾಗ್ರಾಂನಲ್ಲಿ ಕಂಡಿದ್ದೇವೆ.
Also Read: ಕಾಶ್ಮೀರದಲ್ಲಿ ಕಾಂಗ್ರೆಸ್ ಗೆದ್ದರೆ ಜೈಲಿನಿಂದ ಉಗ್ರರ ಬಿಡುಗಡೆ ಮಾಡುವುದಾಗಿ ಹೇಳಿದೆಯೇ?
ಈ ಬಗ್ಗೆ ನ್ಯೂಸ್‌ಚೆಕರ್ ತನಿಖೆ ನಡೆಸಿದಾಗ ವೈರಲ್ ಹೇಳಿಕೆ ಸುಳ್ಳು ಎಂದು ನಮ್ಮ ತನಿಖೆಯಲ್ಲಿ ಕಂಡುಕೊಂಡಿದ್ದೇವೆ. ನಾಸಿಕ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವೇದಿಕೆಯ ಮೇಲೆ ಜನರು ಹೂಮಾಲೆ ಹಾಕಿದ ನಂತರ ರಾಹುಲ್ ಗಾಂಧಿ ಆ ವ್ಯಕ್ತಿಯಿಂದ ವಿಗ್ರಹವನ್ನು ಪಡೆದಿರುವುದನ್ನು ನಾವು ಗಮನಿಸಿದ್ದೇವೆ.
Also Read: ಬೆಂಗಳೂರು-ಮೈಸೂರು ಹೈವೇಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದ ವೀಡಿಯೋ ಗದಗಿನದ್ದು!
ಈ ವೀಡಿಯೋ ಸುಮಾರು 31 ಸೆಕೆಂಡುಗಳದ್ದಾಗಿದೆ. ವೀಡಿಯೋದಲ್ಲಿ, ವ್ಯಕ್ತಿಯೊಬ್ಬರು ರಾಹುಲ್ ಗಾಂಧಿಗೆ ಪೇಟ ತೊಡಿಸಿದ್ದರೆ, ಇನ್ನೊಬ್ಬರು ವಿಠಲನ ವಿಗ್ರಹವನ್ನು ಕೈಲಿ ಹಿಡಿದುಕೊಂಡು ಅವರ ಪಕ್ಕದಲ್ಲಿ ನಿಂತಿರುವುದು ಕಂಡುಬರುತ್ತದೆ. ಆ ವ್ಯಕ್ತಿಯು ಪ್ರತಿಮೆಯನ್ನು ರಾಹುಲ್ ಗಾಂಧಿಯವರಿಗೆ ನೀಡಲು ಪ್ರಯತ್ನಿಸಿದಾಗ ಮತ್ತೆ ಕೆಲವರು ಅವರನ್ನು ಸ್ವಲ್ಪ ಹಿಂದೆ ಸರಿಸಿ ಮಾಲಾರ್ಪಣೆ ಮಾಡುತ್ತಾರೆ. ಆ ನಂತರ ಅವರಿಗೆ ಪ್ರತಿಮೆಯನ್ನು ನೀಡಲಾಗುತ್ತದೆ.
ಇದೇ ರೀತಿಯ ಹೇಳಿಕೆಯೊಂದಿಗೆ ಬಿಜೆಪಿ ನಾಯಕ ಮತ್ತು ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಇದೇ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ವೈರಲ್ ಆದ ವೀಡಿಯೋವನ್ನು ತನಿಖೆ ಮಾಡಲು ನ್ಯೂಸ್ ಚೆಕರ್ ಮೊದಲು ರಾಹುಲ್ ಗಾಂಧಿ ಅವರ ನಾಸಿಕ್ ಕಾರ್ಯಕ್ರಮದ ವೀಡಿಯೋವನ್ನು ಶೋಧಿಸಿದೆ. ಅದರಂತೆ ರಾಹುಲ್ ಗಾಂಧಿ ಅವರ ಅಧಿಕೃತ ಯೂಟ್ಯೂಬ್ ಖಾತೆಯಿಂದ ಮಾರ್ಚ್ 14, 2024 ರಂದು ಲೈವ್ ಮಾಡಲಾದ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ.
ಸುಮಾರು 1 ಗಂಟೆ 17 ನಿಮಿಷಗಳ ಈ ವೀಡಿಯೋದಲ್ಲಿ, ವೈರಲ್ ವೀಡಿಯೋದ ಭಾಗವನ್ನು ಸುಮಾರು 17 ನಿಮಿಷಗಳಿಂದ ನೋಡಬಹುದು. ರಾಹುಲ್ ಗಾಂಧಿ ಅವರ ಭಾರತ್ ಜೋಡೇ ಯಾತ್ರೆ ನಾಸಿಕ್ ಗೆ ಆಗಮಿಸಿದ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾರುಕಟ್ಟೆ ಸಮಿತಿಯ ಜನರು ರಾಹುಲ್ ಗಾಂಧಿ ಅವರನ್ನು ಗೌರವಿಸಿದ್ದರು. ರಾಹುಲ್ ಗಾಂಧಿ ಅವರಿಗೆ ಮೊದಲು ಪೇಟ ತೊಡಿಸಿದ್ದು ಅನಂತರ ಹೂಮಾಲೆ ಹಾಕಲಾಯಿತು. ಬಳಿಕ ಅವರು ವ್ಯಕ್ತಿಯೊಬ್ಬರು ಉಡುಗೊರೆಯಾಗಿ ನೀಡಿದ ವಿಠಲನ ವಿಗ್ರಹವನ್ನು ಸ್ವೀಕರಿಸಿದರು.
ಆದಾಗ್ಯೂ, ರಾಹುಲ್ ಅವರಿಗೆ ಪೇಟ ತೊಡಿಸಿ, ಹಾರವನ್ನು ಹಾಕುವ ಸಂದರ್ಭದಲ್ಲಿ ಆ ವ್ಯಕ್ತಿ ವಿಗ್ರಹವನ್ನು ನೀಡಲು ಯತ್ನಿಸಿದ್ದಾರೆ. ಇದಾದ ಬಳಿಕ ಹಳದಿ ಬಟ್ಟೆ ಧರಿಸಿದ ವ್ಯಕ್ತಿ ಪ್ರತಿಮೆಯನ್ನು ರಾಹುಲ್ ಗಾಂಧಿಗೆ ಉಡುಗೊರೆಯಾಗಿ ನೀಡಿದ್ದಾರೆ.
ತನಿಖೆಯ ಸಮಯದಲ್ಲಿ, ಮಾರ್ಚ್ 14 ರಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಟ್ವೀಟ್ ಮಾಡಿದ ವೀಡಿಯೋವನ್ನು ನಾವು ಗಮನಿಸಿದ್ದೇವೆ. ವಿಠಲ ಭಗವಾನ್ ಅವರ ವಿಗ್ರಹವನ್ನು ಸ್ವೀಕರಿಸಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ ಎಂದು ಹೇಳಲಾದ ಮಹಾರಾಷ್ಟ್ರದ ಬಿಜೆಪಿ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಪಟೋಲೆ ಈ ವೀಡಿಯೋವನ್ನು ಮಾಡಿದ್ದಾರೆ.
ನಾನಾ ಪಟೋಲೆ ಟ್ವೀಟ್ ಮಾಡಿರುವ ಈ ವೀಡಿಯೋದಲ್ಲಿ, ಹಳದಿ ಬಟ್ಟೆ ಧರಿಸಿದ ವ್ಯಕ್ತಿಯು ಉಡುಗೊರೆಯಾಗಿ ನೀಡಿದ ವಿಗ್ರಹವನ್ನು ರಾಹುಲ್ ಗಾಂಧಿ ಸ್ವೀಕರಿಸಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ವೀಡಿಯೋ ಜೊತೆಗಿರುವ ಶೀರ್ಷಿಕೆಯಲ್ಲಿ ನಾನಾ ಪಟೋಲೆ ವೈರಲ್ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ಅನಂತರ ನಾವು ರಾಹುಲ್ ಗಾಂಧಿಗೆ ವಿಠಲನ ವಿಗ್ರಹವನ್ನು ಅರ್ಪಿಸಲು ಮುಂದಾದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸಿದ್ದೇವೆ. ಈ ವೇಳೆ ರಾಹುಲ್ ಗಾಂಧಿ ಅವರ ಯೂಟ್ಯೂಬ್ ಖಾತೆಯಿಂದ ಅಪ್ಲೋಡ್ ಮಾಡಲಾದ 1 ಗಂಟೆ 17 ನಿಮಿಷದ ವೀಡಿಯೋವನ್ನು ನಾವು ಎಚ್ಚರಿಕೆಯಿಂದ ನೋಡಿದ್ದೇವೆ. ಅದೇ ವ್ಯಕ್ತಿ ವೇದಿಕೆಯಲ್ಲಿದ್ದ ಶಿವಸೇನೆ ಮುಖಂಡ ಸಂಜಯ್ ರಾವತ್ ಅವರಿಗೆ ಗೌರವ ಸಲ್ಲಿಸಿದ್ದರು ಎಂದೂ ನಾವು ಕಂಡುಕೊಂಡಿದ್ದೇವೆ. ಈ ವ್ಯಕ್ತಿಯ ಹೆಸರನ್ನು ವೇದಿಕೆಯಿಂದ ಸಮಧನ್ ಜಾಮ್ದಾರ್ ಎಂದು ಕರೆಯಲಾಗುತ್ತಿತ್ತು. ನೀವು ಇದನ್ನು 18 ನಿಮಿಷ 30 ಸೆಕೆಂಡುಗಳಿಂದ 19 ನಿಮಿಷ 30 ಸೆಕೆಂಡುಗಳ ನಡುವೆ ಕೇಳಬಹುದು ಮತ್ತು ವೀಕ್ಷಿಸಬಹುದು.
ಬಳಿಕ ಸಮಧನ್ ಜಾಮ್ದಾರ್ ಅವರ ಫೇಸ್ಬುಕ್ ಖಾತೆಯನ್ನು ಶೋಧಿಸಿದ್ದು, ಫೇಸ್ಬುಕ್ ಖಾತೆಯನ್ನು ಕಂಡುಕೊಂಡಿದ್ದೇವೆ. ಅಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಸಮಧನ್ ಜಾಮ್ದಾರ್ ನಾಸಿಕ್ ಜಿಲ್ಲೆಯ ಚಂದ್ವಾಡ್ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ.
ತನಿಖೆಯ ಭಾಗವಾಗಿ ಕಾಂಗ್ರೆಸ್ ಮುಖಂಡ ಸಮಧನ್ ಜಾಮ್ದಾರ್ ಅವರನ್ನು ಸಂಪರ್ಕಿಸಿದ್ದೇವೆ. ಅವರು ವೈರಲ್ ವೀಡಿಯೋ ಕುರಿತಂತೆ ಸಂಪೂರ್ಣ ಸತ್ಯವನ್ನು ಹೇಳಿದ್ದಾರೆ. “ರಾಹುಲ್ ಗಾಂಧಿಯವರಿಗೆ ಪೇಟ ಕಟ್ಟುವಾಗ, ನಾನು ಅವರಿಗೆ ವಿಠಲನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲು ಹೋಗಿದ್ದೆ. ಪೇಟ ಕಟ್ಟಿದ ನಂತರ ವಿಗ್ರಹವನ್ನು ನೀಡಲು ಪ್ರಯತ್ನಿಸಿದಾಗ, ರಾಹುಲ್ ಗಾಂಧಿ ಅವರೊಂದಿಗೆ ಫೋಟೋಗೆ ಪೋಸ್ ನೀಡುತ್ತಿದ್ದ ಪೇಟ ಕಟ್ಟಿದ ವ್ಯಕ್ತಿ ಸ್ವಲ್ಪ ನಿಲ್ಲುವಂತೆ ಹೇಳಿದರು. ಅನಂತರ ರಾಹುಲ್ ಗಾಂಧಿ ಅವರಿಗೆ ಹೂಮಾಲೆ ಹಾಕಿ ನನ್ನಿಂದ ವಿಗ್ರಹವನ್ನು ಸ್ವೀಕರಿಸಿದರು” ಎಂದು ಹೇಳಿದ್ದಾರೆ.
Also Read: ಬೆಂಗಳೂರು ಕುಡಿಯುವ ನೀರಿನ ಕುರಿತ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಚಿಪ್ಸ್ ತಿನ್ನುತ್ತಿದ್ದರೇ?
ನಮ್ಮ ತನಿಖೆಯಲ್ಲಿ ದೊರೆತ ಪುರಾವೆಗಳ ಪ್ರಕಾರ ರಾಹುಲ್ ಗಾಂಧಿ ವಿಠಲನ ವಿಗ್ರಹವನ್ನು ಸ್ವೀಕರಿಸಲು ನಿರಾಕರಿಸಲಿಲ್ಲ, ಬದಲಿಗೆ ಅವರು ಹೂಮಾಲೆ ಗೌರವವನ್ನು ಸ್ವೀಕರಿಸಿದ ನಂತರ ವಿಠಲ ವಿಗ್ರಹದ ಉಡುಗೊರೆ ಸ್ವೀಕರಿಸಿದರು ಎಂಬುದು ಸ್ಪಷ್ಟವಾಗಿದೆ.
Our Sources
YouTube Video by Rahul Gandhi, Dated: 14th March 2024
X post By Nana Patole Dated: 14th March 2024
Telephonic Conversation with Samadhan Jamdar
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Salman
July 15, 2025
Ishwarachandra B G
July 12, 2025
Ishwarachandra B G
November 16, 2024