Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಒಡಿಶಾ ರೈಲು ದುರಂತ ಬಳಿಕ ರೈಲ್ವೇ ಸಿಗ್ನಲ್ ಜೆ.ಇ. ಅಮೀರ್ ಖಾನ್ ನಾಪತ್ತೆ
Fact
ರೈಲ್ವೇ ಸಿಗ್ನಲ್ ಜೆ.ಇ. ಅಮೀರ್ ಖಾನ್ ನಾಪತ್ತೆಯಾಗಿಲ್ಲ. ಎಲ್ಲ ಸಿಬ್ಬಂದಿ ಸಿಬಿಐ ತನಿಖೆಗೆ ಸಹಕಾರ ನೀಡುತ್ತಿದ್ದಾರೆ ಎಂದು ರೈಲ್ವೇ ಸ್ಪಷ್ಟೀಕರಣ ನೀಡಿದೆ.
ಒಡಿಶಾದ ರೈಲು ದುರಂತ ನಡೆದ ಬೆನ್ನಲ್ಲೇ ದುರಂತದ ಕಾರಣದ ಬಗ್ಗೆ ಸಂಶಯಗಳು ಇರುವುದರಿಂದ ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ಇದೇ ವೇಳೆ, ರೈಲ್ವೇ ಸಿಗ್ನಲಿಂಗ್ ಜವಾಬ್ದಾರಿ ಹೊಂದಿದ ಜೂನಿಯರ್ ಎಂಜಿನಿಯರ್ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿದೆ.
ಈ ಕುರಿತ ಫೇಸ್‌ಬುಕ್ ಕ್ಲೇಮಿನಲ್ಲಿ, “292 ಜನರ ಸಾವಿಗೆ ಕಾರಣವಾದ ಒಡಿಶಾ ರೈಲು ಅಪಘಾತ ತನಿಖೆಯಲ್ಲಿ ಅಮೀರ್ ಖಾನ್, JE ಅವನ (ಸೊರೊ ರೈಲ್ವೇ ಸಿಂಗ್ನಲ್) ಬಾಡಿಗೆ ಮನೆಗೆ ಸಿಬಿಐ ಸೀಲ್ ಮಾಡಿದೆ. ಈತ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಮ್ ಟ್ಯಾಂಪರಿಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇವನು ಕುಟುಂಬದೊಂದಿಗೆ ನಾಪತ್ತೆ ಆಗಿದ್ದಾನೆ.” ಎಂದು ಹೇಳಲಾಗಿದೆ.
Also Read: ರಾಮಾಯಣ ಧಾರಾವಾಹಿ ಶೀರ್ಷಿಕೆ ಗೀತೆಯನ್ನು ಅಮೆರಿಕನ್ ಶೋದಲ್ಲಿ ಬಾಲಕರು ಹಾಡಿದ್ದಾರೆಯೇ? ಇಲ್ಲ, ಇದು ಸುಳ್ಳು

https://www.facebook.com/photo/?fbid=6990080864378093&set=a.189391017780479
ಇದೇ ರೀತಿಯ ಕ್ಲೇಮುಗಳನ್ನುಇಲ್ಲಿ ನೋಡಬಹುದು.


ಸತ್ಯಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.
ಜೂನ್ 20, 2023ರ ಎಬಿಪಿ ಲೈವ್ ವರದಿ ಪ್ರಕಾರ, “ಕಳೆದ ಸೋಮವಾರ, ಬಹನಾಗ ರೈಲ್ವೇ ನಿಲ್ದಾಣದ ಜೂನಿಯರ್ ಎಂಜಿನಿಯರ್, ಅಮೀರ್ ಖಾನ್ ಎಂಬವರು ತಲೆಮರೆಸಿಕೊಂಡಿದ್ದಾನೆ ಎಂದು ಹಲವಾರು ಮಾಧ್ಯಮ ವರದಿಗಳು ಹೇಳಿಕೊಂಡಿವೆ. ಆದರೆ ಈ ಬಗ್ಗೆ ಆಗ್ನೇಯ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಆದಿತ್ಯ ಕುಮಾರ್ ಚೌಧರಿ ಅವರು ಸ್ಪಷ್ಟನೆ ನೀಡಿದ್ದು, ಇಂತಹ ವರದಿಯು “ವಾಸ್ತವಿಕವಾಗಿ ತಪ್ಪಾಗಿದ್ದು” ಎಲ್ಲ ಸಿಬ್ಬಂದಿ ಇಲ್ಲೇ ಇದ್ದು ಸಿಬಿಐ ತನಿಖೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.” ಎಂದಿದೆ.

ಜೂನ್ 20, 2023ರ ಇಂಡಿಯಾ ಟುಡೇ ವರದಿಯಲ್ಲೂ, “ರೈಲ್ವೇ ಅಧಿಕಾರಿಯೊಬ್ಬರು ಬಹನಾಗಾ ನಿಲ್ದಾಣದ ರೈಲ್ವೇ ಉದ್ಯೋಗಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂಬ ವರದಿಗಳನ್ನು ರೈಲ್ವೇ ಇಲಾಖೆ ತಳ್ಳಿಹಾಕಿದೆ.” ಎಂದಿದೆ.
Also Read: ಬಿಪರ್ ಜಾಯ್ ಚಂಡಮಾರುತದ ಪರಿಣಾಮ ತೋರಿಸಲು ಹಳೆಯ, ಸಂಬಂಧವೇ ಇಲ್ಲದ ವೀಡಿಯೋಗಳ ಬಳಕೆ!

ಇದೇ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಎಎನ್‌ಐಗೆ ಪ್ರತಿಕ್ರಿಯೆ ನೀಡಿರುವ ಆಗ್ನೇಯ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಆದಿತ್ಯ ಕುಮಾರ್ ಚೌಧರಿ ಅವರ ವೀಡಿಯೋವನ್ನು ಜೂನ್ 20, 2023ರಂದು ಟ್ವೀಟರ್ ನಲ್ಲಿ ಹಂಚಿಕೊಂಡಿದೆ.
ಹಾಗಿದ್ದರೆ, ಜೂನಿಯರ್ ಎಂಜಿನಿಯರ್ ಅಮೀರ್ ಖಾನ್ ತಲೆಮರೆಸಿಕೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳು ಇದ್ದವೇ? ಎಂಬ ಕುರಿತೂ ಶೋಧ ನಡೆಸಲಾಗಿದ್ದು ಕೆಲವೊಂದು ಲಭ್ಯವಾಗಿದೆ.
ಜೂನ್ 19, 2023ರ ಆರ್ಗನೈಸರ್ ವರದಿಯಲ್ಲಿ, “ಸಿಬಿಐ ತಂಡ ಜೂನಿಯರ್ ಎಂಜಿನಿಯರ್ ಅಮೀರ್ ಖಾನ್ ಅವರ ಬಾಡಿಗೆ ಮನೆಗೆ ಬಂದಿದ್ದು, ಈ ವೇಳೆ ಮನೆ ಬೀಗ ಹಾಕಿರುವುದು ಮತ್ತು ಕುಟುಂಬ ನಾಪತ್ತೆಯಾಗಿರುವುದು ಕಂಡುಬಂದಿದೆ” ಎಂದು ಹೇಳಿದೆ. ಜೊತೆಗೆ “ಮನೆ ಬೀಗ ಹಾಕಿದ್ದರಿಂದ ಬಳಿಕ ಸಿಬಿಐ ಅದನ್ನು ಸೀಲ್ ಮಾಡಿದೆ” ಎಂದು ವರದಿಯಲ್ಲಿದೆ.
ಜೂನ್ 20, 2023ರ ಡೆಕ್ಕನ್ ಕ್ರಾನಿಕಲ್ ವರದಿಯಲ್ಲಿ “ಸಾರೋ ಸೆಕ್ಷನ್‌ನಲ್ಲಿರುವ ಸಿಗ್ನಲ್ ಜೂನಿಯರ್ ಎಂಜಿನಿಯರ್ ಅವರ ಮನೆಯನ್ನು ಬಾಲಸೋರ್ ರೈಲು ದುರಂತ ಹಿನ್ನೆಲೆಯಲ್ಲಿ ಸಿಬಿಐ ಸೀಲ್ ಮಾಡಿದೆ ಎಂದಿದೆ. ಬಾಲಸೋರ್ನಲ್ಲಿ ಈ ಮನೆಯಿದ್ದು, ಈ ಮೊದಲು ನಿಗೂಢ ಸ್ಥಳದಲ್ಲಿ ಅಮೀರ್ ಖಾನ್ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಆ ಬಳಿಕ ಅವರೀಗ ತಲೆಮರೆಸಿಕೊಂಡಿದ್ದಾರೆ ಎಂದಿದೆ.” ಇದೇ ವರದಿಯಲ್ಲಿ “ಅಮೀರ್ ಖಾನ್ ಮತ್ತವರ ಕುಟುಂಬ ಜೂನ್ 2 ರ ರೈಲು ದುರಂತ ಬಳಿಕ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ” ಎಂದಿದೆ.
Also Read: ದಾಂಡೇಲಿಯ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರು, ಈ ಘಟನೆ ನಿಜವೇ?
ಜೂನಿಯರ್ ಎಂಜಿನಿಯರ್ ನಾಪತ್ತೆಯಾಗಿದ್ದಾರೆ ಎಂದಿರುವ ಈ ವರದಿಗಳಲ್ಲಿ ಒಂದಕ್ಕೊಂದು ವಿರೋಧಾಭಾಸಗಗಳಿರುವುದನ್ನು ನ್ಯೂಸ್‌ಚೆಕರ್ ಕಂಡುಕೊಂಡಿದೆ. ಜೊತೆಗೆ ಈ ವರದಿಗಳ ಬಳಿಕ ರೈಲ್ವೇ ಸ್ಪಷ್ಟೀಕರಣ ಕೊಟ್ಟಿರುವುದು ತಿಳಿದುಬಂದಿದೆ.
ಈ ಸತ್ಯಶೋಧನೆ ಪ್ರಕಾರ, ರೈಲ್ವೇ ಸಿಗ್ನಲಿಂಗ್ ಜೂನಿಯರ್ ಎಂಜಿನಿಯರ್ ಅಮೀರ್ ಖಾನ್ ನಾಪತ್ತೆಯಾಗಿದ್ದಾರೆ ಎನ್ನವುದು ತಪ್ಪಾಗಿದೆ.
Report By, ABP live Dated, June 20, 2023
Report By, India Today Dated, June 20, 2023
Tweet By, ANI Dated, June 20, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
June 24, 2023
Vasudha Beri
June 24, 2023
Kushel Madhusoodan
June 15, 2023