Authors
Claim
ಶಾಂತಿಪ್ರಿಯ ಯುವಕರು ರೈಲ್ವೇ ಹಳಿ ಕ್ಲಾಂಪ್‌ಗಳನ್ನು ಕಿತ್ತು ಹಾಕಿದ್ದಾರೆ
Fact
ಒಡಿಶಾದಲ್ಲಿ ನಡೆದ ಕೋರಮಂಡಲ್ ಎಕ್ಸ್ ಪ್ರೆಸ್ ದುರಂತಕ್ಕೂ ಇದಕ್ಕೂ ಸಂಬಂಧವಿಲ್ಲ, ರೈಲ್ವೇ ಹಳಿ ಕ್ಲಾಂಪ್‌ಗಳನ್ನು ಕಿತ್ತು ಹಾಕಿರುವ ವಿದ್ಯಮಾನ 2022 ಜೂನ್ ವೇಳೆ ಅಗ್ನಿಪಥ ಯೋಜನೆ ವಿರುದ್ಧದ ಪ್ರತಿಭಟನೆಯಲ್ಲಿ ರಾಜಸ್ಥಾನದಲ್ಲಿ ನಡೆದ ಬಗ್ಗೆ ವರದಿಯಾಗಿತ್ತು
ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ದುರಂತ ಬೆನ್ನಲ್ಲೇ, ಇಂತಹ ಅವಘಡಕ್ಕೆ ಕೋಮು ಬಣ್ಣ ನೀಡುವ ಹೇಳಿಕೆಗಳು ಹರಿದಾಡಿವೆ.
ವಾಟ್ಸಾಪ್ ನಲ್ಲಿ ಕಂಡುಬಂದ ಇಂತಹ ಕ್ಲೇಮ್ ಒಂದರಲ್ಲಿ “ಹೇಳೋದು ಬೇಕಾಗಿಲ್ಲಾ ತಮಗೆ ಅರ್ಥ ಅಗಿರುತ್ತದೆ. ಗ್ರೀನ್ ಸಿಗ್ನಲ್ ಸಿಕ್ಕರೂ ಕೋರಮಂಡಲ್ ಎಕ್ಸ್ ಪ್ರೆಸ್ ಅನ್ನು ಹೇಗೆ ಹಾಳುಗೆಡವಿರಬಹುದು ಎಂಬ ಕಲ್ಪನೆಯನ್ನು ಇದು ನೀಡುತ್ತದೆ. ಈ ಶಾಂತಿಪ್ರೀಯ ಯುವಕರು ಕಾಂಕ್ರೀಟ್ ಸ್ಲೀಪರ್‌ಗಳ ಮೇಲೆ ಹಳಿಗಳನ್ನು ಹಿಡಿದಿರುವ ಕ್ಲಾಂಪ್‌ಗಳನ್ನು ತೆಗೆದುಹಾಕುತ್ತಿದ್ದಾರೆ” ಎಂದು ಹೇಳಲಾಗಿದೆ.
Also Read: ದ್ವಾರಕೆ ಬಳಿ ಬಿಪರ್ ಜಾಯ್ ಚಂಡಮಾರುತ ಎಂದು 2022ರಲ್ಲಿ ಡಿಜಿಟಲ್ ಆಗಿ ಮಾರ್ಪಡಿಸಿದ ವೀಡಿಯೋ ಹಂಚಿಕೆ
ಈ ಕುರಿತ ಸತ್ಯಶೋಧನೆಗೆ ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್‌ಲೈನ್‌ಗೆ (+91-9999499044) ಬಳಕೆದಾರರರೊಬ್ಬರು ದೂರು ನೀಡಿದ್ದು, ಇದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.
ಇದೇ ಕ್ಲೇಮ್ ಫೇಸ್‌ಬುಕ್‌ನಲ್ಲಿಯೂ ಕಂಡುಬಂದಿದ್ದು, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Fact Check/ Verification
ಸತ್ಯಶೋಧನೆಗಾಗಿ ನಾವು ವಿಡಿಯೋದ ಕೀಫ್ರೇಮ್‌ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಟ್ವಿಟರ್ನ ಪೋಸ್ಟ್ ಒಂದು ಲಭ್ಯವಾಗಿದೆ. ಜೂನ್ 19 2022ರಂದು ಈ ಟ್ವೀಟ್ ಮಾಡಲಾಗಿದ್ದು, ಹಳಿಯ ಕ್ಲಾಂಪ್‌ಗಳನ್ನು ತೆಗೆಯುವ ಕೃತ್ಯ ಜೈಪುರ-ಆಗ್ರಾ ರೈಲು ಮಾರ್ಗಾದ ಭರತ್ ಪುರದಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ, ಬಳಿಕ ನಾವು ಕೀವರ್ಡ್ ಸರ್ಚ್ ನಡೆಸಿದ್ದು, ಜೂನ್ 2022ರ ದೈನಿಕ್ ಭಾಸ್ಕರ್ ವರದಿ ಲಭ್ಯವಾಗಿದೆ. ಈ ವರದಿಯಲ್ಲಿ ಕೇಂದ್ರದ ಅಗ್ನಿಪಥ ಯೋಜನೆ ವಿರುದ್ಧ ಪ್ರತಿಭಟನೆ ನಡೆದಿದ್ದರ ಉಲ್ಲೇಖವಿದೆ. ಈ ವರದಿ ಪ್ರಕಾರ, ಪ್ರತಿಭಟನಕಾರರು ರಾಜಸ್ಥಾನದ ಭರತ್‌ಪುರ ರೈಲ್ವೇ ಸ್ಟೇಷನ್ ಸನಿಹ ರೈಲ್ವೇ ಹಳಿಗಳನ್ನು ಹಾಳುಗೆಡವಿದ್ದಲ್ಲದೆ ಪೊಲೀಸರತ್ತ ಕಲ್ಲು ತೂರಿದರು ಎಂದಿದೆ. ಇದರಿಂದಾಗಿ ಮೂರು ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದಿದೆ.
Also Read: ದಾಂಡೇಲಿಯ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರು, ಈ ಘಟನೆ ನಿಜವೇ?
ಈ ಪ್ರತಿಭಟನೆ ಮತ್ತು ಹಾನಿಗೆಡವಿದ ಕೃತ್ಯಗಳ ಬಗ್ಗೆ ಪತ್ರಿಕಾ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Also Read: ಭಟ್ಪಾರಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ, ಸತ್ಯ ಏನು?
Conclusion
ಈ ಸತ್ಯಶೋಧನೆಯ ಪ್ರಕಾರ, ಕೋರಮಂಡಲ್ ಎಕ್ಸ್ ಪ್ರೆಸ್ ದುರಂತ ಹೇಗೆ ಆಗಿರಬಹುದು ಮತ್ತು ಒಂದು ಸಮುದಾಯದ ಯುವಕರು ರೈಲ್ವೇ ಹಳಿಯ ಕ್ಲಾಂಪ್‌ಗಳನ್ನು ಕಿತ್ತುಹಾಕುತ್ತಿದ್ದಾರೆ ಎನ್ನವುದು ತಪ್ಪಾದ ಸಂದರ್ಭವಾಗಿದೆ.
Result: Missing Context
Our Sources
Tweet By MJ_007Club, Dated, June 19, 2022
Report By Dainik Bhaskar, Dated, June 2022
(ಈ ಮೂಲ ಲೇಖನವನ್ನು ನ್ಯೂಸ್‌ಚೆಕರ್ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು, ಅದನ್ನು ಇಲ್ಲಿ ಓದಬಹುದು)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.