Fact Check: ಗೋಮಾಂಸ ರಫ್ತಿನಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಕಿಂಗ್‌ ಆಗಿದ್ದಾರೆಯೇ, ಸತ್ಯ ಏನು?

ಗೋಮಾಂಸ, ರಾಜೀವ್ ಚಂದ್ರಶೇಖರ್, ಕನ್ನಡಪ್ರಭ, ಗೋಮಾಂಸ ರಫ್ತು ಉದ್ಯಮ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ದೇಶದಲ್ಲಿ ಅತಿ ದೊಡ್ಡ ಗೋಮಾಂಸ ಉದ್ಯಮ ಪ್ರಾರಂಭಿಸಿದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್

Fact
ಸತ್ಯಶೋಧನೆಯ ಪ್ರಕಾರ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್ ಅವರು ಗೋಮಾಂಸದ ಉದ್ಯಮವನ್ನು ಹೊಂದಿಲ್ಲ ಮತ್ತು ಈ ಕುರಿತು ಕನ್ನಡಪ್ರಭ ಹೆಸರಿನಲ್ಲಿ ಪ್ರಕಟಿಸಿದ ವರದಿ ಸುಳ್ಳು

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಹಿಂದಿನ ಬಿಜೆಪಿ ಸರ್ಕಾರ ಗೋಹತ್ಯಾ ಕಾಯಿದೆಗೆ ತಂದ ತಿದ್ದುಪಡಿಗಳನ್ನು ವಾಪಸ್‌ ತೆಗೆದುಕೊಳ್ಳುತ್ತದೆ ಎಂಬ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದ ಬೆನ್ನಲ್ಲೇ, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ, ರಾಜೀವ್‌ ಚಂದ್ರಶೇಖರ್ ಅವರು ಅತಿ ದೊಡ್ಡ ಗೋಮಾಂಸ ಉದ್ಯಮ ಪ್ರಾರಂಭಿಸಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಫೇಸ್‌ಬುಕ್‌ನಲ್ಲಿ ಈ ಕುರಿತ ಹೇಳಿಕೆಯೊಂದರಲ್ಲಿ “ಗೋಮಾಂಸ ರಫ್ತಿನಲ್ಲಿ ರಾಜೀವ್‌ ಕಿಂಗ್‌!- ದೇಶದ ಅತಿ ದೊಡ್ಡ ಗೋಮಾಂಸ ಉದ್ಯಮ ಪ್ರಾರಂಭಿಸಿದ ಕನ್ನಡ ಪ್ರಭ  ಹಾಗೂ ಸುವರ್ಣ ನ್ಯೂಸ್‌ ಮಾಲೀಕ ಹಾಗೂ ಬಿಜೆಪಿ ಸಂಸದ ರಾಜೀವ್‌ ಚಂದ್ರ ಶೇಖರ್” ಎಂದಿದೆ. ಜೊತೆಗೆ ಮಾಂಸದ ಅಂಗಡಿಯ ಮುಂದೆ ರಾಜೀವ್‌ ಚಂದ್ರಶೇಖರ್‌ ಅವರು ನಿಂತ ಚಿತ್ರವನ್ನೂ ಹಾಕಲಾಗಿದೆ.

Also Read: ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್‌

ಗೋಮಾಂಸ ರಫ್ತಿನಲ್ಲಿ ರಾಜೀವ್‌ ಚಂದ್ರಶೇಖರ್‌ ಕಿಂಗ್‌ ಆಗಿದ್ದಾರೆಯೇ, ಸತ್ಯ ಏನು?
ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ಕ್ಲೇಮ್

ಇದೇ ರೀತಿಯ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು, ಇಂತಹ ಪೋಸ್ಟ್‌ಗಳು 2019ರಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಗೊತ್ತಾಗಿದೆ.

ಈ ಕುರಿತು ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ, ವೈರಲ್ ಆಗಿರುವ ಫೋಟೋದ ರಿವರ್ಸ್ ಸರ್ಚ್ ಅನ್ನು ನಾವು ಮಾಡಿದ್ದೇವೆ. ಈ ವೇಳೆ, ಫೋಟೋವನ್ನು ಫ್ಲಿಕರ್ ನಿಂತ ತೆಗೆದಿರುವುದು ಕಂಡುಬಂದಿದೆ. ಈ ಚಿತ್ರವು ವೈರಲ್‌ ಚಿತ್ರಕ್ಕೆ ಬಹುತೇಕ ಹೋಲಿಕೆ ಇರುವುದು ಕಂಡುಬಂದಿದೆ ಮತ್ತು ವ್ಯಕ್ತಿಯ ತಲೆಯ ಭಾಗದಲ್ಲಿ ಮಾತ್ರ ರಾಜೀವ್‌ ಚಂದ್ರಶೇಖರ್ ಅವರ ಮುಖವನ್ನು ಲಗತ್ತಿಸಿರುವುದು ಗೊತ್ತಾಗಿದೆ.

ಈ ಫೋಟೋವನ್ನು ಮಾನ್ಫ್ರೆಡ್‌ ಸೊಮ್ಮೆರ್‌ ಎಂಬ ಛಾಯಾಚಿತ್ರಕಾರರು ತಮಿಳುನಾಡಿನ ಊಟಿಯಲ್ಲಿ ತೆಗೆದಿದ್ದಾರೆ. ಉದಕಮಂಡಲದ ಬೀಫ್‌ (ದನದ ಮಾಂಸ) ಸ್ಟಾಲ್ ಎಂದವರು ಇದರಲ್ಲಿ ಬರೆದಿದ್ದಾರೆ. ಇದು ಇಲ್ಲಿದೆ.

ಗೋಮಾಂಸ ರಫ್ತಿನಲ್ಲಿ ರಾಜೀವ್‌ ಚಂದ್ರಶೇಖರ್‌ ಕಿಂಗ್‌ ಆಗಿದ್ದಾರೆಯೇ, ಸತ್ಯ ಏನು?
ಚಿತ್ರಕೃಪೆ ಮಾನ್‌ಪ್ರೆಡ್ ಸೊಮ್ಮೆರ್‌, ಫ್ಲಿಕರ್

ಮಾರ್ಚ್ 29, 2011ರ ಇಕನಾಮಿಕ್‌ ಟೈಮ್ಸ್‌ನಲ್ಲಿ ರಾಜೀವ್‌ ಚಂದ್ರಶೇಖರ್ ಅವರ ಬಗ್ಗೆ “Rajeev Chandrasekhar: The entrepreneur with fingers in many sectors” ಶೀರ್ಷಿಕೆಯಲ್ಲಿ ಲೇಖನವೊಂದು ಪ್ರಕಟವಾಗಿದ್ದು, ಹೂಡಿಕೆ, ಟೆಲಿಕಾಂ ಮಾಧ್ಯಮ ಕ್ಷೇತ್ರಗಳಲ್ಲಿ ಅವರು ಉದ್ಯಮ ಹೊಂದಿರುವ ಬಗ್ಗೆ ಇದರಲ್ಲಿ ಬರೆಯಲಾಗಿದೆ.

Also Read: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪುರಿ ಜಗನ್ನಾಥ ದೇಗುಲದ ಗರ್ಭಗೃಹಕ್ಕೆ ಪ್ರವೇಶಿಸಿದಂತೆ ತಡೆಯಲಾಯಿತೇ?

ಗೋಮಾಂಸ ರಫ್ತಿನಲ್ಲಿ ರಾಜೀವ್‌ ಚಂದ್ರಶೇಖರ್‌ ಕಿಂಗ್‌ ಆಗಿದ್ದಾರೆಯೇ, ಸತ್ಯ ಏನು?
ಇಕನಾಮಿಕ್‌ ಟೈಮ್ಸ್‌ ವರದಿ

ಇನ್ನು 2018ರಲ್ಲಿ ರಾಜ್ಯಸಭೆ ಚುನಾವಣೆ ಸಂದರ್ಭ ರಾಜೀವ್‌ ಚಂದ್ರಶೇಖರ್‌ ಅವರು ಸಲ್ಲಿಸಿದ ಅಫಿಡವಿಟ್‌ ಅನ್ನು ನ್ಯೂಸ್‌ಚೆಕರ್‌ ಶೋಧಿಸಿದ್ದು, ಇಲ್ಲೂ ಯಾವುದೇ ಗೋಮಾಂಸದ ಉದ್ದಿಮೆಯ ಕುರಿತು ಅವರು ಘೋಷಿಸಿಕೊಂಡಿರುವುದಿಲ್ಲ. ಈ ಅಫಿಡವಿಟ್‌ ಇಲ್ಲಿದೆ.

ಮೈ ನೇತಾದಲ್ಲೂ ಅಫಿಡವಿಟ್ ಕುರಿತ ವಿವರಗಳು ಲಭ್ಯವಿದ್ದು, ಅದನ್ನು ಇಲ್ಲಿ ನೋಡಬಹುದು.

ವೈರಲ್‌ ಆಗಿರುವ ಸಂದೇಶದಲ್ಲಿ ಕನ್ನಡ ಪ್ರಭ ಕನ್ನಡ ಪತ್ರಿಕೆಯ ಲೋಗೋ ಮತ್ತು ಹೆಸರನ್ನು ಹಾಕಿದ್ದು, ಈ ಹಿನ್ನೆಲೆಯಲ್ಲಿ ಅಂತಹ ವರದಿಯ ಬಗ್ಗೆ ಶೋಧ ನಡೆಸಲಾಯಿತು. ಆದರೆ, ಕನ್ನಡ ಪ್ರಭ ಅಂತಹ ಯಾವುದೇ ವರದಿ ಪ್ರಕಟಿಸಿರುವುದು ಕಂಡುಬಂದಿರುವುದಿಲ್ಲ.

ಈ ಬಗ್ಗೆ ಖಚಿತಪಡಿಸಿಕೊಳ್ಳಲು ಕನ್ನಡ ಪ್ರಭ-ಸುವರ್ಣ ನ್ಯೂಸ್ ಮುಖ್ಯ ಸಂಪಾದಕರಾದ ರವಿ ಹೆಗಡೆಯವರನ್ನು ನ್ಯೂಸ್ ಚೆಕರ್‌ ಸಂಪರ್ಕಸಿದೆ. ಈ ವೇಳೆ ಅವರು ಪ್ರತಿಕ್ರಿಯಿಸಿ “ರಾಜೀವ್‌ ಚಂದ್ರಶೇಖರ್‌ ಅವರು ಗೋಮಾಂಸ ರಫ್ತು ಉದ್ಯಮ ನಡೆಸುತ್ತಿದ್ದಾರೆ ಎಂದು ಪತ್ರಿಕೆ ಯಾವುದೇ ವರದಿ ಪ್ರಕಟಿಸಿಲ್ಲ. ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ಪತ್ರಿಕೆ ವರದಿ ಪ್ರಕಟಿಸಿದೆ ಎಂಬ ರೀತಿ ತಿರುಚಲಾಗಿದೆ ಎಂದು ಹೇಳಿದ್ದಾರೆ.

ಇನ್ನು ರಾಜೀವ್‌ ಚಂದ್ರಶೇಖರ್‌ ಅವರು ಗೋಮಾಂಸ ಉದ್ಯಮವನ್ನು ಪ್ರಾರಂಭಿಸಿದ್ದಾರೆಯೇ? ಎಂಬುದನ್ನು ತಿಳಿಯಲು ಅವರ ಕಚೇರಿಯನ್ನು ಸಂಪರ್ಕಿಸಿದ್ದು, ಈ ವೇಳೆ ಅವರ ಕಾರ್ಯದರ್ಶಿ, ವಿನಯ್‌ ರಾಜೀವ್ ಅವರು ನ್ಯೂಸ್‌ಚೆಕರ್‌ ನೊಂದಿಗೆ ಮಾತನಾಡಿ, “ಇದು ಸಂಪೂರ್ಣ ಸುಳ್ಳು ಸುದ್ದಿ, ರಾಜೀವ್‌ ಚಂದ್ರಶೇಖರ್ ಅವರ ಬಗ್ಗೆ ಈ ಸುಳ್ಳು ಸುದ್ದಿ ಹಬ್ಬಿಸುವುದರ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಈ ಕುರಿತು ನಾವು ಕಾನೂನು ಕ್ರಮದ ಭಾಗವಾಗಿ ಪೊಲೀಸ್‌ ದೂರು ನೀಡಲಿದ್ದೇವೆ” ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಇಲ್ಲಿದೆ.

Conclusion

ಈ ಸತ್ಯಶೋಧನೆಯ ಪ್ರಕಾರ, ರಾಜೀವ್‌ ಚಂದ್ರಶೇಖರ್‌ ಅವರು ದೇಶದ ಅತಿ ದೊಡ್ಡ ಗೋಮಾಂಸ ಉದ್ಯಮ ಪ್ರಾರಂಭಿಸಿದ್ದಾರೆ ಎನ್ನುವುದು ಸುಳ್ಳು ಸುದ್ದಿಯಾಗಿದೆ. ಮತ್ತು ಈ ಸುದ್ದಿಗಾಗಿ ಬಳಸಿಕೊಂಡಿರುವ ಫೋಟೋ ಮತ್ತು ಪತ್ರಿಕೆಯ ಲೋಗೋವನ್ನು ತಿರುಚಿರುವುದು ಕಂಡುಬಂದಿದೆ.

Also Read: ಋತುಚಕ್ರದ ವೇಳೆ ಮಹಿಳೆಯರು ನೆಲ್ಲಿಕಾಯಿ ತಿನ್ನುವುದರಿಂದ ಫಲವತ್ತತೆ ಹೆಚ್ಚಾಗುತ್ತದೆ ಎನ್ನೋದು ಸತ್ಯವೇ?

Result: False

Our Sources

Report By, Economics Times, March 29 2011

Flickr Page of Manfred Sommer

Rajya Sabha election Affidavit By Rajiv Chandrashekhar, Dated: March 12, 2018

Election Affidavit Published By My Neta.info

Conversation with Central Minister Rajiv Chandrashekhar office

Conversation with Ravi Hegde, Editor in Chief Kannadaprabha and Suvarna news 24X7

(Update: This article was updated on 04/07/2023 to include Rajeev Chandrashekhar’s Tweet response)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.