Fact Check: ಕಾಶ್ಮೀರ ಹೈವೇ ಎಂದು ಚೀನ ಹೆದ್ದಾರಿ ಫೋಟೋ ವೈರಲ್

ಜಮ್ಮು ಮತ್ತು ಕಾಶ್ಮೀರ ಹೈವೇ, ಚೀನ ಹೆದ್ದಾರಿ

Authors

An enthusiastic journalist, researcher and fact-checker, Shubham believes in maintaining the sanctity of facts and wants to create awareness about misinformation and its perils. Shubham has studied Mathematics at the Banaras Hindu University and holds a diploma in Hindi Journalism from the Indian Institute of Mass Communication. He has worked in The Print, UNI and Inshorts before joining Newschecker.

Pankaj Menon

Claim
ಜಮ್ಮುವಿನ ರಾಷ್ಟ್ರೀಯ ಹೆದ್ದಾರಿ 44ರ ಚಿತ್ರ

Fact
ಇದು ಜಮ್ಮು-ಕಾಶ್ಮೀರದ ಹೆದ್ದಾರಿ ಚಿತ್ರವಲ್ಲ; ಇದು ಚೀನಾದ ಗಾನ್ಸು ಪ್ರಾಂತ್ಯದ ವೀಯುವಾನ್-ವುಡು ಎಕ್ಸ್‌ಪ್ರೆಸ್‌ ವೇ ಯ ಫೋಟೋ

ಜಮ್ಮು ಮತ್ತು ಕಾಶ್ಮೀರ ಹೈವೇ ಎಂದು ಹೆದ್ದಾರಿಯೊಂದರ ಫೋಟೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಹೆದ್ದಾರಿಯನ್ನು ನಿರ್ಮಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದೂ ಹೇಳಿಕೆಯಲ್ಲಿ ಹೇಳಲಾಗಿದೆ.

Also Read: ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್‌

ಕಾಶ್ಮೀರ ಹೈವೇ ಎಂದು ಚೀನ ಹೆದ್ದಾರಿ ಫೋಟೋ ವೈರಲ್

Fact Check/Verification

ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ನಾವು ಫೋಟೋದ ರಿವರ್ಸ್‌ ಇಮೇಜ್‌ ಸರ್ಚ್ ನಡೆಸಿದ್ದೇವೆ. ಜೊತೆಗೆ ವಿರ್ಲಿ ಎಂಬ ವೆಬ್ಸೈಟ್ನಲ್ಲಿ ಮೂರು ವರ್ಷಗಳ ಹಿಂದೆ ಪ್ರಕಟವಾದ ವರದಿಯಲ್ಲಿ ನಾವು ಈ ಚಿತ್ರವನ್ನು ಪತ್ತೆ ಹಚ್ಚಿದ್ದೇವೆ.

ಕಾಶ್ಮೀರ ಹೈವೇ ಎಂದು ಚೀನ ಹೆದ್ದಾರಿ ಫೋಟೋ ವೈರಲ್
ಸರ್ಚ್‌ ಫಲಿತಾಂಶಗಳು

ಚಿತ್ರದೊಂದಿಗೆ ನೀಡಲಾದ ಮಾಹಿತಿಯ ಪ್ರಕಾರ, ಇದು ಚೀನಾ-ಪಾಕಿಸ್ತಾನ ಕಾರಿಡಾರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಸಿಪಿಇಸಿ ಯೋಜನೆಯ ಚಿತ್ರವಾಗಿದೆ.

Also Read: ಗುಜರಾತ್ ಹೈಕೋರ್ಟ್‌ ಮೀಸಲಾತಿ ರದ್ದುಗೊಳಿಸಿದೆಯೇ, ವೈರಲ್‌ ಪೋಸ್ಟ್‌ ನಿಜವೇ?

ಕಾಶ್ಮೀರ ಹೈವೇ ಎಂದು ಚೀನ ಹೆದ್ದಾರಿ ಫೋಟೋ ವೈರಲ್
ವಿರ್ಲಿ ಪ್ರಕಟಿಸಿದ ಫೊಟೋ

ಇದರ ಸಹಾಯವನ್ನು ತೆಗೆದುಕೊಂಡು, ನಾವು ಗೂಗಲ್ನಲ್ಲಿ ಕೆಲವು ಕೀವರ್ಡ್ಗಳನ್ನು ಹಾಕಿ ಮತ್ತಷ್ಟು ಹುಡುಕಿದೆವು. ಈ ವೇಳೆ ನಾವು ಜುಲೈ 2022 ರಲ್ಲಿ ಕೈಕ್ಸಿನ್ ಗ್ಲೋಬಲ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನು ಕಂಡುಕೊಂಡಿದ್ದೇವೆ. ಅದರಲ್ಲಿ ಈ ವೈರಲ್ ಚಿತ್ರವಿದೆ. ವರದಿಯಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಇದು ಚೀನಾದ ಗಾನ್ಸು ಪ್ರಾಂತ್ಯದ ವೀಯುವಾನ್-ವುಡು ಎಕ್ಸ್‌ಪ್ರೆಸ್‌ ವೇ ಯ ಚಿತ್ರವಾಗಿದೆ. ಇದನ್ನು 2020 ರಲ್ಲಿ ಸಾರ್ವಜನಿಕರಿಗೆ ತೆರೆಯಲಾಗಿದೆ ಎಂದು ವರದಿಯಲ್ಲಿದೆ.

ಕಾಶ್ಮೀರ ಹೈವೇ ಎಂದು ಚೀನ ಹೆದ್ದಾರಿ ಫೋಟೋ ವೈರಲ್
ಕೈಕ್ಸಿನ್‌ ವರದಿ

ಇದಲ್ಲದೆ, ಚೀನೀ ಭಾಷೆಯಲ್ಲಿ ಕೆಲವು ಕೀವರ್ಡ್ಗಳನ್ನು ಹುಡುಕಿದಾಗ, gansu.gsn ಎಂಬ ವೆಬ್ಸೈಟ್ನಲ್ಲಿ ಇದೇ ರೀತಿಯ ಚಿತ್ರವನ್ನು ನಾವು ಪತ್ತೆ ಹಚ್ಚಿದ್ದೇವೆ. “ಇದು ವೀಡುವಾನ್-ವುಡು ಎಕ್ಸ್ ಪ್ರೆಸ್‌ ವೇನ ಲಾಂಗನ್ ವಿಭಾಗದ ಭಾಗವಾಗಿದೆ, ಇದನ್ನು ಪ್ರಾಯೋಗಿಕವಾಗಿ ತೆರೆಯಲಾಗುವುದು. ‘ ಎಂದಿದೆ.

Also Read: ಸಚಿವ ಪ್ರಿಯಾಂಕ್‌ ಖರ್ಗೆ ಅಕ್ರಮ ಗೋಹತ್ಯೆ ಬೆಂಬಲಿಸಿ ಮಾತನಾಡಿದ್ದಾರೆಯೇ?

Conclusion

ಈ ಸತ್ಯಶೋಧನೆಯ ಪ್ರಕಾರ, ಚೀನಾದ ಹೆದ್ದಾರಿಯ ಚಿತ್ರವನ್ನು ಜಮ್ಮು ಮತ್ತು ಕಾಶ್ಮೀರದ್ದು ಎಂದು ಹೇಳುವ ಮೂಲಕ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ನಮ್ಮ ತನಿಖೆಯಲ್ಲಿ ಸ್ಪಷ್ಟವಾಗಿದೆ.

Result: False

Our Sources

Report Published at Virily in 2020

Report Published at Caxin in 2022

Report Published at gansu.gsn in 2020

(ಈ ಲೇಖನದ ಮೊದಲು ನ್ಯೂಸ್‌ಚೆಕರ್‌ ಹಿಂದಿಯಲ್ಲಿ ಪ್ರಕಟಗೊಂಡಿದ್ದು, ಅದು ಇಲ್ಲಿದೆ)

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.