Authors
Claim
ಮಗುವಿನ ಕೈಯಿಂದ ಮೊಬೈಲ್ ತೆಗೆದಿದ್ದಕ್ಕಾಗಿ ಕ್ರಿಕೆಟ್ ಬ್ಯಾಟ್‌ನಿಂದ ತಾಯಿಗೆ ಹೊಡೆದ ದೃಶ್ಯ
Fact
ಮಗುವಿನ ಕೈಯಿಂದ ಮೊಬೈಲ್ ತೆಗೆದಿದ್ದಕ್ಕಾಗಿ ಕ್ರಿಕೆಟ್ ಬ್ಯಾಟ್‌ನಿಂದ ತಾಯಿಗೆ ಹೊಡೆದ ದೃಶ್ಯ ಸ್ಕ್ರಿಪ್ಟೆಡ್ ವೀಡಿಯೋ ಆಗಿದೆ. ಇದು ನಿಜವಲ್ಲ
ಮಗುವಿನ ಕೈಯಿಂದ ಮೊಬೈಲ್ ತೆಗೆದಿದ್ದಕ್ಕಾಗಿ ಕ್ರಿಕೆಟ್ ಬ್ಯಾಟ್‌ನಿಂದ ತಾಯಿಗೆ ಹೊಡೆದ ದೃಶ್ಯವಿರುವ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ತಾಯಿಯೊಬ್ಬಳು ಬಾಲಕನೊಬ್ಬನಿಂದ ಮೊಬೈಲ್ ಅನ್ನು ಕಿತ್ತುಕೊಂಡು ಓದುವಂತೆ ಹೇಳಿದ ಬಳಿಕ ಆ ಬಾಲಕ ತಾಯಿಗೆ ಬ್ಯಾಟಿನಿಂದ ಹೊಡೆಯುವ ವೀಡಿಯೋ ಇದಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
1 ನಿಮಿಷ 30 ಸೆಕೆಂಡುಗಳ ವೀಡಿಯೋವನ್ನು ಹಲವು ಹಂಚಿಕೊಂಡಿದ್ದಾರೆ. ಈ ವೀಡಿಯೋ ಜೊತೆಗಿನ ಹೇಳಿಕೆಯಲ್ಲಿ “ಮೊಬೈಲ್ ಫೋನ್ ವ್ಯಸನವು ಅಪಾಯಕಾರಿಯಾಗುತ್ತಿದೆ. ಮಕ್ಕಳನ್ನು ಮೊಬೈಲ್ ಫೋನ್ ಗಳಿಂದ ದೂರವಿಡಲು, ಮಕ್ಕಳ ಬಗ್ಗೆ ಜಾಗರೂಕರಾಗಿರಿ” ಎಂದು ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಂಡಿರುವ ಎಕ್ಸ್ ಪೋಸ್ಟ್ನಲ್ಲಿ ಹೇಳಲಾಗಿದೆ. ಈ ವೀಡಿಯೋದಲ್ಲಿ ಬಾಲಕ ತನ್ನ ತಾಯಿಗೆ ಹೊಡೆದ ನಂತರ ಆಕೆ ಪ್ರಜ್ಞಾಹೀನ ಸ್ಥಿತಿಗೆ ಹೋಗುತ್ತಾಳೆ. ಬಳಿಕ ಅವನು ಶಾಂತವಾಗಿ ಫೋನ್ ಎತ್ತಿಕೊಂಡು ನಂತರ ಫೋನ್ ಬಳಸುವುದನ್ನು ನೋಡಬಹುದು. ಆ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕೆಲವು ಪೋಸ್ಟ್ ಗಳು ಹೇಳುತ್ತವೆ.
Also Read: ಹಿಜಾಬ್ ಧರಿಸದ ಕಾರಣಕ್ಕೆ ಬಾಂಗ್ಲಾದೇಶದಲ್ಲಿ ಕಿರುಕುಳ ನೀಡಲಾಗುತ್ತಿದೆ ಎನ್ನುವ ಹೇಳಿಕೆ ನಿಜವೇ?
ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಈ ವೀಡಿಯೋ ಬಗ್ಗೆ ಸತ್ಯಶೋಧನೆ ಮಾಡುವಂತೆ ನ್ಯೂಸ್ ಚೆಕರ್ ವಾಟ್ಸಾಪ್ ಟಿಪ್‌ಲೈನ್‌ಗೂ ಮನವಿ ಬಂದಿದ್ದು (+919999499044) ಅದನ್ನು ಸತ್ಯಶೋಧನೆಗೆ ಅಂಗೀಕರಿಸಲಾಗಿದೆ. ರಿಪಬ್ಲಿಕ್ ಭಾರತ್, ನ್ಯೂಸ್ 18 ಮರಾಠಿ ಸೇರಿದಂತೆ ಕೆಲವು ಮಾಧ್ಯಮಗಳು ಈ ಘಟನೆಯ ಬಗ್ಗೆ ವರದಿ ಮಾಡಿವೆ.
Fact Check/Verification
“ಪ್ರತಿಯೊಬ್ಬ ಪೋಷಕರೂ ಇದನ್ನು ನೋಡಬೇಕು ಎಂದು ನಟಿ ಸಂಜನಾ ಗಲ್ರಾನಿ ಅವರ ಫೇಸ್‌ಬುಕ್ ಪೋಸ್ಟ್ ಒಂದನ್ನು ನಾವು ನೋಡಿದ್ದೇವೆ. ಆದರೆ ಈ ವೀಡಿಯೋವನ್ನು ನಾವು ಹುಡುಕಲು ಸಾಧ್ಯವಾಗಿಲ್ಲ. ಆದರೂ ಸಂಜನಾ ಅವರು ತನ್ನ ಪುಟದಲ್ಲಿ ಡಿಜಿಟಲ್ ಕ್ರಿಯೇಟರ್ ಆಗಿರುವ ಐಡಿಯಾಸ್ ಫ್ಯಾಕ್ಟರಿಯ ಹಲವು ಸ್ಕ್ರಿಪ್ಟೆಡ್ ವೀಡಿಯೋಗಳನ್ನು ಹಂಚಿಕೊಂಡಿರುವುದನ್ನು ನಾವು ನೋಡಿದ್ದೇವೆ.
ನ್ಯೂಸ್‌ಚೆಕರ್ ಈಗಾಗಲೇ ಗಣಪತಿ ಪೆಂಡಾಲ್ ಒಳಗೆ ಅರ್ಚಕರೊಬ್ಬರು ಹೃದಯಾಘಾತದಿಂದ ಪವಾಡಸದೃಶವಾಗಿ ಬದುಕುಳಿದಿರುವುದನ್ನು ತೋರಿಸುವ ಅಂತಹ ಒಂದು ವೀಡಿಯೋದ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದೆ. ಅದೇ ಚಾನೆಲ್ ಅಪ್ಲೋಡ್ ಮಾಡಿದ ಅದೇ ರೀತಿಯ ಸ್ಕಿಟ್ ಅನನ್ನು ನಾವು ಕಂಡುಕೊಂಡಿದ್ದೇವೆ.
ಇದನ್ನು ಪರಿಗಣಿಸಿ, ನಾವು ನಟಿಯ ಫೇಸ್ಬುಕ್ ಪುಟವನ್ನು ನೋಡಿದ್ದೇವೆ, ಅಲ್ಲಿ ನಾವು ಈ ನಿರ್ದಿಷ್ಟ ವೀಡಿಯೋವನ್ನು ನೋಡಿದ್ದೇವೆ, ಇದನ್ನು ಆಗಸ್ಟ್ 30, 2024 ರಂದು ಅಪ್ಲೋಡ್ ಮಾಡಲಾಗಿದೆ.
ಈ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಅದರಲ್ಲಿ ಕಂಡುಬರುವ ವಾಲ್ ಪೇಂಟಿಂಗ್, ಟ್ರೆಡ್ ಮಿಲ್ ಮತ್ತು ಬಿಲ್ಟ್-ಇನ್ ಶೆಲ್ಫ್ ಅನ್ನು ಪರಿಗಣಿಸಿ, ವೈರಲ್ ವೀಡಿಯೋದಲ್ಲಿರುವ ಅಂಶಗಳೂ ಈ ವೀಡಿಯೋದಲ್ಲಿರುವುದನ್ನು ನೋಡಿದ್ದೇವೆ. ಎರಡೂ ವೀಡಿಯೋಗಳಲ್ಲಿ ಬಳಸಲಾದ ಲಿವಿಂಗ್ ರೂಮ್ ಪರಿಸರ ಒಂದೇ ಇದು ತೋರಿಸುತ್ತದೆ.
ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ವೀಡಿಯೋದ ಸುದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಅಕ್ಟೋಬರ್ 2, 2024 ರಂದು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೋ ಇದಾಗಿದೆ.
ಇದರಲ್ಲಿ ಹಕ್ಕು ನಿರಾಕರಣೆ ಇದ್ದು, “ಈ ಪುಟವು ಸ್ಕ್ರಿಪ್ಟ್ ಮಾಡಿದ ನಾಟಕ ಮತ್ತು ವಿಡಂಬನೆಗಳನ್ನು ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರವು ಮನರಂಜನೆಗಾಗಿ ಅಲ್ಲ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ! ಈ ವೀಡಿಯೊದಲ್ಲಿನ ಪಾತ್ರಗಳು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ” ಎಂದಿದೆ. ಈ ಪೋಸ್ಟ್ ಇಲ್ಲಿ ನೋಡಿ.
ಈ ಬಗ್ಗೆ ಹೆಚ್ಚಿನ ಮಾಹಿತಿಗೆ ನಾವು ಸಂಜನಾ ಗಲ್ರಾನಿ ಅವರನ್ನು ಸಂಪರ್ಕಿಸಲು ಉದ್ದೇಶಿಸಿದ್ದು, ಅವರ ಪ್ರತಿಕ್ರಿಯೆ ಲಭ್ಯವಾದ ಬಳಿಕ ನಾವು ಈ ಲೇಖನವನ್ನು ಪರಿಷ್ಕರಿಸಲಿದ್ದೇವೆ.
Conclusion
ಸತ್ಯಶೋಧನೆಯ ಪ್ರಕಾರ ಮಗುವಿನ ಕೈಯಿಂದ ಮೊಬೈಲ್ ತೆಗೆದಿದ್ದಕ್ಕಾಗಿ ಕ್ರಿಕೆಟ್ ಬ್ಯಾಟ್‌ನಿಂದ ತಾಯಿಗೆ ಹೊಡೆದ ದೃಶ್ಯ ಸ್ಕ್ರಿಪ್ಟೆಡ್ ವೀಡಿಯೋ ಆಗಿದೆ. ಇದು ನಿಜವಲ್ಲ.
Result: False
Our Sources
Facebook playlist, Sanjjanaa Galrani
Facebook video, Sanjjanaa Galrani, Dated: August 30, 2024
Facebook post, Dated: October 2, 2024
Video analysis
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.