Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಶ್ರೀಲಂಕಾದಲ್ಲಿ ಮುಸ್ಲಿಂ ಬಾಲಕಿಯೊಬ್ಬಳ ಅಪಹರಣ ಯತ್ನದ ವೇಳೆ, ಜೀವ ಪಣಕ್ಕಿಟ್ಟು ರಕ್ಷಿಸಿದ ಹಿಂದೂ ಯುವಕ
ಶ್ರೀಲಂಕಾದಲ್ಲಿ ಮುಸ್ಲಿಂ ಬಾಲಕಿಯೊಬ್ಬಳ ಅಪಹರಣ ಯತ್ನದ ವೇಳೆ, ಜೀವ ಪಣಕ್ಕಿಟ್ಟು ರಕ್ಷಿಸಿದ ಹಿಂದೂ ಯುವಕ ಎನ್ನುವ ಹೇಳಿಕೆ ತಪ್ಪಾಗಿದೆ. ಬಾಲಕಿಯನ್ನು ರಕ್ಷಿಸಿದ ಯುವಕನ ಹೆಸರು ಮೊಹಮ್ಮದ್ ಇಝಾದ್ದೀನ್ ಅರ್ಷದ್ ಅಹ್ಮದ್ ಎಂದಾಗಿದೆ
ಮುಸ್ಲಿಂ ಬಾಲಕಿಯೊಬ್ಬಳ ಅಪಹರಣ ಯತ್ನದ ವೇಳೆ, ಜೀವ ಪಣಕ್ಕಿಟ್ಟು ರಕ್ಷಿಸಿದ ಹಿಂದೂ ಯುವಕ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಶ್ರೀಲಂಕಾ: ಆಯೇಷಾಳನ್ನು ಅಪಹರಿಸಲು ಆಫ್ರೋಜ್, ಇಮ್ರಾನ್ ಸೋದರರು ಯತ್ನ – ಜೀವ ಪಣಕ್ಕಿಟ್ಟು ಉಳಿಸಿದ ಹರ್ಷವರ್ಧನ್” ಎಂದಿದೆ.

ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಈ ಹೇಳಿಕೆ ತಪ್ಪಾಗಿದ್ದು ರಕ್ಷಣೆ ಮಾಡಲು ಯತ್ನಿಸಿದ ಯುವಕ ಮೊಹಮ್ಮದ್ ಇಝಾದ್ದೀನ್ ಅರ್ಷದ್ ಅಹ್ಮದ್ ಎಂಬಾತನಾಗಿದ್ದಾನೆ ಎಂದು ತಿಳಿದುಬಂದಿದೆ.
ತನಿಖೆಯ ಭಾಗವಾಗಿ, ವೈರಲ್ ವೀಡಿಯೊದ ಕೀಫ್ರೇಮ್ ನ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದು, ಜನವರಿ 12, 2025 ರಂದು ಶ್ರೀಲಂಕಾದ ಸುದ್ದಿ ಸಂಸ್ಥೆ ನ್ಯೂಸ್ ವೈರ್ ನ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ ಅದೇ ವೀಡಿಯೋ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಇದರಲ್ಲಿನ ವಿವರಣೆಯಲ್ಲಿ ಶ್ರೀಲಂಕಾದ ಕ್ಯಾಂಡಿಯ ಡೌಲಗಲಾದಲ್ಲಿ ಶಾಲಾ ಬಾಲಕಿಯನ್ನು ಅಪಹರಿಸಲಾಗಿದೆ ಎಂದಿದೆ. ಕೃತ್ಯದ ಆರೋಪಿ ಸಂಬಂಧದಲ್ಲಿ ಸೋದರನಾಗಿದ್ದಾನೆ ಎಂದಿದೆ.

ಇನ್ನಷ್ಟು ತನಿಖೆ ನಡೆಸಿದಾಗ, Asian Mirror, ಮತ್ತು Ada Derana ಶ್ರೀಲಂಕಾದ ಹಲವಾರು ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗಿರುವುದು ಕಂಡುಬರುತ್ತದೆ. ಜನವರಿ 13 ರಂದು ಬಾಲಕಿಯನ್ನು ಪೊಲೀಸರು ರಕ್ಷಿಸಿದರು ಮತ್ತು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಅಪಹರಣವನ್ನು ತಡೆದ ಯುವಕನನ್ನು ಮೊಹಮ್ಮದ್ ಇಝಾದ್ದೀನ್ ಅರ್ಷದ್ ಅಹ್ಮದ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಬಾಲಕಿಯನ್ನು ಅಪಹರಿಸಲಾಗಿದೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಆರೋಪಿ ಬಾಲಕಿಯನ್ನು ಮದುವೆಯಾಗಬೇಕಿತ್ತು, ಆದರೆ ಕೃತ್ಯದ ನಂತರ ಬಾಲಕಿಯ ತಂದೆ ಮದುವೆಗೆ ಒಪ್ಪಲಿಲ್ಲ ಎನ್ನಲಾಗಿದೆ.

ಶ್ರೀಲಂಕಾದ ಮಾಧ್ಯಮ ಸಂಸ್ಥೆ ನ್ಯೂಸ್ ವೈರ್ ಫೇಸ್ಬುಕ್ ಪೋಸ್ಟ್ನಲ್ಲಿ ಮೊಹಮ್ಮದ್ ಇಝಾದ್ದೀನ್ ಅರ್ಷದ್ ಅಹ್ಮದ್ ಅವರ ಚಿತ್ರವನ್ನು ಹಾಕಲಾಗಿದೆ. ಶ್ರೀಲಂಕಾ ಪೊಲೀಸರು ಮೊಹಮ್ಮದ್ ಇಝಾದ್ದೀನ್ ಅರ್ಷದ್ ಅಹ್ಮದ್ ಅವರ ಶೌರ್ಯವನ್ನು ಶ್ಲಾಘಿಸಿದ್ದಾರೆ ಎಂದು ವರದಿಯಲ್ಲಿದೆ.

ವೈರಲ್ ಆಗಿರುವ ವೀಡಿಯೋ ಶ್ರೀಲಂಕಾದಲ್ಲಿ ನಡೆದ ಅಪಹರಣ ಘಟನೆಯದ್ದಾಗಿದ್ದು, ಅಪಹರಣವನ್ನು ತಡೆದ ಯುವಕ ಹರ್ಷವರ್ಧನ್ ಅಲ್ಲ, ಮೊಹಮ್ಮದ್ ಇಝಾದ್ದೀನ್ ಅರ್ಷದ್ ಅಹ್ಮದ್ ಎಂದು ಗೊತ್ತಾಗಿದೆ.
FAQ ಪ್ರಶ್ನೆಗಳು
Q 1: ವೈರಲ್ ಆಗಿರುವ ವಿಡಿಯೋ ಎಲ್ಲಿಯದ್ದು?
ಇದು ಶ್ರೀಲಂಕಾದ ಕ್ಯಾಂಡಿ ಜಿಲ್ಲೆಯ ಡೌಲಗಾಲ ಪ್ರದೇಶದಿಂದ ಬಂದಿದೆ.
ಪ್ರಶ್ನೆ 2: ವೈರಲ್ ಪೋಸ್ಟ್ ನಲ್ಲಿ ಏನು ಹೇಳಲಾಗಿದೆ? ಅಫ್ರೋಜ್
ಮತ್ತು ಇಮ್ರಾನ್ ಎಂಬ ಇಬ್ಬರು ಮುಸ್ಲಿಂ ಯುವಕರು ಹಿಂದೂ ಯುವತಿಯನ್ನು ಅಪಹರಿಸುತ್ತಿದ್ದರು ಮತ್ತು ಹರ್ಷವರ್ಧನ್ ಎಂಬ ಹಿಂದೂ ಯುವಕ ಅವರನ್ನು ರಕ್ಷಿಸಿದ್ದಾನೆ.
Q 2: ನಿಜವಾದ ವಿಚಾರ ಏನು? ಈ
ಶಾಲಾ ಬಾಲಕಿಯನ್ನು ಆಕೆಯ ಸಹೋದರ ಸಂಬಂಧಿ ಅಪಹರಿಸಲು ಪ್ರಯತ್ನಿಸುತ್ತಾನೆ ಮತ್ತು ಅನಂತರ ಪೊಲೀಸರು ರಕ್ಷಿಸುತ್ತಾರೆ.
Q 3: ಬಾಲಕಿಯನ್ನು ರಕ್ಷಿಸಲು ಸಹಾಯ ಮಾಡಿದ ಯುವಕನ ಹೆಸರೇನು?
ಹೆಸರು ಆತ ಹರ್ಷವರ್ಧನ್ ಅಲ್ಲ, ಆತ ಮೊಹಮ್ಮದ್ ಇಝಾದ್ದೀನ್ ಅರ್ಷದ್ ಅಹ್ಮದ್ ಎಂಬಾತನಾಗಿದ್ದಾನೆ.
Q 4: ಪೊಲೀಸರು ಯಾವ ಕ್ರಮ ಕೈಗೊಂಡರು?
ಶ್ರೀಲಂಕಾಪೊಲೀಸರು ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ.
Our Sources
X post by News Wire, Dated: January 12, 2025
Report by Asian Mirror, Dated: January 13, 2025
Report by Ada Derana, Dated: January 12, 2025
Facebook post by News Wire, Dated: January 13, 2025
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಬಾಂಗ್ಲಾದಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 4, 2025
Ishwarachandra B G
November 1, 2025
Ishwarachandra B G
October 29, 2025