Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಒಂದೇ ವ್ಯಕ್ತಿ ರಾಹುಲ್ ಗಾಂಧಿ ಅವರೊಂದಿಗೆ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಂಡಿದ್ದಾನೆ; ಮುಂಬೈ ರೈಲ್ವೆ ಸ್ಟೇಷನ್ ಅಲ್ಲಿ ಹಮಾಲಿ ಕೆಲ್ಸ ಮಾಡುತ್ತಿದ್ದ ಅದೇ_ವ್ಯಕ್ತಿ ಯುನಿವರ್ಸಿಟಿ ಆಫ್ ದೆಹಲಿಯ ಟಾಪರ್ ಸೈನ್ಸ್_ವಿದ್ಯಾರ್ಥಿ
ರಾಹುಲ್ ಗಾಂಧಿ ಅವರು, ಮುಂಬೈ ರೈಲ್ವೆ ಸ್ಟೇಷನ್ ಅಲ್ಲಿ ಹಮಾಲಿ ಕೆಲ್ಸ ಮಾಡುತ್ತಿದ್ದ ವ್ಯಕ್ತಿ ಮತ್ತು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ಒಂದೇ ವ್ಯಕ್ತಿಯನ್ನು ಮಾತನಾಡಿಸಿದ್ದಾರೆ ಎಂಬ ಹೇಳಿಕೆ ಸುಳ್ಳು, ಇವರಿಬ್ಬರೂ ಬೇರೆ ಬೇರೆ ವ್ಯಕ್ತಿಗಳಾಗಿದ್ದಾರೆ
ಒಂದೇ ವ್ಯಕ್ತಿ ರಾಹುಲ್ ಗಾಂಧಿ ಅವರೊಂದಿಗೆ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಂಡಿದ್ದಾನೆ ಎಂಬಂತೆ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಒಂದೇ ವ್ಯಕ್ತಿಯು ಕೆಲವೊಮ್ಮೆ ರಾಹುಲ್ ಗಾಂಧಿಯವರೊಂದಿಗೆ ಕೂಲಿಯಾಗುತ್ತಾನೆ, ಕೆಲವೊಮ್ಮೆ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗುತ್ತಾನೆ ಎಂಬ ಹೇಳಿಕೆಯೊಂದಿಗೆ ಫೋಟೋಗಳ ಕೊಲಾಜ್ ಶೇರ್ ಮಾಡಲಾಗುತ್ತಿದೆ. ಇದರ ಬಗ್ಗೆ ತನಿಖೆ ನಡೆಸಿದಾಗ, ಇದು ನಿಜವಲ್ಲ ಎಂದು ಕಂಡುಬಂದಿದೆ. ಫೋಟೋದಲ್ಲಿರುವ ವ್ಯಕ್ತಿಗಳು ಬೇರೆ ಬೇರೆ ಎಂದು ನ್ಯೂಸ್ ಚೆಕರ್ ಕಂಡುಕೊಂಡಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ಮೊನ್ನೆ ಬೆಳಿಗ್ಗೆ ಮುಂಬೈ ರೈಲ್ವೆ ಸ್ಟೇಷನ್ ಅಲ್ಲಿ #ಹಮಾಲಿ ಕೆಲ್ಸ ಮಾಡುತ್ತಿದ್ದ #ಅದೇ_ವ್ಯಕ್ತಿ ನಿನ್ನೆ ಬೆಳಿಗ್ಗೆ ಯುನಿವರ್ಸಿಟಿ ಆಫ್ ದೆಹಲಿಯ ಟಾಪರ್ #ಸೈನ್ಸ್_ವಿದ್ಯಾರ್ಥಿ” ಎಂದಿದೆ. ಈ ಹೇಳಿಕೆಯೊಂದಿಗೆ ಹಂಚಿಕೊಂಡ ಫೋಟೋದಲ್ಲಿ, ರಾಹುಲ್ ಗಾಂಧಿ ಕೆಲವು ಯುವಕರೊಂದಿಗೆ ಕಾಣಿಸಿಕೊಂಡಿದ್ದಾರೆ, ಅವರಲ್ಲಿ ಒಬ್ಬರ ಮುಖದ ಮೇಲೆ ಕೆಂಪು ವೃತ್ತವಿದೆ. ಎರಡನೇ ಚಿತ್ರದಲ್ಲಿ, ಪೋರ್ಟರ್ ಸಮವಸ್ತ್ರ ಧರಿಸಿದ ಜನರು ರಾಹುಲ್ ಗಾಂಧಿ ಅವರೊಂದಿಗೆ ಕುಳಿತಿರುವುದನ್ನು ಕಾಣಬಹುದು ಮತ್ತು ಇಲ್ಲಿಯೂ ಒಬ್ಬ ವ್ಯಕ್ತಿಯ ಮುಖದ ಮೇಲೆ ಕೆಂಪು ವೃತ್ತ ಹಾಕಲಾಗಿದೆ.
ಈ ಹೇಳಿಕೆಯನ್ನು ಅನ್ನು ತನಿಖೆ ಮಾಡಲು, ನಾವು ಗೂಗಲ್ ಲೆನ್ಸ್ ಮೂಲಕ ಎರಡೂ ಚಿತ್ರಗಳನ್ನು ಪರಿಶೀಲಿಸಿದ್ದೇವೆ. ಈ ಸಮಯದಲ್ಲಿ, ಮೇ 27, 2025 ರಂದು, ಕಾಂಗ್ರೆಸ್ ನ ಅಧಿಕೃತ ಎಕ್ಸ್ ಖಾತೆಯಿಂದ ಮಾಡಿರುವ ಪೋಸ್ಟ್ ಅನ್ನು ನಾವು ನೋಡಿದ್ದು, ಇದರಲ್ಲಿ ಹಂಚಿಕೊಳ್ಳುವಾಗ, ಈ ಚಿತ್ರವು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳೊಂದಿಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭೇಟಿಯದ್ದು ಎಂದಿದೆ. ಕ್ಯಾಪ್ಷನ್ ನಲ್ಲಿ ಮೇ 22, 2025 ರಂದು ರಾಹುಲ್ ಗಾಂಧಿ ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್ನಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳನ್ನು ಭೇಟಿಯಾದರು ಎಂದಿದೆ.
Also Read: ಚಾರ್ಮಾಡಿ ಘಾಟಿಯಲ್ಲಿ ಪ್ರವಾಹ ಎಂದು ಹಳೆ ವೀಡಿಯೋ ವೈರಲ್
ಎರಡನೇ ಚಿತ್ರವು ಮಾರ್ಚ್ 1, 2025 ರಂದು ರಾಹುಲ್ ಗಾಂಧಿ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ಗಳನ್ನು ಭೇಟಿಯಾಗಲು ಹೋದಾಗಿನ ಸಂದರ್ಭದ್ದು ಎಂದಿದೆ. ಫೆಬ್ರವರಿ 15 ರಂದು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತದ ಸಮಯದಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೋರ್ಟರ್ಗಳು ಇವರಾಗಿದ್ದಾರೆ.
ಈ ಸಭೆಯ ವೀಡಿಯೋವನ್ನು ರಾಹುಲ್ ಗಾಂಧಿ ತಮ್ಮ ಅಧಿಕೃತ ಎಕ್ಸ್ ಖಾತೆಯ ಮೂಲಕವೂ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ, ವೈರಲ್ ಚಿತ್ರದಲ್ಲಿ ಗುರುತು ಹಾಕಲಾದ ಪೋರ್ಟರ್ ಕೆಂಪು ಸಮವಸ್ತ್ರದ ಮೇಲೆ ಬಿಳಿ ಗಮ್ಚಾ ಧರಿಸಿದ್ದು, ಆ ವ್ಯಕ್ತಿಯನ್ನು ಹಲವಾರು ಕೋನಗಳನ್ನು ನಾವು ನೋಡಿದ್ದೇವೆ.
ಶೋಧದ ವೇಳೆ ಎಎನ್ಐ ಮಾರ್ಚ್ 1, 2025 ರಂದು ಎಕ್ಸ್ ನಲ್ಲಿ ವೈರಲ್ ಚಿತ್ರದಲ್ಲಿ ಕಂಡುಬರುವ ವ್ಯಕ್ತಿಯ ಪ್ರತಿಕ್ರಿಯೆಯನ್ನು ಕೂಡ ಹಂಚಿಕೊಂಡಿದೆ. ಈ ವೀಡಿಯೋದಲ್ಲಿ, ವ್ಯಕ್ತಿಯು ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಬಗ್ಗೆ ಮತ್ತು ಗ್ರೂಪ್ ಡಿ ಸಮಸ್ಯೆಗಳನ್ನು ರಾಹುಲ್ ಗಾಂಧಿಯವರೊಂದಿಗೆ ಹಂಚಿಕೊಳ್ಳುವ ಬಗ್ಗೆ ಮಾತನಾಡುವುದು ಕಂಡುಬರುತ್ತದೆ. ವೀಡಿಯೋದೊಂದಿಗೆ ಎಎನ್ಐ ಪೋಸ್ಟ್ ಹೀಗಿದೆ, “ದೆಹಲಿ: ಪೋರ್ಟರ್ ಹೇಳಿದರು … “ರಾಹುಲ್ ಗಾಂಧಿ ಸುಮಾರು 40 ನಿಮಿಷಗಳ ಕಾಲ ಇಲ್ಲಿದ್ದರು. ನಮ್ಮಲ್ಲಿರುವ ಎಲ್ಲ ಸಮಸ್ಯೆಗಳನ್ನು ನಾವು ಅವರಿಗೆ ಹೇಳಿದೆವು. ನಮ್ಮ ಗ್ರೂಪ್ ಡಿ ಬೇಡಿಕೆಗಳು ವೈದ್ಯಕೀಯ ಮತ್ತು ಇತ್ಯಾದಿ ವಿಚಾರದ ಬಗ್ಗೆ ಆಗಿದೆ.. ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.”
ವೈರಲ್ ಆಗಿರುವ ಕೊಲಾಜ್ ನಲ್ಲಿರುವ ಎರಡು ಫೋಟೋಗಳಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳು ಬೇರೆ ಬೇರೆ ಎಂದು ನಾವು ಫೊಟೋಗಳನ್ನು ತುಲನೆ ಮಾಡಿದಾಗ ಕಂಡುಕೊಂಡಿದ್ದೇವೆ.
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ ಮತ್ತು ವಿದ್ಯಾರ್ಥಿಗಳೊಂದಿಗಿನ ಸಭೆಯಲ್ಲಿ ತೆಗೆದ ಫೋಟೋದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಕುಳಿತಿರುವ ವ್ಯಕ್ತಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿ ಲೋಕೇಶ್ ಚೌಧರಿ ಅವರಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾವು ಲೋಕೇಶ್ ಚೌಧರಿ ಅವರನ್ನು ಸಂಪರ್ಕಿಸಿದ್ದೇವೆ. ಫೋನ್ ಸಂಭಾಷಣೆಯಲ್ಲಿ, ಅವರು ವೈರಲ್ ಹೇಳಿಕೆಯನ್ನು ನಿರಾಕರಿಸಿದರು ಮತ್ತು “ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ಕೊಲಾಜ್ ನಲ್ಲಿರುವ ಒಂದು ಚಿತ್ರ ನನ್ನದು ಮತ್ತು ಇನ್ನೊಂದು ಚಿತ್ರದಲ್ಲಿ ಕಾಣುವ ವ್ಯಕ್ತಿ ನಾನು ಅಲ್ಲ” ಎಂದು ಹೇಳಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳೊಂದಿಗಿನ ರಾಹುಲ್ ಗಾಂಧಿ ಅವರ ಭೇಟಿಯ ಸಮಯದಲ್ಲಿ ಮೊದಲ ಚಿತ್ರವನ್ನು ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಜಂಟಿ ಕಾರ್ಯದರ್ಶಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು, ಮುಂಬೈ ರೈಲ್ವೆ ಸ್ಟೇಷನ್ ಅಲ್ಲಿ ಹಮಾಲಿ ಕೆಲ್ಸ ಮಾಡುತ್ತಿದ್ದ ವ್ಯಕ್ತಿ ಮತ್ತು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ಒಂದೇ ವ್ಯಕ್ತಿಯನ್ನು ಮಾತನಾಡಿಸಿದ್ದಾರೆ ಎಂಬ ಹೇಳಿಕೆ ಸುಳ್ಳು ಎಂದು ನಮ್ಮ ತನಿಖೆಯಲ್ಲಿ ಗೊತ್ತಾಗಿದೆ. ಎರಡು ಚಿತ್ರದಲ್ಲಿ ಕಂಡುಬರುವ ವ್ಯಕ್ತಿಗಳು ಭಿನ್ನವಾಗಿದ್ದಾರೆ ಎಂದು ಗೊತ್ತಾಗಿದೆ.
Also Read: ವೈಷ್ಣೋದೇವಿಗೆ ಹೋಗುವ ಮಾರ್ಗದಲ್ಲಿ ಭಕ್ತರ ವಾಹನಗಳಿಗೆ ಕಲ್ಲು ತೂರಲಾಗಿದೆ ಎಂದ ವೀಡಿಯೋ ಸತ್ಯವೇ?
Our Sources
X post by Congress Dated: 27th May 2025.
X post by Rahul Gandhi Dated: 5th March 2025.
X post by ANI Dated:1st March 2025.
X post By DUSU Joint Secretary Lokesh Chaudhary
Conversation with DUSU Joint Secretary Lokesh Chaudhary
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಿದ್ದು, ಅದನ್ನು ಇಲ್ಲಿ ನೋಡಬಹುದು.)
Sabloo Thomas
May 27, 2025
Ishwarachandra B G
January 21, 2025
Ishwarachandra B G
December 21, 2024