Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅಲೆಪ್ಪಿ ಹಿನ್ನೀರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತೇಲುವ ಬ್ಯಾಂಕ್ ಸ್ಥಾಪಿಸಿದೆ
ಎಐ ಮೂಲಕ ಸೃಷ್ಟಿಸಲಾದ ಫೋಟೋ ಜೊತೆಗೆ ಅಲೆಪ್ಪಿ ಹಿನ್ನೀರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತೇಲುವ ಬ್ಯಾಂಕ್ ಸ್ಥಾಪಿಸಿದೆ ಎನ್ನುವ ಹೇಳಿಕೆ ಸುಳ್ಳಾಗಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇರಳದ ಅಲೆಪ್ಪಿ ಜಿಲ್ಲೆಯ ಹಿನ್ನೀರಿನ ಸರೋವರಗಳಲ್ಲಿ “ತೇಲುವ ಬ್ಯಾಂಕ್” ಪ್ರಾರಂಭಿಸಿದೆ ಎಂದು ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ತೇಲುವ ಬ್ಯಾಂಕ್ ಅಲೆಪ್ಪಿಯಲ್ಲಿಲ್ಲ ಎಂದು ಕಂಡುಕೊಂಡಿದೆ.
Also Read: ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪತ್ತೆ ಎಂದು ಫ್ರಾನ್ಸ್ ಫೋಟೋ ವೈರಲ್!
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ಬಗ್ಗೆ ಯಾವುದೇ ವಿವರಗಳು ಕಂಡುಬಂದಿಲ್ಲ.
Rediff ನಲ್ಲಿ ಡಿಸೆಂಬರ್ 30, 2003ರಂದು ಪ್ರಕಟವಾದ ವರದಿಯಲ್ಲಿ, ಭಾರತದಲ್ಲಿ ಮೊದಲ ಬಾರಿಗೆ “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ” (SBI) ಕೇರಳದ ಅಲೆಪ್ಪಿ ಜಿಲ್ಲೆಯ ಹಿನ್ನೀರಿನ ಸರೋವರಗಳಲ್ಲಿ “ತೇಲುವ ಎಟಿಎಂ” ಪ್ರಾರಂಭಿಸುವ ಯೋಜನೆಯಿದೆ ಎಂದಿದೆ.
ಟೈಮ್ಸ್ ಆಫ್ ಇಂಡಿಯಾ ಕೂಡ ಫೆಬ್ರವರಿ 7, 2004ರಲ್ಲಿ ಭಾರತದ ಮೊದಲ “ತೇಲುವ” ಎಟಿಎಂ” ಅನ್ನು ಫೆಬ್ರವರಿ 9 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಲ್ಲಿ ಉದ್ಘಾಟಿಸಲಿದೆ. ಕೇರಳ ಶಿಪ್ಪಿಂಗ್ ಮತ್ತು ಇನ್ಲ್ಯಾಂಡ್ ನ್ಯಾವಿಗೇಷನ್ ಕಾರ್ಪೊರೇಷನ್ (ಕೆಎಸ್ಐಎನ್ಸಿ) ಒಡೆತನದ ಜಂಕಾರ್ (ದೋಣಿ) ದಲ್ಲಿ ಈ ಎಟಿಎಂ ಅನ್ನು ಸ್ಥಾಪಿಸಲಾಗಿದೆ ಎಂದು ಎಸ್ಬಿಐ ಮೂಲಗಳು ತಿಳಿಸಿವೆ ಎಂದಿದೆ.
ಇದು ಹೊರತಾಗಿ ದೋಣಿಯಲ್ಲಿ ಯಾವುದೇ ಎಸ್ ಬಿಐ ಶಾಖೆಯನ್ನು ಆರಂಭಿಸಿದ ಬಗ್ಗೆ ವರದಿಗಳು ಕಂಡುಬಂದಿಲ್ಲ.
ಇದರೊಂದಿಗೆ ಎಸ್ ಬಿಐ ತಿರುವನಂತಪುರ ಸರ್ಕಲ್ ನಲ್ಲಿ ಬರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳ ಬಗ್ಗೆ ಗೂಗಲ್ ನಲ್ಲಿ ಹುಡುಕಿದ್ದೇವೆ. ಇಲ್ಲೂ ಯಾವುದೇ ಮಾಹಿತಿಯು ಕಂಡುಬಂದಿಲ್ಲ.

ಗೂಗಲ್ ಮ್ಯಾಪ್ ನಲ್ಲಿಯೂ ನಾವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಲೆಪ್ಪಿ ಶಾಖೆಗಳ ಬಗ್ಗೆ ಶೋಧ ನಡೆಸಿದ್ದೇವೆ. ಇಲ್ಲಿಯೂ ತೇಲುವ ಬ್ರಾಂಚ್ ಗಳನ್ನು ಕಾಣಲು ಸಾಧ್ಯವಾಗಲಿಲ್ಲ.
ಆ ಬಳಿಕ ನಾವು ಆಲಪ್ಪುಳ ವ್ಯಾಪ್ತಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ರಾಂಚ್ ಮ್ಯಾನೇಜರ್ ಒಬ್ಬರನ್ನು ಸಂಪರ್ಕಿಸಿದ್ದು, ಅವರು, ಎಸ್ ಬಿಐ ಯಾವುದೇ ತೇಲುವ ಬ್ಯಾಂಕ್ ವ್ಯವಸ್ಥೆ ಹೊಂದಿಲ್ಲ ಎಂದು ತಿಳಿಸಿದ್ದಾರೆ.
ತನಿಖೆಯ ಭಾಗವಾಗಿ ನಾವು ವೈರಲ್ ಹೇಳಿಕೆಯೊಂದಿಗೆ ಕಾಣುವ “ತೇಲುವ ಬ್ಯಾಂಕ್” ಫೊಟೋವನ್ನು ಪರಿಶೀಲಿಸಿದ್ದೇವೆ.
ವೈರಲ್ ಹೇಳಿಕೆಯೊಂದಿಗೆ ಪೋಸ್ಟ್ ಮಾಡಲಾಗಿರುವ ಫೋಟೋ ಮೇಲ್ನೋಟಕ್ಕೆ ಕೃತಕವಾಗಿ ರೂಪಿಸಿದಂತೆ ಕಾಣುತ್ತಿದ್ದು ಅದನ್ನು ಎಐ ಪತ್ತೆ ಸಾಧನಗಳ ಮೂಲಕ ಪರಿಶೀಲಿಸಿದ್ದೇವೆ. ಮೊದಲು wasitai ಶೋಧಕದಲ್ಲಿ ನೋಡಿದ್ದೇವೆ. ಅದು ಫೋಟೋವನ್ನು ಅಥವಾ ಅದರ ಮಹತ್ವದ ಭಾಗವನ್ನು ಎಐ ನಿಂದ ಮಾಡಲಾಗಿದೆ ಎಂಬ ಬಗ್ಗೆ ವಿಶ್ವಾಸವಿದೆ ಎಂದು ಹೇಳಿದೆ.

ಇನ್ನೊಂದು ಎಐ ಫೋಟೋ ಪತ್ತೆ ಸಾಧನ, sightengine ನಲ್ಲೂ ನಾವು ಫೋಟೋವನ್ನು ಪರಿಶೀಲಿಸಿದ್ದೇವೆ. ಅದು ಕೂಡ ಶೇ.89ರಷ್ಟು ಈ ಫೋಟೋ ಎಐನಿಂದ ಮಾಡಿದ್ದಾಗಿದೆ ಎಂದು ಹೇಳಿದೆ.

ಆದ್ದರಿಂದ ಈ ಸಾಕ್ಷ್ಯಾಧಾರಗಳ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇರಳದ ಅಲೆಪ್ಪಿ ಜಿಲ್ಲೆಯ ಹಿನ್ನೀರಿನ ಸರೋವರಗಳಲ್ಲಿ “ತೇಲುವ ಬ್ಯಾಂಕ್” ಪ್ರಾರಂಭಿಸಿದೆ ಎನ್ನುವ ಹೇಳಿಕೆ ಸುಳ್ಳಾಗಿದೆ.
Also Read: ಭಾರತದ ಸಂಸತ್ತಿನಲ್ಲಿ ನಮ್ಮ ಜನ ಕುಳಿತಿದ್ದಾರೆ ಎಂದು ಬಿಲಾವಲ್ ಭುಟ್ಟೋ ಹೇಳಿದ್ದಾರಾ?
Our Sources
Branches of State Bank of India, Tiruvananthapuram Circle
Conversation with Manager State Bank of India, Alappuzha Main
wasitai
sightengine
(With Inputs from Sabloo Thomas, Newschecker Malayalam)