Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಆಲಪ್ಪುಳದಲ್ಲಿ 12 ವರ್ಷದ ತಂಗಿ ಮೇಲೆ ಅತ್ಯಾಚಾರ ಎಸಗಿದವನಿಗೆ ಅಣ್ಣನಿಂದ ಚೂರಿ ಇರಿತ
ಆರೋಪಿ ತನ್ನ ಸ್ನೇಹಿತೆ ವಿರುದ್ಧದ ಕೃತ್ಯಕ್ಕಾಗಿ ಯುವಕನೊಬ್ಬನಿಗೆ ಚೂರಿ ಇರಿದ ಘಟನೆ ಇದಾಗಿದೆ
ಆಲಪ್ಪುಳದಲ್ಲಿ 12 ವರ್ಷದಾಕೆ ಮೇಲೆ ಅತ್ಯಾಚಾರ ಎಸಗಿದವನಿಗೆ ಅಣ್ಣನಿಂದ ಚೂರಿ ಇರಿತ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ವೀಡಿಯೋದಲ್ಲಿ, “ಕೇರಳದ ಆಲಪ್ಪುಳದಲ್ಲಿ ತನ್ನ 12 ವರ್ಷದ ತನ್ನ ತಂಗಿ ಮೇಲೆ ಅತ್ಯಾಚಾರ ಎಸಗಿದ್ದ ರಿಯಾಸ್ ನನ್ನು ತಂಗಿಯ ಅಣ್ಣ ರಸ್ತೆಯ ಮಧ್ಯದಲ್ಲಿ ಕತ್ತಿಯಿಂದ ಇರಿದಿದ್ದಾನೆ” ಎಂದಿದೆ.

ಆರ್ಕೈವ್ ಆವೃತ್ತಿ ಇಲ್ಲಿದೆ
ಈ ವೀಡಿಯೋ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಹೇಳಿಕೆ ನಿಜವಲ್ಲ ಎಂದು ಕಂಡುಬಂದಿದೆ.
ಈ ವೀಡಿಯೋದ ಕೀಫ್ರೇಂಗಳನ್ನು ತೆಗೆದು ನಾವು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಆಗಸ್ಟ್ 1, 2025 ರಂದು, ಮಾತೃಭೂಮಿಯಲ್ಲಿ, ನಗರದ ಮಧ್ಯಭಾಗದಲ್ಲಿ ಯುವಕರು ಹುಡುಗಿಯ ಹೆಸರಿನಲ್ಲಿ ಘರ್ಷಣೆ ನಡೆಸಿದರು; ನಕಲಿ ಖಾತೆಗಳನ್ನು ರಚಿಸಿ, ಕರೆಸಿ, ಇರಿದು ಕೊಂದರು ಎಂದಿದೆ. ಈ ವರದಿಯ ಫೋಟೋ ವೀಡಿಯೋದಲ್ಲಿ ಕಂಡುಬಂದ ಕೀಫ್ರೇಂಗೆ ಹೋಲಿಕೆಯಾಗುತ್ತಿರುವುದನ್ನು ನೋಡಿದ್ದೇವೆ.

ಈ ವರದಿಯಲ್ಲಿ, “ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಯುವಕರು ಘರ್ಷಣೆ ನಡೆಸಿದರು. ಒಬ್ಬ ವ್ಯಕ್ತಿಗೆ ಇರಿತ. “ಬಲಿಪಶುವನ್ನು ಕಣ್ಣೂರಿನ ತಹಜೋಚುವ್ವಾ ಮೂಲದ ರಿಯಾಜಿ (25) ಎಂದು ಗುರುತಿಸಲಾಗಿದೆ” ಎಂದಿದೆ. “ಕಾಲು, ಬೆನ್ನು ಮತ್ತು ತೊಡೆಗಳ ಮೇಲೆ ಏಳು ಇರಿತದ ಗಾಯಗಳಿವೆ. ಪ್ರಕರಣದ ಹಿನ್ನೆಲೆಯಲ್ಲಿ ತಿರುವನಂತಪುರದ ವಂಚಿಯೂರಿನ ವಡಕ್ಕೆಚಂಪಾಡಿ ಮೂಲದ ವಿಷ್ಣುಲಾಲ್ (25) ಮತ್ತು ಕಲ್ಲಯಂನ ಶಿವಾಲಯಂನ ಸಿಬಿ (23) ಅವರನ್ನು ಆಲಪ್ಪುಳ ದಕ್ಷಿಣ ಪೊಲೀಸರು ಬಂಧಿಸಿದ್ದಾರೆ” ಎಂದೂ ವರದಿಯಲ್ಲಿದೆ.
“ಸಂಜೆ 6 ಗಂಟೆ ಸುಮಾರಿಗೆ ನಗರದ ಕೇಂದ್ರ ಭಾಗದಲ್ಲಿ ಯುವಕರು ಘರ್ಷಣೆ ನಡೆಸಿ, ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿದರು. ಜಿಲ್ಲಾ ಪೊಲೀಸ್ ಮುಖ್ಯಸ್ಥರು ಈ ಘರ್ಷಣೆ ಅವರ ನಡುವಿನ ಹುಡುಗಿಯ ಕುರಿತಾಗಿದೆ ಎಂದು ಹೇಳಿದರು. ಇದು ಸೇರಿದಂತೆ ಇತರ ಘಟನೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ” ಎಂದು ಸುದ್ದಿ ವರದಿ ಹೇಳಿದೆ.
“ಸಾಮಾಜಿಕ ಮಾಧ್ಯಮದಲ್ಲಿ ಹುಡುಗಿಯ ಹೆಸರಿನಲ್ಲಿ ನಕಲಿ ಖಾತೆಯನ್ನು ರಚಿಸಿ ರಿಯಾಸ್ ನನ್ನು ಕರೆಯಲಾಗಿತ್ತು. ರಿಯಾಸ್ ತನ್ನ ಸ್ನೇಹಿತನೊಂದಿಗೆ ಆಲಪ್ಪುಳ ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ಬಂದಿದ್ದ. ರಿಯಾಸ್ ತನ್ನ ಜೊತೆಗಿದ್ದ ಸ್ನೇಹಿತನನ್ನು ಸಿನಿಮಾ ನೋಡಲು ಕಳುಹಿಸಿದನು. ಅನಂತರ, ಅವನು ನಿಲ್ದಾಣ ತಲುಪಿದಾಗ, ತಿರುವನಂತಪುರಂ ಮೂಲದವರು ಅವನ ಮೇಲೆ ಹಲ್ಲೆ ನಡೆಸಿದರು. ಪೊಲೀಸರು, ಆಟೋ ಚಾಲಕರು ಮತ್ತು ಪ್ರಯಾಣಿಕರು ಮಧ್ಯಪ್ರವೇಶಿಸಿ ಅವನನ್ನು ಕರೆದೊಯ್ದರು. ಗಾಯಗೊಂಡ ರಿಯಾಸ್ ಅವರನ್ನು ತಕ್ಷಣ ಆಲಪ್ಪುಳ ಜನರಲ್ ಆಸ್ಪತ್ರೆಗೆ ಮತ್ತು ನಂತರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ನಿಗಾದಲ್ಲಿದ್ದಾರೆ” ಎಂದು ಸುದ್ದಿ ಹೇಳುತ್ತದೆ. ಈ ಸುದ್ದಿಯಲ್ಲಿ ಅತ್ಯಾಚಾರದ ಕುರಿತು ಯಾವುದೇ ವಿಚಾರಗಳು ಕಂಡುಬಂದಿಲ್ಲ. ಜಿಲ್ಲಾ ಪೊಲೀಸ್ ಮುಖ್ಯಸ್ಥರು ಈ ಘರ್ಷಣೆ ಹುಡುಗಿ ಕುರಿತ ವಿಚಾರವಾಗಿದೆ ಎಂದು ಹೇಳಿರುವುದು ಕಂಡುಬಂದಿದೆ.
ಆಗಸ್ಟ್ 4, 2025 ರಂದು, ಮನೋರಮಾ ಆನ್ಲೈನ್ ಪ್ರಕಟಿಸಿದ ವರದಿಯಲ್ಲಿಯೂ ವೀಡಿಯೋದ ಕೀಫ್ರೇಮ್ ಹೋಲುವ ಫೋಟೋ ನೀಡಲಾಗಿದೆ. “ಆಲಪ್ಪುಳ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂದೆ ಹಗಲು ಹೊತ್ತಿನಲ್ಲಿ ಸ್ಥಳೀಯರು ನೋಡುತ್ತಿರುಗಲೇ ಯುವಕನನ್ನು ಇರಿದು ಕೊಂದಿದ್ದು ದೀರ್ಘ ಯೋಜಿತ ಕೃತ್ಯ ಎಂದು ಪೊಲೀಸರು ಹೇಳಿದ್ದಾರೆ,” ಎಂದು ಸುದ್ದಿ ಹೇಳಿದೆ.

“ಆರೋಪಿ ಪೊಲೀಸರಿಗೆ ನೀಡಿದ ಹೇಳಿಕೆಯೆಂದರೆ, ಆರೋಪಿಗಳಲ್ಲಿ ಒಬ್ಬನಾದ ತಿರುವನಂತಪುರಂ ಪರಮುಕಲ್ ಶಿವಾಲಯಂನ ಸಿಬಿ ಊಟಿಯಲ್ಲಿ 19 ವರ್ಷದ ಹುಡುಗಿಯ ಮೇಲೆ ನಡೆದ ಅತ್ಯಾಚಾರಕ್ಕೆ ಪ್ರತೀಕಾರವಾಗಿ ಈ ಚೂರಿ ದಾಳಿ ನಡೆಸಲಾಗಿದೆ. ಯುವತಿಯ ಹೆಸರಿನಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಖಾತೆಯನ್ನು ಸೃಷ್ಟಿಸಿ, ರಿಯಾಸ್ ಜೊತೆ ಸ್ನೇಹ ಬೆಳೆಸಿ, ಆತನನ್ನು ಆಲಪ್ಪುಳಕ್ಕೆ ಕರೆಸಿ, ಆತನ ಮೇಲೆ ಹಲ್ಲೆ ನಡೆಸಿದ್ದಾನೆ” ಎಂದು ಸುದ್ದಿ ಮುಂದುವರೆಯಿತು.
“ಊಟಿಯಲ್ಲಿ ವಿದ್ಯಾರ್ಥಿನಿಯಾಗಿದ್ದ ಯುವತಿಯ ಹಾರ ಅಲ್ಲಿ ಕಳೆದುಹೋಗಿತ್ತು. ಊಟಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರಿಯಾಸ್, ಹುಡುಗಿಯನ್ನು ನೋಡಿ ಏನನ್ನೋ ಹುಡುಕುತ್ತಿರುವುದನ್ನು ನೋಡಿ ಅದರ ಬಗ್ಗೆ ವಿಚಾರಿಸಿದನು. “ಹಾರ ಕಾಣೆಯಾಗಿದೆ ಎಂದು ಆಕೆ ತಿಳಿದಾಗ, ಅವನು ಹುಡುಗಿಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ, ತನಗೆ ಹಾರ ಸಿಕ್ಕಿದೆ ಮತ್ತು ಅದನ್ನು ಅಂಗಡಿಯೊಂದಕ್ಕೆ ನೀಡಿದ್ದೇನೆ ಮತ್ತು ಅಲ್ಲಿಂದ ಖರೀದಿಸಿ ಕೊಡುತ್ತೇನೆ ಎಂದು ಹೇಳಿ, ನಂತರ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದಾನೆ. ಹುಡುಗಿ ಈ ಬಗ್ಗೆ ಸಿಬಿಗೆ ತಿಳಿಸಿದ್ದಾಳೆ. ಅಂದಿನಿಂದ, ಆತ ರಿಯಾಸ್ ಗೆ ಹುಡುಕಾಟ ನಡೆಸುತ್ತಿದ್ದ. ಕಣ್ಣೂರಿಗೆ ಹಲವಾರು ಬಾರಿ ಭೇಟಿ ನೀಡಿದರೂ ರಿಯಾಸ್ ಪತ್ತೆಯಾಗಿಲ್ಲ” ಎಂದು ವರದಿ ಹೇಳುತ್ತದೆ.
ಇದರೊಂದಿಗೆ ಕೇರಳ ಪೊಲೀಸ್ ಮಾಧ್ಯಮ ಕೇಂದ್ರವು ಆಗಸ್ಟ್ 2 ರಂದು ಪೋಸ್ಟ್ ಮಾಡಿದ್ದು, ಇದರಲ್ಲಿ ತಂಗಿ ಮೇಲೆ ಅತ್ಯಾಚಾರ ಎಸಗಿದ್ದವನಿಗೆ ಅಣ್ಣನಿಂದ ಚೂರಿ ಇರಿತ ಎಂಬ ವೈರಲ್ ಸುದ್ದಿಯು ನಿಜವಲ್ಲ ಎಂದಿದೆ.
ಆದ್ದರಿಂದ ಈ ಸಾಕ್ಷ್ಯಾಧಾರಗಳ ಪ್ರಕಾರ, ತಂಗಿ ಮೇಲೆ ಅತ್ಯಾಚಾರ ಎಸಗಿದ್ದವನಿಗೆ ಅಣ್ಣನಿಂದ ಚೂರಿ ಇರಿತ ಎಂಬ ಹೇಳಿಕೆ ತಪ್ಪಾಗಿದ್ದು, ಸ್ನೇಹಿತೆ ವಿರುದ್ಧದ ಕೃತ್ಯಕ್ಕಾಗಿ ಯುವಕನೊಬ್ಬ ಎಸಗಿದ ಕೃತ್ಯ ಇದಾಗಿದೆ ಎಂದು ಕಂಡುಬಂದಿದೆ.
Our Sources
Report By Matrubhumi, Dated: August 1, 2025
Report By Manoramaonline, Dated: August 4, 2025
Facebook Post By State Police Media Center Kerala, Dated: August 3, 2025
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 4, 2025
Ishwarachandra B G
November 1, 2025
Ishwarachandra B G
October 29, 2025