Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪತ್ತೆ
ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪತ್ತೆ ಎಂದು ವೈರಲ್ ಆಗಿರುವ ಫೋಟೋಗಳು ಫ್ರಾನ್ಸ್ ಜಾಕೋಬಿನ್ ಕಾನ್ವೆಂಟ್ನಲ್ಲಿ ಸಮಾಧಿ ಮಾಡಲಾದ ಸೈನಿಕರದ್ದಾಗಿವೆ
ಧರ್ಮಸ್ಥಳದಲ್ಲಿ ಯುವತಿಯರು ಮತ್ತು ಅಪ್ರಾಪ್ತ ವಯಸ್ಕರ ಕೊಲೆಗಳು ನಡೆದಿದ್ದು ಅವರನ್ನು ಸಮಾಧಿ ಮಾಡಲಾಗಿದೆ ಎಂಬ ಆರೋಪಗಳು ಮತ್ತು ಅವುಗಳ ಕುರಿತ ಶೋಧದ ನಡುವೆ ಈ ಪ್ರಕರಣಕ್ಕೆ ಸಂಬಂಧ ಕಲ್ಪಿಸುವಂತೆ ಫೋಟೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
“ಈ ಅಸ್ಥಿಪಂಜರಗಳಲ್ಲಿ ಕನಿಷ್ಠ ಒಂದು ಪ್ರಾಣಿಯಾದರೂ ಇದ್ದರೆ ಒಳ್ಳೆಯದು, ಅವೆಲ್ಲವೂ ರಸ್ತೆಗಳಲ್ಲಿ ಬರುತ್ತವೆ. ಆದರೆ ಇಲ್ಲಿ ಎಲ್ಲರೂ ಮನುಷ್ಯರೇ. #ಧರ್ಮಸ್ಥಳ,” ಎಂದು ಫೇಸ್ಬುಕ್ನಲ್ಲಿ ತೆಲುಗು ಭಾಷೆಯಲ್ಲಿ ಪೋಸ್ಟ್ ಮಾಡಲಾಗಿದೆ.


ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಏನು?
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳದಲ್ಲಿ ಎರಡು ದಶಕಗಳಲ್ಲಿ ಯುವತಿಯರು ಮತ್ತು ಅಪ್ರಾಪ್ತ ವಯಸ್ಕರ ಕೊಲೆಗಳು ನಡೆದಿವೆ ಎಂಬ ಆರೋಪ ಇದ್ದು ಇದರ ತನಿಖೆಯನ್ನು ವಿಶೇಷ ತನಿಖಾ ತಂಡ ನಡೆಸುತ್ತಿದೆ . ಈ ತಂಡವು ಇಲ್ಲಿಯವರೆಗೆ, ಒಬ್ಬ ಅನಾಮಿಕ ಸಾಕ್ಷಿದಾರ ಗುರುತಿಸಿದ 16 ಸ್ಥಳಗಳಲ್ಲಿ 15 ಸ್ಥಳಗಳನ್ನು ಅಗೆದಿವೆ. ಅವುಗಳಲ್ಲಿ ಎರಡರಲ್ಲಿ ಮೂಳೆಗಳು ಮತ್ತು ಅಸ್ಥಿಪಂಜರಗಳು ಕಂಡುಬಂದಿವೆ ಎಂದು ವರದಿಯಾಗಿದೆ. ಎರಡು ದಶಕಗಳ ಕಾಲ ನಡೆದ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತರ ಶವಗಳನ್ನು ಸಮಾಧಿ ಮಾಡಲು ಪ್ರಭಾವಿ ವ್ಯಕ್ತಿಗಳು ತನ್ನನ್ನು ಒತ್ತಾಯಿಸಿದ್ದಾರೆ ಎಂದು ದೇಗುಲದ ಮಾಜಿ ನೈರ್ಮಲ್ಯ ಕಾರ್ಮಿಕರೊಬ್ಬರು ಆರೋಪಿಸಿದ್ದರು. ಇದು ರಾಜ್ಯ ಸರ್ಕಾರವನ್ನು ಎಸ್ಐಟಿ ರಚಿಸಲು ಕಾರಣವಾಗಿತ್ತು.
Also Read: ಭಾರತದ ಸಂಸತ್ತಿನಲ್ಲಿ ನಮ್ಮ ಜನ ಕುಳಿತಿದ್ದಾರೆ ಎಂದು ಬಿಲಾವಲ್ ಭುಟ್ಟೋ ಹೇಳಿದ್ದಾರಾ?
“Dharmasthala skeleton” ಎಂಬ ಕೀವರ್ಡ್ ಮೂಲಕ ನಾವು ಗೂಗಲ್ ನಲ್ಲಿ ಹುಡುಕಿದ್ದೇವೆ. ಈ ವೇಳೆ ಮಾಧ್ಯಮ ವರದಿಗಳು ಕಂಡುಬಂದಿವೆ. ಅದು SIT 11 ನೇ ಸ್ಥಳದ ಬಳಿ ಅಗೆದು ಅನೇಕ ಅಸ್ಥಿಪಂಜರಗಳ ಅವಶೇಷಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿದೆ.
“ಬಂಗ್ಲೆಗುಡ್ಡೆ ಪ್ರದೇಶದ ಹೊಸ ಸ್ಥಳದಲ್ಲಿ ಎಸ್ಐಟಿ ಸಿಬ್ಬಂದಿ ಮಾನವ ತಲೆಬುರುಡೆ ಮತ್ತು ಮಾನವ ದೇಹದ ಕೆಲವು ಮೂಳೆಗಳು ಲಭ್ಯವಾಗಿವೆ. ಆತ್ಮಹತ್ಯೆಯಾಗಿರಬಹುದು ಎಂದು ಶಂಕಿಸುವಂತೆ ಗಂಟು ಹೊಂದಿರುವ ಕೆಂಪು ಸೀರೆಯು ಸ್ಥಳದಲ್ಲಿರುವ ಮರದ ತುದಿಯಲ್ಲಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ” ಎಂದು ಆಗಸ್ಟ್ 5, 2025 ರಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.
“ದೂರುದಾರರು-ಸಾಕ್ಷಿಯವರು ತೋರಿಸಿದ 11 ನೇ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಅಸ್ಥಿಪಂಜರದ ಅವಶೇಷಗಳು ನೆಲದ ಮೇಲ್ಮೈಯಲ್ಲಿ ಕಂಡುಬಂದಿವೆ. ತಲೆಬುರುಡೆ ಮತ್ತು ಬೆನ್ನುಮೂಳೆಯ ಮೂಳೆಗಳು ಸೇರಿದಂತೆ ಸುಮಾರು 100 ಮೂಳೆಗಳನ್ನು ವಶಪಡಿಸಲಾಗಿದೆ” ಎಂದು ಆಗಸ್ಟ್ 4, 2025 ರ ಡೆಕ್ಕನ್ ಹೆರಾಲ್ಡ್ ವರದಿಯಲ್ಲಿದೆ . ಜುಲೈ 31 ರಂದು, ದೂರುದಾರರು-ಸಾಕ್ಷಿಯವರು ಗುರುತಿಸಿದ ಆರನೇ ಸ್ಥಳದಲ್ಲಿ ಪುರುಷನ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂದು ಸೇರಿಸಲಾಗಿದೆ.
ಆದಾಗ್ಯೂ, ಯಾವುದೇ ವರದಿಗಳು ವೈರಲ್ ಛಾಯಾಚಿತ್ರವನ್ನು ಒಳಗೊಂಡಿಲ್ಲ, ಇದು ಹಲವಾರು ಅಖಂಡ ಮಾನವ ಅಸ್ಥಿಪಂಜರಗಳು ಮತ್ತು ತಲೆಬುರುಡೆಗಳನ್ನು ತೋರಿಸಿದೆ, ಇದು ಹೇಳಿಕೆಗೆ ಮತ್ತಷ್ಟು ವಿರುದ್ಧವಾಗಿದೆ.
ಈ ಫೋಟೋ ಎಲ್ಲಿಯದ್ದು?
ನಂತರ ನ್ಯೂಸ್ ಚೆಕರ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆ. ಇದು ಮೇ 5, 2021 ರಂದು ಫ್ರೆಂಚ್ ದಿನಪತ್ರಿಕೆ ಲೆಮೊಂಡೆಯ ಲ್ಲಿ ಪ್ರಕಟವಾದ ಇದೇ ರೀತಿಯ ಫೋಟೋ ಇರುವ ವರದಿಯನ್ನು ನೋಡಿದ್ದೇವೆ. “ರೆನ್ನೆಸ್ (ಇಲ್ಲೆ-ಎಟ್-ವಿಲೈನ್) ನಲ್ಲಿರುವ ಜಾಕೋಬಿನ್ ಕಾನ್ವೆಂಟ್ನಲ್ಲಿ ಸಮಾಧಿ ಮಾಡಲಾದ ರಾಜ ಸೈನ್ಯದ ಸೈನಿಕರ ಸಮಾಧಿಯ ನೋಟ,” ಎಂಬ ಶೀರ್ಷಿಕೆ ಇದಕ್ಕಿದ್ದು INRAP (ಫ್ರೆಂಚ್ ರಾಷ್ಟ್ರೀಯ ಪ್ರಿವೆಂಟಿವ್ ಆರ್ಕಿಯಲಾಜಿಕಲ್ ರಿಸರ್ಚ್ ಸಂಸ್ಥೆ) ಗೆ ಕ್ರೆಡಿಟ್ ನೀಡಲಾಗಿದೆ. ಮೇ 5, 2021 ರಂದು ಬಿಡುಗಡೆಯಾದ ಈ ಲೆ ಪ್ಯಾರಿಸಿಯನ್ ಲೇಖನದಲ್ಲಿಯೂ ಅದೇ ಛಾಯಾಚಿತ್ರವನ್ನು ನೋಡಿದ್ದೇವೆ. ಅದರಲ್ಲಿ ಫ್ರಾನ್ಸ್ನ ರೆನ್ನೆಸ್ನಲ್ಲಿ ಕಂಡುಬಂದ ಅಸ್ಥಿಪಂಜರಗಳು 1491 ರಲ್ಲಿ ಬ್ರೆಟನ್ ಸೈನ್ಯದ ವಿರುದ್ಧ ಹೋರಾಡಿದ ಸೈನಿಕರಿಗೆ ಸೇರಿವೆ ಎಂದು ಹೇಳಲಾಗಿದೆ.

ಫ್ರೆಂಚ್ ಲೇಖನಗಳ ಪ್ರಕಾರ, 2011 ರಿಂದ 2013 ರವರೆಗೆ, INRAP ನ ತಂಡವು ಐದು ಶತಮಾನಗಳಿಗೂ ಹಿಂದೆ ಫ್ರಾನ್ಸ್ನ ಪ್ರದೇಶವಾದ ಬ್ರಿಟಾನಿಯ ಭವಿಷ್ಯವನ್ನು ನಿರ್ಧರಿಸಿದ್ದ ಅದೇ ಜಾಕೋಬಿನ್ ಕಾನ್ವೆಂಟ್ನಲ್ಲಿ ನೂರಾರು ಶವಗಳನ್ನು ಪತ್ತೆಹಚ್ಚಿತು. ಈ ವರದಿಗಳು ನಮ್ಮನ್ನು ಮೇ 5, 2021 ರಂದು PLOS One ನಲ್ಲಿ ನಡೆಸಿದ ಈ ಅಧ್ಯಯನಕ್ಕೆ ಕರೆದೊಯ್ದವು , ಇದು ಪೀರ್-ರಿವ್ಯೂಡ್ ಓಪನ್ ಆಕ್ಸೆಸ್ ಮೆಗಾ ಜರ್ನಲ್ ಆಗಿದೆ. ಈ ಅಸ್ಥಿಪಂಜರಗಳು ಬ್ರೆಟನ್ ಇತಿಹಾಸದ ಪ್ರಮುಖ ಘಟನೆಯಾದ 1491 ರಲ್ಲಿ ರೆನ್ನೆಸ್ ಮುತ್ತಿಗೆಯ ಸಮಯದಲ್ಲಿ ಹೋರಾಡಿದ ಎರಡು ಶತ್ರು ಸೈನ್ಯಗಳ ಸೈನಿಕರಿಗೆ ಸೇರಿವೆ ಎಂದು ಹೇಳಿದೆ. ಇದು ಫ್ರಾನ್ಸ್ ರಾಜನೊಂದಿಗೆ ಬ್ರಿಟಾನಿಯ ಡಚೆಸ್ ಅವರ ವಿವಾಹದೊಂದಿಗೆ ಕೊನೆಗೊಂಡಿತು ಮತ್ತು ಈ ಪ್ರದೇಶದ ಸ್ವಾತಂತ್ರ ಕೊನೆಯಾಯಿತು.

ವೈರಲ್ ಆಗಿರುವ ಛಾಯಾಚಿತ್ರವನ್ನು (ಎಡ) 2021 ರಲ್ಲಿ INRAP ತೆಗೆದ ಛಾಯಾಚಿತ್ರದೊಂದಿಗೆ (ಬಲ) ಹೋಲಿಸಿದಾಗ, ಧರ್ಮಸ್ಥಳದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧ ಕಲ್ಪಿಸಿ ಹಂಚುವ ಮೊದಲು ಮೊದಲು ಅದನ್ನು ಕ್ರಾಪ್ ಮಾಡಿ ಅಡ್ಡಲಾಗಿ ತಿರುಗಿಸಲಾಗಿತ್ತು ಎಂದು ಗೊತ್ತಾಗಿದೆ.
ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪತ್ತೆ ಎಂದು ಹೇಳಿ ಹಂಚಿಕೊಳ್ಳಲಾಗಿರುವ ವೈರಲ್ ಫೋಟೋ ಫ್ರಾನ್ಸ್ನದ್ದಾಗಿರುವುದು ಕಂಡುಬಂದಿದೆ.
Also Read: ಹಿಂದೂ ಗುರುತುಗಳೊಂದಿಗೆ ಮುಸ್ಲಿಂ ಯುವಕರಿಂದ ಲವ್ ಜಿಹಾದ್; ವೈರಲ್ ವೀಡಿಯೋ ಸತ್ಯವೇ?
Our Sources
Report by Le Monde article, Dated May 5, 2021
Report by INRAP article, Dated May 5, 2021
Report by PLOS One study, Dated May 5, 2021
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
October 7, 2025
Ishwarachandra B G
August 28, 2025
Ishwarachandra B G
August 16, 2025