‘ಭಾರತದ ಸಂಸತ್ತಿನಲ್ಲಿ ನಮ್ಮ ಜನ ಕುಳಿತಿದ್ದಾರೆ’ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರು ತಮ್ಮ ದೇಶದ ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ ಎಂದು ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇನ್ನು ಕೆಲವು ಬಳಕೆದಾರರು ಇದೇ ವಿಚಾರಕ್ಕೆ ಸಂಬಂಧಿಸಿ, ವೀಡಿಯೋ ಒಂದನ್ನು ಹಂಚಿಕೊಳ್ಳುತ್ತಿದ್ದಾರೆ. ಆ ವೀಡಿಯೋದಲ್ಲಿ “ರಾತ್ರಿಯ ಕತ್ತಲೆಯಲ್ಲಿ ಯಾರು ದಾಳಿ ಮಾಡುತ್ತಾರೆ? ನಾವು ಸಂಸತ್ತಿನಲ್ಲಿ ಭಾರತದ ಪ್ರಧಾನಿಯ ಮುಂದೆಯೂ ನಮ್ಮ ಪ್ರಚಾರವನ್ನು ಹರಡಬಹುದು… ನಮ್ಮ ಜನರು ಅವರ (ಭಾರತೀಯ) ಸಂಸತ್ತಿನಲ್ಲಿ ಕುಳಿತಿದ್ದಾರೆ” ಎಂದು ಭುಟ್ಟೋ ಜರ್ದಾರಿ ಪಾಕಿಸ್ತಾನ ಸಂಸತ್ತನ್ನು ಉದ್ದೇಶಿಸಿ ಹೇಳುತ್ತಿರುವುದನ್ನು ಸ್ಪ್ಲಿಟ್ ಸ್ಕ್ರೀನ್ ದೃಶ್ಯಾವಳಿ ತೋರಿಸುತ್ತದೆ. ಇದರ ಜೊತೆಗೆ, ಈ ಕ್ಲಿಪ್‌ನಲ್ಲಿ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಅವರು ಇತ್ತೀಚೆಗೆ ಆಪರೇಷನ್ ಸಿಂಧೂರ್ ಕುರಿತು ಲೋಕಸಭೆಯಲ್ಲಿ ಮಾಡಿದ ಭಾಷಣವನ್ನೂ ಸಹ ತೋರಿಸಲಾಗಿದೆ.

ಇದೇ ರೀತಿಯ ಹೇಳಿಕೆಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ಹೇಳಿಕೆ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ವೀಡಿಯೋವನ್ನು ಕೃತಕವಾಗಿ ಸೃಷ್ಟಿಸಲಾಗಿದೆ ಎಂದು ಕಂಡುಬಂದಿದೆ.
Also Read: ಹಿಂದೂ ಗುರುತುಗಳೊಂದಿಗೆ ಮುಸ್ಲಿಂ ಯುವಕರಿಂದ ಲವ್ ಜಿಹಾದ್; ವೈರಲ್ ವೀಡಿಯೋ ಸತ್ಯವೇ?
Fact Check/Verification
ಗೂಗಲ್‌ನಲ್ಲಿ “Bilawal Bhutto,” “people” ಮತ್ತು “Indian Parliament” ಎಂಬ ಕೀವರ್ಡ್ ಹುಡುಕಾಟವು ವೈರಲ್ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಫಲಿತಾಂಶಗಳನ್ನು ನೀಡಿಲ್ಲ.
ಅನಂತರ ನಾವು ಬಿಲಾವಲ್ ಭುಟ್ಟೋ ಅವರನ್ನು ತೋರಿಸುವ ವೀಡಿಯೋದ ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಇದು ಪಿಟಿವಿ ಪಾರ್ಲಿಮೆಂಟ್‌ನ ಯೂಟ್ಯೂಬ್ ಪೋಸ್ಟ್‌ಗೆ ನಮ್ಮನ್ನು ಕರೆದೊಯ್ಯಿತು , ಇದು ಮೇ 7, 2025 ರಂದು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ಕಲಾಪಗಳ ನೇರ ಪ್ರಸಾರವನ್ನು ಒಳಗೊಂಡಿತ್ತು.
ವೀಡಿಯೋ ಆರಂಭವಾದ 41:14 ನಿಮಿಷಗಳ ಸುಮಾರಿಗೆ, ಭುಟ್ಟೋ ಭಾರತದ ಆಪರೇಷನ್ ಸಿಂಧೂರ್ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತನಾಡುವುದನ್ನು ಕೇಳಬಹುದು “…ರಾತ್ರಿಯ ಕತ್ತಲೆಯಲ್ಲಿ ಯಾರು ದಾಳಿ ಮಾಡುತ್ತಾರೆ? ಕಳ್ಳರು ರಾತ್ರಿಯ ಕತ್ತಲೆಯಲ್ಲಿ ದಾಳಿ ಮಾಡುತ್ತಾರೆ. ಹೇಡಿಗಳು ರಾತ್ರಿಯ ಕತ್ತಲೆಯಲ್ಲಿ ದಾಳಿ ಮಾಡುತ್ತಾರೆ. ಅವರಿಗೆ ಧೈರ್ಯವಿದ್ದರೆ, ಅವರು ಹಗಲು ಹೊತ್ತಿನಲ್ಲಿ ಯುದ್ಧ ಘೋಷಿಸುತ್ತಿದ್ದರು.” ಎಂದಿದೆ.

ಲೈವ್ ಸ್ಟ್ರೀಮ್‌ನ ಈ ಭಾಗದ ದೃಶ್ಯಗಳು ವೈರಲ್ ವೀಡಿಯೋದಲ್ಲಿ ಕಂಡುಬರುವ ದೃಶ್ಯಕ್ಕೆ ಹೋಲುತ್ತವೆ ಎಂದು ಕಂಡುಬಂದಿದೆ. ಆದಾಗ್ಯೂ, ಪಾಕಿಸ್ತಾನಿ ನಾಯಕ “ಭಾರತೀಯ ಸಂಸತ್ತಿನಲ್ಲಿ ನಮ್ಮ ಜನರು” ಎಂದಿದ್ದಾರೆ ಎನ್ನುವ ಹೇಳಿಕೆ ಕಂಡುಬಂದಿಲ್ಲ.
ಎರಡೂ ದೃಶ್ಯಗಳ ನಡುವಿನ ಹೋಲಿಕೆಯನ್ನು ಈ ಕೆಳಗೆ ನೋಡಬಹುದು.

ಇದಲ್ಲದೆ, ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಕೂಡ ಮೇ 7, 2025 ರಂದು ಅವರ ಭಾಷಣವನ್ನು ಹಂಚಿಕೊಂಡಿದೆ. ಇದರಲ್ಲಿಯೂ ಸಹ ಆಪಾದಿತ ಹೇಳಿಕೆ ಇರಲಿಲ್ಲ, ಇದು ವೈರಲ್ ಕ್ಲಿಪ್ ಅನ್ನು ತಿರುಚಲಾಗಿದೆ ಎಂದು ದೃಢಪಡಿಸುತ್ತದೆ.
ವೈರಲ್ ಕ್ಲಿಪ್ ಅನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ಭುಟ್ಟೋ ಅವರ ತುಟಿ ಚಲನೆಗಳು ಆಡಿಯೋಕ್ಕಿಂತ ಭಿನ್ನವಾಗಿದೆ ಎಂದು ನಾವು ಗಮನಿಸಿದ್ದೇವೆ. ಅನಂತರ ನಾವು ಎಐ ಧ್ವನಿ ಪತ್ತೆ ಸಾಧನಗಳ ಮೂಲಕ ಆಡಿಯೋ ಕ್ಲಿಪ್ ಅನ್ನು ಪರಿಶೀಲಿಸಿದ್ದೇವೆ. ಹೆಚ್ಚಿನ ಎಐ ಪತ್ತೆ ಸಾಧನಗಳುಆಡಿಯೋದ ಚಿಹ್ನೆಗಳನ್ನು ಪತ್ತೆ ಮಾಡದಿದ್ದರೂ, Resemble AI ಧ್ವನಿಯನ್ನು “ನಕಲಿ” ಎಂದು ಕರೆದಿದೆ.
Conclusion
ಆದ್ದರಿಂದ, ಭಾರತದ ಸಂಸತ್ತಿನಲ್ಲಿ ನಮ್ಮ ಜನ ಕುಳಿತಿದ್ದಾರೆ ಎಂದು ಬಿಲಾವಲ್ ಭುಟ್ಟೋ ಜರ್ದಾರಿ ಹೇಳುತ್ತಿರುವ ವೈರಲ್ ವೀಡಿಯೋವನ್ನು ಕೃತಕವಾಗಿ ಮಾಡಲಾಗಿದೆ ಎಂದು ಕಂಡುಬಂದಿದೆ.
Our Sources
YouTube Video By PTV Parliament, Dated May 7, 2025
YouTube Video By National Assembly of Pakistan, Dated May 7, 2025
Resemble AI Website
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)