Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ವೈಷ್ಣೋದೇವಿಗೆ ಹೋಗುವ ಮಾರ್ಗದಲ್ಲಿ ಭಕ್ತರ ವಾಹನಗಳಿಗೆ ಕಲ್ಲು
ವೈಷ್ಣೋದೇವಿಗೆ ಹೋಗುವ ಮಾರ್ಗದಲ್ಲಿ ಭಕ್ತರ ವಾಹನಗಳಿಗೆ ಕಲ್ಲು ಎಂದು ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಪಾಕ್ ಆಕ್ರಮಿತ ಕಾಶ್ಮೀರದ್ದಾಗಿದೆ
ವೈಷ್ಣೋದೇವಿಗೆ ಹೋಗುವ ಮಾರ್ಗದಲ್ಲಿ ಭಕ್ತರ ವಾಹನಗಳಿಗೆ ಕಲ್ಲು ತೂರಲಾಗಿದೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಮುಸ್ಲಿಮರು ಭಕ್ತರ ವಾಹನಗಳಿಗೆ ಕಲ್ಲು ತೂರುತ್ತಿದ್ದು, ಇವರೆಂದೂ ಸುಧಾರಿಸುವುದಿಲ್ಲ ಎಂಬರ್ಥದಲ್ಲಿ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ.

ಈ ವೀಡಿಯೋ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಆಡಳಿತ ವಿರುದ್ಧ ನಡೆದ ಪ್ರತಿಭಟನೆಯ ಭಾಗ ಎಂದು ಕಂಡುಬಂದಿದೆ.
Also Read: ಪಾಕಿಸ್ತಾನದ ಪರ ಬೇಹುಗಾರಿಕೆ ಆರೋಪದ ಜ್ಯೋತಿ ಮಲ್ಹೋತ್ರಾಗೆ ರಾಜಕೀಯ ನಂಟು, ವೈರಲ್ ಫೋಟೋಗಳು ನಿಜವೇ?
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀ ಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ರೆಡಿಟ್ ನಲ್ಲಿ r/pakistan ಎಂಬ ಖಾತೆಯ ಪೋಸ್ಟ್ ಒಂದನ್ನು ನೋಡಿದ್ದೇವೆ. 2024ರ ಪೋಸ್ಟ್ ಇದಾಗಿದ್ದು, ವೀಡಿಯೋದಲ್ಲಿ ನೀಡಲಾದ ಕ್ಯಾಪ್ಷನ್ ನಲ್ಲಿ “ಕಾಶ್ಮೀರಿಗಳು ಯಾಕಾಗಿ ಪಾಕಿಸ್ತಾನದ ಸೇನ್ ವಾಹನಗಳ ಮೇಲೆ ಕಲ್ಲು ತೂರುತ್ತಿದ್ದಾರೆ ಎಂದಿದೆ.”

ಅದೇ ರೀತಿ ಇನ್ಸ್ಟಾಗ್ರಾಂನಲ್ಲಿ the_pahaari ಎಂಬ ಬಳಕೆದಾರರು ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಮೇ 13, 2024ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫ್ಫರಾಬಾದ್ನಲ್ಲಿ ಪಾಕಿಸ್ತಾನ ರೇಂಜರ್ಸ್ ಗಳ ವಿರುದ್ಧ ಕಲ್ಲು ತೂರಾಟ ಎಂದು ವೀಡಿಯೋ ಪೋಸ್ಟ್ ಮಾಡಿರುವುದನ್ನು ನೋಡಿದ್ದೇವೆ.

ಈ ವೀಡಿಯೋ ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವುದನ್ನೂ ನೋಡಿದ್ದೇವೆ.
ಆ ಬಳಿಕ, ಯೂಟ್ಯೂಬ್ನಲ್ಲಿ ಮೇ 18, 2024ರ ಡಾನ್ ನ್ಯೂಸ್ ವರದಿಯನ್ನು ನೋಡಿದ್ದೇವೆ. ಇದರಲ್ಲಿ “ಪಾಕಿಸ್ತಾನ ರೇಂಜರ್ಸ್ ಗಳ ಗಳ ವಿರುದ್ಧ ಆಜಾದ್ ಕಾಶ್ಮೀರದಲ್ಲಿ ಗುಡ್ಡದ ಮೇಲಿಂದ ಕಲ್ಲು ತೂರಾಟ” ಎಂದಿದೆ.

ಇದನ್ನು ಸಾಕ್ಷ್ಯವಾಗಿಟ್ಟುಕೊಂಡು ನಾವು ಇನ್ನಷ್ಟು ಶೋಧ ನಡೆಸಿದಾಗ ಈ ಕುರಿತ ವರದಿಗಳೂ ಲಭ್ಯವಾಗಿವೆ.
ಮೇ 18 2024ರ ಉರ್ದು ಜಿಯೋ ಟಿವಿ ವರದಿಯಲ್ಲಿ, , “ಆಜಾದ್ ಕಾಶ್ಮೀರದಲ್ಲಿ, ವಿದ್ಯುತ್ ಮತ್ತು ಹಿಟ್ಟು ಬೆಲೆಗಳನ್ನು ಇಳಿಸದಿದ್ದಕ್ಕೆ ಕಲ್ಲುಗಳನ್ನು ಎಸೆಯಲಾಯಿತು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಈ ಹಿಂಸಾತ್ಮಕ ಪ್ರತಿಭಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರತಿಭಟನೆಗಳು ಅಗ್ಗದ ಹಿಟ್ಟು ಮತ್ತು ವಿದ್ಯುತ್ಗಾಗಿ ಮಾತ್ರವಲ್ಲ, ಅದರ ಹಿಂದೆ ಇತರ ಗುಪ್ತ ಉದ್ದೇಶಗಳಿವೆ ಎಂಬುದು ಸ್ಪಷ್ಟವಾಗುತ್ತದೆ. ಘಟನೆಯಲ್ಲಿ ಮಿರ್ಪುರ್ ಎಸ್ಎಚ್ಒ ಅದ್ನಾನ್ ಖುರೇಷಿ ದುಷ್ಕರ್ಮಿಗಳಿಂದ ಹುತಾತ್ಮರಾಗಿದ್ದು, 90 ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಮತ್ತು ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ರೇಂಜರ್ ಗಳನ್ನು ಕರೆಯಲಾಗುತ್ತಿತ್ತು, ಆದರೆ ಪಡೆದ ವೀಡಿಯೋದಲ್ಲಿ, ದುಷ್ಕರ್ಮಿಗಳು ರೇಂಜರ್ಸ್ ಸಿಬ್ಬಂದಿ ಮತ್ತು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಅನೇಕ ವಾಹನಗಳಿಗೆ ತೀವ್ರ ಹಾನಿಯಾಗಿದೆ. ವೀಡಿಯೋದಲ್ಲಿ, ಪ್ರತಿಭಟನಾಕಾರರು ರೇಂಜರ್ ಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ ಮತ್ತು ಪರ್ವತಗಳಿಂದ ಅವರ ಮೇಲೆ ಕಲ್ಲು ತೂರುವುದನ್ನು ಸ್ಪಷ್ಟವಾಗಿ ಕಾಣಬಹುದು.” ಎಂದಿದೆ. (ಉರ್ದುವಿನಿಂದ ಅನುವಾದಿಸಲಾಗಿದೆ)

ಮೇ 29, 2024ರ ವಿ ನ್ಯೂಸ್ ವರದಿಯಲ್ಲೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆತ್ತಿದ್ದ ಪ್ರತಿಭಟನೆ ಜೊತೆಗೆ ಪಾಕಿಸ್ತಾನ ರೇಂಜರ್ಸ್ ಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಯಿತು ಎಂದಿದೆ.

ಇನ್ನು ವೀಡಿಯೋದ ಮೂಲದ ಬಗ್ಗೆ ನಾವು ಹುಡುಕಾಟ ನಡೆಸಿದಾಗ ಫೇಸ್ಬುಕ್ ನಲ್ಲಿ ವಿವಿಧ ಬಳಕೆದಾರರು ಈ ಘಟನೆಯ ವೀಡಿಯೋ ಹೋಲುವ ವೀಡಿಯೋಗಳನ್ನು ಪೋಸ್ಟ್ ಮಾಡಿರುವುದನ್ನು ಕಂಡುಕೊಂಡಿದ್ದೇವೆ.
ಮೇ 13, 2024ರಂದು Nomi Mughal ಎಂಬ ಬಳಕೆದಾರರು ವೀಡಿಯೋ ಹಂಚಿಕೊಂಡಿದ್ದು ಕ್ಯಾಪ್ಷನ್ ನಲ್ಲಿ ಲೋಹರ್ ಸ್ಟ್ರೀಟ್ ಮುಜಫ್ಫರಾಬಾದ್ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಇನ್ನೊಂದು ಪೋಸ್ಟ್ ಮೇ 13, 2024ರಂದು Mountain Media House ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ “ಮುಜಫರಾಬಾದ್: ಲೋಹರ್ ಗಲಿ ಸ್ಥಳದಲ್ಲಿ ರೇಂಜರ್ಗಳಿಂದ ಭಾರೀ ಗುಂಡು ಹಾರಿಸುವಿಕೆ ಮತ್ತು ಅಶ್ರುವಾಯು ಪ್ರಯೋಗ, ಸಾರ್ವಜನಿಕರಲ್ಲಿ ತೀವ್ರ ಭಯ ಮತ್ತು ಭೀತಿಯನ್ನು ಉಂಟುಮಾಡಿತು.” ಎಂದಿದೆ.
ಈ ಸ್ಥಳದ ಬಗ್ಗೆಯೂ ನಾವು ಗೂಗಲ್ ನಲ್ಲಿ ಶೋಧ ನಡೆಸಿದಾಗ, ಅದು ವೀಡಿಯೋದ ದೃಶ್ಯಗಳಿಗೆ ಸಾಮ್ಯತೆ ಹೊಂದಿರುವುದನ್ನು ನೋಡಿದ್ದೇವೆ.

ಈ ಸತ್ಯಶೋಧನೆಯ ಪ್ರಕಾರ, ವೈಷ್ಣೋದೇವಿ ಮಾರ್ಗದಲ್ಲಿ ಮುಸ್ಲಿಮರು ಭಕ್ತರ ವಾಹನಗಳಿಗೆ ಕಲ್ಲು ತೂರಿದ್ದಾರೆ ಎಂದು ಹೇಳಿದ ವೀಡಿಯೋ ನಿಜವಾದ್ದಲ್ಲ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದ ದೃಶ್ಯವಾಗಿದೆ.
Also Read: ಪಾಕಿಸ್ತಾನದ ಮಾಜಿ ಸಚಿವರೊಬ್ಬರಿಗೆ ಅಣ್ವಸ್ತ್ರ ವಿಕಿರಣ ತಾಗಿದೆ ಎನ್ನುವುದರ ಹಿಂದಿನ ಸತ್ಯ ಏನು?
Our Sources
Instagram Post By, the_pahaari Dated: May 13, 2024
Reddit Post By r/pakistan, Dated: May 18, 2024
Report By, Urdu jio Tv, Dated: May 18, 2024
Report By, Wenews, Dated: May 29, 2024
Facebook Post By Nomi Mughal, Dated: May 13, 2024
Facebook Post By Mountain Media House, May 13, 2024
Google Maps
(Inputs from Runjay Kumar Newschecker)
Vasudha Beri
November 20, 2025
Ishwarachandra B G
October 18, 2025
Vasudha Beri
October 15, 2025