Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಾಕಿಸ್ತಾನದ ಪರ ಬೇಹುಗಾರಿಕೆ ಆರೋಪದ ಜ್ಯೋತಿ ಮಲ್ಹೋತ್ರಾಗೆ ರಾಜಕೀಯ ನಂಟು, ವಿವಿಧ ರಾಜಕೀಯ ಪಕ್ಷಗಳು, ನಾಯಕರೊಂದಿಗೆ ನಂಟು
ಜ್ಯೋತಿ ಮಲ್ಹೋತ್ರಾ ವಿವಿಧ ಪಕ್ಷಗಳು, ನಾಯಕರೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಹಂಚಿಕೊಳ್ಳಲಾದ ಫೋಟೋಗಳು ಡಿಜಿಟಲ್ ಆಗಿ ತಿರುಚಿದ ಚಿತ್ರಗಳಾಗಿವೆ
ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತರಾದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ವಿವಿಧ ರಾಜಕೀಯ ಪಕ್ಷಗಳು, ನಾಯಕರೊಂದಿಗೆ ಸಂಪರ್ಕ ಹೊಂದಿದ್ದರೆಂಬ ಕುರಿತು ಈಗ ವಿವಿಧ ಹೇಳಿಕೆಗಳು ವೈರಲ್ ಆಗುತ್ತಿವೆ. ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರೊಂದಿಗೆ ಕಾಣಿಸಿಕೊಂಡಿದ್ದರು ಅಲ್ಲದೇ, ಜ್ಯೋತಿ ಮಲ್ಹೋತ್ರಾ ಬಿಜೆಪಿಯ ಕಾರ್ಯಕರ್ತೆ, ಆಕೆ ಬಿಜೆಪಿ ಟೋಪಿ ಧರಿಸಿ ಕಾಣಿಸಿಕೊಂಡಿದ್ದರು ಎಂಬ ಕುರಿತ ಫೋಟೋ ಕೂಡ ವೈರಲ್ ಆಗಿದೆ.
ಇತ್ತೀಚೆಗೆ, ಹರಿಯಾಣ ಪೊಲೀಸರು ‘ಟ್ರಾವೆಲ್ ವಿತ್ ಜೋ’ ಹೆಸರಿನ ಯೂಟ್ಯೂಬ್ ಚಾನೆಲ್ ಮತ್ತು ಇನ್ಸ್ಟಾಗ್ರಾಮ್ ಪುಟವನ್ನು ನಡೆಸುತ್ತಿರುವ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನಕ್ಕೆ ಗುಪ್ತಚರ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಬಂಧಿಸಿದ್ದರು. ಜ್ಯೋತಿ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜ್ಯೋತಿ ಮಲ್ಹೋತ್ರಾ ವಿವಿಧ ಪಕ್ಷಗಳು, ನಾಯಕರೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಕುರಿತ ವಿವಿಧ ಕ್ಲೈಮ್ ಗಳನ್ನು ಇಲ್ಲಿ, ಇಲ್ಲಿ,ನೋಡಬಹುದು.


ಇಂತಹ ವಿವಿಧ ಹೇಳಿಕೆಗಳನ್ನು ನ್ಯೂಸ್ಚೆಕರ್ ಪರಿಶೀಲನೆ ನಡೆಸಿದ್ದು, ಇವುಗಳು ತಿರುಚಿದ ಚಿತ್ರಗಳಾಗಿವೆ, ಅವು ನಿಜವಾದ್ದಲ್ಲ ಎಂದು ತಿಳಿದುಬಂದಿದೆ.

ನ್ಯೂಸ್ ಚೆಕರ್ ಮೊದಲು ವೈರಲ್ ಆದ ಎರಡೂ ಫೋಟೋಗಳ ರಿವರ್ಸ್ ಇಮೇಜ್ ಸರ್ಚ್ ಅನ್ನು ನಡೆಸಿತು, ಆದರೆ ಅದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಜೊತೆಗೆ ಜ್ಯೋತಿ ಮಲ್ಹೋತ್ರಾ ಇದ್ದರು ಎಂಬ ಬಗ್ಗೆ ಯಾವುದೇ ಸಾಕ್ಷ್ಯಗಳನ್ನು ನೀಡಲಿಲ್ಲ.
ಮೊದಲ ಚಿತ್ರದ ಮೇಲೆ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಬಹುತೇಕ ಎಲ್ಲ ಪ್ರಮುಖ ಮಾಧ್ಯಮಗಳ ವರದಿಗಳು ಲಭ್ಯವಾಗಿವೆ. ಇವುಗಳು 2018ಕ್ಕಿಂತ ಹಳೆಯವು ಎಂದು ಗೊತ್ತಾಗಿದೆ. ರಾಯ್ ಬರೇಲಿಯಲ್ಲಿ ಕಾಂಗ್ರೆಸ್ಗೆ ಮುಖ ಮಾಡಿದ ಬಿಜೆಪಿ ಶಾಸಕಿ ಅದಿತಿ ಸಿಂಗ್ ಮತ್ತು ರಾಹುಲ್ ಗಾಂಧಿಯವರ ಫೋಟೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವುದನ್ನು ನಾವು ನೋಡಿದ್ದೇವೆ. ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಂಡುಬರುವ ವರದಿಗಳು,
ಕಾಂಗ್ರೆಸ್ ಹಿರಿಯ ಅಖಿಲೇಶ್ ಸಿಂಗ್ ಅವರ ಪುತ್ರಿ ಸಿಂಗ್ ಬಗ್ಗೆ, ಗಾಂಧಿಯವರೊಂದಿಗೆ ಮದುವೆಯಾಗುತ್ತಾರೆ ಎಂಬ ವದಂತಿಗಳನ್ನು ತಳ್ಳಿ ಹಾಕಿವೆ. ಈ ವರದಿಯಲ್ಲೂ ರಾಹುಲ್ ಗಾಂಧಿ ಅವರೊಂದಿಗೆ ಅದಿತಿಯವರ ಫೊಟೋ ನೋಡಿದ್ದೇವೆ.


ಇನ್ನು ಮೂಲ ಚಿತ್ರದೊಂದಿಗೆ (ಎಡ) ಹೋಲಿಕೆ ಮಾಡಿದಾಗ ವೈರಲ್ ಫೋಟೋವನ್ನು (ಬಲ) ಮಲ್ಹೋತ್ರಾ ಅವರ ಮುಖವನ್ನು ಚಿತ್ರದ ಮೇಲೆ ಎಡಿಟ್ ಮಾಡುವ ಮೂಲಕ ತಿದ್ದುಪಡಿಮಾಡಲಾಆಗಿದೆ ಎಂದು ದೃಢಪಡುತ್ತದೆ.

ಅಲ್ಲದೆ, ವೈರಲ್ ಆದ ಫೋಟೋವನ್ನು ನಾವು ಫೇಕ್ ಇಮೇಜ್ ಡಿಟೆಕ್ಟರ್ ಮೂಲಕವೂ ನೋಡಿದ್ದೇವೆ, ಅದು ಚಿತ್ರವನ್ನು ಕಂಪ್ಯೂಟರ್ ಮೂಲಕ ತಿದ್ದುಪಡಿ ಮಾಡಲಾಗಿದೆ ಎಂದಿದೆ. ಆದರೆ ರಾಹುಲ್ ಗಾಂಧಿ ಜೊತೆಗಿನ ಅದಿತಿ ಸಿಂಗ್ ಅವರ ಮೂಲ ಫೋಟೋದಲ್ಲಿ ಯಾವುದೇ ದೋಷ ಪತ್ತೆಯಾಗಿಲ್ಲ, ಇದು ಡಿಜಿಟಲ್ ಆಗಿ ಎಡಿಟ್ ಮಾಡಲಾಗಿದೆ ಎಂಬುದನ್ನು ಮತ್ತಷ್ಟು ದೃಢಪಡಿಸುತ್ತದೆ.


ಎರಡನೇ ಚಿತ್ರದ ಕುರಿತು ನ್ಯೂಸ್ ಚೆಕರ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿತು, ಇದು
ಸೆಪ್ಟೆಂಬರ್ 18, 2022 ರಂದು ರಾಹುಲ್ ಗಾಂಧಿ ಅವರ ಈ ಫೇಸ್ಬುಕ್ ಪೋಸ್ಟ್ಗೆ ನಮ್ಮನ್ನು ಕರೆದೊಯ್ಯಿತು, ಇದು ಸೆಪ್ಟೆಂಬರ್ 7, 2022 ರಿಂದ ಜನವರಿ 30, 2023 ರವರೆಗೆ ನಡೆದ ಭಾರತ್ ಜೋಡೋ ಯಾತ್ರೆಯ ಫೋಟೋವನ್ನು ಹಂಚಿಕೊಂಡಿದೆ. “ಸೆಪ್ಟೆಂಬರ್ 18, 2022 ರಂದು ಕೇರಳದ ಅಲಪ್ಪುಳದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿ ಮಹಿಳಾ ಬೆಂಬಲಿಗರನ್ನು ಆಲಂಗಿಸಿರುವುದು” ಎಂಬ ಶೀರ್ಷಿಕೆಯೊಂದಿಗೆ ಮಾಧ್ಯಮ ವರದಿಯನ್ನು ನಾವು ನೋಡಿದ್ದೇವೆ.

ಮೂಲ ಚಿತ್ರದೊಂದಿಗೆ (ಎಡ) ಹೋಲಿಕೆ ಮಾಡಿದಾಗ ವೈರಲ್ ಫೋಟೋದಲ್ಲಿ (ಬಲ) ಮಲ್ಹೋತ್ರಾ ಅವರ ಮುಖವನ್ನು ಚಿತ್ರದ ಮೇಲೆ ಎಡಿಟ್ ಮಾಡಲಾಗಿದೆ ಎಂದು ಗೊತ್ತಾಗುತ್ತದೆ.

ಅದೇ ರೀತಿ, ವೈರಲ್ ಆದ ಫೋಟೋವನ್ನು ನಾವು ಫೇಕ್ ಇಮೇಜ್ ಡಿಟೆಕ್ಟರ್ ಮೂಲಕವೂ ಪರಿಶೀಲಿಸಿದ್ದೇವೆ. ಆ ಫೋಟೋ ಕಂಪ್ಯೂಟರ್ನಲ್ಲಿ ರಚಿತವಾಗಿದೆ ಅಥವಾ ಮಾರ್ಪಡಿಸಲಾಗಿದೆ ಎಂದು ಅದು ನಮಗೆ ತಿಳಿಸಿದೆ. ಆದರೆ ಮೂಲ ಫೋಟೋದಲ್ಲಿ ಯಾವುದೇ ದೋಷ ಪತ್ತೆಯಾಗಿಲ್ಲ. ಇದರಿಂದಾಗಿ, ಅದನ್ನು ಡಿಜಿಟಲ್ ಆಗಿ ತಿದ್ದುಪಡಿ ಮಾಡಲಾಗಿದೆ ಎಂದು ಗೊತ್ತಾಗಿದೆ.



ತನಿಖೆಯ ಸಂದರ್ಭದಲ್ಲಿ ವೈರಲ್ ಫೊಟೋವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದು ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಆ ಬಳಿಕ ಫೊಟೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಫೋಟೋದಲ್ಲಿ ಹಲವಾರು ದೋಷಗಳು ಕಂಡುಬಂದವು. ಈ ಫೋಟೋ ಕೃತಕವಾಗಿ ಮಾಡಿದಂತೆ ಕಂಡುಬಂದಿದೆ. ತಿ ಮಲ್ಹೋತ್ರಾ ಅವರ ಕ್ಯಾಪ್ನಲ್ಲಿ ಕಂಡುಬರುವ ಬಿಜೆಪಿ ಚುನಾವಣಾ ಚಿಹ್ನೆಯ ವಿನ್ಯಾಸದಲ್ಲಿ ದೋಷಗಳಿವೆ. ಈ ಕಾರಣ AI ನಿಂದ ರಚಿತವಾಗಿರಬಹುದು ಎಂದು ಶಂಕಿಸಿದ್ದೇವೆ.

ಆ ಬಳಿಕ ವಿವಿಧ AI ಪತ್ತೆ ಸಾಧನಗಳನ್ನು ಬಳಸಿಕೊಂಡು ಈ ಫೋಟೋವನ್ನು ಪರೀಕ್ಷಿಸಿದ್ದೇವೆ. ಈ ವೇಳೆ ಇದು AI ಮೂಲಕ ರಚಿತವಾಗಿದೆ ಎಂದು ಸಾಬೀತಾಗಿದೆ.
ಹೈವ್ ಮಾಡರೇಶನ್ ಟೂಲ್ ಈ ಫೋಟೋವನ್ನು 99.9% AI ನಿಂದ ರಚಿಸಲಾಗಿದೆ ಎಂದು ಗುರುತಿಸಿದೆ.

ಈ ಚಿತ್ರವನ್ನು AI ನಿಂದ ರಚಿಸಲಾಗಿದೆ ಎಂದು ವಾಸಿಟ್ಎಐ ಹೇಳಿದೆ.

ಇನ್ನು, ಹರಿಯಾಣ ಬಿಜೆಪಿಯ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಭೂಪಿಂದರ್ ಸಿಂಗ್ ಅವರನ್ನು ನ್ಯೂಸ್ ಚೆಕರ್ ಸಂಪರ್ಕಿಸಿದೆ. ದೂರವಾಣಿ ಸಂಭಾಷಣೆಯಲ್ಲಿ ಅವರು ವೈರಲ್ ಹೇಳಿಕೆಯನ್ನು ನಿರಾಕರಿಸಿದರು ಮತ್ತು ಜ್ಯೋತಿ ಮಲ್ಹೋತ್ರಾ ಅವರಿಗೆ ಬಿಜೆಪಿ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಆದ್ದರಿಂದ ಜ್ಯೋತಿ ಮಲ್ಹೋತ್ರಾ ಬಿಜೆಪಿ ಟೋಪಿ ಧರಿಸಿದ ಫೋಟೋ AI ನಿಂದ ಮಾಡಿದ್ದು ಎನ್ನುವುದು ಖಚಿತವಾಗಿದೆ.
ವೈರಲ್ ಆಗುತ್ತಿರುವ ಮೊದಲ ಚಿತ್ರದಲ್ಲಿ, ಪ್ರಧಾನಿ ಮೋದಿ ಹಲವಾರು ಯುವಕರು ಮತ್ತು ಯುವತಿಯೊಂದಿಗೆ ಒಂದೇ ಸ್ಥಳದಲ್ಲಿ ನಿಂತಿರುವುದು ಕಂಡುಬರುತ್ತದೆ. ಈ ಫೋಟೋದಲ್ಲಿರುವ ಹುಡುಗಿಯನ್ನು ಜ್ಯೋತಿ ಮಲ್ಹೋತ್ರಾ ಎಂದು ಗುರುತಿಸಲಾಗಿದೆ. ಇದನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ.

ಜ್ಯೋತಿ ಮಲ್ಹೋತ್ರಾ ಪ್ರಧಾನಿ ಮೋದಿ ಅವರೊಂದಿಗಿನ ಫೋಟೋವನ್ನು ನಾವು ಮೊದಲಾಗಿ ಪರಿಶೀಲಿಸಿದೆವು. ರಿವರ್ಸ್ ಇಮೇಜ್ ಹುಡುಕಾಟದ ವೇಳೆ ಹಲವಾರು ಮಾಧ್ಯಮ ವರದಿಗಳು ನಮಗೆ ಸಿಕ್ಕವು. ಏಪ್ರಿಲ್ 2024 ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಗೇಮಿಂಗ್ ಸಮುದಾಯದ ಕೆಲವು ಯುವ ಸದಸ್ಯರನ್ನು ಭೇಟಿಯಾದರು ಎಂದು
ವರದಿಗಳಲ್ಲಿದೆ.

ಇನ್ನಷ್ಟು ಹುಡುಕಿದಾಗ, ಏಪ್ರಿಲ್ 13, 2024 ರಂದು ಪ್ರಧಾನಿ ಮೋದಿಯವರ ಯೂಟ್ಯೂಬ್ ಖಾತೆಯಲ್ಲಿ ಅಪ್ಲೋಡ್ ಮಾಡಲಾದ ವೀಡಿಯೋ ನಮಗೆ ಸಿಕ್ಕಿತು , ಅದರಲ್ಲಿ ಈ ಇಡೀ ಸಭೆಯ ಹಲವು ದೃಶ್ಯಗಳಿವೆ. ವೀಡಿಯೋದಲ್ಲಿರುವ ಎಲ್ಲರೂತಮ್ಮನ್ನು ಪರಿಚಯಿಸಿಕೊಂಡರು, ಆ ಸಮಯದಲ್ಲಿ ಹುಡುಗಿ ತನ್ನ ಹೆಸರನ್ನು ಪಾಯಲ್ ಧರೆ ಮತ್ತು ತಾನು ಇಂದೋರ್ ನಿವಾಸಿ ಎಂದು ಹೇಳಿಕೊಂಡಳು. ಇದಲ್ಲದೆ, ವೀಡಿಯೋ ಮತ್ತು ಆನ್ಲೈನ್ ಗೇಮ್ಗಳ ಕೆಲವು ಪರಿಣಿತ ಆಟಗಾರರಾದ ತಿರತ್ ಮೆಹ್ತಾ, ಪಾಯಲ್ ಧಾರೆ, ಅನಿಮೇಶ್ ಅಗರ್ವಾಲ್, ಅಂಶು ಬಿಶ್ತ್, ನಮನ್ ಮಾಥುರ್, ಮಿಥಿಲೇಶ್ ಪಾಟಂಕರ್ ಮತ್ತು ಗಣೇಶ್ ಗಂಗಾಧರ್ ಅವರನ್ನು ಪ್ರಧಾನಿ ಮೋದಿ ಭೇಟಿಯಾದರು ಎಂದು ವೀಡಿಯೋ ವಿವರಣೆಯಲ್ಲಿ ಹೇಳಲಾಗಿದೆ.
ಇದಲ್ಲದೆ, ಪಾಯಲ್ ಧರೆ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಏಪ್ರಿಲ್ 13, 2024 ರಂದು ಅಪ್ಲೋಡ್ ಮಾಡಲಾದ ಫೋಟೋವನ್ನು ಸಹ ನಾವು ಕಂಡುಕೊಂಡಿದ್ದೇವೆ, ಅದರಲ್ಲಿ ಅವರು ಪ್ರಧಾನಿ ಮೋದಿಯವರೊಂದಿಗೆ ಕಾಣಿಸಿಕೊಂಡಿದ್ದಾರೆ.

ಈ ಸಾಕ್ಷ್ಯಗಳ ಪ್ರಕಾರ ಮೋದಿ ಅವರೊಂದಿಗೆ ಇರುವವರು ಜ್ಯೋತಿ ಮಲ್ಹೋತ್ರಾ ಅಲ್ಲ ಆಕೆ ಪಾಯಲ್ ಧರೆ ಎಂಬಾಕೆ ಎಂದು ಗೊತ್ತಾಗಿದೆ.
ಈ ಫೋಟೋದಲ್ಲಿ ಅಖಿಲೇಶ್ ಯಾದವ್ ಒಂದು ಕಾರ್ಯಕ್ರಮದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತಿರುವುದು ಮತ್ತು ಅವರ ಪಕ್ಕದಲ್ಲಿ ಜ್ಯೋತಿ ಮಲ್ಹೋತ್ರಾ ಸಮಾಜವಾದಿ ಪಕ್ಷದ ಕ್ಯಾಪ್ ಧರಿಸಿರುವುದು ಕಂಡುಬರುತ್ತದೆ.
.

ಖಿಲೇಶ್ ಯಾದವ್ ಅವರ ಫೋಟೋವನ್ನು ತನಿಖೆ ಮಾಡಿದಾಗ, ಈ ಸಮಯದಲ್ಲಿ, ಜನವರಿ 23, 2017 ರಂದು ಇಂಡಿಯಾ ಟುಡೇ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡೆವು , ಅದರಲ್ಲಿ ವೈರಲ್ ಚಿತ್ರಕ್ಕೆ ಹೋಲುವ ಚಿತ್ರವಿತ್ತು. ಆದರೆ, ನಿಜವಾದ ಫೋಟೋದಲ್ಲಿ ಡಿಂಪಲ್ ಯಾದವ್ ಅಖಿಲೇಶ್ ಯಾದವ್ ಜೊತೆ ನಿಂತಿದ್ದರು. 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷದ ಪ್ರಣಾಳಿಕೆ ಕಾರ್ಯಕ್ರಮದ ಸಂದರ್ಭದಲ್ಲಿ ಈ ಫೋಟೋ ತೆಗೆಯಲಾಗಿದೆ ಎಂದು ವರದಿ ಹೇಳಿದೆ.

ಇದಲ್ಲದೆ, ಜನವರಿ 22, 2017 ರಂದು ಅಖಿಲೇಶ್ ಯಾದವ್ ಅವರ ಫೇಸ್ಬುಕ್ ಖಾತೆಯಲ್ಲಿ ಇದೇ ರೀತಿಯ ಫೋಟೋ ಕಂಡಿದ್ದೇವೆ.

ತನಿಖೆಯಲ್ಲಿ ದೊರೆತಿರುವ ಸಾಕ್ಷ್ಯಗಳ ಪ್ರಕಾರ ಅಖಿಲೇಶ್ ಯಾದವ್ ಅವರೊಂದಿಗೆ ಮೂಲ ಫೋಟೋದಲ್ಲಿ ಡಿಂಪಲ್ ಯಾದವ್ ಇದ್ದರು ಎಂಬುದು ಸ್ಪಷ್ಟ., ಅದನ್ನು ಎಡಿಟ್ ಮಾಡಿ, ಜ್ಯೋತಿ ಮಲ್ಹೋತ್ರಾ ಮುಖವನ್ನು ಸೇರಿಸಲಾಗಿದೆ. ವೈರಲ್ ಫೋಟೋ ಮತ್ತು ಮೂಲ ಫೊಟೋಕ್ಕೆ ವ್ಯತ್ಯಾಸವನ್ನು ಇಲ್ಲಿ ತಿಳಿದುಕೊಳ್ಳಬಹುದು.

ಈ ಸತ್ಯಶೋಧನೆಯ ಪ್ರಕಾರ, ಪಾಕಿಸ್ತಾನದ ಪರ ಬೇಹುಗಾರಿಕೆ ಆರೋಪದ ಮೇಲೆ ಬಂಧನದಲ್ಲಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ವಿವಿಧ ರಾಜಕೀಯ ಪಕ್ಷಗಳೊಂದಿಗೆ, ಮುಖಂಡರೊಂದಿಗೆ ಕಾಣಿಸಿಕೊಂಡಿದ್ದರು ಎಂದು ಹೇಳಲಾದ ಫೋಟೋಗಳು ಡಿಜಿಟಲ್ ಆಗಿ ತಿರುಚಿದ್ದಾಗಿದೆ ಎಂದು ಕಂಡುಬಂದಿದೆ.
Our Sources
Report By Deccan Herald report, Dated: October 3, 2019
Report By BBC Hindi report, Dated: May 7, 2018
Report By India Today report, Dated: May 7, 2018
Report By JanSatta report, Dated: May 7, 2018
Facebook post, Rahul Gandhi, Dated: September 18, 2022
Fake Image Detector tool
sightengine.com
Hive Moderation Website
WasItAI Website
Conversation with Captain Bhupinder Singh, Leader BJP Haryana
Report By sportskeeda Dated: April 11, 2024
YouTube Video By Narendra Modi Dated: April 13, 2024
Instagram Post by payalgamingg Dated: April 13, 2024
Facebook Post by Akhilesh Yadav, Dated: Janaury 22 2017
(ಈ ಕುರಿತ ಲೇಖನಗಳನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್, ಹಿಂದಿ ಮತ್ತು ಮರಾಠಿಯಲ್ಲಿ ಪ್ರಕಟಿಸಲಾಗಿದ್ದು, ಅವುಗಳು ಇಲ್ಲಿ, ಇಲ್ಲಿ, ಇಲ್ಲಿ ಇವೆ)
Vasudha Beri
October 9, 2025
Ishwarachandra B G
October 8, 2025
Ishwarachandra B G
October 7, 2025