Authors
Claim
ಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ
Fact
ಈ ಶೌಚಾಲಯಗಳನ್ನು ನಿರ್ಮಾಣ ಮಾಡಿರುವುದು ವಾರಾಣಸಿಯ ಸ್ವರವೇದ ಮಹಾಮಂದಿರದಲ್ಲಿ ಇದು ಅಯೋಧ್ಯೆಯಲ್ಲಿ ನಿರ್ಮಾಣವಾದದ್ದಲ್ಲ
ಈ ಶೌಚಾಲಯಗಳನ್ನು ಅಯೋಧ್ಯೆಯ ರಾಮ ಮಂದಿರದಲ್ಲಿ ನಿರ್ಮಿಸಲಾಗಿದೆಯೇ?
ಫೇಸ್‌ಬುಕ್ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ, ‘ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ನಿರ್ಮಿಸಲಾದ ಶೌಚಾಲಯಗಳು’ ಎಂಬರ್ಥದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. “ಜನವರಿ 22ಕ್ಕೆ ಮರೆಯದಿರಿ ಮರೆತು ನಿರಾಶರಾಗದಿರಿ ನಿಮಗಾಗಿ ಸಿದ್ಧವಾಗಿದೆ ಜೀ ಒಬ್ಬರು ಇದ್ದರೆ ಅಸಾಧ್ಯವಾದದ್ದೆಲ್ಲಾ ಸಾಧ್ಯ ಸ್ವಚ್ಛ ಶೌಚಾಲಯ” ಎಂದು ಇದರಲ್ಲಿದೆ.
Also Read: ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ರಾಮ ಮಂದಿರಕ್ಕೆ 613 ಕೆಜಿಯ ಗಂಟೆ ದಾನ ಮಾಡಿದ್ದಾರಾ?
ಜನವರಿ 22, 2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭಕ್ಕೆ ಮುಂಚಿತವಾಗಿ ತೆರೆದ ರೀತಿ ಇರುವ ಈ ಶೌಚಾಲಯಗಳನ್ನು ಮಾಡಲಾಗಿದೆ ಎಂದಿದೆ.
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ತಿಳಿದುಬಂದಿದೆ.
Fact Check/ Verification
ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.
vkroaster420 ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಡಿಸೆಂಬರ್ 31, 2023ರಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗಿದ್ದು, ಈ ವೀಡಿಯೋದಲ್ಲಿ “ಏ ದೃಶ್ಯ್ ಬನಾರಸ್ ಸೇ ಆ ರಹಾ ಹೈ” (ಈ ದೃಶ್ಯ ಬನಾರಸ್ ನಿಂದ ಬಂದಿದೆ) ಎಂದು ಬರೆಯಲಾಗಿದೆ. ವಾರಾಣಸಿಯ ಇನ್ನೊಂದು ಹೆಸರು ಬನಾರಸ್ ಆಗಿದ್ದು, ಈ ಹಿನ್ನೆಲೆಯಲ್ಲಿ ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ ಇನ್ನಷ್ಟು ಹುಡುಕಾಟವನ್ನು ನಡೆಸಿದ್ದೇವೆ.
ಆ ಪ್ರಕಾರ, ಬಗ್ಗೆ ಅಂಕಿತ್ ಪ್ರೋಮೋ ಅವರ ಡಿಸೆಂಬರ್ 13, 2023ರ ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ. ಇದರಲ್ಲಿ ವಾರಾಣಸಿಯ ಸ್ವರವೇದ ಮಹಾಮಂದಿರ ಧಾಮದ ಬಗ್ಗೆ ವೀಡಿಯೋ ಇದ್ದು, ವ್ಲಾಗರ್ ಅವರು ಸಂದರ್ಶಕರಿಗೆ ವಸತಿ ಮತ್ತು ನೈರ್ಮಲ್ಯದ ವಿವರಗಳನ್ನು ಸೇರಿದಂತೆ ನೀಡಿರುವ ವ್ಯವಸ್ಥೆಗಳ ಬಗ್ಗೆ ವಿವರಿಸುತ್ತಾರೆ. ಈ ವೀಡಿಯೋದಲ್ಲೂ ತೆರೆದ ರೀತಿಯ ಶೌಚಾಲಯಗಳನ್ನು ಕಾಣಬಹುದು ಮತ್ತು ಇದರಲ್ಲಿ ಆ ಶಾಚಾಲಯಗಳು ತೆರೆದಿಲ್ಲ ಮತ್ತು ಅವುಗಳನ್ನು ಹಾಳೆಗಳು ಅಥವಾ ಪರದೆಗಳಿಂದ ಮುಚ್ಚಲಾಗುವುದು ಎಂದು ಹೇಳಲಾಗಿದೆ.
Also Read: ಬಾಂಬ್ ಸ್ಫೋಟದ ದಾಳಿಯಲ್ಲಿ ಉಗ್ರ ಮಸೂದ್ ಅಜರ್ ಸಾವು ಎಂಬ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಡಿಸೆಂಬರ್ 11, 2023 ರಂದು ಎಎಂಟಿ ಯೂಟ್ಯೂಬ್ ಚಾನೆಲ್‌ನಲ್ಲೂ ಇರುವ ವೀಡಿಯೋದ ಪ್ರಕಾರ ಇದು ಸ್ವರವೇದ ಮಹಾ ಮಂದಿರ ಧಾಮದ ವೀಡಿಯೋ ಎಂದು ಗೊತ್ತಾಗಿದೆ.
ಈ ಎರಡೂ ವೀಡಿಯೋಗಳ ವಿವರಣೆಯಿಂದ, ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 18, 2023 ರಂದು ಸ್ವರವೇದ ಮಹಾಮಂದಿರ್ ಧಾಮ್ ಧ್ಯಾನ ಕೇಂದ್ರವನ್ನು ಉದ್ಘಾಟಿಸುವ ಮೊದಲು ವೀಡಿಯೋಗಳನ್ನು ವ್ಲಾಗರ್ ಗಳು ಚಿತ್ರೀಕರಿಸಿ ಅಪ್ ಲೋಡ್ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ನಮ್ಮ ತನಿಖೆ ವೇಳೆ ನ್ಯೂಸ್ 18 ಉತ್ತರ ಪ್ರದೇಶ, ಫೇಸ್ಬುಕ್ ಪುಟದಲ್ಲಿ ಡಿಸೆಂಬರ್ 18, 2023 ರಂದು ಅಯೋಧ್ಯೆಯಲ್ಲಿ ಶೌಚಾಲಯಗಳು ಮತ್ತು ಬಟ್ಟೆ ಬದಲಾಯಿಸುವ ಕೋಣೆಗಳನ್ನು ನಿರ್ಮಿಸುತ್ತಿರುವ ವೀಡಿಯೋವನ್ನು ಕಂಡುಕೊಂಡಿದ್ದೇವೆ. ಈ ವೀಡಿಯೋ, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೂರಲ್ ಆಗುತ್ತಿರುವ ವೀಡಿಯೋಕ್ಕಿಂತ ಭಿನ್ನವಾಗಿದೆ. ಅಯೋಧ್ಯೆಯಲ್ಲಿ 1500 ಫೈಬರ್ ಶೌಚಾಲಯಗಳನ್ನು ನಿರ್ಮಿಸಲಾಗುವುದು ಮತ್ತು 150 ಮಹಿಳೆಯರಿಗೆ ಬಟ್ಟೆ ಬದಲಾಯಿಸುವ ಕೋಣೆಗಳನ್ನು ನೀಡಲಾಗುವುದು ಎಂದು ವರದಿ ತಿಳಿಸಿದೆ.
ಡಿಸೆಂಬರ್ 18, 2023ರ ಅಮೃತ್ ವಿಚಾರ್ ಯೂಟ್ಯೂಬ್ ಚಾನೆಲ್ ಅಪ್ಲೋಡ್ ಮಾಡಿದ ವೀಡಿಯೋದಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ವೀಡಿಯೋವನ್ನೂ ಹೊಂದಿದೆ. ಅಯೋಧ್ಯೆಯಲ್ಲಿ ನಗರ ಪಾಲಿಕೆ 1500 ಶೌಚಾಲಯಗಳು ಮತ್ತು 150 ಬಟ್ಟೆ ಬದಲಾಯಿಸುವ ಕೊಠಡಿಗಳನ್ನು ನಿರ್ಮಿಸಲಿದೆ ಎಂದು ವರದಿ ತಿಳಿಸಿದೆ.
Conclusion
ಸತ್ಯಶೋಧನೆಯ ಪ್ರಕಾರ, ವೈರಲ್ ವೀಡಿಯೋದಲ್ಲಿರುವ ಶೌಚಾಲಯ ದೃಶ್ಯಗಳು ಅಯೋಧ್ಯೆಯದ್ದಲ್ಲ, ಬದಲಾಗಿ ಇದು ವಾರಾಣಸಿಯ ಸ್ವರವೇದ ಮಹಾಮಂದಿರದ್ದು ಎಂದು ತಿಳಿದುಬಂದಿದೆ.
Also Read: ಮೋದಿ 26 ವರ್ಷದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆಯೇ?
Result: False
Our Sources:
YouTube video by Ankit Promo Dated: December 13,2023
YouTube video by AMT YOUTUBER Dated: December 11,2023
Facebook video by News18 Uttar Pradesh Dated: December 18,2023
YouTube video by Amrit Vichar Dated: December 18,2023
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.