Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
AI/Deepfake
ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದ ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ಗೆ ಡಿಸೆಂಬರ್ 23, 2 025 ರಂದು ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿದೆ. ಆ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಫೊಟೋ ಒಂದು ವೈರಲ್ ಆಗಿದ್ದು, ನ್ಯಾಯಾಲಯದ ಆದೇಶದ ನಂತರ ಜೈಲಿನಿಂದ ಅತ್ಯಾಚಾರಿ ಸೆಂಗಾರ್ ಬಿಡುಗಡೆಯಾಗಿದ್ದು, ಅವರನ್ನು ಜನರು ಹಾರ ಹಾಕಿ ಸ್ವಾಗತಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಎಕ್ಸ್ ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಬಳಿಕ ಡಿಲೀಟ್ ಮಾಡಿದ್ದಾರೆ.
Also Read: ರಾಜಸ್ಥಾನದಲ್ಲಿ ‘ಅರಾವಳಿ ರಕ್ಷಿಸಿ’ ಬೃಹತ್ ಪ್ರತಿಭಟನೆ ಎಂದು ಹೇಳಲು ಹಳೆಯ, ಸಂಬಂಧವಿಲ್ಲದ ವೀಡಿಯೋ ಹಂಚಿಕೆ


ಶಿಕ್ಷೆಗೊಳಗಾದ ಅತ್ಯಾಚಾರಿಯ ಚಿತ್ರವು ನಯವಾದ ವಿನ್ಯಾಸವನ್ನು ಹೊಂದಿದ್ದು, ಇದು ಎಐ ಸೃಷ್ಟಿ ಎಂಬುದಕ್ಕೆ ಒಂದು ಸಾಮಾನ್ಯ ಗುರುತಾಗಿದೆ.
ವೈರಲ್ ಚಿತ್ರವನ್ನು ವಿವಿಧ ಎಐ ಪತ್ತೆ ಪರಿಕರಗಳ ಮೂಲಕ ಪರೀಕ್ಷಿಸಲಾಗಿದೆ.



ಚಿತ್ರದ ಕೆಳಗಿನ ಬಲ ಮೂಲೆಯಲ್ಲಿ ಜೆಮಿನಿ (ಗೂಗಲ್ AI) ವಾಟರ್ಮಾರ್ಕ್ ಕಂಡುಬಂದಿದ್ದು, ಇದು ಗೂಗಲ್ನ ಎಐ ಇಮೇಜ್-ಜನರೇಷನ್ ಟೂಲ್ ಬಳಸಿ ತಯಾರಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ.
ಗಮನಿಸಬೇಕಾದ ವಿಚಾರವೆಂದರೆ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಸೆಂಗಾರ್ 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವುದರಿಂದ ಆತ ಜೈಲಿನಲ್ಲೇ ಇದ್ದಾನೆ.
ಸತ್ಯಶೋಧನೆಯ ಪ್ರಕಾರ ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ‘ಭವ್ಯ ಸ್ವಾಗತ’ ಕೋರಲಾಗಿದೆ ಎಂದು ಹೇಳಲಾದ ವೈರಲ್ ಚಿತ್ರವು ಎಐ ಮೂಲಕ ರಚಿತವಾಗಿದೆ.
Also Read: ಅರಾವಳಿ ಬೆಟ್ಟ ಉಳಿಸಿ ಪ್ರತಿಭಟನೆ ಎಂದು ರಾಜಸ್ಥಾನದ ಕುಸ್ತಿ ಪಂದ್ಯಾವಳಿ ವೀಡಿಯೋ ವೈರಲ್
Our Sources
Hive Moderation Website
Sightengine Website
Undetectable AI Website
ಈ ವರದಿಯನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ
Ishwarachandra B G
November 21, 2025
Ishwarachandra B G
November 19, 2025
Ishwarachandra B G
November 18, 2025